* ದಕ್ಷಿಣ ಆಫ್ರಿಕಾ ವಿರುದ್ದದ ಮೊದಲ ಟೆಸ್ಟ್‌ ಪಂದ್ಯಕ್ಕೆ ವಿಂಡೀಸ್ ತಂಡ ಪ್ರಕಟ* ಜೂನ್‌ 10ರಿಂದ ಆರಂಭವಾಗಲಿದೆ ಎರಡು ಪಂದ್ಯಗಳ ಟೆಸ್ಟ್ ಸರಣಿ* ತಂಡ ಕೂಡಿಕೊಂಡ 19 ವರ್ಷದ ಯುವ ವೇಗಿ ಜೇಡನ್‌ ಸೇಲ್ಸ್, ಶಾಯ್ ಹೋಪ್‌

ಜಮೈಕಾ(ಜೂ.09): ದಕ್ಷಿಣ ಆಫ್ರಿಕಾ ವಿರುದ್ದ ಜೂನ್ 10ರಿಂದ ಆರಂಭವಾಗಲಿರುವ ಮೊದಲ ಟೆಸ್ಟ್ ಪಂದ್ಯಕ್ಕೆ 13 ಆಟಗಾರರನ್ನೊಳಗೊಂಡ ವೆಸ್ಟ್ ಇಂಡೀಸ್ ಕ್ರಿಕೆಟ್ ತಂಡವನ್ನು ಪ್ರಕಟಿಸಲಾಗಿದ್ದು, 19 ವರ್ಷದ ಯುವ ವೇಗಿ ಜೇಡನ್‌ ಸೇಲ್ಸ್, ಶಾಯ್ ಹೋಪ್‌ ತಂಡ ಕೂಡಿಕೊಂಡಿದ್ದಾರೆ.

2020ರ ಅಂಡರ್ 19 ವಿಶ್ವಕಪ್‌ ತಂಡದ ಆಟಗಾರನಾಗಿದ್ದ ಜೇಡನ್ ಸೇಲ್ಸ್, ಇತ್ತೀಚಿನ ದಿನಗಳಲ್ಲಿ ಗಮನಾರ್ಹ ಪ್ರದರ್ಶನ ತೋರಿದ್ದು ಟ್ರಿನಿಡ್ಯಾಡ್ & ಟೊಬ್ಯಾಗೋ ತಂಡದ ಮಾರಕ ವೇಗಿಗೆ ಮಣೆ ಹಾಕಲಾಗಿದೆ. ಇದಷ್ಟೇ ಅಲ್ಲದೇ ಅಗ್ರಕ್ರಮಾಂಕದ ಅನುಭವಿ ಬ್ಯಾಟ್ಸ್‌ಮನ್‌ ಶಾಯ್ ಹೋಪ್ ಹಾಗೂ ಕೀರನ್ ಪೋವೆಲ್‌ ಅವರಿಗೂ ತಂಡದಲ್ಲಿ ಸ್ಥಾನ ನೀಡಲಾಗಿದೆ. ಶಾಯ್ ಹೋಪ್ 2020ರ ಜುಲೈನಲ್ಲೇ ಕೊನೆಯ ಬಾರಿಗೆ ಟೆಸ್ಟ್‌ ತಂಡದಲ್ಲಿ ಕಾಣಿಸಿಕೊಂಡಿದ್ದರು. 

ಇಂಗ್ಲೆಂಡ್‌ ಟೆಸ್ಟ್‌ ಸರಣಿಗೂ ಮುನ್ನ ಟೀಂ ಇಂಡಿಯಾ ಆಟಗಾರರಿಗೆ 20 ದಿನ ರಜೆ

Scroll to load tweet…

ವೆಸ್ಟ್ ಇಂಡೀಸ್ ಹಾಗೂ ದಕ್ಷಿಣ ಆಫ್ರಿಕಾ ತಂಡಗಳು ಸೇಂಟ್ ಲೂಸಿಯಾದಲ್ಲಿ ಎರಡು ಪಂದ್ಯಗಳ ಸರಣಿಯಲ್ಲಿ ಕಾದಾಡಲಿದ್ದು, ಮೊದಲ ಟೆಸ್ಟ್ ಪಂದ್ಯ ಜೂನ್ 10 ರಿಂದ ಆರಂಭವಾಗಲಿದೆ. ಇನ್ನು ಜೂನ್ 18ರಿಂದ ಎರಡನೇ ಟೆಸ್ಟ್ ಪಂದ್ಯ ನಡೆಯಲಿದೆ. ಇದಾದ ಬಳಿಕ ದಕ್ಷಿಣ ಆಫ್ರಿಕಾ ಹಾಗೂ ವೆಸ್ಟ್ ಇಂಡೀಸ್ ತಂಡಗಳು 5 ಪಂದ್ಯಗಳ ಟಿ20 ಸರಣಿ ಆಡಲಿದೆ.

ಮೊದಲ ಟೆಸ್ಟ್‌ ಪಂದ್ಯಕ್ಕೆ ವೆಸ್ಟ್ ಇಂಡೀಸ್ ತಂಡ ಹೀಗಿದೆ ನೋಡಿ:

ಕ್ರೆಗ್ ಬ್ರಾಥ್‌ವೇಟ್(ನಾಯಕ), ಜರ್ಮೈನ್‌ ಬ್ಲಾಕ್‌ವುಡ್, ಬೋನರ್, ರೋಸ್ಟನ್ ಚೇಸ್, ರಾಕೀಮ್ ಕಾರ್ನ್‌ವೆಲ್, ಜೋಸುವಾ ಡಿ ಸಿಲ್ವಾ, ಜೇಸನ್ ಹೋಲ್ಡರ್, ಶಾಯ್ ಹೋಪ್, ಅಲ್ಜೆರಿ ಜೋಸೆಫ್‌, ಕೈಲ್ ಮೇಯರ್ಸ್, ಕೀರನ್ ಪೋವೆಲ್, ಕೀಮರ್ ರೋಚ್ ಮತ್ತು ಜೇಡನ್ ಸೇಲ್ಸ್.