ಬೆಂಗಳೂರು(ಜ.19): ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಅಂತಿಮ ಹಾಗೂ ಮಹತ್ವದ ಪಂದ್ಯ ಹೆಜ್ಜೆ ಹೆಜ್ಜೆಗೂ ಕುತೂಹಲ ಹೆಚ್ಚಿಸುತ್ತಿದೆ. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಟೀಂ ಇಂಡಿಯಾ ಕ್ರಿಕೆಟಿಗರು ಕಪ್ಪ ಪಟ್ಟಿ ಧರಿಸಿ ಕಣಕ್ಕಿಳಿದಿದ್ದರೆ. ಜನವರಿ 17 ರಂದು ಭಾರತ ಮಾಜಿ ಕ್ರಿಕೆಟಿಗ ಬಾಪು ನಾಡಕರ್ಣಿ ನಿಧನರಾಗಿದ್ದರು. ಹೀಗಾಗಿ ಹಿರಿಯ ಕ್ರಿಕೆಟಿಗನಿಗೆ ಸಂತಾಪ ಸೂಚಿಸುವ ನಿಟ್ಟಿನಲ್ಲಿ ಕ್ರಿಕೆಟಿಗರು ಕಪ್ಪು ಪಟ್ಟಿ ಧರಿಸಿ ಕಣಕ್ಕಿಳಿದಿದ್ದಾರೆ.

ಇದನ್ನೂ ಓದಿ: ಟಾಸ್ ಗೆದ್ದ ಆಸ್ಟ್ರೇಲಿಯಾ ಬ್ಯಾಟಿಂಗ್ ಆಯ್ಕೆ

86 ವರ್ಷದ ಬಾಪು ನಾಡಕರ್ಣಿ ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದರು. ಬಾಪು ನಾಡಕರ್ಣಿ ಸತತ 21 ಓವರ್ ಮೇಡನ್ ಮಾಡಿ ವಿಶ್ವದಾಖಲೆ ಬರೆದಿದ್ದಾರೆ. 1964ರಲ್ಲಿ ಮಡ್ರಾಸ್‌ನಲ್ಲಿ ನಡೆದ ಪಂದ್ಯದಲ್ಲಿ ಬಾಪು ಇಂಗ್ಲೆಂಡ್ ವಿರುದ್ಧ 21 ಓವರ್ ಮೇಡನ್ ಮಾಡಿದ್ದರು. ಈ ದಾಖಲೆ ಇಂದಿಗೂ ಯಾರೂ ಅಳಿಸಿಲ್ಲ.

ಇದನ್ನೂ ಓದಿ: ಚಿನ್ನಸ್ವಾಮಿಯಲ್ಲಿ ಇಂಡೋ-ಆಸೀಸ್ ಪಂದ್ಯ; ಬೆಂಗಳೂರಿನ ಎಲ್ಲೆಲ್ಲಿ ಪಾರ್ಕಿಂಗ್ ನಿಷೇಧ?

ಭಾರತದ ಪರ 41 ಟೆಸ್ಟ್ ಆಡಿದ್ದ ಬಾಪು ನಾಡಕರ್ಣಿ 1414 ರನ್ ಸಿಡಿಸಿದ್ದಾರೆ. 88 ವಿಕೆಟ್ ಕಬಳಿಸಿ ಮಿಂಚಿದ್ದರೆ. 4 ಬಾರಿ 5 ವಿಕೆಟ್ ಗೊಂಚಲು ಪಡೆದಿದ್ದಾರೆ. ಹಿರಿಯ ಕ್ರಿಕೆಟಿಗನಿಗೆ ಬಿಸಿಸಿಐ ಹಾಗೂ ಟೀಂ ಇಂಡಿಯಾ ಕ್ರಿಕೆಟಿಗರು ಸಂತಾಪ ಸೂಚಿಸಿದ್ದರು. ಇದೀಗ ಕಪ್ಪು ಪಟ್ಟಿ ಧರಿಸಿ ಕಣಕ್ಕಿಳಿದಿದ್ದಾರೆ.

 

ಬೆಂಗಳೂರಿನಲ್ಲಿ ನಡೆಯುತ್ತಿರುವ 3ನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ ದಿಟ್ಟ ಹೋರಾಟ ನೀಡುತ್ತಿದ್ದು, ಭಾರತೀಯ ಅಭಿಮಾನಿಗಳ ಚಿಂತೆ ಹೆಚ್ಚಿಸಿದೆ.