ಎರಡನೇ ಏಕದಿನ ಪಂದ್ಯದಲ್ಲಿ ವೆಸ್ಟ್ ಇಂಡೀಸ್‌ಗೆ ರೋಚಕ ಜಯವೆಸ್ಟ್ ಇಂಡೀಸ್‌ಗೆ ಗೆದ್ರೆ ರಮ್ ಆಫರ್‌ ಮಾಡಿದ ನೆಟ್ಟಿಗಬರ್ಬೇಕಾದ್ರೆ ರಮ್‌ ತನ್ನಿ ಎಂದ ವೆಸ್ಟ್ ಇಂಡೀಸ್..!

ಬಾರ್ಬಡೋಸ್(ಜು.30): ಭಾರತ ಹಾಗೂ ವೆಸ್ಟ್ ಇಂಡೀಸ್ ತಂಡಗಳ ನಡುವಿನ ಎರಡನೇ ಏಕದಿನ ಪಂದ್ಯದಲ್ಲಿ ಶಾಯ್ ಹೋಪ್ ನೇತೃತ್ವದ ವೆಸ್ಟ್ ಇಂಡೀಸ್ ತಂಡವು 6 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ. ಈ ಮೂಲಕ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ 1-1ರ ಸಮಬಲ ಸಾಧಿಸಿದ್ದು, ಸರಣಿ ಗೆಲ್ಲುವ ಆಸೆಯನ್ನು ಆತಿಥೇಯ ವೆಸ್ಟ್ ಇಂಡೀಸ್ ತಂಡವು ಜೀವಂತವಾಗಿರಿಸಿಕೊಂಡಿದೆ. ಇನ್ನು ಇದೇ ಪಂದ್ಯದಲ್ಲಿ ನೆಟ್ಟಿಗರೊಬ್ಬರು ಹಾಕಿದ ಚಾಲೆಂಜ್ ಸ್ವೀಕರಿಸಿ, ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ.

ಹೌದು, ರೆಹಾನಿ ಎನ್ನುವ ನೆಟ್ಟಿಗರೊಬ್ಬರು ರೂಲ್ಸ್ ಅಂದ್ರೆ ರೂಲ್ಸ್, Free Rum When West Indies Win(ವೆಸ್ಟ್ ಇಂಡೀಸ್ ಗೆದ್ರೆ ಫ್ರೀ ರಮ್‌) ಎಂದು ಟ್ವೀಟ್‌ ಮಾಡಿದ್ದಾರೆ. ಆದರೆ ವೆಸ್ಟ್ ಇಂಡೀಸ್ ತಂಡವು ಕಳೆದ ಈ ಹಿಂದಿನ 10 ಮುಖಾಮುಖಿಯಲ್ಲಿ ಇದೇ ಮೊದಲ ಬಾರಿಗೆ ಏಕದಿನ ಕ್ರಿಕೆಟ್‌ನಲ್ಲಿ ಭಾರತ ಎದುರು ಗೆಲುವು ಸಾಧಿಸುವಲ್ಲಿ ಕೆರಿಬಿಯನ್ ಪಡೆ ಯಶಸ್ವಿಯಾಗಿತ್ತು. 

Scroll to load tweet…

ಇದರ ಬೆನ್ನಲ್ಲೇ ರೆಹಾನಿ ಮಾಡಿದ ಟ್ವೀಟ್ ಗಮನಿಸಿದ ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿಯ,(Bring the Rum and Come) ರಮ್‌ ತಗೊಂಡು ಬನ್ನಿ ಎಂದು ರೆಹಾನಿಯ ಕಾಲೆಳೆದಿದೆ. ಈ ಟ್ವೀಟ್‌ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದೆ.

Scroll to load tweet…

ಇನ್ನು ಎರಡನೇ ಏಕದಿನ ಪಂದ್ಯದ ಬಗ್ಗೆ ಹೇಳುವುದಾದರೇ, ಮೊದಲ ಏಕದಿನ ಪಂದ್ಯದಲ್ಲಿ ಅನಾಯಾಸ ಗೆಲುವು ಸಾಧಿಸಿದ್ದ ಟೀಂ ಇಂಡಿಯಾ(Team India), ಎರಡನೇ ಪಂದ್ಯಕ್ಕೆ ನಾಯಕ ರೋಹಿತ್ ಶರ್ಮಾ ಹಾಗೂ ಮಾಜಿ ನಾಯಕ ವಿರಾಟ್ ಕೊಹ್ಲಿಗೆ ವಿಶ್ರಾಂತಿ ನೀಡಲಾಗಿತ್ತು. ಈ ಇಬ್ಬರು ಆಟಗಾರರ ಬದಲಿಗೆ ಸಂಜು ಸ್ಯಾಮ್ಸನ್ ಹಾಗೂ ಅಕ್ಷರ್ ಪಟೇಲ್‌ಗೆ ಆಡುವ ಹನ್ನೊಂದರ ಬಳಗದಲ್ಲಿ ಮಣೆ ಹಾಕಲಾಗಿತ್ತು. ಟಾಸ್ ಗೆದ್ದ ಹಾರ್ದಿಕ್ ಪಾಂಡ್ಯ ಮೊದಲು ಬ್ಯಾಟಿಂಗ್ ಮಾಡುವ ತೀರ್ಮಾನ ತೆಗೆದುಕೊಂಡರು. ಮೊದಲ ವಿಕೆಟ್‌ಗೆ ಶುಭ್‌ಮನ್ ಗಿಲ್ ಹಾಗೂ ಇಶಾನ್ ಕಿಶನ್ ಜೋಡಿ 90 ರನ್‌ಗಳ ಜತೆಯಾಟವಾಡುವ ಮೂಲಕ ಭರ್ಜರಿ ಆರಂಭ ಒದಗಿಸಿಕೊಟ್ಟರು. ಗಿಲ್ 34 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು. ಇನ್ನು ಮತ್ತೊಂದು ತುದಿಯಲ್ಲಿ ಇಶಾನ್ ಕಿಶನ್‌ 55 ಎಸೆತಗಳಲ್ಲಿ 6 ಬೌಂಡರಿ ಹಾಗೂ ಒಂದು ಸಿಕ್ಸರ್ ಸಹಿತ 55 ರನ್‌ ಬಾರಿಸಿ ವಿಕೆಟ್ ಒಪ್ಪಿಸಿದರು.

ಜಗತ್ತಿನ ಎರಡನೇ ಶ್ರೀಮಂತ ಸ್ಪೋರ್ಟ್ಸ್‌ ತಂಡದ ಮಾಲೀಕ ಯಾರು ಗೊತ್ತಾ? ಅದಾನಿ, ಶಾರುಕ್ ಖಾನ್ ಅಲ್ಲವೇ ಅಲ್ಲ..!

ಗಿಲ್ ಹಾಗೂ ಇಶಾನ್ ಕಿಶನ್ ವಿಕೆಟ್ ಪತನದ ಬಳಿಕ ಟೀಂ ಇಂಡಿಯಾ ನಾಟಕೀಯ ಕುಸಿತ ಕಂಡಿತು. ಸಂಜು ಸ್ಯಾಮ್ಸನ್‌(Sanju Samason) 9 ರನ್ ಗಳಿಸಿ ವಿಕೆಟ್ ಒಪ್ಪಿಸುವ ಮೂಲಕ ಸಿಕ್ಕ ಅವಕಾಶ ಸದುಪಯೋಗಪಡಿಸಿಕೊಳ್ಳಲು ವಿಫಲರಾದರು. ಇನ್ನು ಅಕ್ಷರ್ ಪಟೇಲ್(1) ಹಾಗೂ ಹಾರ್ದಿಕ್ ಪಾಂಡ್ಯ(7) ಒಂದಂಕಿ ಮೊತ್ತಕ್ಕೆ ವಿಕೆಟ್ ಒಪ್ಪಿಸುವ ಮೂಲಕ ನಿರಾಸೆ ಅನುಭವಿಸಿದರು. ಸೂರ್ಯಕುಮಾರ್ ಯಾದವ್(24), ಜಡೇಜಾ(10) ಹಾಗೂ ಶಾರ್ದೂಲ್ ಠಾಕೂರ್(16) ಕೊಂಚ ಪ್ರತಿರೋಧ ತೋರುವ ಮೂಲಕ ತಂಡ ಗೌರವಾನ್ವಿತ ಮೊತ್ತ ಕಲೆಹಾಕಲು ನೆರವಾದರು.

ಇನ್ನು ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ವಿಂಡೀಸ್ ತಂಡಕ್ಕೆ ಶಾರ್ದೂಲ್ ಠಾಕೂರ್ ಮಹತ್ವದ ಘಟ್ಟದಲ್ಲಿ 3 ವಿಕೆಟ್ ಕಬಳಿಸಿ ಶಾಕ್ ನೀಡಿದರು. ವಿಂಡೀಸ್ ತಂಡವು ಒಂದು ಹಂತದಲ್ಲಿ 91 ರನ್‌ಗಳಿಗೆ 4 ವಿಕೆಟ್ ಕಳೆದುಕೊಂಡು ಆಘಾತಕ್ಕೊಳಗಾಗಿತ್ತು. ಆದರೆ 5ನೇ ವಿಕೆಟ್‌ಗೆ ನಾಯಕ ಶಾಯ್ ಹೋಪ್(63) ಹಾಗೂ ಕೇಸಿ ಕಾರ್ಟಿ(48) ಜವಾಬ್ದಾರಿಯುತ ಬ್ಯಾಟಿಂಗ್ ನಡೆಸುವ ಮೂಲಕ ತಂಡವನ್ನು ಗೆಲುವಿನ ದಡ ಸೇರಿಸುವುವಲ್ಲಿ ಯಶಸ್ವಿಯಾದರು.