ಹೈದರಾಬಾದ್(ಡಿ.06): ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ಪ್ಲೇಯಿಂಗ್ ಇಲೆವೆನ್ ಬಹಿರಂಗವಾಗುತ್ತಿದ್ದಂತೆ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಳಪೆ ಪ್ರದರ್ಶನ ನೀಡುತ್ತಿದ್ದರೂ ರಿಷಬ್ ಪಂತ್‌ಗೆ ನಾಯಕ ವಿರಾಟ್ ಕೊಹ್ಲಿ ಮಣೆ ಹಾಕಿದ್ದಾರೆ. ಟೀಂ ಇಂಡಿಯಾ ನಿರ್ಧಾರ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ.

ಇದನ್ನೂ ಓದಿ: ಮೊದಲ ಟಿ20; ಭಾರತಕ್ಕೆ ಬೃಹತ್ ಟಾರ್ಗೆಟ್ ನೀಡಿದ ವೆಸ್ಟ್ ಇಂಡೀಸ್!

ರಿಷಬ್ ಪಂತ್‌ಗೆ ಅವಕಾಶ ನೀಡೋ ನಿಟ್ಟಿನಲ್ಲಿ ಅತ್ಯುತ್ತಮ ಪ್ರದರ್ಶನ ನೀಡುತ್ತಿದ್ದರೂ, ಸತತವಾಗಿ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಸಂಜು ಸಾಮ್ಸನ್ ಕಡೆಗಣಿಸಲಾಗುತ್ತಿದೆ ಅನ್ನೋ ಆರೋಪ ಹಲವು ದಿನಗಳಿಂದ ಕೇಳಿ ಬರುತ್ತಿದೆ. ಇತ್ತ ಧೋನಿ ಉತ್ತರಾಧಿಕಾರಿ ಎಂದೇ ಬಿಂಬಿಸಲ್ಪಟ್ಟಿರುವ ರಿಷಬ್ ಪಂತ್, ಟೂರ್ನಿಯಿಂದ ಟೂರ್ನಿಗೆ ಕಳಪೆ ಪ್ರದರ್ಶನ ನೀಡುತ್ತಿದ್ದಾರೆ. ಇಷ್ಟಾದರೂ ನಾಯಕ ಕೊಹ್ಲಿ, ಆಯ್ಕೆ ಸಮಿತಿ, ಕೋಚ್ ರವಿ ಶಾಸ್ತ್ರಿ, ಪಂತ್‌ಗೆ ಅವಕಾಶ ನೀಡುತ್ತಲೇ ಇದ್ದಾರೆ. ಇದು ಅಭಿಮಾನಿಗಳನ್ನು ರೊಚ್ಚಿಗೆಬ್ಬಿಸಿದೆ.

ಇದನ್ನೂ ಓದಿ: INDvWI T20: ಟಾಸ್ ಗೆದ್ದ ಟೀಂ ಇಂಡಿಯಾ ಫೀಲ್ಡಿಂಗ್; ಸಂಜುಗೆ ಮತ್ತೆ ನಿರಾಸೆ!

ವಿಂಡೀಸ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲೂ ಸ್ಯಾಮ್ಸನ್ ಬದಲು ಪಂತ್‌ಗೆ ಅವಕಾಶ ನೀಡಿರುವುದನ್ನು ಅಭಿಮಾನಿಗಳು ಪ್ರಶ್ನಿಸಿದ್ದಾರೆ. ಸಂಜು ಸಾಮ್ಸನ್ ಪದೇ ಪದೇ ತಪ್ಪು ಮಾಡುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಅನುಷ್ಕಾ ಶರ್ಮಾ ಫೋಟೋ ಲೈಕ್ ಮಾಡುತ್ತಿಲ್ಲ. ಹೀಗಾಗಿ ತಂಡಕ್ಕೆ ಆಯ್ಕೆಯಾಗುತ್ತಿಲ್ಲ ಎಂದು ಅಭಿಮಾನಿಗಳು ವ್ಯಂಗ್ಯವಾಡಿದ್ದಾರೆ.