ಕೋಲ್ಕತಾ(ನ.21): ವೆಸ್ಟ್ ಇಂಡೀಸ್ ವಿರುದ್ದದ ಟಿ20 ಹಾೂಗೂ ಏಕದಿನ ಸರಣಿಗೆ ಟೀಂ ಇಂಡಿಯಾ ಪ್ರಕಟಗೊಂಡಿದೆ. ಕೋಲ್ಕತಾದಲ್ಲಿ ಸಭೆ ಸೇರಿದ ಆಯ್ಕೆ ಸಮಿತಿ ತಂಡವನ್ನು ಆಯ್ಕೆ ಮಾಡಿದೆ. ಆದರೆ ಕೋಟ್ಯಾಂಟರ ಅಭಿಮಾನಿಗಳ ನಿರೀಕ್ಷೆ ಮತ್ತೆ ಹುಸಿಯಾಗಿದೆ. ಹಿರಿಯ ಕ್ರಿಕೆಟಿಗ ಎಂ.ಎಸ್.ಧೋನಿಗೆ ಸ್ಥಾನ ನೀಡಿಲ್ಲ. ಆದರೆ ಇಬ್ಬರು ಕನ್ನಡಿಗರು ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಇದನ್ನೂ ಓದಿ: ಐತಿಹಾಸಿಕ ಪಿಂಕ್ ಬಾಲ್ ಟೆಸ್ಟ್‌; ಯಾರಿಗೆ ಚಾನ್ಸ್? ಇಲ್ಲಿದೆ ಸಂಭವನೀಯ ತಂಡ!

ಡಿಸೆಂಬರ್ 6 ರಿಂದ 3 ಪಂದ್ಯಗಳ ಟಿ20 ಸರಣಿ ಆರಂಭವಾಗಲಿದೆ. ಇನ್ನು ಡಿಸೆಂಬರ್ 15 ರಿಂದ 3 ಪಂದ್ಯದ ಏಕದಿನ ಸರಣಿ ನಡೆಯಲಿದೆ. ವಿಂಡೀಸ್ ಸರಣಿಗೆ ಹೆಚ್ಚಿನ ಬದಲಾವಣೆಗಳಿಲ್ಲದ ತಂಡವನ್ನು ಆಯ್ಕೆ ಸಮಿತಿ ಪ್ರಕಟಿಸಿದೆ. ಕನ್ನಡಿಗರಾದ ಕೆಎಲ್ ರಾಹುಲ್ ಹಾಗೂ ಮನೀಶ್ ಪಾಂಡೆ ಸ್ಥಾನ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಇದನ್ನೂ ಓದಿ: 762 ರನ್ ಟಾರ್ಗೆಟ್; ಗುರಿ ಬೆನ್ನಟ್ಟಿದ ತಂಡ ಕೇವಲ 7 ರನ್‌ಗೆ ಆಲೌಟ್!

ಭಾರತ ಏಕದಿನ ತಂಡ:
ವಿರಾಟ್ ಕೊಹ್ಲಿ(ನಾಯಕ)
ರೋಹಿತ್ ಶರ್ಮಾ
ಶಿಖರ್ ಧವನ್
ಕೆಎಲ್ ರಾಹುಲ್
ಶ್ರೇಯಸ್ ಅಯ್ಯರ್
ಮನೀಶ್ ಪಾಂಡೆ
ರಿಷಬ್ ಪಂತ್
ಶಿವಂ ದುಬೆ
ಕೇದಾರ್ ಜಾದವ್
ರವೀಂದ್ರ ಜಡೇಜಾ
ಯಜುವೇಂದ್ರ ಚಹಾಲ್
ಕುಲ್ದೀಪ್ ಯಾದವ್
ದೀಪಕ್ ಚಹಾರ್
ಮೊಹಮ್ಮದ್ ಶಮಿ 
ಭುವನೇಶ್ವರ್ ಕುಮಾರ್

ಇಂಜುರಿಯಿಂದ ಚೇತರಿಸಿಕೊಂಡಿರುವ ಕೇದಾರ್ ಜಾಧವ್ ಹಾಗೂ ವೇಗಿ ಭುವನೇಶ್ವರ್ ಕುಮಾರ್ ತಂಡ ಸೇರಿಕೊಂಡಿದ್ದಾರೆ. ಬಾಂಗ್ಲಾ ವಿರುದ್ದ ಹ್ಯಾಟ್ರಿಕ್ ವಿಕೆಟ್ ಕಬಳಿಸಿದ ದೀಪಕ್ ಚಹಾರ್ ಸ್ಥಾನ ಉಳಿಸಿಕೊಂಡಿದ್ದಾರೆ.

ಭಾರತ ಟಿ20 ತಂಡ:
ವಿರಾಟ್ ಕೊಹ್ಲಿ(ನಾಯಕ), ರೋಹಿತ್ ಶರ್ಮಾ, ಶಿಖರ್ ಧವನ್, ಕೆಎಲ್ ರಾಹುಲ್, ಶ್ರೇಯಸ್ ಅಯ್ಯರ್, ಮನೀಶ್ ಪಾಂಡೆ, ರಿಷಬ್ ಪಂತ್, ಶಿವಂ ದುಬೆ, ವಾಶಿಂಗ್ಟನ್ ಸುಂದರ್, ರವೀಂದ್ರ ಜಡೇಜಾ, ಯಜುವೇಂದ್ರ ಚಹಾಲ್, ಕುಲ್ದೀಪ್ ಯಾದವ್, ದೀಪಕ್ ಚಹಾರ್, ಮೊಹಮ್ಮದ್ ಶಮಿ, ಭುವನೇಶ್ವರ್ ಕುಮಾರ್

 

ವಿಂಡೀಸ್ ವಿರುದ್ದದ ಸರಣಿಯಿಂದ ರೋಹಿತ್ ಶರ್ಮಾಗೆ ವಿಶ್ರಾಂತಿ ನೀಡಲಾಗುತ್ತೆ ಅನ್ನೋ ಮಾತುಗಳು ಕೇಳಿ ಬಂದಿತ್ತು. ಆದರೆ ರೋಹಿತ್‌ ಏಕದಿನ ಹಾಗೂ ಟಿ20 ತಂಡದಲ್ಲಿದ್ದಾರೆ.