Asianet Suvarna News Asianet Suvarna News

ಇನ್‌​ಸ್ಟಾ​ಗ್ರಾಂನ​ಲ್ಲಿ ವಿರಾಟ್‌ಗೆ 25 ಕೋಟಿ ಫಾಲೋ​ವ​ರ್ಸ್‌! ಹೊಸ ಮೈಲಿಗಲ್ಲು ನೆಟ್ಟ ಕಿಂಗ್ ಕೊಹ್ಲಿ

ಸೋಷಿಯಲ್ ಮೀಡಿಯಾವಾದ ಇನ್‌ಸ್ಟಾಗ್ರಾಂನಲ್ಲಿ ಹೊಸ ದಾಖಲೆ ನಿರ್ಮಿಸಿದ ವಿರಾಟ್ ಕೊಹ್ಲಿ
ಅತಿಹೆಚ್ಚು ಇನ್‌ಸ್ಟಾಗ್ರಾಂ ಫಾಲೋವರ್ಸ್‌ ಹೊಂದಿದ ಮೊದಲ ಭಾರತೀಯ ಕೊಹ್ಲಿ
 ಏಷ್ಯಾ​ದಲ್ಲೇ ಅತಿ​ಹೆಚ್ಚು ಫಾಲೋ​ವ​ರ್ಸ್‌ ಹೊಂದಿದ ವ್ಯಕ್ತಿ 

Virat Kohli reaches 25 Crore Instagram Followers Create new milestone kvn
Author
First Published May 26, 2023, 9:34 AM IST

ನವ​ದೆ​ಹ​ಲಿ(ಮೇ.26): ಭಾರ​ತದ ತಾರಾ ಕ್ರಿಕೆ​ಟಿಗ ವಿರಾಟ್‌ ಕೊಹ್ಲಿ ಸದ್ಯ ಸಾಮಾ​ಜಿಕ ಜಾಲ​ತಾಣ ಇನ್‌​ಸ್ಟಾ​ಗ್ರಾಂನಲ್ಲಿ 25 ಕೋಟಿ ಫಾಲೋ​ವ​ರ್ಸ್‌​ಗ​ಳನ್ನು ಹೊಂದಿದ್ದು, ಏಷ್ಯಾ​ದಲ್ಲೇ ಅತಿ​ಹೆಚ್ಚು ಫಾಲೋ​ವ​ರ್ಸ್‌ ಹೊಂದಿದ ವ್ಯಕ್ತಿ ಎನಿ​ಸಿ​ಕೊಂಡಿ​ದ್ದಾರೆ. ಅಲ್ಲದೇ ವಿಶ್ವ​ದಲ್ಲೇ ಅತಿಹೆಚ್ಚು ಇನ್‌​ಸ್ಟಾಗ್ರಾಂ ಹಿಂಬಾ​ಲ​ಕ​ರನ್ನು ಹೊಂದಿ​ರುವ ಕ್ರೀಡಾ​ಪ​ಟು​ಗಳ ಪಟ್ಟಿ​ಯಲ್ಲಿ ಖ್ಯಾತ ಫುಟ್ಬಾ​ಲಿ​ಗ​ರಾದ ಕ್ರಿಸ್ಟಿ​ಯಾನೋ ರೊನಾಲ್ಡೋ ಹಾಗೂ ಲಿಯೋ​ನೆಲ್‌ ಮೆಸ್ಸಿ ಬಳಿಕ 3ನೇ ಸ್ಥಾನ​ದ​ಲ್ಲಿ​ದ್ದಾರೆ. 

ಪೋರ್ಚುಗಲ್ ಸ್ಟಾರ್ ಫುಟ್ಬಾಲಿಗ ಕ್ರಿಸ್ಟಿಯಾನೋ ರೊನಾಲ್ಡೋ 58.5 ಕೋಟಿ, ಅರ್ಜೆಂಟೀನಾ ಫುಟ್ಬಾಲ್ ತಂಡದ ನಾಯಕ ಲಿಯೋನೆಲ್ ಮೆಸ್ಸಿ 46.4 ಕೋಟಿ ಫಾಲೋ​ವ​ರ್ಸ್‌​ಗ​ಳನ್ನು ಹೊಂದಿ​ದ್ದಾರೆ. ಟ್ವೀಟ​ರ್‌​ನಲ್ಲಿ ವಿರಾಟ್ ಕೊಹ್ಲಿಗೆ 55.9 ಮಿಲಿ​ಯನ್‌ ಫಾಲೋ​ವ​ರ್ಸ್‌​ಗ​ಳಿ​ದ್ದಾರೆ.

ಐಪಿಎಲ್‌ನಲ್ಲಿ ಮಿಂಚಿದ ವಿರಾಟ್ ಕೊಹ್ಲಿ: 16ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡದ ಮಾಜಿ ನಾಯಕ ವಿರಾಟ್‌ ಕೊಹ್ಲಿ ಭರ್ಜರಿ ಪ್ರದರ್ಶನದ ಮೂಲಕ ಮಿಂಚಿದ್ದಾರೆ. 2023ರ ಐಪಿಎಲ್‌ನಲ್ಲಿ ವಿರಾಟ್ ಕೊಹ್ಲಿ 14 ಪಂದ್ಯಗಳನ್ನಾಡಿ 53.25ರ ಬ್ಯಾಟಿಂಗ್ ಸರಾಸರಿಯಲ್ಲಿ 6 ಅರ್ಧಶತಕ ಹಾಗೂ ಎರಡು ಅಮೋಘ ಶತಕಗಳ ನೆರವಿನಿಂದ 639 ರನ್ ಬಾರಿಸಿದ್ದು, ಲೀಗ್ ಹಂತ ಅತ್ಯಂದ ವೇಳೆಗೆ ಗರಿಷ್ಠ ರನ್ ಬಾರಿಸಿದ ಬ್ಯಾಟರ್‌ಗಳ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ. ಇನ್ನು ಆರ್‌ಸಿಬಿ ನಾಯಕ ಫಾಫ್ ಡು ಪ್ಲೆಸಿಸ್‌(730) ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ಆರಂಭಿಕ ಬ್ಯಾಟರ್ ಋತುರಾಜ್ ಗಾಯಕ್ವಾಡ್(722) ಮೊದಲೆರಡು ಸ್ಥಾನದಲ್ಲೇ ಮುಂದುವರೆದಿದ್ದಾರೆ.

2024ರಲ್ಲೂ ಧೋನಿ ಆಡುತ್ತಾರೆ: ಡ್ವೇನ್ ಬ್ರಾವೋ

ಚೆನ್ನೈ: ತಮ್ಮ ಐಪಿ​ಎಲ್‌ ನಿವೃ​ತ್ತಿಯ ಬಗ್ಗೆ ಎಂ.ಎ​ಸ್‌.​ಧೋನಿ ಇನ್ನೂ ಗುಟ್ಟು ಬಿಟ್ಟು​ಕೊ​ಡ​ದಿ​ದ್ದರೂ ಚೆನ್ನೈ ಬೌಲಿಂಗ್‌ ಕೋಚ್‌ ಡ್ವೇನ್‌ ಬ್ರಾವೋ, ಧೋನಿ ಮುಂದಿನ ವರ್ಷವೂ ಆಡು​ತ್ತಾರೆ ಎಂದು ಖಚಿ​ತ​ಪ​ಡಿ​ಸಿ​ದ್ದಾ​ರೆ. ಈ ಬಗ್ಗೆ ಸಂದ​ರ್ಶ​ನ​ವೊಂದ​ರಲ್ಲಿ ಮಾತ​ನಾ​ಡಿ​ರುವ ಅವರು, ‘ಮುಂದಿನ ಐಪಿ​ಎ​ಲ್‌​ನಲ್ಲೂ ಧೋನಿ 100% ಆಡ​ಲಿದ್ದಾರೆ. ಇಂಪ್ಯಾಕ್ಟ್ ಆಟ​ಗಾರ ನಿಯಮ ಜಾರಿ​ಯ​ಲ್ಲಿ​ರು​ವು​ದ​ರಿಂದ ಧೋನಿಗೆ ಸಹ​ಕಾ​ರಿ​ಯಾ​ಗ​ಬ​ಹುದು. ಇತ​ರರು ಲಯ​ದ​ಲ್ಲಿ​ರು​ವು​ದ​ರಿಂದ ಧೋನಿ​ಯಿಂದ ತಂಡ ಹೆಚ್ಚೇನೂ ಬಯ​ಸು​ವು​ದಿಲ್ಲ. ಆದರೆ ತಂಡದ ಒತ್ತ​ಡ​ ನಿಭಾ​ಯಿ​ಸಲು ಧೋನಿ ನೆರ​ವಾ​ಗು​ತ್ತಿ​ದ್ದಾ​ರೆ’ ಎಂದಿ​ದ್ದಾ​ರೆ.

ಮುಂಬೈ vs ಗುಜ​ರಾ​ತ್‌: ಯಾರಿಗೆ IPL 2023 ಫೈನಲ್‌ ಅದೃಷ್ಟ?

2023ನೇ ಸಾಲಿನ ಐಪಿಎಲ್ ಟೂರ್ನಿಯಲ್ಲಿ ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡವು ದಾಖಲೆಯ 10ನೇ ಬಾರಿಗೆ ಫೈನಲ್ ಪ್ರವೇಶಿಸುವಲ್ಲಿ ಯಶಸ್ವಿಯಾಗಿದೆ. ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಗುಜರಾತ್ ಟೈಟಾನ್ಸ್ ತಂಡವನ್ನು ಮಣಿಸಿ ಫೈನಲ್ ಪ್ರವೇಶಿಸಿದೆ. ಇದೀಗ ಎರಡನೇ ಎಲಿಮಿನೇಟರ್ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ಹಾಗೂ ಮುಂಬೈ ಇಂಡಿಯನ್ಸ್ ತಂಡಗಳು ಕಾದಾಡಲಿದ್ದು, ಈ ಪಂದ್ಯದಲ್ಲಿ ವಿಜೇತರಾಗುವ ತಂಡವು ಮೇ 28ರಂದು ನಡೆಯಲಿರುವ ಐಪಿಎಲ್ ಫೈನಲ್‌ನಲ್ಲಿ ಕಪ್‌ಗಾಗಿ ಚೆನ್ನೈ ಸೂಪರ್ ಕಿಂಗ್ಸ್ ಜತೆ ಕಾದಾಡಲಿದೆ. ಚೆನ್ನೈ ಸೂಪರ್ ಕಿಂಗ್ಸ್ ತಂಡವು ಈಗಾಗಲೇ 4 ಬಾರಿ ಐಪಿಎಲ್ ಚಾಂಪಿಯನ್ ಆಗಿ ಹೊರಹೊಮ್ಮಿದ್ದು, 5ನೇ ಟ್ರೋಫಿ ಮೇಲೆ ಕಣ್ಣಿಟ್ಟಿದೆ.

ಐಪಿ​ಎಲ್‌ ಬಳಿ​ಕ ಏಷ್ಯಾ​ಕಪ್‌ ಬಗ್ಗೆ ಅಂತಿಮ ನಿರ್ಧಾ​ರ: ಶಾ

ನವ​ದೆ​ಹ​ಲಿ: ದೀರ್ಘ ಸಮ​ಯ​ದಿಂದ ಗೊಂದ​ಲಕ್ಕೆ ಕಾರ​ಣ​ವಾ​ಗಿರುವ ಏಷ್ಯಾ​ಕಪ್‌ ಕ್ರಿಕೆಟ್‌ ಟೂರ್ನಿಯ ಆತಿಥ್ಯ ದೇಶದ ಬಗ್ಗೆ ಅಂತಿಮ ನಿರ್ಧಾ​ರ​ವ​ವನ್ನು ಈ ಬಾರಿ ಐಪಿ​ಎಲ್‌ ಫೈನಲ್‌ ಬಳಿಕ ತೆಗೆ​ದು​ಕೊ​ಳ್ಳು​ವು​ದಾಗಿ ಏಷ್ಯನ್‌ ಕ್ರಿಕೆಟ್‌ ಕೌನ್ಸಿ​ಲ್‌​(​ಎ​ಸಿ​ಸಿ) ಮುಖ್ಯ​ಸ್ಥ ಜಯ್‌ ಶಾ ತಿಳಿ​ಸಿ​ದ್ದಾರೆ.

ಬಿಸಿ​ಸಿಐ ಕಾರ‍್ಯ​ದರ್ಶಿಯೂ ಆಗಿ​ರುವ ಶಾ ಈ ಬಗ್ಗೆ ಗುರು​ವಾ​ರ ಪ್ರತಿ​ಕ್ರಿ​ಯಿ​ಸಿ​ದ್ದಾರೆ. ‘ಏಷ್ಯಾ​ಕಪ್‌ ಆತಿ​ಥ್ಯದ ಬಗ್ಗೆ ಈವ​ರೆಗೆ ನಿರ್ಧಾರವಾಗಿಲ್ಲ. ಐಪಿ​ಎಲ್‌ ಫೈನಲ್‌ ವೀಕ್ಷ​ಣೆಗೆ ಬಾಂಗ್ಲಾ​ದೇಶ, ಶ್ರೀಲಂಕಾ ಹಾಗೂ ಆಫ್ಘಾ​ನಿ​ಸ್ತಾನ ಕ್ರಿಕೆಟ್‌ ಮಂಡ​ಳಿ​ಗಳ ಅಧಿ​ಕಾ​ರಿ​ಗಳು ಆಗ​ಮಿ​ಸ​ಲಿದ್ದು, ಅವರ ಜೊತೆ ಚರ್ಚೆ ನಡೆಸಿ ಅಂತಿಮ ತೀರ್ಮಾನ ಕೈಗೊ​ಳ್ಳ​ಲಿ​ದ್ದೇ​ವೆ’ ಎಂದು ತಿಳಿ​ಸಿ​ದ್ದಾ​ರೆ. 

ಈ ವರ್ಷ ಟೂರ್ನಿಯ ಆತಿಥ್ಯ ಹಕ್ಕು ಪಾಕ್‌ ಬಳಿ ಇದ್ದರೂ ಭಾರತ ತಂಡ ಕ್ರಿಕೆಟ್‌ ಆಡಲು ಪಾಕ್‌ಗೆ ಹೋಗು​ವು​ದಿಲ್ಲ ಎಂದು ಸ್ಪಷ್ಟ​ಪ​ಡಿ​ಸಿ​ತ್ತು. ಹೀಗಾಗಿ ಟೂರ್ನಿ​ಯನ್ನು ಪಾಕ್‌​ನಲ್ಲೇ ಆಯೋ​ಜಿಸಿ, ಭಾರ​ತದ ಪಂದ್ಯ​ಗ​ಳನ್ನು ಬೇರೆ​ಕಡೆ ನಡೆ​ಸಲು ಪಾಕ್‌ ಕ್ರಿಕೆಟ್‌ ಮಂಡ​ಳಿ​(​ಪಿ​ಸಿ​ಸಿ) ಎಸಿ​ಸಿಗೆ ಪ್ರಸ್ತಾಪ ಸಲ್ಲಿ​ಸಿ​ತ್ತು.

Follow Us:
Download App:
  • android
  • ios