* ವೆಸ್ಟ್ ಇಂಡೀಸ್ ಪ್ರವಾಸಕ್ಕೆ ಭಾರತ ತಂಡ ಪ್ರಕಟವಾಗಿದ್ದು, ಶಿಖರ್ ಧವನ್‌ಗೆ ನಾಯಕ ಪಟ್ಟ* ಈ ವರ್ಷ ಭಾರತ ತಂಡದಲ್ಲಿ 7 ಮಂದಿ ನಾಯಕರು* ವಿರಾಟ್ ಕೊಹ್ಲಿ ನಾಯಕದ ವಿದಾಯದ ಬಳಿಕ ಹಲವು ಬಾರಿ ಕ್ಯಾಪ್ಟನ್ಸ್ ಬದಲಾವಣೆ
ಮುಂಬೈ(ಜು.07): ಟೀಂ ಇಂಡಿಯಾ ಕ್ಯಾಪ್ಟನ್ಸಿ ಮ್ಯೂಸಿಕಲ್ ಚೇರ್ ಆಗಿಬಿಟ್ಟಿದೆ. ಅವರ್ ಬಿಟ್, ಇವರ್ ಬಿಟ್ಟು ಅವರ್ಯಾರು ಅನ್ನೋ ಹಾಗೆ ಆಗಿದೆ ನಾಯಕತ್ವ. ಈ ವರ್ಷ ಒಬ್ಬರಲ್ಲ ಇಬ್ಬರಲ್ಲ ಬರೋಬ್ಬರಿ 7 ಮಂದಿ ಭಾರತ ತಂಡದ ನಾಯಕರಾಗಿದ್ದಾರೆ. ಆ ಏಳನೇಯವರೇ ಶಿಖರ್ ಧವನ್. ಇದೇ ತಿಂಗಳು ಅಂತ್ಯದಲ್ಲಿ ನಡೆಯುವ ವೆಸ್ಟ್ ಇಂಡೀಸ್ ವಿರುದ್ದದ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಗಬ್ಬರ್ ಸಿಂಗ್ ಖ್ಯಾತಿಯ ಶಿಖರ್ ಧವನ್, ಟೀಂ ಇಂಡಿಯಾವನ್ನು ನಾಯಕನಾಗಿ ಲೀಡ್ ಮಾಡಲಿದ್ದಾರೆ.
ಕೊಹ್ಲಿ ಕ್ಯಾಪ್ಟನ್ಸಿ ಬಿಟ್ಟು 6 ತಿಂಗಳು, 6 ತಿಂಗಳಲ್ಲಿ 6 ಮಂದಿ ನಾಯಕರು:
ಈ ವರ್ಷ ಜನವರಿಯಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ 3ನೇ ಟೆಸ್ಟ್ ನಂತರ ವಿರಾಟ್ ಕೊಹ್ಲಿ (Virat Kohli) ಕ್ಯಾಪ್ಟನ್ಸಿಗೆ ಗುಡ್ ಬೈ ಹೇಳಿದ್ರು. ಅಂದ್ರೆ ಅವರು ಟೀಂ ಇಂಡಿಯಾ (Team India) ನಾಯಕತ್ವ ಬಿಟ್ಟು 6 ತಿಂಗಳಾಗಿದೆ. ಈ ಆರು ತಿಂಗಳಲ್ಲಿ ಭಾರತ ತಂಡವನ್ನು ಆರು ಮಂದಿ ಮುನ್ನಡೆಸಿದ್ದಾರೆ. ರೋಹಿತ್ ಶರ್ಮಾ (Rohit Sharma), ಕೆಎಲ್ ರಾಹುಲ್, ರಿಷಭ್ ಪಂತ್, ಹಾರ್ದಿಕ್ ಪಾಂಡ್ಯ (Hardik Pandya), ಜಸ್ಪ್ರೀತ್ ಬುಮ್ರಾ ಮತ್ತು ಈಗ ಶಿಖರ್ ಧವನ್. ಅಂದರೆ ಈ ವರ್ಷ ಕೊಹ್ಲಿ ಸೇರಿದಂತೆ 7 ಮಂದಿ ಟೀಂ ಇಂಡಿಯಾ ನಾಯಕರಾಗಿದ್ದಾರೆ. ಈ ಮೂಲಕ ಭಾರತೀಯ ಕ್ರಿಕೆಟ್ ಇತಿಹಾಸ ಪುಟ ಸೇರಿತು. ಜಸ್ಟ್ ಆರೇ ಆರು ತಿಂಗಳಲ್ಲಿ ಟೀಂ ಇಂಡಿಯಾಗೆ 7 ಮಂದಿ ನಾಯಕರಾಗಿರೋ ಇತಿಹಾಸವೇ ಇಲ್ಲ.
ಸೀನಿಯರ್ಸ್ಗೆ ರೆಸ್ಟ್, ಧವನ್‌ಗೆ ಒಲಿದ ನಾಯಕತ್ವ:
ಇದೇ ವರ್ಷ ಅಕ್ಟೋಬರ್-ನವೆಂಬರ್ನಲ್ಲಿ ಆಸ್ಟ್ರೇಲಿಯಾದಲ್ಲಿ ನಡೆಯುವ ಐಸಿಸಿ ಟಿ20 ವಿಶ್ವಕಪ್ (ICC T20 World Cup) ದೃಷ್ಟಿಯಿಂದ ಸತತ ಕ್ರಿಕೆಟ್ ಆಡಿ ದಣಿದಿರುವ ಸೀನಿಯರ್ ಪ್ಲೇಯರ್ಸ್ಗೆ ವಿಶ್ರಾಂತಿ ನೀಡಲಾಗಿದೆ. ಹಾಗಾಗಿ ಶಿಖರ್ ಧವನ್‌ಗೆ (Shikhar Dhawan) ನಾಯಕತ್ವ ಪಟ್ಟ ಕಟ್ಟಲಾಗಿದೆ. ಕಳೆದ ವರ್ಷ ಶ್ರೀಲಂಕಾ ಟೂರ್ನಲ್ಲೂ ಗಬ್ಬರ್ ಸಿಂಗ್ ನಾಯಕರಾಗಿದ್ದರು. ಆಲ್ರೌಂಡರ್ ರವೀಂದ್ರ ಜಡೇಜಾ (Ravindra Jadeja) ವೈಸ್ ಕ್ಯಾಪ್ಟನ್. ಈ ಇಬ್ಬರ ಜೊತೆ ಯುಜುವೇಂದ್ರ ಚಹಲ್ ಇದ್ದಾರೆ. ಉಳಿದವರೆಲ್ಲಾ ಅಷ್ಟೇನು ಇಂಟರ್ನ್ಯಾಷನಲ್ ಕ್ರಿಕೆಟ್ ಆಡಿಲ್ಲ. ಕೆಲವರು ಹೊಸಬರು.
Shikhar Dhawan: ವಿಂಡೀಸ್ ಎದುರಿನ ಸರಣಿಗೆ ಭಾರತ ತಂಡ ಪ್ರಕಟ, ಧವನ್‌ಗೆ ನಾಯಕ ಪಟ್ಟ..!
ವಿಂಡೀಸ್ ಸಿರೀಸ್ಗೆ ಭಾರತ ಏಕದಿನ ತಂಡ ಹೀಗಿದೆ. ಶಿಖರ್ ಧವನ್, ರವೀಂದ್ರ ಜಡೇಜಾ, ರುತುರಾಜ್ ಗಾಯಕ್ವಾಡ್, ಶುಭ್ಮನ್ ಗಿಲ್, ದೀಪಕ್ ಹೂಡಾ, ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ಇಶಾನ್ ಕಿಶನ್, ಸಂಜು ಸ್ಯಾಮ್ಸನ್, ಅಕ್ಷರ್ ಪಟೇಲ್, ಯುಜವೇಂದ್ರ ಚಹಲ್, ಶಾರ್ದೂಲ್ ಠಾಕೂರ್, ಮೊಹಮ್ಮದ್ ಸಿರಾಜ್, ಆರ್ಶದೀಪ್ ಸಿಂಗ್, ಅವೇಶ್ ಖಾನ್, ಪ್ರಸಿದ್ಧ್ ಕೃಷ್ಣ
ಸೀನಿಯರ್ಸ್ ಅನುಪಸ್ಥಿತಿಯಲ್ಲಿ ಜೂನಿಯರ್ಸ್ಗೆ ಒಂದು ಅವಕಾಶ ಸಿಕ್ಕಿದ್ದು, ಆ ಅವಕಾಶ ಸದ್ಭಳಕೆ ಮಾಡಿಕೊಂಡವರಿಗೆ ಭವಿಷ್ಯವಿದೆ. ಜುಲೈ 22ರಿಂದ 27ರವರೆಗೆ ಒನ್ಡೇ ಸಿರೀಸ್ ಆದ್ಮೇಲೆ 5 ಪಂದ್ಯಗಳ ಟಿ20 ಸಿರೀಸ್ ಅನ್ನೂ ವಿಂಡೀಸ್ ವಿರುದ್ಧ ಭಾರತ ಆಡಲಿದೆ. ವಿಂಡೀಸ್ ಎದುರಿನ ಟಿ20 ಸರಣಿಗೆ ಟೀಂ ಇಂಡಿಯಾ ಆನೌನ್ಸ್ ಆಗಿಲ್ಲ. ವಿಶ್ವಕಪ್ ಇರೋದ್ರಿಂದ ಇಂಗ್ಲೆಂಡ್ ಸರಣಿ ಬಳಿಕ ಬಲಿಷ್ಠ ಟಿ20 ತಂಡವನ್ನ ಆಯ್ಕೆ ಮಾಡುವ ಸಾಧ್ಯತೆ ಇದೆ.
