ಬಹು ನಿರೀಕ್ಷಿತ 2024ರ ಟಿ20 ತಂಡವನ್ನು ಐಸಿಸಿ ಪ್ರಕಟಿಸಿದೆ. ವಿಶೇಷ ಅಂದರೆ ರೋಹಿತ್ ಶರ್ಮಾಗೆ ನಾಯಕತ್ವ ನೀಡಿದೆ. ತಂಡದಲ್ಲಿ ಯಾರೆಲ್ಲಾ ಸ್ಥಾನ ಪಡೆದಿದ್ದಾರೆ
ದುಬೈ(ಜ.25) ಕಳೆದ ವರ್ಷ ಟೀಂ ಇಂಡಿಯಾ ಟಿ20 ವಿಶ್ವಕಪ್ ಗೆದ್ದು ಇತಿಹಾಸ ಬರೆದಿದ್ದು. 2024ರಲ್ಲಿ ರೋಹಿತ್ ಶರ್ಮಾ ನಾಯಕತ್ವದ ಟೀಂ ಇಂಡಿಯಾ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಇದರ ಬೆನ್ನಲ್ಲೇ ರೋಹಿತ್ ಶರ್ಮಾ ಟಿ20 ಮಾದರಿಗೆ ವಿದಾಯ ಹೇಳಿದ್ದರು. ಆದರೆ ಇದೀಗ ರೋಹಿತ್ ಶರ್ಮಾ ಮುಡಿಗೆ ಮತ್ತೊಂದು ಕಿರೀಟ ಸೇರಿಕೊಂಡಿದೆ. 2024ರ ಟಿ20 ತಂಡವನ್ನು ಐಸಿಸಿ ಪ್ರಕಟಿಸಿದೆ. ಈ ತಂಡಕ್ಕೆ ರೋಹಿತ್ ಶರ್ಮಾ ನಾಯಕ. ಇಷ್ಟೇ ಅಲ್ಲ ಟೀಂ ಇಂಡಿಯಾದ ನಾಲ್ವರು ಐಸಿಸಿ ಟಿ20 ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
ರೋಹಿತ್ ಶರ್ಮಾ ಜೊತೆಗೆ ಅಲ್‌ರೌಂಡರ್ ಹಾರ್ದಿಕ್ ಪಾಂಡ್ಯ, ವೇಗಿ ಜಸ್‌ಪ್ರೀತ್ ಬುಮ್ರಾ ಹಾಗೂ ಅರ್ಶದೀಪ್ ಸಿಂಗ್ ಸ್ಥಾನ ಪಡೆದಿದ್ದಾರೆ. ಈ ಮೂಲಕ ನಾಲ್ವರು ಐಸಿಸಿ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಐಸಿಸಿ ತಂಡದಲ್ಲಿ ಭಾರತದ ನಾಲ್ವರು ಕಾಣಿಸಿಕೊಳ್ಳುವ ಮೂಲಕ ಒಂದು ತಂಡದಿಂದ ಐಸಿಸಿ ತಂಡದಲ್ಲಿ ಸ್ಥಾನ ಪಡೆದ ಗರಿಷ್ಠ ಆಟಗಾರರು ಅನ್ನೋ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.
ಮಹಾಕುಂಭದಲ್ಲಿ ಕೊಹ್ಲಿ, ಧೋನಿ ಸೇರಿ ಕ್ರಿಕೆಟಿಗರು, AI ಚಿತ್ರಕ್ಕೆ ಮನಸೋತ ಫ್ಯಾನ್ಸ್
ಐಸಿಸಿ ಪ್ರಕಟಿಸಿದ ಟಿ20 ತಂಡ(2024)
ರೋಹಿತ್ ಶರ್ಮಾ(ನಾಯಕ)
ಟ್ರಾವಿಸ್ ಹೆಡ್
ಫಿಲ್ ಸಾಲ್ಟ್
ಬಾಬರ್ ಅಜಮ್
ನಿಕೋಲಸ್ ಪೂರನ್
ಸಿಕಂದರ್ ರಾಜಾ,
ಹಾರ್ದಿಕ್ ಪಾಂಡ್ಯ
ರಶೀದ್ ಖಾನ್
ವಾನಿಂಡು ಹಸರಂಗ
ಜಸ್‌ಪ್ರೀತ್ ಬುಮ್ರಾ
ಅರ್ಶದೀಪ್ ಸಿಂಗ್
2024ರ ಐಸಿಸಿ ಟಿ220 ವಿಶ್ವಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಉತ್ತಮ ಪ್ರದರ್ಶನ ನೀಡಿದ್ದರು. 11 ಪಂದ್ಯಗಳಿಂದ 378 ರನ್ ಸಿಡಿಸಿದ್ದರು. 160.16ರ ಸ್ಟ್ರೈಕ್ ರೇಟ್‌ನಲ್ಲಿ ರೋಹಿತ್ ಶರ್ಮಾ ಬ್ಯಾಟಿಂಗ್ ಮಾಡಿದ್ದರು. 11 ವರ್ಷಗ ಬಳಿಕ ಟೀಂ ಇಂಡಿಯಾ ಮತ್ತೆ ಐಸಿಸಿ ಟ್ರೋಫಿ ಬರ ನೀಗಿಸಿಕೊಂಡಿತ್ತು. 2013ರ ಚಾಂಪಿಯನ್ಸ್ ಟ್ರೋಫಿ ಬಳಿಕ ಟೀಂ ಇಂಡಿಯಾ ಐಸಿಸಿ ಟ್ರೋಫಿ ಗೆಲ್ಲುವಲ್ಲಿ ವಿಫಲವಾಗಿತ್ತು
ಟಿ20 ವಿಶ್ವಕಪ್ ಗೆಲುವಿನಲ್ಲಿ ಹಾರ್ದಿಕ್ ಪಾಂಡ್ಯ, ಬುಮ್ರಾ ಹಾಗೂ ಅರ್ಶದೀಪ್ ಪ್ರಮುಖ ಪಾತ್ರ ನಿರ್ವಹಿಸಿದ್ದರು. ಪಾಂಡ್ಯ 17 ಪಂದ್ಯಗಳಿಂದ 352 ರನ್ ಸಿಡಿಸಿದ್ದರೆ, 16 ವಿಕೆಟ್ ಕಬಳಸಿದ್ದರು. ಸೌತ್ ಆಫ್ರಿಕಾ ವಿರುದ್ದದ ಫೈನಲ್ ಪಂದ್ಯದಲ್ಲಿ ಅಂತಿಮ ಓವರ್‌ನಲ್ಲ 16 ರನ್ ಡಿಫೆಂಡ್ ಮಾಡಿಕೊಳ್ಳುವಲ್ಲಿ ಪಾಂಡ್ಯ ಯಶಸ್ವಿಯಾಗಿದ್ದರು. ತೀವ್ರ ಒತ್ತಡದಲ್ಲಿ ಅದ್ಬುತ ಬೌಲಿಂಗ್ ಸಂಘಟಿಸಿ ಭಾರತದ ಗೆಲುವಿಗೆ ಕಾರಣರಾಗಿದ್ದರು.
ಚೆಪಾಕ್ ಕದನಕ್ಕೆ ಭಾರತ ರೆಡಿ; ಮತ್ತೊಂದು ಗೆಲುವಿನ ನಿರೀಕ್ಷೆಯಲ್ಲಿ ಸೂರ್ಯ ಪಡೆ
