ಪಾಕ್‌ ಅಂಡರ್ 23 ಏಷ್ಯಾಕಪ್ ಗೆದ್ದ ಬೆನ್ನಲ್ಲೇ ಪಠಾಣ್ ಟ್ರೋಲ್‌; ಇರ್ಫಾನ್ ಒಂದೇ ಟ್ವೀಟ್‌ಗೆ ಟ್ರೋಲರ್ಸ್‌ ಸೈಲೆಂಟ್..!

ಅಂಡರ್‌ 23 ಏಷ್ಯಾಕಪ್ ಗೆದ್ದು ಬೀಗಿದ ಪಾಕಿಸ್ತಾನ 
ಭಾರತ ಎದುರು ಪಾಕ್ ಗೆಲ್ಲುತ್ತಿದ್ದಂತೆಯೇ ಇರ್ಫಾನ್ ಪಠಾಣ್ ಟ್ರೋಲ್
ಟ್ರೋಲ್ ಮಾಡುವವರ ಬಾಯಿ ಮುಚ್ಚಿಸಿದ ಟೀಂ ಇಂಡಿಯಾ ಮಾಜಿ ಆಲ್ರೌಂಡರ್

Irfan Pathan goes ballistic as Pakistan fans mock former star over viral tweet after Emerging Teams Asia Cup final kvn

ಬೆಂಗಳೂರು(ಜು.25): ಇತ್ತೀಚೆಗೆ 5ನೇ ಆವೃತ್ತಿಯ ಅಂಡರ್‌-23 ಏಷ್ಯಾಕಪ್‌ ಟೂರ್ನಿಯ ಫೈನಲ್‌ನಲ್ಲಿ ಭಾರತ 'ಎ' ವಿರುದ್ದ ಪಾಕಿಸ್ತಾನ 'ಎ' ತಂಡವು ಭರ್ಜರಿ ಗೆಲುವು ಸಾಧಿಸುವ ಮೂಲಕ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಭಾರತ 'ಎ' ವಿರುದ್ದ ಪಾಕಿಸ್ತಾನ 'ಎ' ತಂಡವು ಗೆಲುವು ಸಾಧಿಸುತ್ತಿದ್ದಂತೆಯೇ ಪಾಕ್ ತಂಡದ ನಾಯಕ ಬಾಬರ್ ಅಜಂ, ಮಾಜಿ ವೇಗಿ ಶೋಯೆಬ್ ಅಖ್ತರ್ ಸೇರಿದಂತೆ ಹಲವು ಕ್ರಿಕೆಟಿಗರು ಗ್ರೀನ್ ಆರ್ಮಿಗೆ ಶುಭ ಕೋರಿದ್ದಾರೆ.  ಇನ್ನು ಫೈನಲ್‌ ಪಂದ್ಯದ ವೇಳೆ ಭಾರತದ ಸಾಯಿ ಸುದರ್ಶನ್ ಔಟ್ ಆದ ಎಸೆತ ನೋ ಬಾಲ್ ಆಗಿತ್ತು ಎನ್ನುವ ಕುರಿತಂತೆ ಸಾಕಷ್ಟು ಚರ್ಚೆಗಳು ನಡೆದಿದ್ದವು. ಇದೀಗ ಪಾಕಿಸ್ತಾನದ ಫ್ಯಾನ್ಸ್‌ಗಳು, ಭಾರತ ತಂಡವು ಸೋಲುತ್ತಿದ್ದಂತೆಯೇ ಟೀಂ ಇಂಡಿಯಾ ಮಾಜಿ ಆಲ್ರೌಂಡರ್ ಇರ್ಫಾನ್ ಪಠಾಣ್ ಅವರನ್ನು ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ಮಾಡಲಾರಂಭಿಸಿದ್ದಾರೆ. ಇದಕ್ಕೆ ಪಠಾಣ್ ಅವರೆಲ್ಲರಿಗೂ ಮುಟ್ಟಿನೋಡಿಕೊಳ್ಳುವಂತಹ ಉತ್ತರ ನೀಡಿದ್ದಾರೆ.

ಇಂಟ್ರೆಸ್ಟಿಂಗ್ ಸಂಗತಿಯೆಂದರೆ, ಈ ಮೊದಲು, ಕಳೆದ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ, ಪಾಕಿಸ್ತಾನ ಎದುರು ರೋಚಕ ಜಯ ಸಾಧಿಸಿತ್ತು. ವಿರಾಟ್ ಕೊಹ್ಲಿ ಕೆಚ್ಚೆದೆಯ ಬ್ಯಾಟಿಂಗ್ ಮೂಲಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಮೆಲ್ಬರ್ನ್‌ನಲ್ಲಿ ಭಾನುವಾರ ನಡೆದಿದ್ದ ಆ ಪಂದ್ಯದಲ್ಲಿ ಟೀಂ ಇಂಡಿಯಾ ಗೆಲುವು ಸಾಧಿಸುತ್ತಿದ್ದಂತೆಯೇ ಇರ್ಫಾನ್‌ ಪಠಾಣ್‌, ನೆರೆಹೊರೆಯವರೇ, ಭಾನುವಾರ ಹೇಗಿತ್ತು ಎಂದು ಟ್ವೀಟ್ ಮಾಡುವ ಮೂಲಕ ಟ್ರೋಲ್ ಮಾಡಿದ್ದರು. ಇದೀಗ ಕಳೆದ ಭಾನುವಾರ ಅಂಡರ್ 23 ಏಷ್ಯಾಕಪ್‌ ಫೈನಲ್‌ನಲ್ಲಿ ಭಾರತ 'ಎ' ವಿರುದ್ದ ಪಾಕಿಸ್ತಾನ 'ಎ' ತಂಡವು ಗೆಲುವು ಸಾಧಿಸುತ್ತಿದ್ದಂತೆಯೇ ಪಾಕ್‌ ಅಭಿಮಾನಿಗಳು ಇರ್ಫಾನ್ ಪಠಾಣ್ ಅವರ ಹಳೆಯ ಟ್ವೀಟ್‌ ನೆನಪಿಟ್ಟುಕೊಂಡು ಟ್ರೋಲ್ ಮಾಡಲಾರಂಭಿಸಿದ್ದರು.

Ind vs WI: ಭಾರತ ಎದುರಿನ ಏಕದಿನ ಸರಣಿಗೆ ವೆಸ್ಟ್ ಇಂಡೀಸ್ ತಂಡ ಪ್ರಕಟ..! ತಂಡದಲ್ಲಿ ಅಚ್ಚರಿಯ ಆಯ್ಕೆ

ಹೀಗಿತ್ತು ನೋಡಿ ಪಾಕ್ ಫ್ಯಾನ್ಸ್, ಇರ್ಫಾನ್ ಪಠಾಣ್ ಅವರನ್ನು ಟ್ರೋಲ್ ಮಾಡಿದ ರೀತಿ:

ಇನ್ನು ಪಾಕಿಸ್ತಾನ ಫ್ಯಾನ್ಸ್‌ ತಮ್ಮನ್ನು ಟ್ರೋಲ್ ಮಾಡುತ್ತಿರುವ ವಿಚಾರ ಬೆಳಕಿಗೆ ಬಂದ ಬೆನ್ನಲ್ಲೇ ಮತ್ತೊಮ್ಮೆ ಪಾಕ್‌ ಫ್ಯಾನ್ಸ್‌ ಮುಟ್ಟಿನೋಡಿಕೊಳ್ಳುವಂತಹ ತಿರುಗೇಟನ್ನು ಟ್ವೀಟ್ ಮೂಲಕವೇ ನೀಡಿದ್ದಾರೆ. ಒಂದು ಭಾನುವಾರದ ಟ್ವೀಟ್‌ ಇಲ್ಲಿತನಕ ನಿಮಗೆ ಮರೆಯೋಕೆ ಸಾಧ್ಯವಾಗಿಲ್ಲವಲ್ಲ. ಎಷ್ಟೊಂದು ಸಮಯದಿಂದ ನೀವು ಖಾಲಿ ಕೂತಿದ್ದೀರಾ ಎಂದು ಟ್ವೀಟ್ ಮಾಡುವ ಮೂಲಕ ನಿಮಗೇನು ಬೇರೆ ಕೆಲಸ ಇಲ್ಲವಾ ಎಂಬರ್ಥದಲ್ಲಿ ಪಾಕ್‌ ಫ್ಯಾನ್ಸ್‌ಗೆ ಛಡಿಯೇಟು ನೀಡಿದ್ದಾರೆ. ಇನ್ನು ಇರ್ಫಾನ್ ಪಠಾಣ್ ನೀಡಿದ ಈ ಏಟಿಗೆ ಪಾಕ್ ಟ್ರೋಲರ್ಸ್‌ ಫುಲ್ ಸೈಲೆಂಟ್ ಆಗಿದ್ದಾರೆ.

ಪಾಕಿಸ್ತಾನಕ್ಕೆ ಮಣಿದ ಭಾರತ!

ಅಂಡರ್‌-23 ಉದಯೋನ್ಮುಖ ಆಟಗಾರರ ಏಷ್ಯಾಕಪ್‌ ಏಕದಿನ ಕ್ರಿಕೆಟ್‌ ಟೂರ್ನಿಯ ಫೈನಲ್‌ನಲ್ಲಿ ಭಾರತ, ಪಾಕಿಸ್ತಾನ ವಿರುದ್ಧ 128 ರನ್‌ ಹೀನಾಯ ಸೋಲು ಅನುಭವಿಸಿತು. ಕಳೆದ ಬಾರಿ ಚಾಂಪಿಯನ್‌ ಆಗಿದ್ದ ಪಾಕಿಸ್ತಾನ, ಸತತ 2ನೇ ಬಾರಿಗೆ ಟ್ರೋಫಿ ಎತ್ತಿಹಿಡಿದು ಸಂಭ್ರಮಿಸಿತು.

ಎಮರ್ಜಿಂಗ್ ಏಷ್ಯಾಕಪ್ ಫೈನಲ್‌ನಲ್ಲಿ ಭಾರತಕ್ಕೆ ಶಾಕ್, ಪಾಕಿಸ್ತಾನ ಎ ವಿರುದ್ಧ 128 ರನ್ ಸೋಲು!

ಭಾರತ ನಡೆದ ಪಂದ್ಯದಲ್ಲಿ ಟಾಸ್‌ ಗೆದ್ದು ಮೊದಲು ಫೀಲ್ಡ್‌ ಮಾಡುವ ಭಾರತದ ನಿರ್ಧಾರ ಕೈಹಿಡಿಯಲಿಲ್ಲ. ತಯ್ಯಬ್‌ ತಾಹಿರ್‌(71 ಎಸೆತದಲ್ಲಿ 108)ರ ಶತಕದ ನೆರವಿನಿಂದ ಪಾಕಿಸ್ತಾನ 50 ಓವರಲ್ಲಿ 8 ವಿಕೆಟ್‌ಗೆ 352 ರನ್‌ ಕಲೆಹಾಕಿತು. ಭಾರತ 40 ಓವರಲ್ಲಿ 224 ರನ್‌ಗೆ ಆಲೌಟ್‌ ಆಗಿ ಸೋಲೊಪ್ಪಿಕೊಂಡಿತು.

ಬೃಹತ್‌ ಗುರಿ ಬೆನ್ನತ್ತಲು ಇಳಿದ ಭಾರತ, ಮೊದಲ ವಿಕೆಟ್‌ಗೆ 64 ರನ್‌ ಜೊತೆಯಾಟ ಕಂಡಿತು. ಸಾಯಿ ಸುದರ್ಶನ್‌(29) ಔಟಾದ ಎಸೆತ ನೋಬಾಲ್‌ನಂತೆ ಕಂಡುಬಂದರೂ ಅಂಪೈರ್‌ಗಳು ಮರುಪರಿಶೀಲಿಸಲಿಲ್ಲ. ಬಳಿಕ ನಿಕಿನ್‌ ಜೋಸ್‌(11) ಕೂಡ ವಿವಾದಾತ್ಮಕ ತೀರ್ಪಿಗೆ ಬಲಿಯಾದರು. ಅಭಿಷೇಕ್‌ ಶರ್ಮಾ(61) ಹೋರಾಟಕ್ಕೆ ಸೂಕ್ತ ಬೆಂಬಲ ಸಿಗಲಿಲ್ಲ. ನಾಯಕ ಯಶ್‌ ಧುಳ್‌(39) ಮತ್ತೊಂದು ದೊಡ್ಡ ಇನ್ನಿಂಗ್ಸ್‌ ಕಟ್ಟಲು ವಿಫಲರಾದರು. ರಿಯಾನ್‌ ಪರಾಗ್‌(14), ಧೃವ್‌ ಜುರೆಲ್‌(09) ಸಹ ತಂಡಕ್ಕೆ ಆಸರೆಯಾಗಲಿಲ್ಲ.

ಇದಕ್ಕೂ ಮುನ್ನ ಪಾಕಿಸ್ತಾನ ಮೊದಲ ವಿಕೆಟ್‌ಗೆ 121 ರನ್‌ ಜೊತೆಯಾಟ ಪಡೆಯಿತು. ಸೈಮ್‌ ಆಯುಬ್‌(59) ಹಾಗೂ ಶಾಹಿಬ್‌ಜಾದಾ ಫರ್ಹಾನ್‌(65) ಅರ್ಧಶತಕ ಸಿಡಿಸಿದರು. 187 ರನ್‌ಗೆ 5 ವಿಕೆಟ್‌ ಕಳೆದುಕೊಂಡಿದ್ದ ಪಾಕಿಸ್ತಾನಕ್ಕೆ ತಯ್ಯಬ್‌ರ ಸ್ಫೋಟಕ ಆಟ ನೆರವಾಯಿತು. ಮುಬಾಸಿರ್‌ ಖಾನ್‌(35) ಜೊತೆ 6ನೇ ವಿಕೆಟ್‌ಗೆ ತಯ್ಯಬ್‌ 126 ರನ್‌ ಸೇರಿಸಿ ತಂಡ ಬೃಹತ್‌ ಮೊತ್ತ ಪೇರಿಸಲು ಕಾರಣರಾದರು. ಗುಂಪು ಹಂತದಲ್ಲಿ ಪಾಕಿಸ್ತಾನವನ್ನು ಬಗ್ಗುಬಡಿದಿದ್ದ ಭಾರತ, ಫೈನಲ್‌ನಲ್ಲಿ ಬದ್ಧವೈರಿಗೆ ಶರಣಾಯಿತು.

Latest Videos
Follow Us:
Download App:
  • android
  • ios