ಬೆಂಗಳೂರು(ಫೆ.26): ಆಸ್ಟ್ರೇಲಿಯಾ ವಿರುದ್ಧದ 2ನೇ ಟಿ20 ಪಂದ್ಯಕ್ಕೆ ಟೀಂ ಇಂಡಿಯಾ ಭರ್ಜರಿ ಸಿದ್ಧತೆ ನಡೆಸುತ್ತಿದೆ. ಮೊದಲ ಪಂದ್ಯದಲ್ಲಿ ಸೋಲಿಗೆ ಸೇಡು ತೀರಿಸಿಕೊಳ್ಳಲು ಭಾರತ ಸಜ್ಜಾಗಿದೆ. ಇದರ ಬೆನ್ನಲ್ಲೇ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ತಮ್ಮ ಖಾಸಗಿ ಭದ್ರತಾ ಸಿಬ್ಬಂದಿ ಹುಟ್ಟು ಹಬ್ಬವನ್ನ ಆಚರಿಸಿಕೊಂಡಿದ್ದಾರೆ.

ಇದನ್ನೂ ಓದಿ: ಪಾಕಿಸ್ತಾನಕ್ಕೆ ತಕ್ಕ ಪಾಠ - ಟೀಂ ಇಂಡಿಯಾ ಕ್ರಿಕೆಟಿಗರಲ್ಲಿ ಹರುಷ!

ಕೇಕ್ ಕತ್ತರಿಸಿ ಕೊಹ್ಲಿ ನೀಡಿದ ಫೈಸಲ್ ಖಾನ್ ಹುಟ್ಟು ಹಬ್ಬವನ್ನ ಆಚರಿಸಿಕೊಂಡರು. ಇದೇ ವೇಳೆ ಕೊಹ್ಲಿ ಕೇಕ್ ಕತ್ತರಿಸಿ ಫೈಸಲ್‌ಗೆ ನೀಡಿದರು. ಇಷ್ಟೇ ಅಲ್ಲ ಹುಟ್ಟುಹಬ್ಬಕ್ಕೆ ಹಾಡು ಹೇಳಿದ ಕೊಹ್ಲಿ ಫೈಸಲ್‌ಗೆ ಸರ್ಪ್ರೈಸ್ ಗಿಫ್ಟ್ ನೀಡಿದರು. ಇದೀಗ ಫೈಸಲ್ ಹುಟ್ಟು ಹಬ್ಬ ಆಚರಣೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

 

 
 
 
 
 
 
 
 
 
 
 
 
 

Sweet #viratkohli celebrates his security personnel #faizalkhan birthday while on work 👍😃😎

A post shared by Viral Bhayani (@viralbhayani) on Feb 21, 2019 at 11:29am PST

 

ಇದನ್ನೂ ಓದಿ: ಪಾಕ್ ಮೇಲೆ ಬಾಂಬ್ ದಾಳಿ: ಸೆಹ್ವಾಗ್ ಟ್ವೀಟ್ ಅದ್ಭುತ!

ವಿಶಾಪಟ್ಟಣಂದಲ್ಲಿ ನಡೆದ ಮೊದಲ ಟಿ20 ಪಂದ್ಯದಲ್ಲಿ ಭಾರತ, ಪ್ರವಾಸಿ ಆಸ್ಟ್ರೇಲಿಯಾಗೆ ಶರಣಾಗಿತ್ತು. ಇದೀಗ ಬೆಂಗಳೂರಿನಲ್ಲಿ (ಫೆ.27) 2ನೇ ಹಾಗೂ ಅಂತಿಮ ಟಿ20 ಪಂದ್ಯ ನಡೆಯಲಿದೆ. ಈ ಪಂದ್ಯದಲ್ಲಿ ಗೆದ್ದು ಸರಣಿ ಸಮಬಲ ಮಾಡಲು ಟೀಂ ಇಂಡಿಯಾ ತಯಾರಿ ನಡೆಸಿದೆ.