ಸಿಡ್ನಿ(ನ.14): ಭಾರತ ಸೇರಿದಂತೆ ವಿಶ್ವದೆಲ್ಲೆಡೆ ನೆಲೆಸಿರುವ ಭಾರತೀಯರು ದೀಪಾವಳಿ ಹಬ್ಬವನ್ನು ಸರಳವಾಗಿ ಸಡಗರದಿಂದ ಆಚರಿಸುತ್ತಿದ್ದಾರೆ. ಮಾಲಿನ್ಯ ತಡೆ, ಕೊರೋನಾ ವೈರಸ್ ಮಾಹಾಮಾರಿ ನಡುವೆ ಹಲವು ರಾಜ್ಯಗಳು ದೀಪಾವಳಿಗೆ ಪಟಾಕಿ ಸಿಡಿಸುವುದನ್ನು ನಿಷೇಧಿಸಿದೆ. ಕ್ರಿಟಿಗರು, ಸೆಲೆಬ್ರೆಟಿಗಳು ಈ ಬಾರಿಯ ದೀಪಾವಳಿಗೆ ಶುಭಾಶಯ ಹೇಳಿದ್ದಾರೆ. ಇದೀಗ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಭಾರತೀಯರಿಗೆ ದೀಪಾವಳಿ ಸಂದೇಶ ರವಾನಿಸಿದ್ದಾರೆ.

ಆಸ್ಟ್ರೇಲಿಯಾ ತೆರಳಿದ ಟೀಂ ಇಂಡಿಯಾ ಕ್ರಿಕೆಟಿಗರ ಕೊರೋನಾ ರಿಪೋರ್ಟ್ ಬಹಿರಂಗ!

ನೀವು ಹಾಗೂ ನಿಮ್ಮ ಕುಟುಂಬಕ್ಕೆ ದೀಪಾವಳಿ ಹಬ್ಬದ ಶುಭಾಶಯಗಳು. ಈ ದೀಪಾವಳಿ ಎಲ್ಲರಿಗೂ ಸುಖ, ಶಾಂತಿ ನೆಮ್ಮೆದಿ ಹಾಗೂ ಸಂತಸ ತರಲಿ. ಆದರೆ ಎಲ್ಲರೂ ಗಮನಹರಿಸಬೇಕಾದ ಒಂದು ವಿಚಾರ ಯಾರೂ ಕೂಡ ಪಟಾಕಿ ಸಿಡಿಸಬೇಡಿ. ನಮ್ಮ ಪರಿಸರವನ್ನು ಕಾಪಾಡಿಕೊಳ್ಳುವ ಜವಾಬ್ದಾರಿ ನಮ್ಮೆಲರ ಮೇಲಿದೆ ಎಂದು ವಿರಾಟ್ ಕೊಹ್ಲಿ ಟ್ವಿಟರ್ ಮೂಲಕ ಸಂದೇಶ ರವಾನಿಸಿದ್ದಾರೆ.

 

ಸಿಡ್ನಿಯಲ್ಲಿರುವ ವಿರಾಟ್ ಕೊಹ್ಲಿ ನವೆಂಬರ್ 27 ರಿಂದ ಆಸ್ಟ್ರೇಲಿಯಾ ವಿರುದ್ಧ ಸರಣಿ ಆಡಲಿದ್ದಾರೆ. ಐಪಿಎಲ್ ಟೂರ್ನಿ ಮುಗಿಸಿದ ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ದುಬೈನಿಂದ ನೇರವಾಗಿ ಆಸ್ಟ್ರೇಲಿಯಾಗೆ ತೆರಳಿದೆ.

ಕರ್ನಾಟಕ , ದೆಹಲಿ ಸೇರಿದಂತೆ ಹಲವು ರಾಜ್ಯಗಳಲ್ಲಿ ಪಟಾಕಿ ಸಿಡಿಸುವುದನ್ನು ನಿಷೇಧಿಸಿದೆ. ಪಟಾಕಿ ಹೊಗೆ, ಮಾಲಿನ್ಯದಿಂದ ಕೊರೋನಾ ಸೋಂಕಿತರು, ಹಿರಿಯರು, ಮಕ್ಕಳಿಗೆ ಮತ್ತಷ್ಟು ಸಂಕಷ್ಟ ತರುವ ಸಾಧ್ಯತೆ ಇದೆ ಎಂದು ತಜ್ಞರ ತಂಡ ಸೂಚಿಸಿತ್ತು. ಹೀಗಾಗಿ ಹಲವು ಸರ್ಕಾರಗಳು ಪಟಾಕಿ ನಿಷೇಧಿಸಿದೆ.