ನವದೆಹಲಿ(ನ.13): ಆಸ್ಪ್ರೇಲಿಯಾ ಪ್ರವಾಸದಲ್ಲಿನ ಸೀಮಿತ ಓವರ್‌ಗಳ ಸರಣಿಯಲ್ಲಿ ಟೀಂ ಇಂಡಿಯಾ ಆಟಗಾರರು ರೆಟ್ರೋ ಜೆರ್ಸಿ ಧರಿಸಲಿದ್ದಾರೆ ಎಂಬ ವದಂತಿ ಹಬ್ಬಿದೆ. ಆದರೆ ಈ ಬಗ್ಗೆ ಬಿಸಿಸಿಐ ಯಾವುದೇ ಸ್ಪಷ್ಟನೆ ನೀಡಿಲ್ಲ. 

1992 ರ ಕಾಲಘಟ್ಟದಲ್ಲಿ ಭಾರತ ಕ್ರಿಕೆಟ್‌ ತಂಡದ ಆಟಗಾರರು ತೊಡುತ್ತಿದ್ದ ಜೆರ್ಸಿಯ ಹೋಲಿಕೆ ಇರುವ ಹಳೆಯ ಜೆರ್ಸಿ ಇದಾಗಿದೆ ಎಂಬ ಸುದ್ದಿ ಹರಿದಾಡ್ತಿದೆ. ಮೂಲಗಳ ಪ್ರಕಾರ 70-80ರ ದಶಕದಲ್ಲಿ ಭಾರತ ತಂಡದ ಆಟಗಾರರು ಧರಿಸುತ್ತಿದ್ದ ಜೆರ್ಸಿ ಎನ್ನಲಾಗಿದೆ. ಕೊರೋನಾ ಲಾಕ್‌ಡೌನ್‌ ಬಳಿಕ ಭಾರತ ಕ್ರಿಕೆಟ್‌ ತಂಡ, ಪಾಲ್ಗೊಳ್ಳುತ್ತಿರುವ ಮೊದಲ ಕ್ರಿಕೆಟ್‌ ಸರಣಿ ಇದಾಗಿದ್ದು, ನ.27 ರಿಂದ ಆರಂಭವಾಗಲಿದೆ. ಏಕದಿನ, ಟಿ20 ಹಾಗೂ ಟೆಸ್ಟ್‌ ಸರಣಿಯನ್ನಾಡಲು ಟೀಂ ಇಂಡಿಯಾದ 30 ಆಟಗಾರರು ಸಿಡ್ನಿಗೆ ಬಂದಿಳಿದಿದ್ದು, ಸಿಡ್ನಿಯಲ್ಲಿ 14 ದಿನಗಳ ಕಾಲ ಕ್ವಾರಂಟೈನ್‌ಗೆ ಒಳಪಟ್ಟಿದೆ. 

ಸಿಡ್ನಿಯಲ್ಲಿಳಿದ ಟೀಂ ಇಂಡಿಯಾ ಆಟಗಾರರಿಗೆ 14 ದಿನ ಕ್ವಾರಂಟೈನ್..!

ನವೆಂಬರ್ 27ರಿಂದ ಡಿಸೆಂಬರ್ 08ರವರೆಗೆ ಟೀಂ ಇಂಡಿಯಾ 3 ಏಕದಿನ ಬಳಿಕ 3 ಟಿ20 ಪಂದ್ಯಗಳ ಸರಣಿಯಾಡಲಿದೆ. ಸೀಮಿತ ಓವರ್‌ಗಳ ಸರಣಿಯಲ್ಲಿ ಟೀಂ ಇಂಡಿಯಾ ರೆಟ್ರೋ ಜೆರ್ಸಿ ತೊಟ್ಟು ಕಣಕ್ಕಿಳಿಯುವ ವಿಚಾರ ಬಯಲಾಗುತ್ತಿದ್ದಂತೆ ಸಾಮಾಜಿಕ ಜಾಲತಾಣಗಳಲ್ಲಿ ಮೆಚ್ಚುಗೆಯ ಸುರಿಮಳೆಯೇ ಹರಿದುಬರಲಾರಂಭಿಸಿದೆ.