Asianet Suvarna News Asianet Suvarna News

ಒಡಿಶಾ ರೈಲು ದುರಂತದಲ್ಲಿ ಅನಾಥರಾದ ಮಕ್ಕಳ ವಿದ್ಯಾಭ್ಯಾಸ ಜವಾಬ್ದಾರಿ ಹೊಣೆ ಹೊತ್ತ ಅದಾನಿ!

ಒಡಿಶಾ ರೈಲು ದುರಂತದಲ್ಲಿ ಬರೋಬ್ಬರಿ 288 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. 800ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಘನಘೋರ ದುರಂತದ ನೋವು, ಆಕ್ರಂದನಗಳು ಹೆಚ್ಚಾಗುತ್ತಲೇ ಇದೆ. ಇದರ ನಡುವೆ ಅದಾನಿ ಮಹತ್ವದ ಘೋಷಣೆ ಮಾಡಿದ್ದಾರೆ. ರೈಲು ದುರಂತದಲ್ಲಿ ಪೋಷಕರನ್ನು ಕಳೆದುಕೊಂಡ ಎಲ್ಲಾ ಮಕ್ಕಳ ಶಿಕ್ಷಣ ಜವಾಬ್ದಾರಿಯನ್ನು ಅದಾನಿ ಗ್ರೂಪ್ ವಹಿಸಿಕೊಳ್ಳಲಿದೆ.

Adani group will take responsibility of school education who have lost parents in Odisha train Accident ckm
Author
First Published Jun 4, 2023, 6:37 PM IST

ನವೆದೆಹಲಿ(ಜೂ.04): ಭಾರತದ ರೈಲು ಇತಿಹಾಸದಲ್ಲಿ ನಡೆದ ಅತೀ ದೊಡ್ಡ ದುರಂತಗಳ ಪೈಕಿ ಒಡಿಶಾ ರೈಲು ಅಪಘಾತ ಕೂಡ ಒಂದು. ಬರೋಬ್ಬರಿ 288 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. 800ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಹಲವರ ಸ್ಥಿತಿ ಗಂಭೀರವಾಗಿದೆ. ಗಾಯಾಳುಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಆಪ್ತರನ್ನು ಕಳೆದುಕೊಂಡ ಕುಟುಂಬಸ್ಥರ ಕಣ್ಣೀರು, ಆಕ್ರಂದನಕ್ಕೆ ಉತ್ತರವೇ ಇಲ್ಲದಾಗಿದೆ.ಇದರ ನಡುವೆ ಉದ್ಯಮಿ ಗೌತಮ್ ಅದಾನಿ ಮಹತ್ವದ ಘೋಷಣೆ ಮಾಡಿದ್ದಾರೆ. ಒಡಿಶಾ ರೈಲು ದುರಂತದಿಂದ ಅನಾಥರಕ್ಕ ಮಕ್ಕಳ ಸಂಪೂರ್ಣ ಶಿಕ್ಷಣದ ಜವಾಬ್ದಾರಿಯನ್ನು ಅದಾನಿ ಗ್ರೂಪ್ ವಹಿಸಲಿದೆ.

ಒಡಿಶಾ ರೈಲು ಅಪಘಾತ ತೀವ್ರವಾಗಿ ನೋವು ತಂದಿದೆ. ಮನಸ್ಸಿಗೆ ಆಘಾತ ನೀಡಿದೆ. ಈ ಸಂದರ್ಭದಲ್ಲಿ ಒಡಿಶಾ ರೈಲು ಅಪಘಾತದಿಂದ ಪೋಷಕರನ್ನು ಕಳೆದುಕೊಂಡ, ಅನಾಥರಾದ ಮಕ್ಕಳ ಶಾಲಾ ಶಿಕ್ಷಣದ ಸಂಪೂರ್ಣ ಜವಾಬ್ದಾರಿಯನ್ನು ಅದಾನಿ ಗ್ರೂಪ್ ನೋಡಿಕೊಳ್ಳಲಿದೆ.ಇದು ನಮ್ಮೆಲ್ಲರ ಕರ್ತವ್ಯವಾಗಿದೆ. ದುರಂತದಲ್ಲಿ ತುತ್ತಾದವರಿಗೆ ನೆರವು ನೀಡುವ ಮೂಲಕ ಅವರು ಹೊಸ ಬದುಕು ಕಟ್ಟಿಕೊಳ್ಳುವಂತೆ ಮಾಡೋಣ ಎಂದು ಅದಾನಿ ಟ್ವೀಟ್ ಮಾಡಿದ್ದಾರೆ.

ರೈಲು ದುರಂತ ನಡೆದ ಬಹನಾಗಗೆ ಪ್ರಧಾನಿ ಭೇಟಿ, ಭೀಕರ ಅಪಘಾತ ಸ್ಥಳ ನೋಡಿ ಮರುಗಿದ ಮೋದಿ!

ದುರಂತದಲ್ಲಿ ಮಡಿದವರ ಪೈಕಿ 88 ಮೃತದೇಹಗಳನ್ನು ಗುರುತಿಸಲಾಗಿದೆ. ಇನ್ನುಳಿದ ಮೃತದೇಹಗಳ ಗುರುತು ಪತ್ತೆಯಾಗಿಲ್ಲ. ಕುಟುಂಬಸ್ಥರು ಆಪ್ತರು, ಶವಗಾರದಲ್ಲಿ ತಮ್ಮವರ ಮೃತದೇಹಕ್ಕಾಗಿ ಹುಡುಕುತ್ತಿರುವ ದೃಶ್ಯ ಕರುಳು ಹಿಂಡುವಂತಿದೆ. 

ಘಟನಾ ಸ್ಥಳಕ್ಕೆ ನಿನ್ನೆ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಿದ್ದಾರೆ. ಸುಮಾರು 40 ನಿಮಿಷಗಳ ಕಾಲ ಘಟನಾ ಸ್ಥಳದಲ್ಲಿದ್ದು ಪರಿಶೀಲನೆ ನಡೆಸಿದ್ದಾರೆ. ಇದೇ ವೇಳೆ ಅಧಿಕಾರಿಗಳು,ಸ್ಥಳದಲ್ಲಿದ್ದ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಅವರಿಂದ ಮಾಹಿತಿ ಪಡೆದುಕೊಂಡಿದ್ದಾರೆ. ಘಟನೆ ನಡೆದ ಬೆನ್ನಲ್ಲೇ ಅಶ್ವಿನಿ ವೈಷ್ಣವ್ ಸ್ಥಳದಲ್ಲೇ ನಿಂತು ಪರಿಸ್ಥಿತಿ ನಿರ್ವಹಣೆ ಮಾಡಿದ್ದಾರೆ.

 

 

ಒಡಿಶಾ ಸಿಎಂ ನವೀನ್‌ ಪಟ್ನಾಯಕ್‌, ರೈಲ್ವೆ ಖಾತೆ ಮಾಜಿ ಸಚಿವೆ ಮಮತಾ ಬ್ಯಾನರ್ಜಿ, ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಜೊತೆಗೆ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳಿಗೆ ಸಾಂತ್ವನ ಹೇಳಿದ್ದಾರೆ. ಮತ್ತೊಂದೆಡೆ ಘಟನೆ ಕುರಿತು ರೈಲ್ವೆ ಸಚಿವಾಲಯದ ಉನ್ನತ ಮಟ್ಟದ ತನಿಖೆ ಆರಂಭವಾಗಿದ್ದು, ಪ್ರಾಥಮಿಕ ತನಿಖೆ ಅನ್ವಯ, ಮಾನವ ವೈಫಲ್ಯವೇ ಅಪಘಾತಕ್ಕೆ ಕಾರಣ ಎಂದು ಕಂಡುಬಂದಿದೆ. ಸ್ಥಳದಲ್ಲಿ ಸೇನಾಪಡೆ ಸೇರಿದಂತೆ ವಿವಿಧ ವಿಪತ್ತು ರಕ್ಷಣಾ ಪಡೆಗಳಿಂದ ಕಾರ್ಯಾಚರಣೆ ನಡೆದಿದೆ.ಘಟನೆ ಕುರಿತು ರಾಷ್ಟ್ರಪತಿ ದ್ರೌಪದಿ ಮುರ್ಮು, ವಿಪಕ್ಷಗಳ ನಾಯಕರು, ಚಿತ್ರರಂಗ, ಕ್ರೀಡಾರಂಗದ ಖ್ಯಾತನಾಮರು ದಿಗ್ಭ್ರಮೆ ವ್ಯಕ್ತಪಡಿಸಿದ್ದಾರೆ. ಜೊತೆಗೆ ವಿವಿಧ ದೇಶಗಳ ಗಣ್ಯರು ಕೂಡಾ ಕಂಬನಿ ಮಿಡಿದಿದ್ದಾರೆ.

ಕೈಕಾಲುಗಳಿಲ್ಲದ ದೇಹಗಳು, ರಕ್ತದ ಹೊಳೆ: ಪ್ರತ್ಯಕ್ಷದರ್ಶಿಗಳು ಹಂಚಿಕೊಂಡ ರೈಲು ಅಪಘಾತ ಸ್ಥಳದ ಭಯಾನಕ ಕಥೆ ಹೀಗಿದೆ..

ಬಾಹಾನಗದ ಸಹಾಯಕ ಸ್ಟೇಶನ್‌ ಮ್ಯಾನೇಜರ್‌ ಮಾಡಿದ ಎಡವಟ್ಟೇ ಮೂರು ರೈಲುಗಳನ್ನು ಒಳಗೊಂಡ ದುರ್ಘಟನೆಗೆ ಕಾರಣವಾಗಿದೆ ಎಂದು ತಿಳಿದುಬಂದಿದೆ.ಬಾಹಾನಗ ನಿಲ್ದಾಣದಲ್ಲಿ ಒಟ್ಟು 4 ಹಳಿ ಇವೆ. ಈ ಪೈಕಿ ಪೈಕಿ ಮಧ್ಯದ ಎರಡು ಹಳಿ ರೈಲುಗಳ ಮುಕ್ತ ಸಂಚಾರಕ್ಕೆ ಮುಕ್ತವಾಗಿಡಲಾಗಿತ್ತು. ಅಕ್ಕಪಕ್ಕದ ಎರಡು ಹಳಿಗಳಲ್ಲಿ ಸರಕು ರೈಲು ನಿಲ್ಲಿಸಲಾಗಿತ್ತು. ಇಂಥ ವೇಳೆ ಕೋರಮಂಡಲ್‌ ಎಕ್ಸ್‌ಪ್ರೆಸ್‌ ರೈಲು ಗಂಟೆಗೆ 128 ಕಿ.ಮೀ ಬರುತ್ತಿದ್ದು, ಅದಕ್ಕೆ ಮುಖ್ಯಲೇನ್‌ನಲ್ಲಿ ಅಂದರೆ ಮಧ್ಯದ ಹಳಿಯಲ್ಲಿ ಆಗಮಿಸಲು ಮತ್ತು ಸ್ಟೇಷನ್‌ನಿಂದ ಹೊರಹೋಗಲು ಸಾಗಲು ಸಹಾಯಕ ಸ್ಟೇಷನ್‌ ಮ್ಯಾನೇಜರ್‌ ಗ್ರೀನ್‌ ಸಿಗ್ನಲ್‌ ನೀಡಿದ್ದರು. ಅದರಂತೆ ಆ ರೈಲಿನ ಚಾಲಕ ಸಾಮಾನ್ಯ ವೇಗದಲ್ಲೇ ರೈಲು ಚಲಾಯಿಸಿಕೊಂಡು ಸಾಗಿದ್ದರು.

Follow Us:
Download App:
  • android
  • ios