ಶ್ರೀಲಂಕಾ ಹಾಗೂ ವೆಸ್ಟ್ ಇಂಡೀಸ್ ನಡುವಿನ ಎರಡು ಪಂದ್ಯಗಳ ಟೆಸ್ಟ್ ಸರಣಿಯ 2 ಪಂದ್ಯಗಳು ಡ್ರಾನಲ್ಲಿ ಅಂತ್ಯವಾಗಿವೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
ಆಂಟಿಗುವಾ(ಏ.04): ವೆಸ್ಟ್‌ಇಂಡೀಸ್ ಹಾಗೂ ಶ್ರೀಲಂಕಾ ನಡುವಿನ 2ನೇ ಟೆಸ್ಟ್ ಪಂದ್ಯ ಹಾಗೂ ಸರಣಿ 0-0 ಅಂತರದಲ್ಲಿ ಡ್ರಾನಲ್ಲಿ ಮುಕ್ತಾಯಗೊಂಡಿತು.
ಮೊದಲ ಇನ್ನಿಂಗ್ಸ್‌ನಲ್ಲಿ 354 ರನ್ ಗಳಿಸಿದ್ದ ವೆಸ್ಟ್‌ಇಂಡೀಸ್, 2ನೇ ಇನ್ನಿಂಗ್ಸ್‌ನಲ್ಲಿ 4 ವಿಕೆಟ್ ನಷ್ಟಕ್ಕೆ 280 ರನ್ ಗಳಿಸಿದ್ದಾಗ ಡಿಕ್ಲೇರ್ ಮಾಡಿಕೊಂಡಿತು. ಮೊದಲ ಇನ್ನಿಂಗ್ಸ್‌ನಲ್ಲಿ 258 ರನ್‌ಗಳಿಗೆ ಆಲೌಟ್ ಆಗಿದ್ದ ಶ್ರೀಲಂಕಾ, ಅಂತಿಮವಾಗಿ 376 ರನ್‌ಗಳ ಗುರಿ ಪಡೆಯಿತು. ಬೃಹತ್ ಮೊತ್ತ ಲಂಕಾ ಕೊನೆಯ ದಿನದ ಅಂತ್ಯಕ್ಕೆ 2 ವಿಕೆಟ್ ನಷ್ಟಕ್ಕೆ 193 ರನ್ ಗಳಿಸಲಷ್ಟೇ ಶಕ್ತವಾಯಿತು. ಅಂತಿಮವಾಗಿ ಪಂದ್ಯ ಡ್ರಾದಲ್ಲಿ ಅಂತ್ಯಗೊಂಡಿತು.
ವಿರಾಟ್, ಹಾಶೀಂ ಆಮ್ಲಾ ದಾಖಲೆ ಅಳಿಸಿ ಹಾಕಿದ ಬಾಬರ್ ಅಜಂ..!
ಮೊದಲ ಟೆಸ್ಟ್ ಕೂಡಾ ನೀರಸ ಡ್ರಾನಲ್ಲಿ ಅಂತ್ಯ:
ಎನ್‌ಕ್ರುಮಾ ಬೋನ್ನರ್(113)ರ ಶತಕದ ನೆರವಿನಿಂದ ಶ್ರೀಲಂಕಾ ವಿರುದ್ಧ ಮೊದಲ ಟೆಸ್ಟ್‌ನಲ್ಲಿ ಡ್ರಾ ಸಾಧಿಸುವಲ್ಲಿ ವೆಸ್ಟ್‌ಇಂಡೀಸ್ ಯಶಸ್ವಿಯಾಗಿತ್ತು. ಗೆಲುವಿಗೆ 375 ರನ್ ಗುರಿ ಬೆನ್ನತ್ತಿದ್ದ ವಿಂಡೀಸ್, 4 ವಿಕೆಟ್‌ಗೆ 236 ರನ್ ಗಳಿಸಿ ಪಂದ್ಯವನ್ನು ಡ್ರಾ ಮಾಡಿಕೊಂಡಿತ್ತು.
ಎರಡನೇ ಟೆಸ್ಟ್‌ನ ಸ್ಕೋರ್:
ವೆಸ್ಟ್‌ಇಂಡೀಸ್: 354 ಮತ್ತು 280/4 ಡಿಕ್ಲೇರ್
ಶ್ರೀಲಂಕಾ: 258 ಮತ್ತು 193/2
