ಆ್ಯಂಟಿಗುವಾ[ನ.29]: ಡಿಸೆಂಬರ್ 06ರಿಂದ ಆರಂಭವಾಗಲಿರುವ ಭಾರತ ವಿರುದ್ಧದ ಸೀಮಿತ ಓವರ್’ಗಳ ಸರಣಿಗೆ ವೆಸ್ಟ್ ಇಂಡೀಸ್ ತಂಡವನ್ನು ಪ್ರಕಟಿಸಲಾಗಿದ್ದು, ಸ್ಫೋಟಕ ಆರಂಭಿಕ ಬ್ಯಾಟ್ಸ್’ಮನ್ ಕ್ರಿಸ್ ಗೇಲ್ ಅವರು ತಂಡದಿಂದ ಹೊರಗುಳಿದಿದ್ದಾರೆ.

ಅಭಿಮಾನಿಗಳಿಗೆ ಶಾಕ್; ಭಾರತಕ್ಕೆ ಬರಲ್ಲ ಎಂದ ಕ್ರಿಸ್ ಗೇಲ್!

ಮೂರು ಪಂದ್ಯಗಳ ಟಿ20 ಹಾಗೂ 3 ಏಕದಿನ ಪಂದ್ಯಗಳಿಗೆ ಗುರುವಾರ ತಂಡವನ್ನು ಪ್ರಕಟಿಸಲಾಯಿತು. ಉಭಯ ಮಾದರಿಯ ಕ್ರಿಕೆಟ್’ಗೂ ಅನುಭವಿ ಆಲ್ರೌಂಡರ್ ಕೀರನ್ ಪೊಲ್ಲಾರ್ಡ್ ತಂಡವನ್ನು ಮುನ್ನಡೆಸಲಿದ್ದಾರೆ. ಡಿಸೆಂಬರ್ 06ರಿಂದ 3 ಪಂದ್ಯಗಳ ಟಿ20 ಸರಣಿ ನಡೆದರೆ, ಡಿಸೆಂಬರ್ 15ರಿಂದ 3 ಪಂದ್ಯಗಳ ಏಕದಿನ ಸರಣಿ ನಡೆಯಲಿದೆ.

ಬದಲಾಯ್ತು ಇಂಡೋ-ವಿಂಡೀಸ್ ಟಿ20 ಪಂದ್ಯಗಳ ವೇಳಾಪಟ್ಟಿ..!

ಫ್ಯಾಬಿಯನ್ ಅಲನ್, ದಿನೇಶ್ ರಾಮ್ದಿನ್ ತಂಡಕ್ಕೆ ವಾಪಾಸ್ಸಾಗಿದ್ದಾರೆ. ಇನ್ನು ಬಾಲ್ ಟ್ಯಾಂಪರಿಂಗ್ ಮಾಡಿ ನಿಷೇಧಕ್ಕೆ ಗುರಿತಾಗಿದ್ದ ನಿಕೋಲಸ್ ಪೂರನ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಇತ್ತೀಚೆಗಷ್ಟೇ ಬಾಂಗ್ಲಾದೇಶ ವಿರುದ್ಧ ಏಕದಿನ ಸರಣಿಯನ್ನು 3-0 ಅಂತರದಲ್ಲಿ ಕ್ಲೀನ್ ಸ್ವೀಪ್ ಮಾಡಿದ ತಂಡವನ್ನೇ ಭಾರತದ ಸರಣಿಗೂ ಉಳಿಸಿಕೊಳ್ಳಲಾಗಿದೆ.

ವಿಂಡೀಸ್ ಸರಣಿಗೆ ಭಾರತ ತಂಡ ಪ್ರಕಟ; ಇಬ್ಬರು ಕನ್ನಡಿಗರಿಗೆ ಚಾನ್ಸ್!

ವಿಂಡೀಸ್ ಟಿ20 ತಂಡ ಹೀಗಿದೆ:
ಕೀರನ್ ಪೊಲ್ಲಾರ್ಡ್, ಫ್ಯಾಬಿಯನ್ ಆಲನ್, ಶೆಲ್ಡನ್ ಕಾಟ್ರೆಲ್, ಶಿಮ್ರೋನ್ ಹೆಟ್ಮೇಯರ್, ಜೇಸನ್ ಹೋಲ್ಡರ್, ಕೀಮೋ ಪೌಲ್, ಬ್ರೆಂಡನ್ ಕಿಂಗ್, ಎವಿನ್ ಲೆವೀಸ್, ಖರ್ರೆ ಪೀಯರೆ, ನಿಕೋಲಸ್ ಪೂರನ್, ದಿನೇಶ್ ರಾಮ್ದಿನ್, ಶೆರ್ಫಾನೆ ರುದರ್’ಫೋರ್ಡ್, ಲೆಂಡ್ಲೆ ಸಿಮೋನ್ಸ್, ಕೆಸೆರಿಕ್ ವಿಲಿಯಮ್ಸ್, ಹೇಡನ್ ವಾಲ್ಷ್ ಜೂನಿಯರ್.

ವಿಂಡೀಸ್ ಏಕದಿನ ಸರಣಿಗೆ ತಂಡ:
ಕೀರನ್ ಪೊಲ್ಲಾರ್ಡ್, ಸುನಿಲ್ ಆ್ಯಂಬ್ರಿಶ್, ರೋಸ್ಟನ್ ಚೇಸ್, ಶೆಲ್ಡನ್ ಕಾಟ್ರೆಲ್, ಶಿಮ್ರೋನ್ ಹೆಟ್ಮೇಯರ್, ಜೇಸನ್ ಹೋಲ್ಡನ್, ಶಾಯ್ ಹೋಪ್, ಅಲ್ಜೇರಿ ಜೋಸೆಫ್, ಬ್ರೆಂಡನ್ ಕಿಂಗ್, ಎವಿನ್ ಲೆವಿಸ್, ಕೀಮೋ ಪೌಲ್, ಖರ್ರೆ ಪೀಯರೆ, ನಿಕೋಲಸ್ ಪೂರನ್, ರೊಮ್ಯಾರಿಯೋ ಶೆಫಾರ್ಡ್, ಹೇಡನ್ ವಾಲ್ಷ್ ಜೂನಿಯರ್.