ವಿರಾಟ್ ಕೊಹ್ಲಿ ವಿಶ್ವದ ಶ್ರೀಮಂತ ಕ್ರಿಕೆಟಿಗ. ವಿರಾಟ್ ಕೊಹ್ಲಿ ಬಳಸುವ ಫೋನ್ ಯಾವುದು? ಈ ಕುರಿತ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಲಾರ್ಡ್ಸ್‌ನಲ್ಲಿ ರವಿ ಶಾಸ್ತ್ರಿ ಹಾಗೂ ಶಿಖರ್ ಧವನ್‌ಗೆ ತಮ್ಮ ಫೋನ್ ಮೂಲಕ ಏನೋ ತೋರಿಸುವಾಗ ಕೊಹ್ಲಿ ಫೋನ್ ಸೀಕ್ರೆಟ್ ಬಹಿರಂಗವಾಗಿದೆ.

ಲಂಡನ್ (ಜೂ.29) ಟೀಂ ಇಂಡಿಯಾ ಕ್ರಿಕೆಟಿಗ ವಿರಾಟ್ ಕೊಹ್ಲಿ ವಿಶ್ವದ ಶ್ರೀಮಂತ ಕ್ರಿಕೆಟಿಗ. ಹಲವು ಕ್ಷೇತ್ರಗಳಲ್ಲಿ ವಿರಾಟ್ ಕೊಹ್ಲಿ ಹಣ ಹೂಡಿಕೆ ಮಾಡಿದ್ದಾರೆ. ತಮ್ಮದೇ ಬ್ರ್ಯಾಂಡ್‌ನ ಹಲವು ಉತ್ಪನ್ನಗಳನ್ನು ಹೊಂದಿದ್ದಾರೆ. ಕೋಟಿ ಕೋಟಿ ರೂಪಾಯಿ ಆದಾಯಗಳಿಸುತ್ತಿರುವ ವಿರಾಟ್ ಕೊಹ್ಲಿ ಬಳಸುವ ಫೋನ್ ಯಾವುದು? ಅನ್ನೋ ಪ್ರಶ್ನೆಗೆ ಇದೀಗ ಉತ್ತರ ಸಿಕ್ಕಿದೆ. ವಿರಾಟ್ ಕೊಹ್ಲಿ ಬಳಸುತ್ತಿರುವುದು ಐಫೋನ್ ಪ್ರೋ ಮ್ಯಾಕ್ಸ್, ಐಫೋನ್ ಪ್ರೋ ಫೋನ್‌ಗಳಲ್ಲ. ಲಾರ್ಡ್ಸ್ ಮೈದಾನದಲ್ಲಿ ನಡೆದ ಭಾರತ ಮಹಿಳಾ ತಂಡ ಹಾಗೂ ಆಸ್ಟ್ರೇಲಿಯಾ ನಡುವಿನ ಟಿ20 ವಿಶ್ವಕಪ್ ಪಂದ್ಯಕ್ಕೆ ವಿರಾಟ್ ಕೊಹ್ಲಿ ಹಾಜರಾಗಿದ್ದರು. ಈ ವೇಳೆ ಕೊಹ್ಲಿ ತಮ್ಮ ಮೊಬೈಲ್ ಫೋನ್ ಹೊರತೆಗೆದು ಜೊತೆಗಿದ್ದ ಮಾಜಿ ಕೋಚ್ ರವಿ ಶಾಸ್ತ್ರಿ ಹಾಗೂ ಮಾಜಿ ಕ್ರಿಕೆಟಿಗ ಶಿಖರ್ ಧವನ್‌ಗೆ ಸ್ಕ್ರೀನ್ ತೋರಿಸಿ ಕೆಲ ಮಾಹಿತಿ ನೀಡಿದ್ದಾರೆ. ಈ ವೇಳೆ ಕೊಹ್ಲಿ ಫೋನ್ ಯಾವುದು ಅನ್ನೋದು ಬಯಲಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ವಿರಾಟ್ ಕೊಹ್ಲಿ ಬಳಿ ಇದೆ ಈ ಫೋನ್

ವಿರಾಟ್ ಕೊಹ್ಲಿ ಬಳಸುತ್ತಿರುವ ಫೋನ್ ಐಫೋನ್ ಏರ್. ಆ್ಯಪಲ್ ಫೋನ್‌ಗಳ ಪೈಕಿ ಐಫೋನ್ ಏರ್ ಅತ್ಯಂತ ಸ್ಲಿಮ್ ಹಾಗೂ ಪ್ರಿಮಿಯಂ ಸ್ಮಾರ್ಟ್‌ಫೋನ್. ಈ ಫೋನ್ ಪ್ರಯಾಣ ಮಾಡುವಾಗ ಸೇರಿದಂತೆ ಯಾವುದೇ ಸಂದರ್ಭಗಳಲ್ಲಿ ಬಳಸುವುದು ಅತ್ಯಂತ ಸುಲಭ. ಹಗುರವಾದ, ಸಣ್ಣದಾದ ಐಫೋನ್ ಏರ್ ಬಹುತೇಕ ಸೆಲೆಬ್ರೆಟಿಗಳು ಬಳಸುತ್ತಾರೆ. ತಮ್ಮ ಅನುಕೂಲಕ್ಕಾಗಿ ಹಲವರು ಸ್ಲಿಮ್ ಹಾಗೂ ಲೈಟೆಸ್ಟ್ ಐಫೋನ್ ಏರ್ ಫೋನ್ ಬಳಕೆ ಮಾಡುತ್ತಾರೆ. ಇದೇ ಫೋನ್ ವಿರಾಟ್ ಕೊಹ್ಲಿ ಕೂಡ ಬಳಸುತ್ತಿದ್ದಾರೆ.

ವಿಶೇಷ ಅಂದರೆ ಇತ್ತೀಚೆಗೆ ರೋಹಿತ್ ಶರ್ಮಾ ಕೂಡ ಐಫೋನ್ ಏರ್ ಫೋನ್ ಬಳಕೆ ಮಾಡುತ್ತಿರುವುದು ಪತ್ತೆಯಾಗಿತ್ತು. ಟೀಂ ಇಂಡಿಯಾದ ಹಲವು ಕ್ರಿಕೆಟಿಗರು ಐಫೋನ್ ಏರ್ ಬಳಕೆ ಮಾಡುತ್ತಿದ್ದಾರೆ. ತಮ್ಮ ಅಗತ್ಯ ಹಾಗೂ ಅನುಕೂಲಕ್ಕಾಗಿ ಈ ಫೋನ್ ಬಳಕೆ ಮಾಡುತ್ತಾರೆ.

ಐಫೋನ್ ಏರ್ ಫೀಚರ್ಸ್ ಏನು?

ಐಫೋನ್ ಏರ್ ಹಲವು ವಿಶೇಷತೆಗಳನ್ನು ಹೊಂದಿದೆ. ಐಫೋನ್ ಏರ್ ಫೋನ್ 6.5 ಇಂಚಿನ LTPO ಸೂಪರ್ ರೆಟಿನಾ XDR OLED ಡಿಸ್‌ಪ್ಲೇ ಹೊಂದಿದೆ. ಇದರ ರೀಫ್ರೆಶ್ ರೇಟ್ 120Hz, HDR10. ಡೊಲ್ಬಿ ವರ್ಶನ್ ಬ್ರೈಟ್‌ನೆಸ್, A19 ಪ್ರೋ ಚಿಪ್‌ಸೆಟ್, 12ಜಿಬಿ RAM ಹಾಗೂ 256GB, 512GB ಹಾಗೂ 1TB ಸ್ಟೋರೇಜ್ ಆಯ್ಕೆಯಲ್ಲಿ ಲಭ್ಯವಿದೆ. ಇನ್ನು 48 ಮೆಗಾಪಿಕ್ಸಲ್ ರೇರ್ ಕ್ಯಾಮೆರಾ, ಸೆನ್ಸಾರ್ ಶಿಫ್ಟ್ ಆಪ್ಟಿಕಲ್ ಇಮೇಜ್, ಸೆಲ್ಫಿ ಹಾಗೂ ವಿಡಿಯೋ 18 ಮೆಕಾಪಿಕ್ಸಲ್ ಅಲ್ಟ್ರಾ ವೈಡ್ ಫ್ರಂಟ್ ಕ್ಯಾಮೆರಾ ಹೊಂದಿದೆ. ಇದು 18ಕೆ ಡೊಲ್ಬಿ ವರ್ಶನ್ ವಿಡಿಯೋ ರೆಕಾರ್ಡಿಂಗ್ ಸಾಮರ್ಥ್ಯ ಹೊಂದಿದೆ.

ಕೊಹ್ಲಿ ಬಳಿ ಇರುವ ಫೋನ್ ಬೆಲೆ ಎಷ್ಟು?

ಫೋನ್ ಕೇವಲ 5.6mm ದಪ್ಪವಿದೆ. ಇದರ ತೂಕ 165 ಗ್ರಾಂ. ಫ್ರಂಟ್ ಹಾಗೂ ರೇರ್ 2 ಪ್ರೊಟೆಕ್ಷನ್ ಸೆರಾಮಿಕ್ ಶೀಲ್ಡ್, 3149 mAh ಬ್ಯಾಟರಿ, iOS 26 ಸಾಫ್ಟ್‌ವೇರ್ ಹೊಂದಿದ್ದು, ಅಪ್‌ಡೇಟ್‌ಗಳಿಗೆ ಬೆಂಬಲ ನೀಡಲಿದೆ. ವಿರಾಟ್ ಕೊಹ್ಲಿ ಬಳಿ ಇರುವ ಐಫೋನ್ ಏರ್ ಫೋನ್ ಬೆಲೆ ಇ ಕಾಮರ್ಸ್‌ನಲ್ಲಿ 96,990 ರೂಪಾಯಿ (ಬೇರೆ ಬೇರೆ ಇ ಕಾಮರ್ಸ್ ಸೈಟ್‌ಗಳಲ್ಲಿ ಬೆಲೆಯಲ್ಲಿ ಕೊಂಚ ವ್ಯತ್ಯಾಸವಾಗುವ ಸಾಧ್ಯತೆ ಇದೆ).