ಮೆಲ್ಬರ್ನ್ ಕ್ರಿಕೆಟ್ ಮೈದಾನದಲ್ಲಿ ನಡೆದ ಹೈವೋಲ್ಟೇಜ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಈ ಅವಿಸ್ಮರಣೀಯ ಸಿಕ್ಸರ್ ಸಿಡಿಸಿದ್ದರು. ಇನ್ನು ಕೆಲ ದಿನಗಳ ಹಿಂದಷ್ಟೇ ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿಯು ಈ ಶಾಟ್‌ ಅವರನ್ನು 'ಶತಮಾನದ ಶ್ರೇಷ್ಠ ಶಾಟ್'(Shot of the Century) ಎಂದು ಘೋಷಿಸುವ ಮೂಲಕ ಈ ಸಿಕ್ಸರ್ ಅಭಿಮಾನಿಗಳ ಮನದಲ್ಲಿ ಶಾಶ್ವತವಾಗಿ ನೆನಪಿನಲ್ಲಿಡುವಂತ ಕೆಲಸವನ್ನು ಐಸಿಸಿ ಮಾಡಿದೆ.

ಬೆಂಗಳೂರು(ನ.11): ಟೀಂ ಇಂಡಿಯಾ ರನ್ ಮಷೀನ್ ವಿರಾಟ್ ಕೊಹ್ಲಿ, 2021ರ ಐಸಿಸಿ ಟಿ20 ವಿಶ್ವಕಪ್‌ನಲ್ಲಿ ಪಾಕಿಸ್ತಾನ ಎದುರು ಅದ್ಭುತ ಬ್ಯಾಟಿಂಗ್ ನಡೆಸುವ ಮೂಲಕ ಭಾರತ ತಂಡವನ್ನು ರೋಚಕವಾಗಿ ಗೆಲುವಿನ ದಡ ಸೇರಿಸಿದ್ದರು. ಅದರಲ್ಲೂ ಬದ್ದ ಎದುರಾಳಿ ಪಾಕ್ ವೇಗಿ ಹ್ಯಾರಿಸ್ ರೌಫ್ ಬೌಲಿಂಗ್‌ನಲ್ಲಿ ವಿರಾಟ್ ಕೊಹ್ಲಿ ಸ್ಟ್ರೈಟ್ ಡೌನ್‌ ದ ಗ್ರೌಂಡ್‌ನತ್ತ ಬಾರಿಸಿದ ಸಿಕ್ಸರ್ ಕ್ರಿಕೆಟ್ ಅಭಿಮಾನಿಗಳ ಮನದಲ್ಲಿ ಹಲವಾರು ವರ್ಷಗಳ ಕಾಲ ಅಚ್ಚಳಿಯದೇ ಉಳಿಯಲಿದೆ ಎಂದರೆ ಅತಿಶಯೋಕ್ತಿಯಾಗಲಾರದು.

ಮೆಲ್ಬರ್ನ್ ಕ್ರಿಕೆಟ್ ಮೈದಾನದಲ್ಲಿ ನಡೆದ ಹೈವೋಲ್ಟೇಜ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಈ ಅವಿಸ್ಮರಣೀಯ ಸಿಕ್ಸರ್ ಸಿಡಿಸಿದ್ದರು. ಇನ್ನು ಕೆಲ ದಿನಗಳ ಹಿಂದಷ್ಟೇ ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿಯು ಈ ಶಾಟ್‌ ಅವರನ್ನು 'ಶತಮಾನದ ಶ್ರೇಷ್ಠ ಶಾಟ್'(Shot of the Century) ಎಂದು ಘೋಷಿಸುವ ಮೂಲಕ ಈ ಸಿಕ್ಸರ್ ಅಭಿಮಾನಿಗಳ ಮನದಲ್ಲಿ ಶಾಶ್ವತವಾಗಿ ನೆನಪಿನಲ್ಲಿಡುವಂತ ಕೆಲಸವನ್ನು ಐಸಿಸಿ ಮಾಡಿದೆ.

Scroll to load tweet…

ಇನ್ನು ಆ ಪಂದ್ಯದ ಬಗ್ಗೆ ಹೇಳುವುದಾದರೇ ಪಾಕಿಸ್ತಾನ ನೀಡಿದ್ದ 160 ರನ್‌ಗಳ ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ಟೀಂ ಇಂಡಿಯಾ ಒಂದು ಹಂತದಲ್ಲಿ ಕೇವಲ 6.1 ಓವರ್‌ಗಳಲ್ಲಿ 31 ರನ್‌ಗಳಿಗೆ 4 ವಿಕೆಟ್ ಕಳೆದುಕೊಂಡು ಹೀನಾಯ ಸೋಲು ಕಾಣುವ ಭೀತಿಗೆ ಸಿಲುಕಿತ್ತು. ಈ ಸಂದರ್ಭದಲ್ಲಿ ಐದನೇ ವಿಕೆಟ್‌ಗೆ ಹಾರ್ದಿಕ್ ಪಾಂಡ್ಯ ಹಾಗೂ ವಿರಾಟ್ ಕೊಹ್ಲಿ ಜವಾಬ್ದಾರಿಯುತ ಜತೆಯಾಟ ನಿಭಾಯಿಸುವ ಮೂಲಕ ತಂಡಕ್ಕೆ ಆಸರೆಯಾದರು. ಬಲಾಢ್ಯ ಪಾಕ್ ಬೌಲಿಂಗ್ ದಾಳಿಯ ಎದುರು ಈ ಜೋಡಿ ದಿಟ್ಟ ಪ್ರದರ್ಶನ ತೋರುವ ಮೂಲಕ ತಂಡವನ್ನು ಗೆಲುವಿನತ್ತ ಕೊಂಡೊಯ್ಯದರು. ಇನ್ನು ನಿರ್ಣಾಯಕ ಘಟ್ಟದಲ್ಲಿ ವಿರಾಟ್ ಕೊಹ್ಲಿ, ಪಾಕ್ ವೇಗಿ ಹ್ಯಾರಿಸ್ ರೌಫ್ ಬೌಲಿಂಗ್‌ನಲ್ಲಿ ಒಂದೇ ಓವರ್‌ನಲ್ಲಿ ಎರಡು ಮನಮೋಹಕ ಸಿಕ್ಸರ್ ಸಿಡಿಸಿ ಪಂದ್ಯ ಭಾರತದತ್ತ ವಾಲುವಂತೆ ಮಾಡಿದರು.

ವಿರಾಟ್‌ ಕೊಹ್ಲಿ ಬಾರಿಸಿದ ಸಿಕ್ಸರ್‌ಅನ್ನು Shot of the Century ಎಂದು ಘೋಷಿಸಿದ ಐಸಿಸಿ!

ಇದೀಗ Shot of the Century ಎನಿಸಿಕೊಂಡ ಆ ಸಿಕ್ಸರ್ ಬಗ್ಗೆ ವಿರಾಟ್ ಕೊಹ್ಲಿ ಮನಬಿಚ್ಚಿ ಮಾತನಾಡಿದ್ದಾರೆ. "ಅದು ಆ ಕ್ಷಣದಲ್ಲಿ ಆಗಿ ಹೋದದ್ದು. ನಾನು 10 ವರ್ಷದವನಿದ್ದಾಗ ನನ್ನ 35 ವರ್ಷಕ್ಕೆ ನಾನೇನು ಆಗುತ್ತೇನೆ ಎಂದು ಹೇಳಿದ್ದರೇ ಅವರಿಗೆ ಎಲ್ಲವನ್ನೂ ಬರೆದುಕೊಡುತ್ತೇನೆ. 10ರಿಂದ 35 ವರ್ಷದ ನಡುವಿನ 25 ವರ್ಷದಲ್ಲಿ ನಡೆಯಲಿದೆ ಎಂದು ಮೊದಲೇ ಹೇಳಿದ್ದರೇ ಈಗಲೇ ಎಲ್ಲವನ್ನು ಅವರಿಗೆ ಬರೆದು ಕೊಡುತ್ತೇನೆ. ನಾನು ಈ ಹಂತಕ್ಕೇರಲು ಸಾಕಷ್ಟು ಶ್ರಮಪಟ್ಟಿದ್ದೇನೆ. ಮುಂದೇನಾಗುತ್ತದೆ ಎಂದು ನನಗೆ ಗೊತ್ತಿರಲಿಲ್ಲ, ಅದೇ ರೀತಿ ಹೇಗಾಯಿತು ಎನ್ನುವುದು ಗೊತ್ತಿಲ್ಲ. ಆದರೆ ಆ ಘಟನೆ ನಡೆಯಿತು. ಅಂದು ರಾತ್ರಿ ನಡೆದ ಮ್ಯಾಚ್‌ ನಾನಂತೂ ನನ್ನ ಜೀವನದಲ್ಲಿ ಮರೆಯಲು ಸಾಧ್ಯವಿಲ್ಲ" ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ.

Virat Kohli Six: ಶಾಟ್‌ ಆಫ್‌ ದ ಸೆಂಚುರಿ... ಕೊಹ್ಲಿ ಬ್ಯಾಕ್‌ಫುಟ್‌ ಲಾಂಗ್‌ ಆನ್‌ ಸಿಕ್ಸ್‌ಗೆ ಸೋಷಿಯಲ್‌ ಮೀಡಿಯಾ ಫಿದಾ!

ಕೊಹ್ಲಿ ಬದಲು ಕಾರ್ತಿಕ್‌, ಪಾಂಡ್ಯ ಸಿಕ್ಸ್‌ ಹೊಡೆದಿದ್ರೆ ನೋವಾಗುತ್ತಿತ್ತು: ರೌಫ್‌!

ಕರಾಚಿ: ಅಕ್ಟೋಬರ್‌ನಲ್ಲಿ ನಡೆದ ಟಿ20 ವಿಶ್ವಕಪ್‌ ಪಂದ್ಯದಲ್ಲಿ ವಿರಾಟ್‌ ಕೊಹ್ಲಿ ಬದಲು ದಿನೇಶ್‌ ಕಾರ್ತಿಕ್‌ ಅಥವಾ ಹಾರ್ದಿಕ್‌ ಪಾಂಡ್ಯ ಸಿಕ್ಸರ್‌ ಬಾರಿಸಿದ್ದರೆ ನೋವಾಗುತ್ತಿತ್ತು ಎಂದು ಪಾಕಿಸ್ತಾನದ ವೇಗಿ ಹ್ಯಾರಿಸ್‌ ರೌಫ್‌ ಹೇಳಿದ್ದರು. ‘ಕೊಹ್ಲಿ ವಿಶ್ವ ಶ್ರೇಷ್ಠ ಆಟಗಾರ. ಅಂತಹ ಸಿಕ್ಸರ್‌ಗಳನ್ನು ಹೊಡೆಯಲು ಅವರೊಬ್ಬರಿಗೆ ಮಾತ್ರ ಸಾಧ್ಯ’ ಎಂದು ರೌಫ್‌ ಭಾರತದ ಮಾಜಿ ನಾಯಕನನ್ನು ಕೊಂಡಾಡಿದ್ದಾರೆ. ರೌಫ್‌ರ ಓವರಲ್ಲಿ 2 ಸಿಕ್ಸರ್‌ ಸಿಡಿಸಿದ್ದ ಕೊಹ್ಲಿ, ಭಾರತದ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದರು.