ಶ್ರೀಲಂಕಾ ವಿರುದ್ದದ ಮೂರು ಪಂದ್ಯಗಳ ಟಿ20 ಸರಣಿಯ ನಿರ್ಣಾಯಕ ಪಂದ್ಯವನ್ನು ವೆಸ್ಟ್‌ ಇಂಡೀಸ್‌ 3 ವಿಕೆಟ್‌ಗಳ ಅಂತದರ ಭರ್ಜರಿ ಗೆಲುವು ದಾಖಲಿಸಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

ಆಂಟಿಗುವಾ(ಮಾ.08): 19ನೇ ಓವರ್‌ನಲ್ಲಿ ಫ್ಯಾಬಿಯನ್ ಅಲೆನ್‌ ಬಾರಿಸಿದ 3 ವಿಸ್ಫೋಟಕ ಸಿಕ್ಸರ್‌ಗಳ ನೆರವಿನಿಂದ ಶ್ರೀಲಂಕಾ ವಿರುದ್ದ ಮೂರನೇ ಹಾಗೂ ನಿರ್ಣಾಯಕ ಟಿ20 ಪಂದ್ಯದಲ್ಲಿ ಆತಿಥೇಯ ವೆಸ್ಟ್ ಇಂಡೀಸ್‌ 3 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ. ಇದರೊಂದಿಗೆ 3 ಪಂದ್ಯಗಳ ಟಿ20 ಸರಣಿಯನ್ನು ವೆಸ್ಟ್ ಇಂಡೀಸ್ 2-1 ಅಂತರದಲ್ಲಿ ಕೈವಶ ಮಾಡಿಕೊಂಡಿದೆ.

ಶ್ರೀಲಂಕಾ ನೀಡಿದ್ದ 132 ರನ್‌ಗಳ ಸಾಧಾರಣ ಗುರಿ ಬೆನ್ನತ್ತಿದ ವೆಸ್ಟ್‌ ಇಂಡೀಸ್‌, ಲಂಕಾ ಸ್ಪಿನ್‌ ದಾಳಿಯ ಎದುರು ತತ್ತರಿಸಿ ಹೋಯಿತು. ಒಂದು ಹಂತದಲ್ಲಿ 17 ಓವರ್‌ಗಳ ಅಂತ್ಯಕ್ಕೆ ವೆಸ್ಟ್ ಇಂಡೀಸ್‌ 7 ವಿಕೆಟ್‌ ಕಳೆದುಕೊಂಡು 105 ರನ್‌ ಕೆಲಹಾಕಿತ್ತು. ಕೊನೆಯ 18 ಎಸೆತಗಳಲ್ಲಿ ವೆಸ್ಟ್ ಇಂಡೀಸ್‌ ಪಂದ್ಯ ಗೆಲ್ಲಲು 27 ರನ್‌ಗಳ ಅಗತ್ಯವಿತ್ತು. 

Scroll to load tweet…

18ನೇ ಓವರ್‌ನ್ನು ಅತ್ಯಂತ ಎಚ್ಚರಿಕೆಯಿಂದ ನಿಭಾಯಿಸಿದ ಜೇಸನ್ ಹೋಲ್ಡರ್‌ ಕೇವಲ 7 ರನ್‌ ಮಾತ್ರ ಗಳಿಸಿದರು. ಹೀಗಾಗಿ ಕೊನೆಯ ಎರಡು ಓವರ್‌ನಲ್ಲಿ ವಿಂಡೀಸ್‌ ಗೆಲ್ಲಲು 20 ರನ್‌ಗಳ ಅಗತ್ಯವಿತ್ತು. ಆದರೆ 19ನೇ ಓವರ್‌ನಲ್ಲಿ ಅಕಿಲಾ ಧನಂಜಯ ಬೌಲಿಂಗ್‌ನಲ್ಲಿ ಮೊದಲ, ಮೂರನೇ ಹಾಗೂ ಕೊನೆಯ ಎಸೆತದಲ್ಲಿ ಸಿಕ್ಸರ್‌ ಸಿಡಿಸುವ ಮೂಲಕ ಇನ್ನು ಒಂದು ಓವರ್‌ ಬಾಕಿ ಇರುವಂತೆಯೇ ತಂಡ ಗೆಲುವಿನ ಕೇಕೆ ಹಾಕುವಂತೆ ಮಾಡಿದರು.

ಹ್ಯಾಟ್ರಿಕ್ ವೀರ ಧನಂಜಯಗೆ 6 ಎಸೆತದಲ್ಲಿ 6 ಸಿಕ್ಸರ್ ಚಚ್ಚಿದ ಪೊಲ್ಲಾರ್ಡ್‌..!

ಇದಕ್ಕೂ ಮೊದಲು ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಶ್ರೀಲಂಕಾ 6 ಓವರ್‌ ಅಂತ್ಯಕ್ಕೆ 3 ವಿಕೆಟ್‌ ಕಳೆದುಕೊಂಡು ಕೇವಲ 27 ರನ್‌ ಕಲೆಹಾಕಿತ್ತು. ಇದಾದ ಬಳಿಕ ದಿನೇಶ್ ಚಾಂಡಿಮಲ್ ಅಜೇಯ ಅರ್ಧಶತಕ(54) ಹಾಗೂ ಅಸೇನ್‌ ಬಂಡಾರ(44) ಅಜೇಯ ಬ್ಯಾಟಿಂಗ್ ನಡೆಸುವ ಮೂಲಕ ತಂಡ ಗೌರವಾನ್ವಿತ ಮೊತ್ತ ಕಲೆಹಾಕಲು ನೆರವಾದರು.