Asianet Suvarna News Asianet Suvarna News

ಸೋಷಿಯಲ್ ಮೀಡಿಯಾದಲ್ಲಿ ವಿರಾಟ್ ಕೊಹ್ಲಿ ಹವಾ..! ಅತಿಹೆಚ್ಚು ಲೈಕ್ ಪಡೆದ ಆ ಪೋಸ್ಟ್‌ನಲ್ಲಿ ಅಂತದ್ದೇನಿದೆ?

ಟಿ20 ವಿಶ್ವಕಪ್ ಜಯಿಸಿದ ಬಳಿಕ ವಿರಾಟ್ ಕೊಹ್ಲಿ ತಮ್ಮ ಅಧಿಕೃತ ಇನ್‌ಸ್ಟಾಗ್ರಾಂ ಅಕೌಂಟ್ ಮೂಲಕ ಮಾಡಿದ ಪೋಸ್ಟ್ ಒಂದು ಹೊಸ ದಾಖಲೆ ಬರೆದಿದೆ. ಏನದು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ

Virat Kohli this Jai Hind post becomes the most liked ever on Instagram kvn
Author
First Published Jul 2, 2024, 4:44 PM IST

ಟಿ20 ವಿಶ್ವಕಪ್ ಫೈನಲ್‌ನಲ್ಲಿ ವಿರಾಟ್ ಕೊಹ್ಲಿ ಅದ್ಭುತ ಅರ್ಧಶತಕ ಬಾರಿಸಿ, ಭಾರತದ ಗೆಲುವಿಗೆ ಕಾರಣರಾದ್ರು. ಅಲ್ಲದೇ ಹಲವು ದಾಖಲೆಗಳನ್ನ ಬರೆದ್ರು. ಇದು ಆನ್‌ಫೀಲ್ಡ್‌ ದಾಖಲೆಯಾಯ್ತು. ಆದ್ರೆ, ವಿಶ್ವಕಪ್ ಗೆದ್ದ ನಂತರ ಆಫ್‌ಫೀಲ್ಡ್‌ನಲ್ಲಿ ಅಸಾಮಾನ್ಯ ದಾಖಲೆ ಬರೆದಿದ್ದಾರೆ. ಏನು ಆ ದಾಖಲೆ  ಅಂತೀರಾ..? ಇಲ್ಲಿದೆ ನೋಡಿ ಡಿಟೇಲ್ಸ್..!!

ಒಂದೇ ಒಂದು ಪೋಸ್ಟ್ ಮೂಲಕ ಇತಿಹಾಸ ಸೃಷ್ಟಿ..! 

ಟಿ20 ವಿಶ್ವಕಪ್ ಫೈನಲ್‌ನಲ್ಲಿ ಟೀಂ ಇಂಡಿಯಾ ಗೆಲುವಿಗೆ ವಿರಾಟ್ ಕೊಹ್ಲಿಯ ಅರ್ಧಶತಕವೂ ಪ್ರಮುಖ ಕಾರಣ. ಟೂರ್ನಿಯುದ್ಧಕ್ಕೂ ಫ್ಲಾಪ್ ಶೋ ನೀಡಿದ್ದ ವಿರಾಟ್ ಕೊಹ್ಲಿ, ಬಿಗ್ ಮ್ಯಾಚ್ನಲ್ಲಿ ಬಿಗ್ ಇನ್ನಿಂಗ್ಸ್ ಆಡಿದ್ರು. ಆ ಮೂಲಕ ತಾವು ಬಿಗ್ ಮ್ಯಾಚ್ ಪ್ಲೇಯರ್ ಅನ್ನೋದನ್ನ ಮತ್ತೊಮ್ಮೆ ಪ್ರೂವ್ ಮಾಡಿದ್ರು. 76 ರನ್ ಬಾರಿಸಿ ಟಿ20 ವಿಶ್ವಕಪ್ ಫೈನಲ್ನಲ್ಲಿ ಹೈಯೆಸ್ಟ್ ಸ್ಕೋರ್ ಬಾರಿಸಿದ ಬ್ಯಾಟರ್‌ ಎನಿಸಿಕೊಂಡ್ರು. 

ಇನ್ನು ಪಂದ್ಯದ ನಂತರ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡೋ ಮೂಲಕ ಕೊಹ್ಲಿ ಹೊಸ ಇತಿಹಾಸ ಸೃಷ್ಟಿಸಿದ್ದಾರೆ.  ಯೆಸ್, ವಿಶ್ವಕಪ್ ಗೆಲುವಿನ ನಂತರ ಇನ್‌ಸ್ಟಾಗ್ರಾಮ್ನಲ್ಲಿ ತಮ್ಮ ಖುಷಿಯನ್ನ ಹಂಚಿಕೊಂಡು ವಿರಾಟ್ ಪೋಸ್ಟ್ವೊಂದನ್ನ ಮಾಡಿದ್ರು. 

 
 
 
 
 
 
 
 
 
 
 
 
 
 
 

A post shared by Virat Kohli (@virat.kohli)

ಈ ಪೋಸ್ಟ್ ಈವರೆಗೂ 1 ಕೋಟಿ 92 ಲಕ್ಷ 21 ಸಾವಿರಕ್ಕೂ ಹೆಚ್ಚು ಲೈಕ್ಸ್ ಪಡೆದುಕೊಂಡಿದೆ. ಇದ್ರೊಂದಿಗೆ  ಏಷ್ಯಾದಲ್ಲೇ ಅತ್ಯಧಿಕ ಮೆಚ್ಚುಗೆಗಳಿಸಿದ ಪೋಸ್ಟ್ ಅನ್ನೋ ದಾಖಲೆಗೆ  ಪಾತ್ರವಾಗಿದೆ. ಅಲ್ಲದೇ ಭಾರತದಲ್ಲಿ ಅತಿಹೆಚ್ಚು ಲೈಕ್ಸ್ ಪಡೆದ ಪೋಸ್ಟ್ ಆಗಿದೆ. ಇದಕ್ಕೂ ಮುನ್ನ ಈ ದಾಖಲೆ ಬಾಲಿವುಡ್ ಜೋಡಿ ಸಿದ್ಧಾರ್ಥ್ ಮಲ್ಹೋತ್ರಾ ಹಾಗೂ ಕಿಯಾರಾ ಅಡ್ವಾಣಿ ಹೆಸರಿನಲ್ಲಿತ್ತು. ಇವರ ಮದುವೆಯ ಫೋಟೋಗೆ 1 ಕೋಟಿ 40 ಲಕ್ಷಕ್ಕೂ ಅಧಿಕ ಮಂದಿ ಲೈಕ್ ಒತ್ತಿದ್ದರು. 

ಕೊಹ್ಲಿ ಸೋಷಿಯಲ್ ಮೀಡಿಯಾ ದಾಖಲೆ ಮೊದಲಲ್ಲ..!

ಇನ್ನು ವಿರಾಟ್ ಕೊಹ್ಲಿ ಸೋಷಿಯಲ್ ಮೀಡಿಯಾ ಪೋಸ್ಟ್‌ಗಳ ಮೂಲಕ ದಾಖಲೆ ಬರೆದಿದ್ದು ಇದೇ ಮೊದಲಲ್ಲ. ಈ ಹಿಂದೆ ತಮ್ಮ ಎರಡನೇ ಮಗು ಅಕಾಯ್ ಹುಟ್ಟಿಗೆ ಸಂಬಂಧಿಸಿದ ಪೋಸ್ಟ್ ಕೂಡ ರೆಕಾರ್ಡ್ ಬ್ರೇಕ್ ಮಾಡಿತ್ತು. ಒಂದು ಗಂಟೆಯಲ್ಲೇ 5 ಮಿಲಿಯನ್ ಅಂದ್ರೆ, 50 ಲಕ್ಷ ಲೈಕ್ಸ್ ಪಡೆದುಕೊಂಡಿತ್ತು. ಇದ್ರೊಂದಿಗೆ ಏಷ್ಯಾದಲ್ಲೇ ಅತ್ಯಂತ ವೇಗವಾಗಿ ಅತ್ಯಧಿಕ ಲೈಕ್ಸ್ ಪಡೆದ ಪೋಸ್ಟ್ ಆಗಿ ಹೊರಹೊಮ್ಮಿತ್ತು.

ಸದ್ಯ ಕ್ರಿಕೆಟ್‌ನಲ್ಲಿ ಕೊಹ್ಲಿ ಕ್ರೇಝ್ ಮೀರಿಸೋರಿಲ್ಲ..! 

ಸೋಷಿಯಲ್ ಮೀಡಿಯಾದಲ್ಲಿ ವಿರಾಟ್ ಕೊಹ್ಲಿಗಿರೋವಷ್ಟು ಫಾಲೋ ವರ್ಸ್, ಬೇರೆ ಯಾವ ಕ್ರಿಕೆಟರ್‌ಗೂ ಇಲ್ಲ. ಫೇಸ್ಬುಕ್, ಇನ್ಸ್ಟಾಗ್ರಾಮ್, ಟ್ವಿಟರ್ ಮೂರು ಸೇರಿ 27 ಕೋಟಿಗೂ ಅಧಿಕ ಮಂದಿ ಕೊಹ್ಲಿಯನ್ನ ಫಾಲೋ ಮಾಡ್ತಾರೆ. ಇನ್ಸ್ಟಾಗ್ರಾಮ್ನಲ್ಲಿ ಫುಟ್ಬಾಲ್ ಸೂಪರ್ ಸ್ಟಾರ್ಗಳಾದ ರೊನಾಲ್ಡೋ, ಮೆಸ್ಸಿ ಬಿಟ್ಟರೆ ಅತಿಹೆಚ್ಚು ಫಾಲೋವರ್ಸ್ ಕೊಹ್ಲಿಗಿದ್ದಾರೆ. ಅದೇನೇ ಇರಲಿ ಮತ್ತೊಮ್ಮೆ ಕೊಹ್ಲಿ ನಾನು ಆನ್‌ಫೀಲ್ಡ್‌ನಲ್ಲಿ ಮಾತ್ರ ಅಲ್ಲ, ಆಫ್‌ಫೀಲ್ಡ್‌ನಲ್ಲೂ ಕಿಂಗ್ ಅನ್ನೋದನ್ನ ಪ್ರೂವ್ ಮಾಡಿದ್ದಾರೆ.

ಸ್ಪೋರ್ಟ್ಸ್ ಬ್ಯುರೋ, ಏಷ್ಯಾನೆಟ್ ಸುವರ್ಣ  ನ್ಯೂಸ್

Latest Videos
Follow Us:
Download App:
  • android
  • ios