Asianet Suvarna News Asianet Suvarna News

ರೈಲು ದುರಂತದಲ್ಲಿ ಪೋಷಕರ ಕಳೆದುಕೊಂಡ ಮಕ್ಕಳಿಗೆ ಸೆಹ್ವಾಗ್ ನೆರವು, ಉಚಿತ ಶಿಕ್ಷಣ-ವಸತಿ!

ಒಡಿಶಾ ರೈಲು ದುರಂತದಲ್ಲಿ 288 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಪರಿಣಾಮ ಹಲವು ಮಕ್ಕಳು ಅನಾಥರಾಗಿದ್ದಾರೆ. ಇದೀಗ ಈ ಮಕ್ಕಳ ನೆರವಿಗೆ ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್ ಧಾವಿಸಿದ್ದಾರೆ. ಪೋಷಕರ ಕಳೆದುಕೊಂಡ ಮಕ್ಕಳಿಗೆ ಉಚಿತ ಶಿಕ್ಷಣ ಹಾಗೂ ಉಚಿತ ವಸತಿ ಕಲ್ಪಿಸುವುದಾಗಿ ಘೋಷಿಸಿದ್ದಾರೆ.

Virender sehwag announces Free education and boarding for childrens who have lost parents in Odisha Train Accident ckm
Author
First Published Jun 4, 2023, 8:59 PM IST

ದೆಹಲಿ(ಜೂ.04): ಒಡಿಶಾ ರೈಲು ದುರಂತದಲ್ಲಿ ಸಾವು ನೋವು ಹೆಚ್ಚಾಗುತ್ತಿದೆ. ಹಲವರ ಸ್ಥಿತಿ ಗಂಭೀರವಾಗಿದೆ. ಈ ಅಪಘಾತದಿಂದ ಹಲವು ಮುಗ್ದ ಮಕ್ಕಳು ಪೋಷಕರನ್ನು ಕಳೆದುಕೊಂಡಿದ್ದಾರೆ. ತ್ರಿವಳಿ ರೈಲು ಅಪಘಾತ ಹಲವು ಮಕ್ಕಳನ್ನು ಅನಾಥರನ್ನಾಗಿ ಮಾಡಿದೆ. ಹೀಗೆ ಅನಾಥರಾದ ಮಕ್ಕಳಿಗೆ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್ ಸಹಾಯಹಸ್ತ ಚಾಚಿದ್ದಾರೆ. ಒಡಿಶಾ ರೈಲು ದುರಂತದಲ್ಲಿ ಪೋಷಕರನ್ನು ಕಳೆದುಕೊಂಡ ಮಕ್ಕಳಿಗೆ ಉಚಿತ ಶಿಕ್ಷಣ ಹಾಗೂ ಉಚಿತ ವಸತಿ ಕಲ್ಪಿಸುವುದಾಗಿ ಸೆಹ್ವಾಗ್ ಘೋಷಿಸಿದ್ದಾರೆ.

ಒಡಿಶಾ ರೈಲು ದುರಂತದ ಫೋಟೋ ಹಾಗೂ ಘಟನಾ ಸ್ಥಳದ ದೃಶ್ಯಗಳು ತೀವ್ರ ನೋವು ತರುತ್ತಿದೆ. ಅಪಘಾತವಾದ ದಿನದಿಂದ ಈ ಚಿತ್ರಗಳು ಕಾಡುತ್ತಿದೆ. ಈ ನೋವಿನ ಸಂದರ್ಭದಲ್ಲಿ ನನ್ನ ಕೈಲಾದ ಸಹಾಯ ಮಾಡಲು ಬಯಸುತ್ತೇನೆ. ಅಪಘಾತದಲ್ಲಿ ಪೋಷಕರನ್ನು ಕಳೆದುಕೊಂಡ ಮಕ್ಕಳಿಗೆ ಉಚಿತ ಶಿಕ್ಷಣ ಹಾಗೂ ಉಚಿತ ವ್ಯವಸ್ಥೆ ಕಲ್ಪಿಸುತ್ತೇನೆ. ಈ ಮಕ್ಕಳಿಗೆ ಸೆಹ್ವಾಗ್ ಅಂತಾರಾಷ್ಟ್ರೀಯ ಶಾಲೆಯಲ್ಲಿ ಉಚಿತ ಶಿಕ್ಷಣ ಹಾಗೂ ವಸತಿ ನೀಡಲಾಗುವುದು ಎಂದು ಸೆಹ್ವಾಗ್ ಘೋಷಿಸಿದ್ದಾರೆ.

ಒಡಿಶಾ ರೈಲು ದುರಂತದಲ್ಲಿ ಅನಾಥರಾದ ಮಕ್ಕಳ ವಿದ್ಯಾಭ್ಯಾಸ ಜವಾಬ್ದಾರಿ ಹೊಣೆ ಹೊತ್ತ ಅದಾನಿ!

ಇದೇ ವೇಳೆ ದುರಂತ ನಡೆದ ಸಂದರ್ಭದಿಂದ ರಕ್ಷಣಾ ಕಾರ್ಯದಲ್ಲಿ ತೊಡಗಿರುವ ಎಲ್ಲರಿಗೂ, ಸಿಬ್ಬಂದಿ ವರ್ಗದವರಿಗೆ ನನ್ನ ಸಲ್ಯೂಟ್. ವೈದ್ಯಕೀಯ ತಂಡ, ಸ್ವಯಂ ಸೇವಕರ ಗುಂಪು, ರಕ್ತ ದಾನ ಮಾಡಿದ ಮಹನಿಯರಿಗೆ ನನ್ನ ನಮಗಳು ಎಂದು ಸೆಹ್ವಾಗ್ ಟ್ವೀಟ್ ಮಾಡಿದ್ದಾರೆ. ಮಕ್ಕಳ ಶಿಕ್ಷಣ ಜವಾಬ್ದಾರಿಯನ್ನು ನೋಡಿಕೊಳ್ಳುವ ಘೋಷಣೆ ಮಾಡಿರುವ ಸೆಹ್ವಾಗ್, ಮಹತ್ವದ ಸಂದೇಶ ಸಾರಿದ್ದಾರೆ.

 

 

ಸೆಹ್ವಾಗ್ ಘೋಷಣೆಗೂ ಮೊದಲು ಉದ್ಯಮಿ ಗೌತಮ್ ಅದಾನಿ, ಅಪಘಾತದಿಂದ ಅನಾಥರಾಗಿರುವ ಮಕ್ಕಳ ಶಿಕ್ಷಣ ಜವಾಬ್ದಾರಿಯನ್ನು ಹೊತ್ತಿದ್ದಾರೆ. ಒಡಿಶಾ ರೈಲು ಅಪಘಾತದಿಂದ ಪೋಷಕರನ್ನು ಕಳೆದುಕೊಂಡ ಮಕ್ಕಳ ಸಂಪೂರ್ಣ ಶಾಲಾ ಶಿಕ್ಷಣ ಜವಾಬ್ದಾರಿಯನ್ನು ಅದಾನಿಗ್ರೂಪ್ ನೋಡಿಕೊಳ್ಳಲಿದ ಎಂದು ಘೋಷಿಸಿದ್ದರು.

ಈ ಶತಮಾನದಲ್ಲೇ ಅತ್ಯಂತ ಭೀಕರವಾದ ರೈಲು ಅಪಘಾತ ಸಂಭವಿಸಿದ ಎರಡೇ ದಿನದಲ್ಲಿ ಒಡಿಶಾದ ಬಾಲಸೋರ್‌ ಬಳಿ ರೈಲು ಮಾರ್ಗ ಪುನರ್‌ನಿರ್ಮಾಣ ಮಾಡುವ ಕಾರ್ಯ ಭರದಿಂದ ಸಾಗಿದೆ. ಹೌರಾದಿಂದ ಚೆನ್ನೈ/ಬೆಂಗಳೂರು ಕಡೆ ಬರುವ ಹಾಗೂ ಹೌರಾ ಕಡೆ ಹೋಗುವ ಎರಡೂ ಮಾರ್ಗಗಳ ಹಳಿ ದುರಸ್ತಿ ಭಾನುವಾರ ಸಂಜೆ ಮುಕ್ತಾಯವಾಗಿದೆ.

ಒಡಿಶಾ ರೈಲು ದುರಂತ; ಸಿಬಿಐ ತನಿಖೆಗೆ ಶಿಫಾರಸು ಮಾಡಿದ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್!

ಇದರ ಬೆನ್ನಲ್ಲೇ ಮಾರ್ಗದ ಸಿಗ್ನಿಂಗ್‌ ವ್ಯವಸ್ಥೆ ಹಾಗೂ ವಿದ್ಯುದೀಕರಣ ಕಾರ್ಯ ಆರಂಭವಾಗಿದೆ. ಬಹುಶಃ ಮಂಗಳವಾರ ಅಥವಾ ಬುಧವಾರದ ವೇಳೆ ಸಂಚಾರ ಪುನಾರಂಭವಾಗುವ ಸಾಧ್ಯತೆ ಇದೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌ ಹೇಳಿದ್ದಾರೆ.ಅಪಘಾತ ನಡೆದ ದಿನದಿಂದಲೂ ಸ್ಥಳದಲ್ಲೇ ಇರುವ ವೈಷ್ಣವ್‌ ಭಾನುವಾರವೂ ಘಟನೆ ನಡೆದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಳಿಕ ಮಾತನಾಡಿದ ಅವರು, ‘ಈಗಾಗಲೇ ಹಳಿತಪ್ಪಿದ್ದ ಎಲ್ಲಾ ಬೋಗಿಗಳನ್ನು ತೆರವು ಮಾಡಲಾಗಿದ್ದು, ರಕ್ಷಣಾ ಕಾರ್ಯಾಚರಣೆ ಸಂಪೂರ್ಣವಾಗಿದೆ. ಇದೀಗ ಹಳಿ ದುರಸ್ತಿ ಮುಗಿದಿದ್ದು, ಹಾನಿಯಾದ ಕಡೆ ಹೊಸ ಹಳಿ ಹಾಕಲಾಗಿದೆ. ಸಿಗ್ನಲ್‌ಗಳ ಅಳವಡಿಕೆ ಕಾರ್ಯವನ್ನು ಭರದಿಂದ ನಡೆಸಲಾಗುತ್ತಿದೆ. ಬಳಿಕ ವಿದ್ಯುತ್‌ ಲೈನ್‌ಗಳನ್ನು ಸರಿಪಡಿಸುವ ಮೂಲಕ ಸಂಚಾರವನ್ನು ಶೀಘ್ರವಾಗಿ ಆರಂಭಿಸಲು ತೀರ್ಮಾನಿಸಲಾಗಿದೆ’ ಎಂದರು.

Follow Us:
Download App:
  • android
  • ios