ವಿರಾಟ್ ಕೊಹ್ಲಿ, ಟೀಮ್ ಇಂಡಿಯಾದ ಸ್ಟಾರ್ ಕ್ರಿಕೆಟಿಗ, ಐಪಿಎಲ್ 2024 ರಲ್ಲಿ ಉತ್ತಮ ಫಾರ್ಮ್‌ನಲ್ಲಿದ್ದಾರೆ. ಆರ್‌ಸಿಬಿ ತಂಡವು ಈ ಸೀಸನ್‌ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದೆ. ಇತ್ತೀಚೆಗೆ, ಕೊಹ್ಲಿ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಿಂದ ಎಲ್ಲಾ ಬ್ರಾಂಡ್ ಪ್ರಚಾರದ ಪೋಸ್ಟ್‌ಗಳನ್ನು ಡಿಲೀಟ್ ಮಾಡಿ ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದ್ದಾರೆ. ಇದಕ್ಕೆ ಕಾರಣ ತಿಳಿದಿಲ್ಲ. ಕೊಹ್ಲಿ 271 ಮಿಲಿಯನ್ ಇನ್‌ಸ್ಟಾಗ್ರಾಮ್ ಫಾಲೋವರ್ಸ್ ಹೊಂದಿದ್ದಾರೆ.
ಟೀಮ್ ಇಂಡಿಯಾದ ಸ್ಟಾರ್ ಕ್ರಿಕೆಟಿಗ ವಿರಾಟ್ ಕೊಹ್ಲಿ ತಮ್ಮ ಸ್ಥಿತವಾದ ಬ್ಯಾಟಿಂಗ್ ಪ್ರದರ್ಶನ ಮತ್ತು ವಿಶಿಷ್ಟ ಸಾಹಸಗಳಿಗೆ ಹೆಸರುವಾಸಿಯಾಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಯಾವಾಗಲೂ ತಮ್ಮ ಕೆಲವೊಂದು ಸಾಧನೆಗಳ ಬಗ್ಗೆ ಪೋಸ್ಟ್‌ಗಳನ್ನು ಯಾವಾಗಲೂ ಹಂಚಿಕೊಳ್ಳುತ್ತಾರೆ. ಇದೀಗ ಐಪಿಎಲ್ 2025 ನಡೆಯುತ್ತಿರುವ ಸಂದರ್ಭದಲ್ಲಿ, ವಿರಾಟ್ ಕೊಹ್ಲಿ ಅವರ ಫಾರ್ಮ್ ಅತ್ಯುತ್ತಮವಾಗಿದೆ. ಆರ್‌ಸಿಬಿ ತಂಡವು ಕೂಡ ಈ ಸೀಸನ್‌ನಲ್ಲಿ ಉತ್ತಮ ಪ್ರದರ್ಶನವನ್ನು ನೀಡುತ್ತಿದೆ. ಈಗ ಆಡಿದ 4 ಪಂದ್ಯಗಳಲ್ಲಿ 3ರಲ್ಲಿ ಗೆದ್ದಿದೆ.
ಒಂದೆಡೆ ಆರ್‌ಸಿಬಿ ತಂಡವು ತನ್ನ ಪ್ರದರ್ಶನದಿಂದ ಎಲ್ಲರನ್ನೂ ಅಚ್ಚರಿಗೊಳಿಸಿದ್ದರೆ, ಮತ್ತೊಂದೆಡೆ ಕೊಹ್ಲಿ ಅಭಿಮಾನಿಗಳನ್ನು ಅಚ್ಚರಿಗೊಳಿಸುವಂತಹ ಕೆಲಸವನ್ನು ಮಾಡಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ಲಕ್ಷಾಂತರ ಫಾಲೋವರ್‌ಗಳನ್ನು ಹೊಂದಿರುವ ಕಿಂಗ್ ಕೊಹ್ಲಿ, ತಮ್ಮ ಇನ್‌ಸ್ಟಾಗ್ರಾಮ್ ಐಡಿಯಿಂದ ಎಲ್ಲಾ ಬ್ರಾಂಡ್ ಪ್ರಚಾರದ ಪೋಸ್ಟ್‌ಗಳನ್ನು ಡಿಲೀಟ್ ಮಾಡಿದ್ದಾರೆ. ಇಲ್ಲಿಯವರೆಗೆ ಅವರ ಪ್ರೊಫೈಲ್‌ನಲ್ಲಿ ಅನೇಕ ದೊಡ್ಡ ಕಂಪನಿಗಳ ಪ್ರಚಾರದ ಪೋಸ್ಟ್‌ಗಳಿಂದ ತುಂಬಿದ್ದವು. ಆದರೆ, ಬುಧವಾರ ಕೊಹ್ಲಿ ಎಲ್ಲ ಕಂಪನಿಗಳ ಪ್ರಚಾರದ ಪೋಸ್ಟ್‌ಗಳನ್ನು ಡಿಲೀಟ್ ಮಾಡಿದ್ದರಿಂದ ಅವರ ಅಭಿಮಾನಿಗಳು ಶಾಕ್ ಆಗಿದ್ದಾರೆ. ವಿರಾಟ್ ಕೊಹ್ಲಿ ಹೀಗೇಕೆ ಮಾಡಿದ್ದಾರೆ ಎಂದು ಕುತೂಹಲಕ್ಕೆ ಒಳಗಾಗಿದ್ದಾರೆ.
ವಿರಾಟ್ ಕೊಹ್ಲಿ ಜಾಹೀರಾತು ಪೋಸ್ಟ್ ಡಿಲೀಟ್: ವಿರಾಟ್ ಕೊಹ್ಲಿ ಬುಧವಾರ ತಮ್ಮ ಆಫೀಶಿಯಲ್ ಇನ್ಸ್ಟಾಗ್ರಾಮ್ ಅಕೌಂಟ್‌ನಿಂದ ಎಲ್ಲಾ ಬ್ರ್ಯಾಂಡ್ ಎಂಡಾರ್ಸ್‌ಮೆಂಟ್ ವಿಡಿಯೋಗಳನ್ನು ಡಿಲೀಟ್ ಮಾಡಿದ್ದಾರೆ. ಈಗ ಅವರ ಪ್ರೊಫೈಲ್ ಮೊದಲಿನ ತರಹ ಪರ್ಸನಲ್ ಪೋಸ್ಟ್ ಮಾತ್ರ ಇರೋ ಹಾಗೆ ಆಗಿದೆ. ಅವರ ಈ ದಿಢೀರ್ ನಿರ್ಧಾರಕ್ಕೆ ಫ್ಯಾನ್ಸ್ ಶಾಕ್ ಆಗಿದ್ದಾರೆ. ವಿರಾಟ್ ಏಕೆ ಹೀಗೆ ಮಾಡಿದ್ದಾರೆ ಎಂಬುದು ಯಾರಿಗೂ ಗೊತ್ತಿಲ್ಲ.
ಇದನ್ನೂ ಓದಿ: ವಿರಾಟ್ ಕೊಹ್ಲಿಯ Instagram ಟೆಕ್ನಿಕ್: 10 ಬ್ರ್ಯಾಂಡಿಂಗ್ ಸೀಕ್ರೆಟ್ ಬಹಿರಂಗ
ಜಾಗತಿಕ ಮಟ್ಟದಲ್ಲಿ ಬ್ಯಾಟಿಂಗ್ ವಿಚಾರದಲ್ಲಿ ಕಿಂಗ್ ಎನಿಸಿಕೊಂಡಿರುವ ಕೊಹ್ಲಿ, ಹಾಲಿ ಗ್ರೇಟೆಸ್ಟ್ ಆಟಗಾರರಲ್ಲಿ ಒಬ್ಬರು. ಸಾಮಾಜಿಕ ಜಾಲತಾಣದಲ್ಲಿ ಕದಂಬ ಬಾಹುಗಳನ್ನು ಹೊಂದಿರುವ ಇನ್ಸ್ಟಾಗ್ರಾಮ್ ಮತ್ತು ಎಕ್ಸ್ ಖಾತೆಯನ್ನು ಹೊಂದಿರುವ ವಿರಾಟ್ ಕೊಹ್ಲಿಗೆ ಎರಡೂ ಸೋಶಿಯಲ್ ಮೀಡಿಯಾಗಳಿಗೂ ಕೋಟ್ಯಾಂತರ ಫಾಲೋವರ್ಸ್ ಇದ್ದಾರೆ. ಕೊಹ್ಲಿಯ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಗೆ 271 ಮಿಲಿಯನ್, ಎಕ್ಸ್ ಖಾತೆಗೆ 67.7 ಮಿಲಿಯನ್ ಫಾಲೋವರ್ಸ್ ಇದ್ದಾರೆ. ಅವರ ದೊಡ್ಡ ಫ್ಯಾನ್ ಫಾಲೋಯಿಂಗ್‌ನಿಂದಾಗಿ ದೊಡ್ಡ ದೊಡ್ಡ ಕಂಪನಿಗಳು ತಮ್ಮ ಬ್ರ್ಯಾಂಡ್ ಪ್ರಮೋಷನ್‌ಗೆ ಆಫರ್ ಕೊಡುತ್ತಿದ್ದಾರೆ.
ಇನ್ನು ಕ್ರಿಕೆಟ್ ಜಗತ್ತಿನಲ್ಲಿ ಈಗ ಮಿಂಚುತ್ತಿರುವ ವಿರಾಟ್ ಕೊಹ್ಲಿಯ ಕೆರಿಯರ್ ಸಖತ್ ಆಗಿದೆ. ಕ್ರಿಕೆಟ್‌ನ ಮೂರೂ ಫಾರ್ಮೆಟ್‌ನಲ್ಲಿ (ಟೆಸ್ಟ್, ಏಕದಿನ ಹಾಗೂ ಟಿ-20) ಅದ್ಭುತವಾಗಿ ಆಟವಾಡುತ್ತಾ ಕೋಟ್ಯಾಂತರ ಅಭಿಮಾನಿಗಳನ್ನು ಇಂಪ್ರೆಸ್ ಮಾಡಿದ್ದಾರೆ. ಕಿಂಗ್ ಕೊಹ್ಲಿ ಈವರೆಗೆ 123 ಟೆಸ್ಟ್, 302 ಅಂತಾರಾಷ್ಟ್ರೀ ಏಕದಿನ (ಒಡಿಐ) ಮತ್ತು 125 ಟಿ-20 ಇಂಟರ್‌ನ್ಯಾಷನಲ್ ಮ್ಯಾಚ್ ಆಡಿದ್ದಾರೆ. ಅದರಲ್ಲಿ 9230, 1481 ಮತ್ತು 4188 ರನ್ ಗಳಿಸಿದ್ದಾರೆ. ಇದುವರೆಗೆ ಅವರ ಕೆರಿಯರ್‌ನಲ್ಲಿ 82 ಸೆಂಚುರಿ ಹೊಡೆದಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲಿ ಕೊಹ್ಲಿ ಹೆಸರಲ್ಲಿ 51 ಸೆಂಚುರಿ ಇದೆ. ಇದರ ಜೊತೆಗೆ ಇಂಡಿಯನ್ ಪ್ರೀಮಿಯರ್ ಲೀಗ್ ಎಂದರೆ ಐಪಿಎಲ್‌ನಲ್ಲೂ ಅವರದ್ದೇ ಹವಾ. ವಿರಾಟ್ ಇದುವರೆಗೆ 256 ಐಪಿಎಲ್ ಮ್ಯಾಚ್ ಆಡಿದ್ದಾರೆ. ಅದರಲ್ಲಿ 8168 ರನ್ ಗಳಿಸಿದ್ದಾರೆ. ಈ ಫಾಸ್ಟ್ ಕ್ರಿಕೆಟ್‌ನಲ್ಲಿ 8 ಸೆಂಚುರಿ ಕೂಡ ಅವರ ಹೆಸರಲ್ಲಿದೆ. ಇಂದು ಬೆಂಗಳೂರಿನಲ್ಲಿ ಆರ್‌ಸಿಬಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಪಂದ್ಯ ನಡೆಯಲಿದ್ದು, ಆರ್‌ಸಿಬಿ ಟಾಪ್ ಸ್ಥಾನಕ್ಕೆ ಎರಲು ಈ ಪಂದ್ಯದ ಗೆಲವು ತುಂಬಾ ಅಗತ್ಯವಾಗಿದೆ.
ಇದನ್ನೂ ಓದಿ: 'ನನಗೆ ಸೊಕ್ಕು, ಅಹಂ ಎನ್ನುವುದು ಇಲ್ಲ': ವಿರಾಟ್ ಕೊಹ್ಲಿ ಹೀಗಂದಿದ್ದು ಯಾಕೆ?
ಆರ್ಥಿಕವಾಗಿ ನಷ್ಟವಾಗಿದೆಯೇ?
ವಿರಾಟ್ ಕೊಹ್ಲಿ ತಮ್ಮ ಇನ್‌ಸ್ಟಾ ಖಾತೆಯಿಂದ ಬ್ರ್ಯಾಂಡ್ ಪ್ರಮೋಷನ್ ಪೋಸ್ಟ್‌ಗಳನ್ನು ಡಿಲೀಟ್ ಮಾಡಿದ್ದರಿಂದ ಅವರಿಗೆ ಯಾವುದೇ ನಷ್ಟ ಆಗುವುದಿಲ್ಲ. ಕಾರಣ ಇಂತಿಷ್ಟು ತಿಂಗಳ ಅವಧಿಯಲ್ಲಿ ತಾವು ಬ್ರ್ಯಾಂಡ್ ಪ್ರಮೋಷನ್ ಮಾಡುವುದಕ್ಕೆ ಒಪ್ಪಂದ ಮಾಡಿಕೊಂಡು ಹಣ ಪಡೆದಿರುತ್ತಾರೆ. ಇದೀಗ ಅವರು ಪೋಸ್ಟ್ ಡಿಲೀಟ್ ಮಾಡಿದ್ದರಿಂದ ಯಾವುದೇ ಆರ್ಥಿಕ ನಷ್ಟ ಆಗುವುದಿಲ್ಲ. ಕೆಲವೊಂದು ಬ್ರ್ಯಾಂಡ್‌ಗಳ ಪ್ರಮೋಷನ್ ಅವಧಿ ಮುಕ್ತಾಯ ಆಗುವುದರೊಳಗೆ ಡಿಲೀಟ್ ಮಾಡಿದ್ದರೆ, ಹಣ ಬರುವುದು ಸ್ಥಗಿತ ಆಗಬಹುದು. ಆದರೆ, ನಷ್ಟ ಆಗುವುದಿಲ್ಲ.
