ಬೆಂಗಳೂರು(ಜ.19): ಆಸ್ಟ್ರೇಲಿಯಾ ವಿರುದ್ಧದ 3ನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಆರಂಭಿಕ ರೋಹಿತ್ ಶರ್ಮಾ ದಾಖಲೆ ಬರೆದಿದ್ದಾರೆ. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಈಗಾಗಲೇ ಹಲವು ವಿಶ್ವದಾಖಲೆ ಬರೆದಿರುವ ರೋಹಿತ್ ಶರ್ಮಾ, ಇದೀಗ ಏಕದಿನ ಕ್ರಿಕೆಟ್‌ನಲ್ಲಿ 9000 ರನ್ ಪೂರೈಸೋ ಮೂಲಕ ಮತ್ತೊಂದು ಮೈಲಿಗಲ್ಲು ನಿರ್ಮಿಸಿದ್ದಾರೆ.

ಇದನ್ನೂ ಓದಿ: ಸ್ಮಿತ್ ಶತಕ: ಟೀಂ ಇಂಡಿಯಾಗೆ ಸ್ಫರ್ಧಾತ್ಮಕ ಗುರಿ ನೀಡಿದ ಆಸೀಸ್

ಅತೀ ಕಡಿಮೆ ಇನಿಂಗ್ಸ್‌ನಲ್ಲಿ 9,000 ರನ್ ಪೂರೈಸಿದ ವಿಶ್ವದ 3ನೇ ಏಕದಿನ ಕ್ರಿಕೆಟಿಗ ಅನ್ನೋ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ರೋಹಿತ್ ಶರ್ಮಾ 217 ಇನಿಂಗ್ಸ್‌ನಲ್ಲಿ 9,000 ರನ್ ಸಿಡಿಸಿದರು. ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಕೇವಲ 194 ಇನಿಂಗ್ಸ್‌ನಲಲಿ 9000 ರನ್ ಪೂರೈಸಿದ ಮೊದಲ ಕ್ರಿಕೆಟಿಗ ಅನ್ನೋ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಟಾಪ್ 5 ಪಟ್ಟಿಯಲ್ಲಿ ನಾಲ್ವರು ಭಾರತೀಯರೇ ಸ್ಥಾನ ಪಡೆದಿದ್ದಾರೆ.

ಇದನ್ನೂ ಓದಿ: INDvAUS ಬೆಂಗಳೂರು ಪಂದ್ಯ; ಕಪ್ಪು ಪಟ್ಟಿ ಧರಿಸಿದ ಟೀಂ ಇಂಡಿಯಾ; ಇಲ್ಲಿದೆ ಕಾರಣ!.

ಅತೀ ಕಡಿಮೆ ಇನಿಂಗ್ಸ್‌ನಲ್ಲಿ 9,000 ರನ್ ಪೂರೈಸಿದ ಸಾಧಕರು 
ವಿರಾಟ್ ಕೊಹ್ಲಿ 194 ಇನಿಂಗ್ಸ್
ಎಬಿ ಡಿವಿಲಿಯರ್ಸ್ 208 ಇನಿಂಗ್ಸ್
ರೋಹಿತ್ ಶರ್ಮಾ 217 ಇನಿಂಗ್ಸ್
ಸೌರವ್ ಗಂಗೂಲಿ 228 ಇನಿಂಗ್ಸ್
ಸಚಿನ್ ತೆಂಡುಲ್ಕರ್ 235 ಇನಿಂಗ್ಸ್
ಬ್ರಿಯಾನ್ ಲಾರಾ 239 ಇನಿಂಗ್ಸ್

ರೋಚಕ ಪಂದ್ಯದಲ್ಲಿ ರೋಹಿತ್ ಶರ್ಮಾ ಈಗಾಗಲೇ ಹಾಫ್ ಸೆಂಚುರಿ ಸಿಡಿಸಿದ್ದಾರೆ. ಬೆಂಗಳೂರಿನಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಪ್ರತಿ ಹೋರಾಟದಲ್ಲಿ ರೋಹಿತ್ ಶರ್ಮಾ ಅಬ್ಬರಿಸಿದ್ದಾರೆ. ದಾಖಲೆ ಬರೆದಿದ್ದಾರೆ. 

ರೋಹಿತ್ ಶರ್ಮಾ vs ಆಸ್ಟ್ರೇಲಿಯಾ(ಬೆಂಗಳೂರು)ODI
209 ರನ್ (158 ಎಸೆತ) 2013
65 ರನ್ (55 ಎಸೆತ) 2017