ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವಿನ ಏಕದಿನ ಸರಣಿ ಭಾನವಾರದಿಂದ ಆರಂಭಗೊಳ್ಳಲಿದೆ. ಈ ಟೂರ್ನಿಯಲ್ಲಿ ನಾಯಕ ವಿರಾಟ್ ಕೊಹ್ಲಿ ಕೆಲ ದಾಖಲೆ ನಿರ್ಮಿಸಲು ಸಜ್ಜಾಗಿದ್ದಾರೆ. 

ಚೆನ್ನೈ(ಡಿ.14): ವೆಸ್ಟ್ ಇಂಡೀಸ್ ವಿರುದ್ದದ ಟಿ20 ಸರಣಿಯಲ್ಲಿ ನಾಯಕ ವಿರಾಟ್ ಕೊಹ್ಲಿ ಸ್ಫೋಟಕ ಬ್ಯಾಟಿಂಗ್ ಮೂಲಕ ತವರಿನಲ್ಲಿ 1000 ರನ್ ಸೇರಿದಂತೆ ಹಲವು ದಾಖಲೆ ನಿರ್ಮಿಸಿದ್ದಾರೆ. ಇದೀಗ ಏಕದಿನ ಸರಣಿಯಲ್ಲೂ ಹಲವು ದಾಖಲೆ ಬರೆಯಲು ಕೊಹ್ಲಿ ಸಜ್ಜಾಗಿದ್ದಾರೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇದನ್ನೂ ಓದಿ: ವಿಂಡೀಸ್ ವಿರುದ್ಧದ ಏಕದಿನ: ಚೆನ್ನೈಗೆ ಬಂದಿಳಿದ ಭಾರತ!

ವೆಸ್ಟ್‌ಇಂಡೀಸ್‌ ವಿರುದ್ಧದ 3 ಪಂದ್ಯಗಳ ಏಕದಿನ ಸರಣಿ ಭಾನುವಾರದಿಂದ ಆರಂಭಗೊಳ್ಳಲಿದ್ದು, ಭಾರತ ತಂಡದ ನಾಯಕ ವಿರಾಟ್‌ ಕೊಹ್ಲಿ ಕಾತರದಿಂದ ಕಾಯುತ್ತಿದ್ದಾರೆ. ವಿಂಡೀಸ್‌ ವಿರುದ್ಧ ಕಳೆದ 9 ಇನ್ನಿಂಗ್ಸ್‌ಗಳಲ್ಲಿ ‘ರನ್ನಾಸುರ’ ಕೊಹ್ಲಿ 174ರ ಸರಾಸರಿಯಲ್ಲಿ ಬರೋಬ್ಬರಿ 870 ರನ್‌ ಕಲೆಹಾಕಿದ್ದಾರೆ. 6 ಶತಕ, 1 ಅರ್ಧಶತಕ ಗಳಿಸಿರುವ ವಿರಾಟ್‌, ಮತ್ತಷ್ಟುದಾಖಲೆಗಳನ್ನು ಬರೆಯುವ ಉತ್ಸಾಹದಲ್ಲಿದ್ದಾರೆ. 

ಇದನ್ನೂ ಓದಿ: ವೆಸ್ಟ್ ಇಂಡೀಸ್ ವಿರುದ್ದ ಕೊಹ್ಲಿ ಸ್ಫೋಟಕ ಬ್ಯಾಟಿಂಗ್; ಹಲವು ದಾಖಲೆ ನಿರ್ಮಾಣ!

ಏಕದಿನದಲ್ಲಿ ವಿರಾಟ್‌ 43 ಶತಕಗಳನ್ನು ಬಾರಿಸಿದ್ದು, ಸಚಿನ್‌ ತೆಂಡುಲ್ಕರ್‌ರ 49 ಶತಕಗಳ ದಾಖಲೆ ಸರಿಗಟ್ಟಲು ಇನ್ನು ಕೇವಲ 6 ಶತಕ ಬೇಕಿದೆ. ಸಚಿನ್‌ ದಾಖಲೆಯ ಸನಿಹಕ್ಕೆ ತಲುಪಲು ಕೊಹ್ಲಿ ಈ ಸರಣಿಯನ್ನು ಬಳಸಿಕೊಳ್ಳುವ ನಿರೀಕ್ಷೆ ಇದೆ.

ವಿಂಡೀಸ್‌ ವಿರುದ್ಧ ವೀರಾವೇಶ
(ಕಳೆದ 9 ಇನ್ನಿಂಗ್ಸ್‌ಗಳಲ್ಲಿ ಕೊಹ್ಲಿ ಸ್ಕೋರ್‌)
111, 140, 157*, 107, 16, 33*, 72, 120, 114 *