Asianet Suvarna News Asianet Suvarna News

Virat Kohli Six: ಶಾಟ್‌ ಆಫ್‌ ದ ಸೆಂಚುರಿ... ಕೊಹ್ಲಿ ಬ್ಯಾಕ್‌ಫುಟ್‌ ಲಾಂಗ್‌ ಆನ್‌ ಸಿಕ್ಸ್‌ಗೆ ಸೋಷಿಯಲ್‌ ಮೀಡಿಯಾ ಫಿದಾ!

ಕ್ರಿಕೆಟ್‌ನಲ್ಲಿ ಕೆಲವೊಂದು ಅವಿಸ್ಮರಣೀಯ ಶಾಟ್‌ಗಳಿರುತ್ತವೆ. ಅಂಥಾ ಮಾಸ್ಟರ್‌ ಕ್ಲಾಸ್‌ ಪ್ಲೇಯರ್‌ಗಳು ಮಾತ್ರವೇ ಆ ಶಾಟ್‌ಗಳನ್ನು ಬಾರಿಸಲು ಸಾಧ್ಯ. ಭಾನುವಾರ ನಡೆದ ಭಾರತ ಪಾಕಿಸ್ತಾನ ನಡುವಿನ ಪಂದ್ಯದ 19ನೇ ಓವರ್‌ನಲ್ಲಿ ರೌಫ್‌ಗೆ ವಿರಾಟ್‌ ಕೊಹ್ಲಿ ಬಾರಿಸಿದ್ದ ಬ್ಯಾಕ್‌ಫುಟ್‌ ಲಾಂಗ್‌ ಆನ್‌ ಸಿಕ್ಸ್‌, ನಿಸ್ಸಂಶಯವಾಗಿ ಶಾಟ್‌ ಆಫ್‌ ದ ಸೆಂಚುರಿ ಎಂದು ಕ್ರಿಕೆಟ್‌ ಅಭಿಮಾನಿಗಳು ಹೇಳುತ್ತಿದ್ದಾರೆ.
 

Virat Kohli shot of the century six off the back foot in the 19th over against Rauf over long on san
Author
First Published Oct 24, 2022, 1:49 PM IST

ಬೆಂಗಳೂರು (ಅ. 24): ಕಿಂಗ್‌ ಕೊಹ್ಲಿ ಬ್ಯಾಟಿಂಗ್ ಬಗ್ಗೆ ಎಷ್ಟು ಹೇಳಿದರೂ, ಎಷ್ಟು ಬರೆದರೂ ಕಡಿಮೆಯೇ. ಪಾಕಿಸ್ತಾನ ವಿರುದ್ಧ 2022ರ ಟಿ20 ವಿಶ್ವಕಪ್‌ನ ಆರಂಭಿಕ ಪಂದ್ಯದಲ್ಲಿ ವಿರಾಟ್‌ ಕೊಹ್ಲಿಆಡಿದ ಇನ್ನಿಂಗ್ಸ್‌ ಮುಂದಿನ ಕೆಲವು ದಶಕಗಳ ಕಾಲ ಕ್ರಿಕೆಟ್‌ ಜಗತ್ತು ಖಂಡಿತವಾಗಿ ನೆನಪಿಟ್ಟುಕೊಳ್ಳುತ್ತದೆ. 160 ರನ್‌ ಚೇಸ್‌ ಮಾಡುವ ವೇಳೆ ವಿರಾಟ್‌ ಕೊಹ್ಲಿ ಒಬ್ಬರೆ 82 ರನ್‌ ಸಿಡಿಸಿದರೆ, ತಂಡದ ಉಳಿದ ಆಟಗಾರರು 67 ರನ್‌ ಬಾರಿಸಿದ್ದರು. ಇವರ ಆಕರ್ಷಕ ಇನ್ನಿಂಗ್ಸ್‌ನಲ್ಲಿ 6 ಕ್ಲಾಸಿಕ್‌ ಬೌಂಡರಿಗಳು ಹಾಗೂ 4 ಅಮೋಘ ಸಿಕ್ಸರ್‌ಗಳು ಸೇರಿದ್ದವು. ಕೊಹ್ಲಿಯ ಎಲ್ಲಾ ಸಿಕ್ಸರ್‌ಗಳು ವಿಶೇಷವಾದರೆ, 19ನೇ ಓವರ್‌ನಲ್ಲಿ ರೌಫ್‌ಗೆ ಬಾರಿಸಿದ ಬ್ಯಾಕ್‌ಫುಟ್‌ ಲಾಂಗ್‌ ಅನ್‌ ಸಿಕ್ಸರ್‌ 'ಶಾಟ್‌ ಆಫ್‌ ದಿ ಸೆಂಚುರಿ' ಎಂದು ಕ್ರಿಕೆಟ್‌ ಅಭಿಮಾನಿಗಳು ಬಣ್ಣಿಸಿದ್ದಾರೆ. ಕ್ರಿಕೆಟ್‌ ದಿಗ್ಗಜ ಸಚಿನ್‌ ತೆಂಡುಲ್ಕರ್‌, ಟೀಮ್‌ ಇಂಡಿಯಾ ಮಾಜಿ ವೇಗಿ ಹಾಗೂ ಕೋಚ್‌ ವೆಂಕಟೇಶ್‌ ಪ್ರಸಾದ್‌ ಸೇರಿದಂತೆ ವಿಶ್ವದ ಅನೇಕ ಮಾಜಿ ಕ್ರಿಕೆಟಿಗರು, ಕ್ರಿಕೆಟ್‌ ವಿಶ್ಲೇಷಕರು ಕೊಹ್ಲಿಯ ಈ ಶಾಟ್‌ಗೆ ಮೆಚ್ಚುಗೆ ಸುರಿಮಳೆ ಸುರಿಸಿದ್ದಾರೆ. ಕ್ರಿಕೆಟ್‌ ಜಗತ್ತಿನಲ್ಲಿ ಸೂಪರ್‌ ಫಿಟ್‌ನೆಸ್‌ ಇರುವಂಥ, ಮಾಸ್ಟರ್‌ ಕ್ಲಾಸ್‌ ಪ್ಲೇಯರ್‌ ಆಗಿರುವಂಥ ಆಟಗಾರನಿಂದ ಮಾತ್ರವೇ ಇಂಥದ್ದೊಂದು ಶಾಟ್‌ ಬರಲು ಸಾಧ್ಯ ಎಂದು ಹೇಳಿದ್ದಾರೆ.

ಹ್ಯಾರಿಸ್‌ ರೌಫ್‌ ಎಸೆದ 19ನೇ ಓವರ್‌ನ ಐದನೇ ಎಸೆತ. ಲೆಂತ್‌ ಬಾಲ್‌ ಆಗಿದ್ದ ಅದು ಬೇಲ್ಸ್‌ಗಿಂತ ಮೇಲೆ ಹೋಗುವ ಹಾದಿಯಲ್ಲಿತ್ತು. ಫುಲ್‌ ಸ್ಟ್ರೈಟ್‌ ಬ್ಯಾಟ್‌, ಬ್ಯಾಕ್‌ಫುಟ್‌ನಲ್ಲಿ ನಿಂತು, ಲಾಂಗ್‌ಆನ್‌ನತ್ತ ಬಾರಿಸಿದರು. ಚೆಂಡು ಸೀದಾ ಹಾರಿ, ನೇರವಾಗಿ ಸೈಡ್‌ಸ್ಟ್ಕ್ರೀನ್‌ಗೆ ಬಡಿದಿತ್ತು. ನೋಡೋಕೆ ಬಹಳ ಸಿಂಪಲ್‌ ಆಗಿ ಕಾಣಿಸಿದರು. ಅಂಥಾ ಒತ್ತಡದ ಸನ್ನಿವೇಶದಲ್ಲಿ, ಅಷ್ಟು ಪರ್ಫೆಕ್ಟ್‌ ಆಗಿ, ಸೊಂಟಕ್ಕಿಂತ ಮೇಲಿನ ಎತ್ತರದಲ್ಲಿ ಬಂದ ಚೆಂಡನ್ನು ಸೀದಾ ಲಾಂಗ್‌ ಅನ್‌ನಲ್ಲಿ ಸಿಕ್ಸರ್‌ ಬಾರಿಸೋದು ಇದೆಯಲ್ಲ. ಅದಕ್ಕೆ ಗಟ್ಟಿ ಗುಂಡಿಗೆ ಬೇಕು. ಅದಕ್ಕಿಂತ ಮುಖ್ಯವಾಗಿ ಮಹಾನ್‌ ಫಿಟ್‌ನೆಸ್‌ ಬೇಕು. ಒಂದು ಸ್ವಲ್ಪ ಎಡವಟ್ಟಾದರೂ ರಿಬ್‌ಕೇಜ್‌ ಇಂಜುರಿ ಕೂಡ ಆಗಬಹುದು. ಹಾಗಂತ ಈ ಶಾಟ್‌ಗಳು ಹಿಂದೆ ಬಂದಿಲ್ಲ ಎಂದರ್ಥವಲ್ಲ. ಕೊಹ್ಲಿಯಷ್ಟು ಪರ್ಫೆಕ್ಟ್‌ಆಗಿ ಬಾರಿಸಿದ್ದು ಬಹುಶಃ ಯಾರೂ ಇರಲಿಕ್ಕಿಲ್ಲ. ಹಾಗಾಗಿಯೇ ಕ್ರಿಕೆಟ್‌ ಪಂಡಿತರು ಬಹುಶಃ ಇದು ಟೂರ್ನಿಯ ಬೆಸ್ಟ್‌ ಶಾಟ್‌ ಮಾತ್ರವಲ್ಲ ಶಾಟ್‌ ಆಫ್‌ ಸೆಂಚುರಿ ಕೂಡ ಅಗಿರಬಹುದು ಎಂದಿದ್ದಾರೆ.

'ಶೇನ್‌ ವಾರ್ನ್‌ ಎಸೆದಿದ್ದು ಬಾಲ್‌ ಆಫ್‌ ದ ಸೆಂಚುರಿ ಆಗಿದ್ದರೆ. ರೌಫ್‌ ಅವರ ಓವರ್‌ನ 5ನೇ ಎಸೆತದಲ್ಲಿ ಕೊಹ್ಲಿ ಬಾರಿಸಿದ ಸಿಕ್ಸರ್‌, ಖಂಡಿತವಾಗಿ ಶಾಟ್‌ ಆಫ್‌ ದ ಸೆಂಚುರಿ! ಶಾರ್ಜಾದಲ್ಲಿ ತೆಂಡುಲ್ಕರ್‌, ವಾಂಖೆಡೆಯಲ್ಲಿ ಧೋನಿ ಈಗ ಮೆಲ್ಬೋರ್ನ್‌ನಲ್ಲಿ ಕೊಹ್ಲಿ! ಕ್ರಿಕೆಟಿಗರ ಎಂದೂ ಅಳಿಯದ ಕ್ಷಣಗಳಿಂದಲೇ, ಕ್ರೀಡೆಯನ್ನು ಮೀರಿ ಇವರು ಬೆಳೆದಿದ್ದಾರೆ! ಸೆಲ್ಯೂಟ್‌, ಕೊಹ್ಲಿ' ಎಂದು ಹಿರಿಯ ಪತ್ರಕರ್ತ ಹಾಗೂ ಕ್ರಿಕೆಟ್‌ನ ದೊಡ್ಡ ಅಭಿಮಾನಿಯಾಗಿರುವ ರಾಜ್‌ದೀಪ್‌ ಸರ್ದೇಸಾಯಿ ಬರೆದಿದ್ದಾರೆ.

Ind vs Pak ಕೊನೆಯ ಓವರ್‌ನಲ್ಲಿ ಚೆಂಡು ವಿಕೆಟ್‌ಗೆ ಬಡಿದರೂ ಟೀಂ ಇಂಡಿಯಾಗೆ ಬೈಸ್ ಮೂಲಕ 3 ರನ್ ಸಿಕ್ಕಿದ್ದು ಯಾಕೆ..? ರೂಲ್ಸ್ ಏನು?

ಯಾವುದೇ ಅನುಮಾನವಿಲ್ಲದೆ, ಇದು ನಿಮ್ಮ ಜೀವನದ ಅತ್ಯಂತ ಶ್ರೇಷ್ಠ ಇನ್ನಿಂಗ್ಸ್‌. ನೀವು ಆಡೋದನ್ನು ನೋಡೋದೇ ನನಗೆ ಹಬ್ಬ. ರೌಫ್‌ ಎಸೆದ 19ನೇ ಓವರ್‌ನಲ್ಲಿ ನೀವು ಬ್ಯಾಕ್‌ಫುಟ್‌ನಲ್ಲಿ ನಿಂತು ಲಾಂಗ್‌ಆನ್‌ ಕಡೆಗೆ ಬಾರಿಸಿದ ಸಿಕ್ಸರ್‌, ಪರಮಾದ್ಬುತವಾಗಿತ್ತು! ಹೀಗೆ ಮುಂದುವರಿಯಲಿ' ಎಂದು ಸಚಿನ್‌ ತೆಂಡುಲ್ಕರ್‌ ಬರೆದಿದ್ದಾರೆ. 'ವಿರಾಟ್‌ ಕೊಹ್ಲಿ ಬಾರಿಸಿದ ಶಾಟ್‌ ಆಫ್‌ ದ ಇಯರ್‌. ಭಾರತ ಹಾಗೂ ಪಾಕಿಸ್ತಾನ ಪಂದ್ಯದ ಅತ್ಯಂತ ಶ್ರೇಷ್ಠ ಕ್ಷಣ' ಎಂದು ವೆಂಕಟೇಶ್‌ ಪ್ರಸಾದ್‌ ಬರೆದಿದ್ದಾರೆ.

Ind vs Pak ಪಾಕ್ ಎದುರು ಹೋರಾಡಿ ಗೆದ್ದ ಟೀಂ ಇಂಡಿಯಾವನ್ನು ಕೊಂಡಾಡಿದ ಪ್ರಧಾನಿ ಮೋದಿ..!

'ಲಾಂಗ್‌ಆನ್‌ನಲ್ಲಿ ನೀವು ಬಾರಿಸಿದ ಸಿಕ್ಸರ್‌. ನಾನು ಹಿಂದೆಂದೂ ಕಂಡಿಲ್ಲ' ಎಂದು ಎಂಸಿ ಜೋಶಿ ಎನ್ನುವ ಅಭಿಮಾನಿ ಬರೆದಿದ್ದಾರೆ. ಇದನ್ನು ಏನೆಂದು ಕರೆಯುವುದು??? ಇದನ್ನು ವಿವರಿಸಲು ಇನ್ಕ್ರೆಡಿಬಲ್ ಒಂದು ಸಣ್ಣ ಪದವೆಂದು ತೋರುತ್ತದೆ. ಈ ಶಾಟ್ ಮುಂದಿನ ಪೀಳಿಗೆಗೆ ನೆನಪಿನಲ್ಲಿ ಉಳಿಯುತ್ತದೆ. ಬೆರಗುಗೊಳಿಸುವ, ಮಂತ್ರಮುಗ್ಧಗೊಳಿಸುವ, ನಂಬಲಾಗದ, ಭವ್ಯ, ಶಕ್ತಿಶಾಲಿ, ನಂಬಲಸಾಧ್ಯ. ಈ ಶಾಟ್‌ ಅನ್ನು ವಿವರಿಸಲು ನನ್ನಲ್ಲಿ ಪದಗಳಿಲ್ಲ ಎಂದು ಇನ್ನೊಬ್ಬ ಅಭಿಮಾನಿ ಬರೆದಿದ್ದಾರೆ.

Virat Kohli shot of the century six off the back foot in the 19th over against Rauf over long on san

Follow Us:
Download App:
  • android
  • ios