ವಿರಾಟ್ ಕೊಹ್ಲಿ ಏಷ್ಯಾದ ಎರಡನೇ ಶ್ರೀಮಂತ ಅಥ್ಲೀಟ್..! ಹಾಗಿದ್ರೆ ಮೊದಲ ಸ್ಥಾನದಲ್ಲಿರೋರು ಯಾರು?

* ಜಗತ್ತಿನ 100 ಶ್ರೀಮಂತ ಅಥ್ಲೀಟ್‌ಗಳ ಪಟ್ಟಿಯಲ್ಲಿ ಏಷ್ಯಾದ ಇಬ್ಬರಿಗೆ ಸ್ಥಾನ
* ಏಷ್ಯಾದ ಶ್ರೀಮಂತ ಅಥ್ಲೀಟ್‌ಗಳ ಪಟ್ಟಿಯಲ್ಲಿ ವಿರಾಟ್ ಕೊಹ್ಲಿಗೆ ಎರಡನೇ ಸ್ಥಾನ
* ಜಗತ್ತಿನ ಶ್ರೀಮಂತ ಅಥ್ಲೀಟ್‌ಗಳ ಪೈಕಿ ವಿರಾಟ್ ಕೊಹ್ಲಿ 61ನೇ ಸ್ಥಾನ

Virat Kohli is Asia second highest paid athlete first is Naomi Osaka kvn

ನವದೆಹಲಿ(ಜು.26): ಜಗತ್ತಿನ 100 ಶ್ರೀಮಂತ ಅಥ್ಲೀಟ್‌ಗಳ ಪೈಕಿ ಏಷ್ಯಾದ ಇಬ್ಬರು ಅಥ್ಲೀಟ್‌ಗಳು ಮಾತ್ರ ಸ್ಥಾನ ಪಡೆಯುವಲ್ಲಿ ಸಫಲರಾಗಿದ್ದಾರೆ. ಈ ಪೈಕಿ ಟೀಂ ಇಂಡಿಯಾ ಮಾಜಿ ನಾಯಕ ಹಾಗೂ ಸ್ಟಾರ್ ಕ್ರಿಕೆಟಿಗ ವಿರಾಟ್ ಕೊಹ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ವಿರಾಟ್ ಕೊಹ್ಲಿಯವರ ನಿವ್ವಳ ಮೌಲ್ಯ 1000 ಕೋಟಿ ರುಪಾಯಿ ಗಡಿ ದಾಟಿದೆ. 2022ರ ಸ್ಪೋರ್ಟಿಕೊ ಸರ್ವೆ ಪ್ರಕಾರ ಜಗತ್ತಿನ ಶ್ರೀಮಂತ ಅಥ್ಲೀಟ್‌ಗಳ (highest paid athlete) ಪೈಕಿ ವಿರಾಟ್ ಕೊಹ್ಲಿ 61ನೇ ಸ್ಥಾನ ಪಡೆದುಕೊಂಡಿದ್ದಾರೆ. ಇನ್ನು ಏಷ್ಯಾದ ಶ್ರೀಮಂತ ಕ್ರೀಡಾಪಟುಗಳ ಪಟ್ಟಿಯಲ್ಲಿ ಕೊಹ್ಲಿ ಎರಡನೇ ಸ್ಥಾನದಲ್ಲಿದ್ದಾರೆ.

ಜಗತ್ತಿನ ಶ್ರೀಮಂತ ಟಿ20 ಲೀಗ್ ಟೂರ್ನಿಯಾದ ಇಂಡಿಯನ್ ಪ್ರೀಮಿಯರ್ ಲೀಗ್ (Indian Premier League) ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್‌ ಬೆಂಗಳೂರು (Royal Challengers Bangalore) ತಂಡವನ್ನು ಪ್ರತಿನಿಧಿಸುತ್ತಾ ಬಂದಿದ್ದಾರೆ. ಇದರ ಜತೆಗೆ ವಿರಾಟ್ ಕೊಹ್ಲಿ (Virat Kohli), ಮೂರು ಮಾದರಿಯಲ್ಲೂ ಭಾರತ ರಾಷ್ಟ್ರೀಯ ತಂಡವನ್ನು ಪ್ರತಿನಿಧಿಸುತ್ತಿದ್ದು, ಸಂಬಳ ಹಾಗೂ ಬಹುಮಾನ ರೂಪದಲ್ಲಿ ವಾರ್ಷಿಕ 2.9 ಮಿಲಿಯನ್ ಡಾಲರ್ ಹಣ ಸಂಪಾಧಿಸುತ್ತಿದ್ದಾರೆ. ಇದರ ಜತೆಗೆ ಎಂಡೋರ್ಸ್‌ಮೆಂಟ್ ರೂಪದಲ್ಲಿ ವಿರಾಟ್ ಕೊಹ್ಲಿ 31 ಮಿಲಿಯನ್ ಡಾಲರ್ ಹಣವನ್ನು ಜೇಬಿಗಿಳಿಸಿಕೊಳ್ಳುತ್ತಿದ್ದಾರೆ. 2021ಕ್ಕೆ ಹೋಲಿಸಿದರೆ ವಿರಾಟ್‌ ಕೊಹ್ಲಿ ಎರಡು ಸ್ಥಾನ ಕುಸಿತ ಕಂಡಿದ್ದಾರೆ. 2021ರ ಸ್ಪೋರ್ಟಿಕೋ ಸಮೀಕ್ಷೆಯಲ್ಲಿ ವಿರಾಟ್ ಕೊಹ್ಲಿ 59ನೇ ಸ್ಥಾನ ಪಡೆದಿದ್ದರು. ಇನ್ನು ಕ್ರಿಕೆಟ್‌ ಜಗತ್ತಿನಲ್ಲಿ ಅತಿಹೆಚ್ಚು ಆದಾಯ ಗಳಿಸುತ್ತಿರುವ ಆಟಗಾರ ವಿರಾಟ್ ಕೊಹ್ಲಿ ಎಂದು ನಿಮಗೆ ಪ್ರತ್ಯೇಕವಾಗಿ ಹೇಳಬೇಕಿಲ್ಲ ಅಲ್ಲವೇ?

ಕ್ಯಾಪ್ಟನ್ ಹರ್ಮನ್‌ಪ್ರೀತ್ ಕೌರ್‌ ವಿರುದ್ದವೇ ತಿರುಗಿ ಬಿದ್ದ ಟೀಂ ಇಂಡಿಯಾ ವಿಶ್ವಕಪ್‌ ಹೀರೋ..!

ಏಷ್ಯಾದ ಶ್ರೀಮಂತ ಅಥ್ಲೀಟ್‌ಗಳ ಪೈಕಿ ವಿರಾಟ್ ಕೊಹ್ಲಿ ಎರಡನೇ ಸ್ಥಾನದಲ್ಲಿದ್ದಾರೆ ಎಂದರೆ, ಮೊದಲ ಸ್ಥಾನದಲ್ಲಿ ಯಾರಿರಬಹುದು ಎನ್ನುವ ಕುತೂಹಲ ಖಂಡಿತವಾಗಿಯೂ ಕಾಡುತ್ತಿರಬಹುದು. ಅದಕ್ಕೆ ಉತ್ತರ ನವೊಮಿ ಒಸಾಕ. ಹೌದು, ಜಪಾನಿನ 25 ವರ್ಷದ ಟೆನಿಸ್ ತಾರೆ ನವೊಮಿ ಒಸಾಕ(Naomi Osaka), ಏಷ್ಯಾದ ಶ್ರೀಮಂತ ಅಥ್ಲೀಟ್ ಎನಿಸಿಕೊಂಡಿದ್ದಾರೆ. ಎರಡು ಬಾರಿ ಯುಎಸ್ ಓಪನ್ (US Open) ಹಾಗೂ ಎರಡು ಬಾರಿ ಆಸ್ಟ್ರೇಲಿಯನ್ ಒಪನ್‌ (Australian Open) ಹೀಗೆ 4 ಗ್ರ್ಯಾನ್‌ ಸ್ಲಾಂ ಒಡತಿಯಾಗಿರುವ ನವೊಮಿ ಒಸಾಕ, ಜಗತ್ತಿನ ಶ್ರೀಮಂತ ಅಥ್ಲೀಟ್‌ಗಳ ಪೈಕಿ 20ನೇ ಹಾಗೂ ಏಷ್ಯಾದ ಮೊದಲ ಶ್ರೀಮಂತ ಅಥ್ಲೀಟ್‌ ಎನ್ನುವ ಹಿರಿಮೆಗೆ ಪಾತ್ರರಾಗಿದ್ದಾರೆ.

ಪಾಕ್‌ ಅಂಡರ್ 23 ಏಷ್ಯಾಕಪ್ ಗೆದ್ದ ಬೆನ್ನಲ್ಲೇ ಪಠಾಣ್ ಟ್ರೋಲ್‌; ಇರ್ಫಾನ್ ಒಂದೇ ಟ್ವೀಟ್‌ಗೆ ಟ್ರೋಲರ್ಸ್‌ ಸೈಲೆಂಟ್..!

ನವೊಮಿ ಒಸಾಕ, 2022ರಲ್ಲಿ ವಾರ್ಷಿಕ ಸರಾಸರಿ 53.2 ಮಿಲಿಯನ್ ಡಾಲರ್ ಆದಾಯವನ್ನು ಸಂಪಾದಿಸಿದ್ದಾರೆ. ಈ ಪೈಕಿ 1.2 ಮಿಲಿಯನ್ ಡಾಲರ್ ಬಹುಮಾನ ರೂಪದಲ್ಲಿ ಬಂದಿದ್ದರೆ, ಇನ್ನುಳಿದ 52 ಮಿಲಿಯನ್ ಡಾಲರ್ ಹಣ ಎಂಡೋರ್ಸ್‌ಮೆಂಟ್‌ ರೂಪದಲ್ಲಿ ಬಂದಿದೆ. ಇನ್ನು ಜಗತ್ತಿನ ಶ್ರೀಮಂತ ಟೆನಿಸ್ ಆಟಗಾರ್ತಿಯರ ಪಟ್ಟಿಯಲ್ಲಿ ಒಸಾಕ, ಎರಡನೇ ಸ್ಥಾನದಲ್ಲಿದ್ದಾರೆ.

Latest Videos
Follow Us:
Download App:
  • android
  • ios