IPL 2022 ಅಂತಿಮ ಹಂತಕ್ಕೆ ಬಂದಿದ್ದು, Gujarat Titans vs Rajasthan Royals ನಡುವೆ ನಾಳೆ ಫೈನಲ್‌ ಪಂದ್ಯ ನಡೆಯಲಿದೆ. ಐಪಿಎಲ್‌ ಬೆನ್ನಲ್ಲೇ ಭಾರತ ದಕ್ಷಿಣ ಆಫ್ರಿಕಾ ಸರಣಿಗೆ ತೆರಳುತ್ತಿದ್ದು, ಹಿರಿಯರಿಗೆ ವಿಶ್ರಾಂತಿ ನೀಡಲಾಗಿದೆ. ತಂಡವನ್ನು ಕೆಎಲ್‌ ರಾಹುಲ್‌ ಮುನ್ನಡೆಸುತ್ತಿರುವುದರಿಂದ ಅವರಿಗಿದು ಮುಖ್ಯವಾದ ಸರಣಿಯಾಗಲಿದೆ. 

ಬೆಂಗಳೂರು: ನಾಳೆ 15ನೇ ಸೀಸನ್ ಐಪಿಎಲ್​​​​ ಮುಗಿದ ಬೆನ್ನಲ್ಲೇ ಜೂನ್ 9ರಿಂದ ಭಾರತ-ಸೌತ್ ಆಫ್ರಿಕಾ ಟಿ20 ಸರಣಿ ಆರಂಭವಾಗಲಿದೆ. ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ ಕನ್ನಡಿಗ ಕೆಎಲ್ ರಾಹುಲ್​ ಆಫ್ರಿಕಾ ಸಿರೀಸ್​ನಲ್ಲಿ ಭಾರತ ತಂಡವನ್ನ ಮುನ್ನಡೆಸುತ್ತಿದ್ದಾರೆ. ಸೀನಿಯರ್ಸ್​ಗೆ ರೆಸ್ಟ್​ ನೀಡಿರೋದ್ರಿಂದ ಟೀಮ್​ನಲ್ಲಿ ಆಲ್ ಮೋಸ್ಟ್​ ಜೂನಿಯರ್​ಗಳೇ ತುಂಬಿದ್ದಾರೆ. ಹೊಸ ಹುಡುಗರನ್ನ ಕಟ್ಟುಕೊಂಡು ಆಫ್ರಿಕಾ ಸಫಾರಿ ಮಾಡಬೇಕಿದೆ ರಾಹುಲ್.

ರಾಹುಲ್ ಸದ್ಯ ಮೂರು ಫಾಮ್ಯಾಟ್​ನಲ್ಲೂ ವೈಸ್ ಕ್ಯಾಪ್ಟನ್. ರೋಹಿತ್ ಅನುಪಸ್ಥಿತಿಯಲ್ಲಿ ಟೀಂ ಇಂಡಿಯಾ ಲೀಡ್ ಮಾಡ್ತಿದ್ದಾರೆ ಅಷ್ಟೆ. ಹಾಗಂದ ಮಾತ್ರಕ್ಕೆ ರೋಹಿತ್ ನಂತರ ರಾಹುಲ್ ನಾಯಕ ಅಂತ ಅಂದುಕೊಳ್ಳಬೇಡಿ. ಯಾಕಂದ್ರೆ ಅವರ ನಾಯಕತ್ವಕ್ಕೆ ಮಿಶ್ರಪ್ರತಿಕ್ರಿಯೆಗಳು ಬಂದಿವೆ. ಭವಿಷ್ಯದಲ್ಲಿ ನಾಯಕನಾಗಬೇಕು ಅಂದರೆ ರೋಹಿತ್ ಅನುಪಸ್ಥಿತಿಯಲ್ಲಿ ಟೀಂ ಇಂಡಿಯಾವನ್ನ ಉತ್ತಮವಾಗಿ ಲೀಡ್ ಮಾಡಬೇಕು. ಹಾಗೆ ಈ ಸಲದಂತೆ ಮುಂದಿನ ಸಲವೂ ಐಪಿಎಲ್​ನಲ್ಲಿ ಲಕ್ನೋ ತಂಡವನ್ನ ಯಶಸ್ವಿಯಾಗಿ ಮುನ್ನಡೆಸಬೇಕು. ಆಗ ಮಾತ್ರ ರಾಹುಲ್ ಭವಿಷ್ಯದಲ್ಲಿ ಟೀಂ ಇಂಡಿಯಾ ನಾಯಕನಾಗೋಕೆ ಸಾಧ್ಯ. ಇಲ್ಲದಿದ್ದರೆ ರೋಹಿತ್ ಬಳಿಕ ಬೇರೊಬ್ಬ ಆ ಸ್ಥಾನವನ್ನ ಆಕ್ರಮಿಸಿಕೊಂಡು ಬಿಡುತ್ತಾನೆ. ಹಾಗಾಗಿಯೇ ಆಫ್ರಿಕಾ ಸರಣಿಯನ್ನ ರಾಹುಲ್ ಒತ್ತಡದಲ್ಲಿ ಆಡಲಿದ್ದಾರೆ.

ರಾಹುಲ್ ನಾಯಕತ್ವದಲ್ಲಿ ಭಾರತ ಒಂದೂ ಪಂದ್ಯ ಗೆದ್ದಿಲ್ಲ:
ಹೌದು ಕಂಡ್ರಿ. ಕನ್ನಡಿಗ ರಾಹುಲ್ ನಾಯಕತ್ವದಲ್ಲಿ ಟೀಂ ಇಂಡಿಯಾ ಒಂದೂ ಪಂದ್ಯ ಗೆದ್ದಿಲ್ಲ. ವಿರಾಟ್ ಕೊಹ್ಲಿ ಅನುಪಸ್ಥಿತಿಯಲ್ಲಿ ಸೌತ್ ಆಫ್ರಿಕಾ ವಿರುದ್ಧದ 2ನೇ ಟೆಸ್ಟ್​ಗೆ ನಾಯಕರಾಗಿದ್ದರು. ಆದ್ರೆ ಆ ಟೆಸ್ಟ್ ಅನ್ನ ಭಾರತ ಸೋತಿತು. ಇನ್ನು ರೋಹಿತ್ ಅನುಪಸ್ಥಿತಿಯಲ್ಲಿ ಆಫ್ರಿಕಾ ವಿರುದ್ಧ ಒನ್​ಡೇ ಟೀಮ್ ಲೀಡ್ ಮಾಡಿದ್ದರು. ಆದ್ರೆ ಮೂರಕ್ಕೆ ಮೂರು ಪಂದ್ಯವನ್ನ ಸೋತು ವೈಟ್ ವಾಶ್ ಆಯ್ತು ಟೀಂ ಇಂಡಿಯಾ.

ಐಪಿಎಲ್​ನಲ್ಲಿ ರಾಹುಲ್ ಕ್ಯಾಪ್ಟನ್ಸಿ ರೆಕಾರ್ಡ್​ 50-50:
ಐಪಿಎಲ್​ನಲ್ಲಿ ಪಂಜಾಬ್ ಕಿಂಗ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ತಂಡಗಳನ್ನ ಒಟ್ಟು 42 ಪಂದ್ಯಗಳಲ್ಲಿ ರಾಹುಲ್ ಲೀಡ್ ಮಾಡಿದ್ದಾರೆ. ಗೆದ್ದಿರೋದು ಶೇಕಡ 50ರಷ್ಟು ಪಂದ್ಯವನ್ನ ಮಾತ್ರ. ಇದು ಸಹ ರಾಹುಲ್ ಟೀಂ ಇಂಡಿಯಾ ಕ್ಯಾಪ್ಟನ್ಸಿ ರೇಸ್​ನಲ್ಲಿ ಹಿನ್ನಡೆಯಾಗಿಸಿದೆ.

ಇದನ್ನೂ ಓದಿ: IPL 2022 ಬಟ್ಲರ್ ಸೆಂಚುರಿಯಿಂದ ಆರ್‌ಸಿಬಿ ಹೋರಾಟ ಅಂತ್ಯ, ಫೈನಲ್ ಪ್ರವೇಶಿಸಿದ ರಾಜಸ್ಥಾನ!

ಆಫ್ರಿಕಾ ಸರಣಿಯಲ್ಲಿ ಆಡೋದು ಮೂವರು ಸೀನಿಯರ್ಸ್ ಮಾತ್ರ:
ಯೆಸ್, ಆಫ್ರಿಕಾ ಸರಣಿಯಲ್ಲಿ ಕೆಎಲ್ ರಾಹುಲ್ ಬಿಟ್ಟರೆ ಭುವನೇಶ್ವರ್​ ಕುಮಾರ್ ಮತ್ತು ದಿನೇಶ್ ಕಾರ್ತಿಕ್ ಸ್ಥಾನ ಪಡೆದಿದ್ದಾರೆ. ಇನ್ನಿಬ್ಬರು ಸೀನಿಯರ್ಸ್ ಇದ್ದರೂ ಈ ಮೂವರಿಗಿಂತ ಏನು ಸೀನಿಯರ್ಸ್ ಅಲ್ಲ. ಉಳಿದವರು ಹೊಸಬರು. ಅಲ್ಲಿಗೆ ಹೊಸಬರನ್ನ ಕಂಟುಕೊಂಡು ಆಫ್ರಿಕಾ ಸಫಾರಿ ಮಾಡಬೇಕಿದೆ ರಾಹುಲ್.

ಟಿ20ಯಲ್ಲಿ ಅಜೇಯ ಓಟ ಮುಂದುವರೆಸಿಕೊಂಡು ಹೋಗೋ ಒತ್ತಡ:
ಟಿ20 ಕ್ರಿಕೆಟ್​ನಲ್ಲಿ ಟೀಂ ಇಂಡಿಯಾ ಸತತ 12 ಪಂದ್ಯಗಳನ್ನ ಗೆದ್ದಿದೆ. ಟಿ20 ವಿಶ್ವಕಪ್​ನ ಕೊನೆ ಮೂರು ಪಂದ್ಯ ಗೆದ್ದ ನಂತರ, ನ್ಯೂಜಿಲೆಂಡ್, ವಿಂಡೀಸ್ ಮತ್ತು ಲಂಕಾ ವಿರುದ್ಧದ ಸರಣಿಗಳಲ್ಲಿ ತಲಾ ಮೂರು ಮ್ಯಾಚ್ ಗೆದ್ದಿದೆ. ಈಗ ಈ ಅಜೇಯ ಓಟವನ್ನ ಮುಂದುವರೆಸಿಕೊಂಡು ಹೋಗೋ ಒತ್ತಡದಲ್ಲಿ ರಾಹುಲ್ ಇದ್ದಾರೆ.

ಇದನ್ನೂ ಓದಿ: ಐಪಿಎಲ್‌ ಕಪ್ ಕನಸು ಭಗ್ನ: ಗೆಲ್ಲಲಿ-ಸೋಲಲಿ RCB FOREVER ಎಂದ ಫ್ಯಾನ್ಸ್‌..!

ರಾಹುಲ್​​​ಗೆ ಇದ್ಯಾ ಪಂತ್​-ಪಾಂಡ್ಯ ಭಯ:
ರಾಹುಲ್ ಬಿಟ್ಟರೆ ಭವಿಷ್ಯದಲ್ಲಿ ಟೀಂ ಇಂಡಿಯಾ ಕ್ಯಾಪ್ಟನ್ ಆಗಲು ರಿಷಬ್ ಪಂತ್ ರೇಸ್​ನಲ್ಲಿದ್ದಾರೆ. ಈ ಸೀಸನ್ ಐಪಿಎಲ್​ನಲ್ಲಿ ಗುಜರಾತ್ ಟೈಟನ್ಸ್ ತಂಡವನ್ನ ಫೈನಲ್​ಗೇರಿಸಿರೋ ಹಾರ್ದಿಕ್ ಪಾಂಡ್ಯ ಸಹ ರೇಸ್​ಗೆ ಬಂದಿದ್ದಾರೆ. ಈ ಇಬ್ಬರನ್ನ ಹಿಂದಿಕ್ಕಿ ರಾಹುಲ್ ಟೀಂ ಇಂಡಿಯಾ ಕ್ಯಾಪ್ಟನ್ ಆಗಬೇಕು ಅಂದರೆ ಆಫ್ರಿಕಾ ಸರಣಿ ಗೆಲ್ಲಬೇಕು.