ಮತ್ತೊಂದು ದಾಖಲೆ ಬರೆಯಲು ವಿರಾಟ್ ಕೊಹ್ಲಿ ರೆಡಿ..!
500ನೇ ಅಂತಾರಾಷ್ಟ್ರೀಯ ಪಂದ್ಯವನ್ನಾಡಲು ಸಜ್ಜಾದ ಕಿಂಗ್ ಕೊಹ್ಲಿ
ಲೆಜೆಂಡ್ಗಳ ಕ್ಲಬ್ಗೆ ಎಂಟ್ರಿ ನೀಡಲಿದ್ದಾರೆ ವಿರಾಟ್...!
ಸಚಿನ್, ದ್ರಾವಿಡ್, ಧೋನಿ ಬಳಿಕ ದಿಗ್ಗಜರ ಸಾಲಿಗೆ ಕೊಹ್ಲಿ ಸೇರ್ಪಡೆ
ಬೆಂಗಳೂರು(ಜು.19): ಸದ್ಯ ಕ್ರಿಕೆಟ್ ಜಗತ್ತಿನ ಕ್ರಿಕೆಟ್ ಗ್ರೇಟೆಸ್ಟ್ ಬ್ಯಾಟ್ಸ್ಮನ್ ಈಗಾಗಲೇ ದಾಖಲೆಗಳನ್ನ ಬರೆದಿದ್ದಾರೆ. ಟೀಂ ಇಂಡಿಯಾ ಪರ ಹಲವು ಮ್ಯಾಚ್ ವಿನ್ನಿಂಗ್ ಇನ್ನಿಂಗ್ಸ್ಗಳನ್ನ ಆಡಿದ್ದಾರೆ. ಇಲ್ಲದ ಟೀಂ ಇಂಡಿಯಾವನ್ನ ಊಹಿಸಲು ಸಾಧ್ಯವಿಲ್ಲ. ಕೊಹ್ಲಿ, ಕಮಿಟ್ಮೆಂಟ್, ಫಿಟ್ನೆಸ್ ಹೇಳೋಕೆ ನಿಂತ್ರೆ ಪದಗಳೇ ಸಾಲಲ್ಲ. ಈಗ ವಿರಾಟ್ ಮತ್ತೊಂದು ಇತಿಹಾಸ ಸೃಷ್ಟಿಸೋಕೆ ರೆಡಿಯಾಗಿದ್ದಾರೆ.
500ನೇ ಪಂದ್ಯವಾಡಲಿರೋ ರನ್ಮಷಿನ್..!
ಯೆಸ್, ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಟೆಸ್ಟ್ ವಿರಾಟ್ ಕೊಹ್ಲಿಗೆ 500ನೇ ಅಂತಾರಾಷ್ಟ್ರೀಯ ಪಂದ್ಯವಾಗಿದೆ. ಈ ಪಂದ್ಯದೊಂದಿಗೆ ರನ್ಮಷಿನ್ ಲೆಜೆಂಡ್ಗಳ ಕ್ಲಬ್ಗೆ ಎಂಟ್ರಿ ನೀಡಲಿದ್ದಾರೆ. ಈವರೆಗು ಭಾರತದ ಪರ ಸಚಿನ್ ತೆಂಡುಲ್ಕರ್, ರಾಹುಲ್ ದ್ರಾವಿಡ್, ಧೋನಿ ಮಾತ್ರ 500 ಪಂದ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ. ಈಗ ಕೊಹ್ಲಿಯು 500ನೇ ಪಂದ್ಯವಾಡಲಿದ್ದಾರೆ.
2018ರ ನಂತರ ವಿದೇಶದಲ್ಲಿ ಶತಕ ಬಾರಿಸಿಲ್ಲ ಕೊಹ್ಲಿ..!
ಕಳೆದ ವರ್ಷದ ಏಷ್ಯಾಕಪ್ ಟಿ20 ಟೂರ್ನಿಯಲ್ಲಿ ಕೊಹ್ಲಿ, ಆಫ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ ಶತಕ ಸಿಡಿಸಿದ್ರು. ಆ ಮೂಲಕ ಶತಕದ ಬರದಿಂದ ಹೊರಬಂದ್ರು. ಈ ವರ್ಷ ಈಗಾಗ್ಲೇ 3 ಶತಕ ಬಾರಿಸಿದ್ದಾರೆ. ಆದ್ರೆ, ಕಳೆದ 5 ವರ್ಷದಿಂದ ವಿದೇಶದಲ್ಲಿ ಶತಕ ದಾಖಲಿಸಿಲ್ಲ. 2018ರಲ್ಲಿ ಆಸ್ಟ್ರೇಲಿಯಾದಲ್ಲಿ ಟೆಸ್ಟ್ ಶತಕ ಬಾರಿಸಿದ್ದೇ ಲಾಸ್ಟ್. ಅಲ್ಲಿಂದ ಈವರೆಗು ವಿದೇಶದಲ್ಲಿ ಕೊಹ್ಲಿ ಬ್ಯಾಟ್ನಿಂದ ಶತಕವೇ ಬಂದಿಲ್ಲ.
India vs West Indies: 100ನೇ ಟೆಸ್ಟ್ ಕದನಕ್ಕೆ ಭಾರತ-ವೆಸ್ಟ್ ಇಂಡೀಸ್ ಸನ್ನದ್ದ..!
ಕ್ರಿಕೆಟ್ ಜಗತ್ತಿಗೆ ದರ್ಶನವಾಗುತ್ತಾ ವಿರಾಟ್ 3.O..?
ಯೆಸ್, ಒಬ್ಬ ಕ್ರಿಕೆಟರ್ 500 ಪಂದ್ಯವಾಡೋದು ಸಾಮಾನ್ಯ ಸಾಧನೆಯಲ್ಲ. ಅಂತದ್ರಲ್ಲಿ ಕೇವಲ 15 ವರ್ಷಗಳಲ್ಲೇ ಕೊಹ್ಲಿ ಇಂತಹದೊಂದು ಸಾಧನೆ ಬರೆಯಲು ಸಜ್ಜಾಗಿದ್ದಾರೆ. ಒಂದೂವರೆ ದಶಕದ ಕರಿಯರ್ನಲ್ಲಿ ಕೊಹ್ಲಿ ಆಟ ಸಾಕಷ್ಟು ಏಳು-ಬೀಳುಗಳನ್ನ ಕಂಡಿದ್ದಾರೆ. ಅವರ ಆಟವೂ ಚೇಂಜ್ ಆಗಿದೆ. ಇತ್ತೀಚೆಗೆ ಟೆಸ್ಟ್ ಕ್ರಿಕೆಟ್ನಲ್ಲಿ ಕೊಹ್ಲಿ ಬ್ಯಾಟಿಂಗ್ ತುಂಬಾನೇ ಬದಲಾಗಿದೆ. ಮೊದಲೆಲ್ಲಾ ಮಿಮಿಮಮ್ 60ರ ಸ್ಟ್ರೈಕ್ರೇಟ್ನಲ್ಲಿ ವೇಗವಾಗಿ ರನ್ಗಳಿಸ್ತಿದ್ರು. ಆದ್ರೀಗ, ಕೊಹ್ಲಿಯ ಸ್ಟ್ರೈಕ್ರೇಟ್ 45ಕ್ಕೆ ಕುಸಿದಿದೆ. ಇನ್ನು ಕೊಹ್ಲಿ ಮೊದಲಿನಂತೆ ಫಿಯರ್ಲೆಸ್ ಆಗಿ ಬ್ಯಾಟ್ ಬೀಸ್ತಿಲ್ಲ. ಒಂದು ರೀತಿಯಲ್ಲಿ ಕೊಹ್ಲಿ ತಮ್ಮ ಜೊತೆಗೆ ತಾವೇ ಸೆಣಸಾಡುತ್ತಿದ್ದಾರೆ.
ಮೈಕ್ ಹೆಸನ್& ಸಂಜಯ್ ಬಂಗಾರ್‌ಗೆ ಗೇಟ್‌ಪಾಸ್? ಯಾರಾಗ್ತಾರೆ RCB ತಂಡದ ಕೋಚ್ & ಮೆಂಟರ್..?
ಒಟ್ಟಿನಲ್ಲಿ 500ನೇ ಪಂದ್ಯವಾಡಲಿರೋ ಕೊಹ್ಲಿ ಮುಂದೆ ಹಲವು ಸವಾಲುಗಳಿವೆ. ಈ ಸವಾಲುಗಳನ್ನ ಕೊಹ್ಲಿ ಮೆಟ್ಟಿ ನಿಲ್ತಾರಾ..? ಮುಂಬರೋ ಏಕದಿನ ವಿಶ್ವಕಪ್ನಲ್ಲಿ ಕೊಹ್ಲಿಯ ನಯಾ ವರ್ಷನ್ 3.0 ದರ್ಶನವಾಗುತ್ತಾ ಅನ್ನೋದನ್ನ ಕಾದು ನೋಡ್ಬೇಕಿದೆ.