ಅನುಷ್ಕಾ ಶರ್ಮಾ ಗರ್ಭಿಣಿಯಾಗಿದ್ದಾರೆ ಎಂದು ಈ ಹಿಂದೆಯೇ ಗಾಳಿಸುದ್ದಿಗಳು ವೈರಲ್ ಆಗಿದ್ದವು. ಇನ್ನು ಈ ವಿಚಾರದ ಬಗ್ಗೆ ದಕ್ಷಿಣ ಆಫ್ರಿಕಾ ಮಾಜಿ ಕ್ರಿಕೆಟಿಗ ಹಾಗೂ ವಿರಾಟ್ ಕೊಹ್ಲಿ ಆಪ್ತ ಗೆಳೆಯ ಎಬಿ ಡಿವಿಲಿಯರ್ಸ್, ಅನುಷ್ಕಾ ಶರ್ಮಾ ಗರ್ಭಿಣಿಯಾಗಿರುವುದನ್ನು ಸೋಷಿಯಲ್ ಮೀಡಿಯಾದಲ್ಲಿ ಖಚಿತಪಡಿಸಿದ್ದರು.
ಇಸ್ಲಾಮಾಬಾದ್(ಫೆ.21): ಟೀಂ ಇಂಡಿಯಾ ದಿಗ್ಗಜ ಕ್ರಿಕೆಟಿಗ ವಿರಾಟ್ ಕೊಹ್ಲಿ ಹಾಗೂ ಖ್ಯಾತ ಬಾಲಿವುಡ್ ತಾರೆ ಅನುಷ್ಕಾ ಶರ್ಮಾ ತಮ್ಮ ಕುಟುಂಬಕ್ಕೆ ಹೊಸ ಸದಸ್ಯನ ಸೇರ್ಪಡೆಯನ್ನು ಸ್ವಾಗತಿಸಿದ್ದಾರೆ. ಮಂಗಳವಾರ ಸಂಜೆ ಈ ವಿಚಾರವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ತಮ್ಮ ಗಂಡು ಮಗನಿಗೆ ಅಕಾಯ್ ಎಂದು ಹೆಸರಿಟ್ಟಿದ್ದಾರೆ.
ಅನುಷ್ಕಾ ಶರ್ಮಾ ಗರ್ಭಿಣಿಯಾಗಿದ್ದಾರೆ ಎಂದು ಈ ಹಿಂದೆಯೇ ಗಾಳಿಸುದ್ದಿಗಳು ವೈರಲ್ ಆಗಿದ್ದವು. ಇನ್ನು ಈ ವಿಚಾರದ ಬಗ್ಗೆ ದಕ್ಷಿಣ ಆಫ್ರಿಕಾ ಮಾಜಿ ಕ್ರಿಕೆಟಿಗ ಹಾಗೂ ವಿರಾಟ್ ಕೊಹ್ಲಿ ಆಪ್ತ ಗೆಳೆಯ ಎಬಿ ಡಿವಿಲಿಯರ್ಸ್, ಅನುಷ್ಕಾ ಶರ್ಮಾ ಗರ್ಭಿಣಿಯಾಗಿರುವುದನ್ನು ಸೋಷಿಯಲ್ ಮೀಡಿಯಾದಲ್ಲಿ ಖಚಿತಪಡಿಸಿದ್ದರು. ಇದೀಗ ಸ್ವತಃ ವಿರಾಟ್ ಕೊಹ್ಲಿ, ಫೆಬ್ರವರಿ 15ರಂದು ಅಕಾಯ್ ಆಗಮನವಾಗಿದೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.
ಇನ್ನು ವಿರಾಟ್ ಕೊಹ್ಲಿ ತಮ್ಮ ಮಗನ ಆಗಮನದ ಸುದ್ದಿಯನ್ನು ಘೋಷಿಸಿದ ಬೆನ್ನಲ್ಲೇ ಭಾರತದಾದ್ಯಂತ ವಿರುಷ್ಕಾ ಅಭಿಮಾನಿಗಳು ಸಂಭ್ರಮಿಸಿದ್ದಾರೆ. ಮರಿ ವಿರಾಟ್ ಕೊಹ್ಲಿ ಆಗಮನಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ. ಇನ್ನು ಕ್ರೀಡೆಗೆ ದೇಶ, ಭಾಷೆ ಗಡಿಯ ಹಂಗಿಲ್ಲ ಎನ್ನುವಂತೆ, ಇದೀಗ ಪಾಕಿಸ್ತಾನದ ಅಭಿಮಾನಿಯೊಬ್ಬ ವಿರಾಟ್ ಕೊಹ್ಲಿ ದಂಪತಿಗೆ ಗಂಡು ಮಗ ಹುಟ್ಟಿದ್ದಕ್ಕೆ ನೆರೆಯ ಪಾಕಿಸ್ತಾನದಲ್ಲಿ ಸಿಹಿ ಹಂಚಿ ಸಂಭ್ರಮಾಚರಣೆ ಮಾಡಿದ್ದಾರೆ. ಈ ವಿಡಿಯೋವೀಗ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದೆ.
ಮಗು ಆಗಿ 5 ದಿನ ಆದ್ಮೇಲೆ ವಿಷ್ಯ ಬಹಿರಂಗ, ಪ್ರೆಗ್ನೆನ್ಸಿ ವಿಷಯಾನೂ ವಿರುಷ್ಕಾ ಗುಟ್ಟಲ್ಲಿಟ್ಟಿದ್ದೇಕೆ?
ಪಾಕಿಸ್ತಾನದ ಅಭಿಮಾನಿ ವಿರಾಟ್ ಕೊಹ್ಲಿಗೆ ಅಭಿನಂದನೆ ಸಲ್ಲಿಸಿದ್ದು ಮಾತ್ರವಲ್ಲದೇ, ಕೊಹ್ಲಿ ಹೆಸರಿನಲ್ಲಿ ಎಲ್ಲಾ ಆನ್‌ಫೀಲ್ಡ್ ರೆಕಾರ್ಡ್ ಅವರ ಮಗ ಅಕಾಯ್ ಬ್ರೇಕ್ ಮಾಡಲಿ ಎಂದು ಹಾರೈಸಿದ್ದಾರೆ.
ಇನ್ನು ಪಾಕಿಸ್ತಾನದ ವಿರುಷ್ಕಾ ಅಭಿಮಾನಿ, ಸಚಿನ್ ತೆಂಡುಲ್ಕರ್ ಹೆಜ್ಜೆಯನ್ನು ಪುತ್ರ ಅರ್ಜುನ್ ತೆಂಡುಲ್ಕರ್ ಹಿಂಬಾಲಿಸಿದಂತೆ, ವಿರಾಟ್ ಕೊಹ್ಲಿಯನ್ನು ಅವರ ಮಗ ಅಕಾಯ್ ಹಿಂಬಾಲಿಸಲಿದ್ದಾರೆ ಎಂದು ಹೇಳಿದ್ದಾರೆ.
Ranchi Test: ಭಾರತ ತಂಡ ಪ್ರಕಟ, ಇಬ್ಬರು ಸ್ಟಾರ್ ಕ್ರಿಕೆಟಿಗರು ಔಟ್..!
ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾಗೆ ಈಗಾಗಲೇ ಮೂರು ವರ್ಷದ ವಮಿಕಾ ಎನ್ನುವ ಮಗಳಿದ್ದಾಳೆ. ಇದೀಗ ವಮಿಕಾಗೆ ಆಡಲು ತಮ್ಮ ಸಿಕ್ಕಿದ್ದಾನೆ.
ಇಂಗ್ಲೆಂಡ್ ಎದುರಿನ ಟೆಸ್ಟ್ ಸರಣಿಯಿಂದ ಹೊರಗುಳಿದಿರುವ ವಿರಾಟ್ ಕೊಹ್ಲಿ:
ಭಾರತ ಹಾಗೂ ಇಂಗ್ಲೆಂಡ್ ನಡುವಿನ 5 ಪಂದ್ಯಗಳ ಟೆಸ್ಟ್ ಸರಣಿ ಸಾಗುತ್ತಿದ್ದು, ಈಗಾಗಲೇ ಮೊದಲ ಮೂರು ಪಂದ್ಯಗಳು ಮುಕ್ತಾಯವಾಗಿವೆ. ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ ಇದೇ ಮೊದಲ ಬಾರಿಗೆ ತವರಿನಲ್ಲಿ ನಡೆಯುತ್ತಿರುವ ಸಂಪೂರ್ಣ ಟೆಸ್ಟ್ ಸರಣಿಯಿಂದ ಹೊರಗುಳಿದಿದ್ದಾರೆ. ವೈಯುಕ್ತಿಕ ಕಾರಣ ನೀಡಿ ವಿರಾಟ್ ಕೊಹ್ಲಿ ಟೆಸ್ಟ್ ಸರಣಿಯಿಂದ ಹೊರಗುಳಿದಿದ್ದಾರೆ. ಇನ್ನು ವಿರಾಟ್ ಕೊಹ್ಲಿ ಅನುಪಸ್ಥಿತಿಯ ಹೊರತಾಗಿಯೂ ಮೊದಲ ಮೂರು ಪಂದ್ಯಗಳ ಅಂತ್ಯದ ವೇಳೆಗೆ 2-1ರ ಮುನ್ನಡೆ ಸಾಧಿಸಿದೆ.
