Asianet Suvarna News Asianet Suvarna News

ನಾಯಕನಾಗಿ ಧೋನಿ, ಪಾಂಟಿಂಗ್ ಹಿಂದಿಕ್ಕಿ ದಾಖಲೆ ಬರೆದ ಕೊಹ್ಲಿ!

ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ 3ನೇ ಏಕದಿನ ಪಂದ್ಯದಲ್ಲಿ ನಾಯಕ ವಿರಾಟ್ ಕೊಹ್ಲಿ ದಾಖಲೆ ನಿರ್ಮಿಸಿದ್ದಾರೆ. ಕೊಹ್ಲಿ ಬ್ಯಾಟಿಂಗ್ ಅಬ್ಬರಕ್ಕೆ ಎಂ.ಎಸ್.ಧೋನಿ ಹಾಗೂ ಆಸೀಸ್ ಮಾಜಿ ನಾಯಕ ರಿಕಿ ಪಾಂಟಿಂಗ್ ಸಾಧನೆಯನ್ನು ಹಿಂದಿಕ್ಕಿದ್ದಾರೆ. ಕೊಹ್ಲಿ ದಾಖಲೆ ವಿವರ ಇಲ್ಲಿದೆ.
 

Virat kohli surpass 5000 odi runs as a captain in bengaluru
Author
Bengaluru, First Published Jan 19, 2020, 7:39 PM IST
  • Facebook
  • Twitter
  • Whatsapp

ಬೆಂಗಳೂರು(ಜ.19): ಆಸ್ಟ್ರೇಲಿಯಾ ವಿರುದ್ಧದ 3ನೇ ಏಕದಿನ ಪಂದ್ಯದಲ್ಲಿ ನಾಯಕ ವಿರಾಟ್ ಕೊಹ್ಲಿ ದಾಖಲೆ ನಿರ್ಮಿಸಿದ್ದಾರೆ. ಕೆಎಲ್ ರಾಹುಲ್ ವಿಕೆಟ್ ಪತನದ ಬಳಿಕ ಕಣಕ್ಕಿಳಿದ ವಿರಾಟ್ ಕೊಹ್ಲಿ ನಾಯಕನಾಗಿ 5,000 ರನ್ ಪೂರೈಸಿದರು. ಅತೀ ಕಡಿಮೆ ಇನಿಂಗ್ಸ್‌ಗಳಲ್ಲಿ 5000 ರನ್ ಪೂರೈಸಿದ ಏಕದಿನ ನಾಯಕ ಅನ್ನೋ ದಾಖಲೆ ಬರೆದಿದ್ದಾರೆ.

ಇದನ್ನೂ ಓದಿ: INDvAUS ಬೆಂಗಳೂರು ಪಂದ್ಯ; ಏಕದಿನದಲ್ಲಿ ದಾಖಲೆ ಬರೆದ ರೋಹಿತ್ ಶರ್ಮಾ!

ನಾಯಕನಾಗಿ ಏಕದಿನ ಕ್ರಿಕೆಟ್‌ನಲ್ಲಿ ವಿರಾಟ್ ಕೊಹ್ಲಿ ಕೇವಲ 82 ಇನಿಂಗ್ಸ್‌ಗಳಲ್ಲಿ 5,000 ರನ್ ಪೂರೈಸಿದ್ದಾರೆ. ಟೀಂ ಇಂಡಿಯಾ ಮಾಜಿ ನಾಯಕ ಎಂ.ಎಸ್.ಧೋನಿ 127 ಇನಿಂಗ್ಸ್‌ಗಳಲ್ಲಿ 5000 ರನ್ ಪೂರೈಸಿದ್ದರು. ಇದೀಗ ಧೋನಿ ದಾಖಲೆ ಮುರಿದ ವಿರಾಟ್ ಕೊಹ್ಲಿ ಮೊದಲ ಸ್ಥಾನ ಅಲಂಕರಿಸಿದ್ದಾರೆ. 

ಇದನ್ನೂ ಓದಿ: INDvAUS ಬೆಂಗಳೂರು ಪಂದ್ಯ; ಕಪ್ಪು ಪಟ್ಟಿ ಧರಿಸಿದ ಟೀಂ ಇಂಡಿಯಾ; ಇಲ್ಲಿದೆ ಕಾರಣ!.

ಕಡಿಮೆ ಇನಿಂಗ್ಸ್‌ಗಳಲ್ಲಿ ನಾಯಕನಾಗಿ 5000 ರನ್(ಏಕದಿನ)
ವಿರಾಟ್ ಕೊಹ್ಲಿ 82 ಇನಿಂಗ್ಸ್
ಎಂ.ಎಸ್.ಧೋನಿ 127 ಇನಿಂಗ್ಸ್
ರಿಕಿ ಪಾಂಟಿಗ್ 131 ಇನಿಂಗ್ಸ್
ಗ್ರೇಮ್ ಸ್ಮಿತ್ 135 ಇನಿಂಗ್ಸ್
ಸೌರವ್ ಗಂಗೂಲಿ 136 ಇನಿಂಗ್ಸ್
 

Follow Us:
Download App:
  • android
  • ios