12 ವರ್ಷಗಳ ಬಳಿಕ ವಿರಾಟ್ ಕೊಹ್ಲಿ ರಣಜಿ ಟ್ರೋಫಿಯಲ್ಲಿ ದೆಹಲಿ ಪರ ರೈಲ್ವೇಸ್ ವಿರುದ್ಧ ಜ.30 ರಂದು ಕಣಕ್ಕಿಳಿಯಲಿದ್ದಾರೆ. ಮುಂಬೈನಲ್ಲಿ ಸಂಜಯ್ ಬಾಂಗರ್ ಮಾರ್ಗದರ್ಶನದಲ್ಲಿ ಕಠಿಣ ಅಭ್ಯಾಸ ನಡೆಸುತ್ತಿದ್ದಾರೆ. ಆಸ್ಟ್ರೇಲಿಯಾ ಸರಣಿಯಲ್ಲಿನ ವೈಫಲ್ಯದ ಬಳಿಕ ಬ್ಯಾಕ್‌ಫೂಟ್ ಹೊಡೆತಗಳನ್ನು ಸುಧಾರಿಸಲು ಗಮನ ಹರಿಸಿದ್ದಾರೆ. ಕೊಹ್ಲಿ ಆಟ ವೀಕ್ಷಿಸಲು ಹತ್ತು ಸಾವಿರಕ್ಕೂ ಹೆಚ್ಚು ಪ್ರೇಕ್ಷಕರು ನಿರೀಕ್ಷಿತ.
ಮುಂಬೈ: ಬಿಸಿಸಿಐ ಷರತ್ತಿಗೆ ಮಣಿದು 12 ವರ್ಷ ಬಳಿಕ ರಣಜಿ ಟ್ರೋಫಿಯಲ್ಲಿ ಆಡಲು ಒಪ್ಪಿರುವ ತಾರಾ ಬ್ಯಾಟರ್ ವಿರಾಟ್ ಕೊಹ್ಲಿ ಜ.30ರಿಂದ ದೆಹಲಿಯಲ್ಲಿ ನಡೆಯಲಿರುವ ರೈಲ್ವೇಸ್ ವಿರುದ್ಧದ ಪಂದ್ಯದಲ್ಲಿ ಕಣಕ್ಕಿಳಿಯಲಿದ್ದಾರೆ. ದೆಹಲಿ ತಂಡವನ್ನು ಪ್ರತಿನಿಧಿಸಲಿರುವ ವಿರಾಟ್ ಕೊಹ್ಲಿ ಪಂದ್ಯಕ್ಕಾಗಿ ಮುಂಬೈನಲ್ಲಿ ಕಠಿಣ ಅಭ್ಯಾಸ ನಡೆಸುತ್ತಿದ್ದಾರೆ.
2014ರಿಂದ 2019ರ ವರೆಗೂ ಭಾರತ ತಂಡದ ಬ್ಯಾಟಿಂಗ್ ಕೋಚ್ ಆಗಿ ಕಾರ್ಯನಿರ್ವಹಿಸಿದ, ಕೊಹ್ಲಿ ಜೊತೆ ಉತ್ತಮ ಬಾಂಧವ್ಯ ಹೊಂದಿರುವ ಸಂಜಯ್ ಬಾಂಗರ್, ದಿಗ್ಗಜ ಬ್ಯಾಟರ್‌ನ ಅಭ್ಯಾಸಕ್ಕೆ ನೆರವು ನೀಡುತ್ತಿದ್ದಾರೆ. ಇತ್ತೀಚೆಗೆ ಆಸ್ಟ್ರೇಲಿಯಾ ದಲ್ಲಿ ನಡೆದ ಟೆಸ್ಟ್ ಸರಣಿಯಲ್ಲಿ ಕೊಹ್ಲಿ ನಿರೀಕ್ಷಿತ ಯಶಸ್ಸು ಸಾಧಿಸಿರಲಿಲ್ಲ. ಅಲ್ಲದೇ, 8 ಇನ್ನಿಂಗ್ಸ್ ಗಳಲ್ಲಿ ಆಫ್ ಸ್ಟಂಪ್‌ನಿಂದ ಹೊರ ಹೋಗುವ ಚೆಂಡನ್ನು ಕೆಣಕಿ ವಿಕೆಟ್ ಕಳೆದುಕೊಂಡಿದ್ದರು. ಈ ನಿಟ್ಟಿನಲ್ಲಿ ಸುಧಾರಣೆ ಕಾಣಲು ತಮ್ಮ ಬ್ಯಾಕ್‌ಫೂಟ್ ಹೊಡೆತಗಳ ಮೇಲೆ ಹೆಚ್ಚು ಗಮನ ಹರಿಸುತ್ತಿರುವುದಾಗಿ ತಿಳಿದುಬಂದಿದೆ. ಕೊಹ್ಲಿಆಡುವುದನ್ನು ವೀಕ್ಷಿಸಲು 10,000ಕ್ಕೂ ಹೆಚ್ಚು ಪ್ರೇಕ್ಷಕರು ಕೋಟ್ಲಾ ಕ್ರೀಡಾಂಗಣಕ್ಕೆ ಆಗಮಿಸುವ ನಿರೀಕ್ಷೆ ಇದ್ದು, ದೆಹಲಿ ಕ್ರಿಕೆಟ್ ಸಂಸ್ಥೆ ಸೂಕ್ತ ವ್ಯವಸ್ಥೆ ಮಾಡಿಕೊಳ್ಳುತ್ತಿದೆ.
ಚೆಪಾಕ್‌ನಲ್ಲಿ ಟೀಂ ಇಂಡಿಯಾಗೆ ಗೆಲುವಿನ ತಿಲಕ! ಇಂಗ್ಲೆಂಡ್ ಎದುರು ಸತತ ಎರಡನೇ ಗೆಲುವು
ರಣಜಿ: ತಾರೆಗಳಿಂದ ತುಂಬಿದ್ದ ಮುಂಬೈಗೆ ಜಮ್ಮು-ಕಾಶ್ಮೀರ ಶಾಕ್!
ಮುಂಬೈ: ರಣಜಿ ಟ್ರೋಫಿಯಲ್ಲಿ ಜಮ್ಮು-ಕಾಶ್ಮೀರ ತಂಡ ಅಚ್ಚರಿಯ ಫಲಿತಾಂಶ ದಾಖಲಿಸಿದೆ. ಭಾರತ ಟೆಸ್ಟ್ ತಂಡದಲ್ಲಿ ಆಡಿದ ಅನುಭವವಿರುವ 5 ಆಟಗಾರರೊಂದಿಗೆ ಕಣಕ್ಕಿಳಿದಿದ್ದ ಹಾಲಿ ಚಾಂಪಿಯನ್ ಮುಂಬೈ ವಿರುದ್ಧ 5 ವಿಕೆಟ್‌ಗಳ ಜಯ ಸಾಧಿಸಿ, ಎಲೈಟ್ ‘ಎ’ ಗುಂಪಿನಲ್ಲಿ ಅಗ್ರಸ್ಥಾನಕ್ಕೇರಿದೆ.
ಮುಂಬೈ ತಂಡದಲ್ಲಿ ರೋಹಿತ್, ಜೈಸ್ವಾಲ್, ರಹಾನೆ, ಶ್ರೇಯಸ್ ಅಯ್ಯರ್, ಶಾರ್ದೂಲ್ ಠಾಕೂರ್ ಇದ್ದರು. ಅಲ್ಲದೇ ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದ ತನುಶ್ ಕೋಟ್ಯಾನ್, ಏಕದಿನ, ಟಿ20 ಆಡಿರುವ ಶಿವಂ ದುಬೆ ಕೂಡ ಇದ್ದರು. ಆದರೂ, ಜಮ್ಮು-ಕಾಶ್ಮೀರ ವಿರುದ್ಧ ಸೋಲುಂಡಿತು.
ಬಲಿಷ್ಠ ಟಿ20 ತಂಡ ಪ್ರಕಟಿಸಿದ ಐಸಿಸಿ, ರೋಹಿತ್ ಶರ್ಮಾಗೆ ನಾಯಕತ್ವ
ಮೊದಲ ಇನ್ನಿಂಗ್ಸಲ್ಲಿ 120ಕ್ಕೆ ಆಲೌಟ್ ಮಾಡಿದ್ದ ಮುಂಬೈ, ಜಮ್ಮು-ಕಾಶ್ಮೀರಕ್ಕೆ 206 ರನ್ ಬಿಟ್ಟುಕೊಟ್ಟಿತ್ತು. 2ನೇ ಇನ್ನಿಂಗ್ಸಲ್ಲಿ 290 ರನ್ ಗಳಿಸಿದ್ದ ಮುಂಬೈ, ಜಮ್ಮು-ಕಾಶ್ಮೀರಕ್ಕೆ ಗೆಲ್ಲಲು 205 ರನ್ ಗುರಿ ನೀಡಿತ್ತು. ಜಮ್ಮು 5 ವಿಕೆಟ್ ನಷ್ಟಕ್ಕೆ 207 ರನ್ ಗಳಿಸಿ ಗೆಲುವು ಸಾಧಿಸಿತು.
