ಕನ್ನಡ ರಾಜ್ಯೋತ್ಸವಕ್ಕೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರಾಟ್ ಕೊಹ್ಲಿ ಸೇರಿದಂತೆ ಕ್ರಿಕೆಟಿಗರು ಕನ್ನಡದಲ್ಲಿ ಶುಭಕೋರಿದ್ದಾರೆ. ಕನ್ನಡ ಜನತೆ, ಆರ್‌ಸಿಬಿ ಫ್ಯಾನ್ಸ್‌ಗೆ ಕ್ರಿಕೆಟಿಗರು ಶುಭಕೋರಿದ್ದಾರೆ.

ಬೆಂಗಳೂರು (ನ.01) ಕನ್ನಡ ರಾಜ್ಯೋತ್ಸವದ ಸಂಭ್ರಮ ಮನೆ ಮಾಡಿದೆ. ರಾಜ್ಯ ಹಾಗೂ ರಾಜ್ಯದ ಹೊರಗಿರುವ ಕನ್ನಡಿಗರು ಕರ್ನಾಟಕ ರಾಜ್ಯೋತ್ಸವ ಆಚರಿಸಿ ಸಂಭ್ರಮಿಸಿದ್ದಾರೆ. ಇದೀಗ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ತನ್ನದೇ ಶೈಲಿಯಲ್ಲಿ ಕನ್ನಡ ರಾಜ್ಯೋತ್ಸವದ ಶುಭಾಶಯ ತಿಳಿಸಿದೆ. ವಿಶೇಷ ಅಂದರೆ ವಿರಾಟ್ ಕೊಹ್ಲಿ, ಭುವನೇಶ್ವರ್ ಕುಮಾರ್, ದೇವದತ್ ಪಡಿಕ್ಕಲ್ ಸೇರಿದಂತೆ ಆರ್‌ಸಿಬಿ ಕ್ರಿಕೆಟಿಗರು ಕರ್ನಾಟಕ ರಾಜ್ಯೋತ್ಸವಕ್ಕೆ ಶುಭಕೋರಿದ್ದಾರೆ. ಈ ಮೂಲಕ ಅಭಿಮಾನಿಗಳು ಹಾಗೂ ಕನ್ನಡಿಗರ ಸಂಭ್ರಮ ಹೆಚ್ಚಿಸಿದ್ದಾರೆ.

ಆರ್‌ಸಿಬಿ ಕ್ರಿಕೆಟಿಗರಿಂದ ಕನ್ನಡದಲ್ಲಿ ಶುಭಾಶಯ

ಆರ್‌ಸಿಬಿ ಕನ್ನಡ ರಾಜ್ಯೋತ್ಸವದ ಶುಭಾಶಯ ವಿಡಿಯೋ ಸಂದೇಶವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದೆ. ವಿರಾಟ್ ಕೊಹ್ಲಿ ಪ್ರೀತಿಯ ಆರ್‌ಸಿಬಿ ಅಭಿಮಾನಿಗಳು, ಕನ್ನಡಿಗರಿಗೆ ಕರ್ನಾಟಕ ರಾಜ್ಯೋತ್ಸವದ ಶುಭಾಶಯಗಳು ಎಂದಿದ್ದಾರೆ. ಇನ್ನು ಆರ್‌ಸಿಬಿ ಮಹಿಳಾ ತಂಡದಲ್ಲಿರುವ ಕನ್ನಡತಿ ಶ್ರೇಯಾಂಕ ಪಾಟೀಲ್, ಕನ್ನಡದಲ್ಲೇ ಶುಭಕೋರಿದ್ದಾರೆ. ಇನ್ನು ಕ್ರುನಾಲ್ ಪಾಂಡ್ಯ, ಭುವನೇಶ್ವರ್ ಕುಮಾರ್ ಸೇರಿದಂತೆ ಕ್ರಿಕೆಟಿಗರು ಶುಭಕೋರಿದ್ದಾರೆ. ಕರ್ನಾಟಕ ಕ್ರಿಕೆಟಿಗ ದೇವದತ್ ಪಡಿಕ್ಕಲ್ ಕನ್ನಡದಲ್ಲಿ ಶುಭಕೋರಿದ್ದಾರೆ.

ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ,

ಆರ್‌ಸಿಬಿ ಸೋಶಿಯಲ್ ಮೀಡಿಯಾದಲ್ಲಿ ಕನ್ನಡದಲ್ಲೇ ಈ ವಿಡಿಯೋವನ್ನು ಪೋಸ್ಟ್ ಮಾಡಿದೆ. ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ, ಕನ್ನಡ ರಾಜ್ಯೋತ್ಸವದ ಶುಭಾಶಯಗಳು ಎಂದು ಪೋಸ್ಟ್ ಮಾಡಿದ್ದಾರೆ. ಈ ಪೋಸ್ಟ್‌ಗೆ ಕನ್ನಡಿಗರು ಪ್ರತಿಕ್ರಿಯಿಸಿದ್ದಾರೆ. ಕನ್ನಡ ಭಾವುಟ ಸೇರಿದಂತೆ ಹಲವು ಫೋಟೋಗಳು, ವಿಡಿಯೋಗಳ ಮೂಲಕ ಆರ್‌ಸಿಬಿ ತಂಡಕ್ಕು ಶುಭಕೋರಿದ್ದಾರೆ.

ಆರ್‌ಸಿಬಿ ಕ್ರಿಕೆಟಿಗರ ಕನ್ನಡ ಪ್ರೀತಿ

ಆರ್‌ಸಿಬಿ ಕ್ರಿಕೆಟಿಗರು ಹಲವು ಬಾರಿ ಕನ್ನಡ ಮಾತುಗಳು, ಕನ್ನಡದ ಪ್ರಮುಖ ಪದಗಳನ್ನು ಉಚ್ಚರಿಸುವ ಮೂಲಕ ಕನ್ನಡ ಪ್ರೀತಿ ಮೆರೆದಿದ್ದಾರೆ. ಅದರಲ್ಲೂ ಈ ಸಲಾ ಕಪ್ ನಮ್ದೆ ಅನ್ನೋ ಘೋಷ ವಾಕ್ಯ ಆರ್‌ಸಿಬಿಯ ಎಲ್ಲಾ ಕ್ರಿಕೆಟಿಗರು ಹಲವು ಬಾರಿ ಹೇಳಿದ್ದಾರೆ. ಇನ್ನು ವಿರಾಟ್ ಕೊಹ್ಲಿ ಏನ್ ಗುರು ಸೇರಿದಂತೆ ಹಲವು ಕನ್ನಡ ಪದಗಳನ್ನು ಹೇಳಿದ್ದಾರೆ. ಇದೇ ವೇಳೆ ಆರ್‌ಸಿಬಿ ಕ್ರಿಕೆಟಿಗರು ಡಾ.ರಾಜ್‌ಕುಮಾರ್ ಹಾಡುಗಳನ್ನು ಗುನುಗಿದ್ದಾರೆ. ಆರ್‌ಸಿಬಿ ಕ್ರಿಕೆಟಿಗರ ಮೇಲೆ ಕನ್ನಡಿಗರು ಸದಾ ಪ್ರೀತಿ, ಬೆಂಬಲ ನೀಡಿದ್ದಾರೆ. ಟ್ರೋಫಿ ಇಲ್ಲದಿರುವಾಗ, ಟ್ರೋಫಿ ಗೆದ್ದ ಬಳಿಕವೂ ಕನ್ನಡಿಗರು ನಿರಂತರ ಬೆಂಬಲ ಸೂಚಿಸಿ ತಂಡಕ್ಕೆ ಬೆನ್ನೆಲುಬಾಗಿ ನಿಂತಿದ್ದಾರೆ. ಈ ಕುರಿತು ಕ್ರಿಕೆಟಿಗರು ಹಲವು ವೇದಿಕೆಗಳಲ್ಲಿ ಹಂಚಿಕೊಂಡಿದ್ದಾರೆ.

ಕನ್ನಡ ನಾಡು, ನುಡಿ ಮತ್ತು ಸಂಸ್ಕೃತಿಯೊಂದಿಗೆ ಆರ್‌ಸಿಬಿ ಬೆಸೆದುಕೊಂಡಿದೆ. ಪ್ರತಿ ವರ್ಷ ನವೆಂಬರ್ 1ಕ್ಕೆ ಆರ್‌ಸಿಬಿ ಕನ್ನಡ ರಾಜ್ಯೋತ್ಸವ ಶುಭಾಶಗಳನ್ನು ಕೋರಿದೆ. ಇಷ್ಟೇ ಅಲ್ಲ ಹಲವು ಬಾರಿ ಕನ್ನಡದಲ್ಲಿ ಪೋಸ್ಟ್ ಮಾಡಿದೆ. ಸದ್ಯ ಆರ್‌ಸಿಬಿ ಕನ್ನಡ ರಾಜ್ಯೋತ್ಸವ ಶುಭಾಶಯಕ್ಕೆ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

ಆರ್‌ಸಿಬಿ ಸದ್ಯ 2027ರ ಐಪಿಎಲ್ ಟೂರ್ನಿಗೆ ತಯಾರಿ ಆರಂಭಿಸಿದೆ. ಆಟಗಾರರ ರಿಟೇನ್ ಹಾಗೂ ರಿಲೀಸ್ ಪಟ್ಟಿ ಸಿದ್ಧಪಡಿಸುತ್ತಿದೆ. ತಂಡದಲ್ಲಿ ಯಾರನ್ನು ಉಳಿಸಿಕೊಳ್ಳಬೇಕು, ಯಾರನ್ನು ಕೈಬಿಡಬೇಕು ಅನ್ನೋ ಕುರಿತು ಲೆಕ್ಕಾಚಾರ ಹಾಕುತ್ತಿದೆ. ಕಳೆದೆರಡು ಬಾರಿ ಸತತ 2 ಟ್ರೋಫಿ ಗೆದ್ದ ಆರ್‌ಸಿಬಿ ಹ್ಯಾಟ್ರಿಕ್ ಟ್ರೋಫಿ ಗೆಲುವಿನ ವಿಶ್ವಾಸದಲ್ಲಿದೆ. ಹೀಗಾಗಿ ಮತ್ತಷ್ಟು ಬಲಿಷ್ಠ ತಂಡವನ್ನು ಕಣಕ್ಕಿಳಿಸಲು ನಿರ್ಧರಿಸಿದೆ.

View post on Instagram