Virat Kohli Playoff Fobia: ವಿರಾಟ್‌ ಕೊಹ್ಲಿ ಈ ಬಾರಿಯ ಐಪಿಎಲ್‌ನಲ್ಲೂ ತಮ್ಮ ಕಳಪೆ ಫಾರ್ಮ್‌ ಪ್ರದರ್ಶಿಸಿದ್ದಾರೆ. ವಿರಾಟ್‌ ಪ್ಲೇ ಆಫ್‌ನಲ್ಲಿ ಬೆಂಗಳೂರು ತಂಡದ ಕೈ ಹಿಡಿಯುತ್ತಾರೆ ಅಂದುಕೊಂಡಿದ್ದವರಿಗೆ ಮತ್ತೆ ಬೇಸರ ಮೂಡಿಸಿದ್ದಾರೆ. ಅವರ ಪ್ಲೇ ಆಫ್‌ ಫ್ಲಾಪ್‌ ಶೋಗೆ ಕಾರಣವೇನು?

ಮುಂಬೈ : ಡು ಆರ್ ಡೈ ಬ್ಯಾಟಲ್​​​. ಗೆಲ್ಲದೇ ವಿಧಿಯಿಲ್ಲ. ಸೋತ್ರೆ ಟೂರ್ನಿಯಿಂದ ಗಂಟು ಮೂಟೆ ಕಟ್ಟಬೇಕು. ಇಂತಹ ಹೈವೋಲ್ಟೇಜ್​​​​ ಮ್ಯಾಚ್​​​ನಲ್ಲಿ ತಂಡದ ಅಪ್ರತಿಮ ಆಟಗಾರ, ಅತ್ಯಾದ್ಭುತ ಆಟವಾಡಿ ತಂಡವನ್ನ ಫೈನಲ್​​​​​​ಗೇರಿಸ್ತಾರೆ ಎಂದು ಆರ್​ಸಿಬಿ ಫ್ಯಾನ್ಸ್ ನಂಬಿದ್ರು. ಆದರೆ ವಿರಾಟ್ ಕೊಹ್ಲಿ ಅನ್ನೋ ಬಿಗ್​ ವೆಪನ್​​​ ರಾಜಸ್ಥಾನ ವಿರುದ್ಧ ಕ್ವಾಲಿಫೈಯರ್​​​-2 ನಲ್ಲಿ ಸಿಡಿಯದೇ ಭಾರೀ ನಿರಾಸೆ ಮೂಡಿಸಿದ್ರು.

ಆರ್ಭಟಿಸೋ ಹುಮ್ಮಸ್ಸಿನೊಂದಿಗೆ ಕಣಕ್ಕಿಳಿದ ದಿ ಗ್ರೇಟ್​ ಕೊಹ್ಲಿ ಒಂದಂಕಿಗೆ ಔಟಾಗಿ, ಅಭಿಮಾನಿಗಳನ್ನ ದೇವರುಗಳನ್ನ ನಿರಾಸೆಗೆ ತಳ್ಳಿಬಿಟ್ರು. ಪ್ರಸಿದ್ಧ್ ಕೃಷ್ಣ ಬೌಲಿಂಗ್​​​ನಲ್ಲಿ 7 ರನ್​ ಗಳಿಸಿದ್ದಾಗ ಸಿಲ್ಲಿಯಾಗಿ ಕ್ಯಾಚ್​ ನೀಡಿ ಹೊರನಡೆದ್ರು. ತಾನೋರ್ವ ಅನುಭವಿ, ದೊಡ್ಡ ಸ್ಕೋರ್​​​​​ ಕಾಂಟ್ರಿಬ್ಯೂಟ್​ ನೀಡಬೇಕು ಅನ್ನೋದು ಮರೆತು ಬೇಗನೆ ವಿಕೆಟ್​ ಒಪ್ಪಿಸಿ ನಿರ್ಣಾಯಕ ಪಂದ್ಯದಲ್ಲಿ ತಂಡವನ್ನ ಮತ್ತೊಮ್ಮೆ ನಡುನೀರಲ್ಲಿ ಕೈಬಿಟ್ರು.

ಕೊಹ್ಲಿಗೆ ಕಾಡ್ತಿದೆ ಪ್ಲೇ ಆಫ್​​​ ಫೋಬಿಯಾ:
ಯೆಸ್​​ ವೀಕ್ಷಕರೇ, ಕೊಹ್ಲಿ ಅನ್ನೋ ಬ್ಯಾಟಿಂಗ್ ಮಾತ್ರ ಬರೀ ನಿನ್ನೆಯ ಪ್ಲೇ ಆಫ್​​​​ ಪಂದ್ಯದಲ್ಲಿ ಎಡವಿಲ್ಲ. ಈ ದಿಗ್ಗಜನಿಗೆ ಕಳೆದ 6 ವರ್ಷಗಳಿಂದ ಪ್ಲೇ ಆಫ್ಸ್​​ ಫೋಬಿಯಾ ಶುರುವಾಗಿದೆ. 2016 ರಿಂದ ಪ್ರಸಕ್ತ ಐಪಿಎಲ್​​ವರೆಗಿನ ನಾಕೌಟ್​ ಪಂದ್ಯಗಳಲ್ಲಿ ಕೊಹ್ಲಿ ದಯನೀಯ ವೈಫಲ್ಯ ಕಂಡಿದ್ದಾರೆ. 

ಇದನ್ನೂ ಓದಿ: ಐಪಿಎಲ್‌ ಕಪ್ ಕನಸು ಭಗ್ನ: ಗೆಲ್ಲಲಿ-ಸೋಲಲಿ RCB forever ಎಂದ ಫ್ಯಾನ್ಸ್‌..!

ವಿರಾಟ್ ಕೊಹ್ಲಿ ಈವರೆಗೆ 13 ಪ್ಲೇ ಆಫ್​​​ ಪಂದ್ಯಗಳನ್ನಾಡಿದ್ದಾರೆ. 27.60ರ ಎವರೇಜ್​​ನಲ್ಲಿ ಬರೀ 283 ರನ್​ ಗಳಿಸಿದ್ದಾರೆ. ಬಾರಿಸಿದ್ದು ಬರೀ 2 ಅರ್ಧಶಕ, ಒಂದು ಶತಕವಷ್ಟೇ. 

ನೋಡಿದ್ರಾ, ಕೊಹ್ಲಿ ಅನ್ನೋ ಸೆಂಚುರಿ ಸ್ಪೆಶಲಿಸ್ಟ್​​ನ ಪ್ಲೇ ಆಫ್​​ ಪ್ಲಾಫ್ ಶೋನ. 2016ರ ಸೀಸನ್​​​ ಬಿಟ್ರೆ, ಕೊಹ್ಲಿ ಬ್ಯಾಟ್​ ಸದ್ದು ಮಾಡಿಲ್ಲ. ಕಳೆದ ವರ್ಷ ಕೆಕೆಆರ್​ ವಿರುದ್ಧ ಫ್ಲೇ ಆಫ್​​​ನಲ್ಲಿ 39 ರನ್​ ಗಳಿಸಿದ್ದ ವಿರಾಟ್​​​, 2020 ರಲ್ಲಿ ಹೈದ್ರಾಬಾದ್​​ ವಿರುದ್ಧ ಬರೀ 6 ರನ್​ಗೆ ಸುಸ್ತಾದ್ರು. ಇನ್ನು ಈ ಸೀಸನ್​​​ನ ಎಲಿಮಿನೇಟರ್​​​​ ಪಂದ್ಯದಲ್ಲಿ ಲಕ್ನೋ ವಿರುದ್ಧ 25 ರನ್​​ಗೆ ಆಟ ನಿಲ್ಲಿಸಿ ಟೀಕೆಗೆ ಗುರಿಯಾಗಿದ್ರು.

ಕಳೆದ 14 ಆವೃತ್ತಿಯ ಐಪಿಎಲ್ ಟೂರ್ನಿಯಿಂದಲೂ ಚೊಚ್ಚಲ ಟ್ರೋಫಿಯ ಕನವರಿಕೆಯಲ್ಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಈ ಬಾರಿ ಶತಾಯಗತಾಯ ಕಪ್ ಗೆದ್ದೇ ತೀರಲಿದೆ ಎಂದು ಅಭಿಮಾನಿಗಳು ಭಾವಿಸಿದ್ದರು. ಅದರಲ್ಲೂ ಎಲಿಮಿನೇಟರ್‌ ಪಂದ್ಯದಲ್ಲಿ ಲಖನೌ ಸೂಪರ್ ಜೈಂಟ್ಸ್ ಎದುರು ಅಮೋಘ ಪ್ರದರ್ಶನ ತೋರುವ ಮೂಲಕ ಐಪಿಎಲ್‌ ಫೈನಲ್‌ಗೆ ಮತ್ತಷ್ಟು ಹತ್ತಿರವಾಗಿದ್ದ ಫಾಫ್ ಡು ಪ್ಲೆಸಿಸ್‌ ಮೇಲೆ ರೆಡ್ ಆರ್ಮಿ ಅಭಿಮಾನಿಗಳು ಬೆಟ್ಟದಷ್ಟು ನಿರೀಕ್ಷೆಯಿಟ್ಟಿದ್ದರು. ಇಷ್ಟು ವರ್ಷ ಒಂದು ಲೆಕ್ಕವಾದರೇ, ಈ ವರ್ಷ ಮತ್ತೊಂದು ಲೆಕ್ಕಾ ಎಂದು ಫ್ಯಾನ್ಸ್‌ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್‌ ಹಾಕುವ ಮೂಲಕ ಆರ್‌ಸಿಬಿ ತಂಡವನ್ನು ಹುರಿದುಂಬಿಸಿದ್ದರು. ಆರ್‌ಸಿಬಿ ಪ್ಲೇ ಆಫ್‌ಗೇರುವುದೇ ಕಷ್ಟ ಎನ್ನುವಂತ ಸಂದರ್ಭದಲ್ಲಿ ಅದೃಷ್ಟ ಕೂಡಾ ಸಾಥ್ ನೀಡಿತ್ತು. ಲೀಗ್‌ ಹಂತದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಎದುರು ಮುಂಬೈ ಇಂಡಿಯನ್ಸ್ ಗೆಲುವು ಸಾಧಿಸುವ ಮೂಲಕ ಆರ್‌ಸಿಬಿ ಪ್ಲೇ ಆಫ್ ಹಾದಿ ಸುಗಮವಾಗಿತ್ತು. ಇನ್ನು ಎಲಿಮಿನೇಟರ್‌ ಪಂದ್ಯದಲ್ಲಿ ಸ್ಟಾರ್ ಆಟಗಾರರ ವೈಫಲ್ಯದ ಹೊರತಾಗಿಯೂ ಆರ್‌ಸಿಬಿ ಉಳಿದ ಆಟಗಾರರು ತೋರಿದ ಕೆಚ್ಚೆದೆಯ ಪ್ರದರ್ಶನ ಕಂಡು ಆರ್‌ಸಿಬಿ ಅಭಿಮಾನಿಗಳಲ್ಲಿ ಈ ಸಲ ಕಪ್‌ ನಮ್ದೇ ಎನ್ನುವ ಘೋಷಣೆಗೆ ಮತ್ತಷ್ಟು ಬಲ ಬಂದಂತೆ ಆಗಿತ್ತು.

ರಾಯಲ್‌ ಚಾಲೆಂಜ​ರ್ಸ್‌ ಬೆಂಗಳೂರು(ಆರ್‌ಸಿಬಿ) ತಂಡದ ಐಪಿಎಲ್ ಕಪ್‌ ಗೆಲ್ಲುವ ಆಸೆ ಈ ಸಲವೂ ಈಡೇರಲಿಲ್ಲ. ರಾಜಸ್ಥಾನ ರಾಯಲ್ಸ್‌ ವಿರುದ್ಧ ಶುಕ್ರವಾರ ನಡೆದ ಕ್ವಾಲಿಫೈಯರ್‌-2 ಪಂದ್ಯದಲ್ಲಿ 8 ವಿಕೆಟ್‌ಗಳಿಂದ ಸೋತ ಆರ್‌ಸಿಬಿ, 15ನೇ ಆವೃತ್ತಿಯ ಐಪಿಎಲ್‌ನಿಂದ ಹೊರಬಿದ್ದಿದೆ. ಸೆಮಿಫೈನಲ್‌ನಂತಿದ್ದ ಪಂದ್ಯದಲ್ಲಿ ಆರ್‌ಸಿಬಿ ಎಲ್ಲಾ ವಿಭಾಗಗಳಲ್ಲೂ ವೈಫಲ್ಯ ಕಂಡಿತು. ಮೊದಲು ಬ್ಯಾಟರ್‌ಗಳ ಕಳಪೆ ಆಟದಿಂದಾಗಿ 20 ಓವರಲ್ಲಿ 8 ವಿಕೆಟ್‌ಗೆ ಕೇವಲ 157 ರನ್‌ ಕಲೆಹಾಕಿದರೆ, ಜೋಸ್‌ ಬಟ್ಲರ್‌ರ ಅಬ್ಬರವನ್ನು ತಡೆಯಲು ಬೌಲರ್‌ಗಳು ವಿಫಲರಾದ ಕಾರಣ ಕೇವಲ 18.1 ಓವರಲ್ಲಿ ಆರ್‌ಸಿಬಿ ರಾಯಲ್ಸ್‌ಗೆ ಶರಣಾಯಿತು.

ಇದನ್ನೂ ಓದಿ: INDIA TOUR OF SOUTH AFRICA: ಆಫ್ರಿಕಾ ಸರಣಿ ರಾಹುಲ್​​​ಗೇಕೆ ಮಹತ್ವದ್ದು..

ಒಟ್ಟಿನಲ್ಲಿ ಕೊಹ್ಲಿಗೆ ಬ್ಯಾಡ್​ಲಕ್ ವಕ್ಕರಿಸಿದೆ. ಅತ್ತ ಎರಡೂವರೆ ವರ್ಷದಿಂದ ಅಂತರಾಷ್ಟ್ರೀಯ ಕ್ರಿಕೆಟ್​​ನಲ್ಲಿ ಸೆಂಚುರಿ ಬಾರಿಸ್ತಿಲ್ಲ. ಇತ್ತ ಐಪಿಎಲ್​​ನ ಪ್ಲೇ ಆಫ್​​ ಸ್ಟೇಜ್​​ನಲ್ಲಿ ರನ್​​​​​​ ಭರಾಟೆ ನಡೆಸ್ತಿಲ್ಲ. ಕನಿಷ್ಠ ಪಕ್ಷ ಮುಂದಿನ ಸೀಸನ್​​ನಲ್ಲಾದ್ರು ಪ್ಲೇ ಆಫ್​​ ಫೋಬಿಯಾದಿಂದ ಹೊರಬಂದು, ವಿರಾಟರೂಪ ತೋರಿಸ್ತಾರಾ ಅನ್ನೋದನ್ನ ಕಾದುನೋಡಬೇಕು.