IND vs PAK ಕೊಹ್ಲಿ ಬ್ಯಾಟಿಂಗ್‌ನಿಂದ ಸ್ಥಗಿತಗೊಂಡಿತ್ತು UPI ಟ್ರಾನ್ಸಾಕ್ಷನ್, ಶಾಪಿಂಗ್, ಕುತೂಹಲ ಮಾಹಿತಿ ಬಹಿರಂಗ!
ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯ ಹಿಂದೆಂದೂ ಕಾಣದ ಮಟ್ಟದ ರೋಚಕತೆ ಹುಟ್ಟಿಸಿತ್ತು. ವಿರಾಟ್ ಕೊಹ್ಲಿಯ ಅಬ್ಬರದ ಬ್ಯಾಟಿಂಗ್, ಕೊನೆಯ ಎಸೆತದಲ್ಲಿ ಭಾರತಕ್ಕೆ ರೋಚಕ ಗೆಲುವಿನ ಸಂಭ್ರಮ ಇನ್ನೂ ಇಳಿದಿಲ್ಲ. ಆದರೆ ಕೊಹ್ಲಿ ಈ ಸೆನ್ಸೇಷನ್ ಬ್ಯಾಟಿಂಗ್‌ನಿಂದ ಭಾರತದಲ್ಲಿ ಯುಪಿಐ ಹಣ ಟ್ರಾನ್ಸಾಕ್ಷನ್, ಶಾಪಿಂಗ್ ಸ್ಥಗಿತಗೊಂಡ ಮಾಹಿತಿಯೂ ಬಹಿರಂಗವಾಗಿದೆ.
ನವದೆಹಲಿ(ಅ.24); ಪಾಕಿಸ್ತಾನ ವಿರುದ್ದದ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾ ಗೆಲುವು ಅದೆಷ್ಟು ಸಾರಿ ನೋಡಿದರೂ ಸಾಕೆನಿಸುವುದಿಲ್ಲ. ಇಂಡೋ ಪಾಕ್ ಪಂದ್ಯದ ಪ್ರತಿ ಎಸೆತವನ್ನೂ ಅಭಿಮಾನಿಗಳು ಕಣ್ಣ ರೆಪ್ಪೆ ಮಿಟುಕಿಸದೆ ನೋಡಿದ್ದಾರೆ. ಅದರಲ್ಲೂ ವಿರಾಟ್ ಕೊಹ್ಲಿ ಅದ್ಭುತ ಬ್ಯಾಟಿಂಗ್ ಅದೆಷ್ಟೇ ಹೊಗಳಿದರೂ ಸಾಲುತ್ತಿಲ್ಲ. ಆದರೆ ವಿರಾಟ್ ಕೊಹ್ಲಿ ಈ ರೋಚಕ ಬ್ಯಾಟಿಂಗ್ ಇ ಕಾಮರ್ಸ್ ಹಾಗೂ ಭಾರತದ ಯುಪಿಐ ಟ್ರಾನ್ಸಾಕ್ಷನ್ ಮೇಲೆ ತೀವ್ರ ಹೊಡೆತ ನೀಡಿದೆ. ಹೌದು, ಅಂಕಿ ಅಂಶಗಳ ಪ್ರಕಾರ ಅಕ್ಟೋಬರ್ 23 ರ ಭಾನುವಾರ ದೀಪಾವಳಿ ಹಬ್ಬ. ಈ ದಿನ ಸಾಮಾನ್ಯವಾಗಿ ಅತೀ ಹೆಚ್ಚು ಆನ್‌ಲೈನ್ ಶಾಪಿಂಗ್, ಫುಡ್ ಆರ್ಡರ್ ನಡೆಯತ್ತದೆ. ಆದರೆ ಯಾವಾಗ ವಿರಾಟ್ ಕೊಹ್ಲಿ ಅಬ್ಬರದ ಬ್ಯಾಟಿಂಗ್ ಆರಂಭಗೊಂಡಿತು, ಭಾರತದಲ್ಲಿ ಆನ್‌ಲೈನ್ ಶಾಪಿಂಗ್, ಯುಪಿಐ ಟ್ರಾನ್ಸಾಕ್ಷನ್ ಸಂಪೂರ್ಣವಾಗಿ ಪಾತಾಳಕ್ಕೆ ಕುಸಿದಿದೆ. ಎಲ್ಲರೂ ಶಾಪಿಂಗ್ ಮಾಡುವುದನ್ನು ಬಿಟ್ಟು ಪಂದ್ಯ ವೀಕ್ಷಿಸುವುದರಲ್ಲೇ ಮಗ್ನರಾಗಿದ್ದಾರೆ. ಈ ಕುರಿತು ಭಾರತ್ ಪೇ ಯುಪಿಐ ಟ್ರಾನ್ಸಾಕ್ಷನ್ ಅಂಕಿ ಅಂಶ ಬಹಿರಂಗವಾಗಿದೆ.
ಭಾರತ ಹಾಗೂ ಪಾಕಿಸ್ತಾನ ಟಿ20 ವಿಶ್ವಕಪ್ ಪಂದ್ಯ ಅಭಿಮಾನಿಗಳ ಎದಬಡೆತ ಮಾತ್ರವಲ್ಲ, ಟೆನ್ಶನ್, ಬಿಪಿ ಎಲ್ಲವನ್ನೂ ಒಂದು ಸ್ವಲ್ಪ ಮಟ್ಟಿಗಾದರೂ ಹೆಚ್ಚು ಕಡಿಮೆ ಮಾಡಿದ ಪಂದ್ಯ. ಕೊನೆಯ ಎಸೆತದವರೆಗೂ ಆತಂಕ, ಇದರ ನಡುವೆ ಅಸಾಧ್ಯವಾಗಿದ್ದ ಟಾರ್ಗೆಟ್ ಚೇಸ್ ಮಾಡಿದ ವಿರಾಟ್ ಕೊಹ್ಲಿ ಒಂದೊಂದು ಎಸೆತ ಎದುರಿಸುವಾಗಲೂ ಅದೇ ಕುತೂಹಲ, ಅದೇ ಆತಂಕ, ಅದೇ ಒತ್ತಡ ಪಂದ್ಯ ವೀಕ್ಷಿಸಿದವರಿಗೂ ಇತ್ತು. ಹೀಗಾಗಿ ಎಲ್ಲರೂ ಪಂದ್ಯ ನೋಡುತ್ತಲೇ, ಏನಾಗುತ್ತೆ ಎಂದು ಕಣ್ಣು ಮಿಟುಕಿಸದೆ ನೋಡಿದ್ದಾರೆ. ಇದರಿಂದ ಈ ಸಮಯದಲ್ಲಿ ಟ್ರಾನ್ಸಾಕ್ಷನ್ ರೇಟ್ ಪಾತಾಳಕ್ಕೆ ಕುಸಿದಿದೆ.
ಇದೇ ಮೊದಲ ಬಾರಿಗೆ ಮೈದಾನದಲ್ಲಿ ಕಣ್ಣೀರಿಟ್ಟ ಕೊಹ್ಲಿ, ಚಾಂಪಿಯನ್ಸ್ ಕಿಂಗ್‌ಗೆ ದಿಗ್ಗಜರ ಸಲಾಂ!
ಅಕ್ಟೋಬರ್ 23 ರ ಬೆಳಗ್ಗೆಯಿಂದ ಮಧ್ಯಾಹ್ನ 1.30ರ ವರೆಗೆ ಅತೀ ಹೆಚ್ಚು ಆನ್‌ಲೈನ್ ಶಾಪಿಂಗ್ ನಡಿದೆದಿ. ಯುಪಿಐ ಟ್ರಾನ್ಸಾಕ್ಷನ್ ಸಂಖ್ಯೆ ಹಾಗೂ ಮೊತ್ತವೂ ಗಣನೀಯ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ಬೆಳಗ್ಗೆ 10.30 ರಿಂದ ಮಧ್ಯಾಹ್ನ 12.30ರ ನಡುವಿನ ಶಾಂಪಿಂಗ್ ಹಾಗೂ ಹಣದ ಟ್ರಾನ್ಸಾಕ್ಷನ್‌ಗೆ ಬೆಳಗ್ಗೆ 9 ಗಂಟೆಗೆ ಹೋಲಿಸಿದರೆ ಶೇಕಡಾ 15ರಷ್ಟು ಹೆಚ್ಛಳವಾಗಿತ್ತು.
ಪಾಕಿಸ್ತಾನ ಬ್ಯಾಟಿಂಗ್ ಆರಂಭವಾದಾಗ ಯುಪಿಐ ಟ್ರಾನ್ಸಾಕ್ಷನ್ ಕೊಂಚ ಸುಧಾರಣೆ ಕಾಣಲು ಆರಂಭಗೊಂಡಿತು. ಇದರ ನಡುವೆ ಹಲವು ಏರಿಳಿತಗಳು ಕಂಡಿತ್ತು. ಆದರೆ 160 ರನ್ ಚೇಸಿಂಗ್ ಮಾಡಲು ಟೀಂ ಇಂಡಿಯಾ ಕಣಕ್ಕಿಳಿದಾಗ ಆನ್‌ಲೈನ್ ಶಾಪಿಂಗ್, ಯುಪಿಐ ಟ್ರಾನ್ಸಾಕ್ಷನ್ ಇಳಿಕೆಯಾಗತೊಡಗಿದೆ. ಯಾವಾಗ ಕೊಹ್ಲಿ ಬ್ಯಾಟಿಂಗ್ ಅಬ್ಬರ ಆರಂಭಗೊಂಡಿತೋ ಎಲ್ಲರೂ ಆನ್‌ಲೈನ್ ಶಾಪಿಂಗ್, ಯುಪಿಐ ಟ್ರಾನ್ಸಾಕ್ಷನ್ ಮೈನಸ್ 6 ಶೇಕಡಾ ಪಾತಾಳಕ್ಕಿಳಿದಿದೆ. ಅಂತಿಮ 3 ಓವರ್ ವೇಳೆ ಟ್ರಾನ್ಸಾಕ್ಷನ್ ಮೈನಸ್ ಶೇಕಡಾ 20ಕ್ಕೆ ಇಳಿದಿದೆ. ಎಲ್ಲರೂ ಪಂದ್ಯ ನೋಡಿದ್ದಾರೆ. ಶಾಪಿಂಗ್, ಟ್ರಾನ್ಸಾಕ್ಷನ್ ಬಿಟ್ಟಿದ್ದಾರೆ.
ಕೊಹ್ಲಿ ಆಟಕ್ಕೆ ಪಾಕಿಸ್ತಾನ ಕಂಗಾಲು, ದಿಗ್ಗಜರ ದಾಖಲೆ ಪುಡಿಯಾಯ್ತು ಹಲವು!
ಟೀಂ ಇಂಡಿಯಾ ಗೆಲುವು ಸಾಧಿಸಿದ ಬೆನ್ನಲ್ಲೇ ಮತ್ತೆ ಆನ್‌ಲೈನ್ ಶಾಪಿಂಗ್ ಆರಂಭಗೊಂಡಿದೆ. ಸಂಜೆ 6 ಗಂಟೆ ವೇಳೆ ಶೇಕಡಾ 5 ರಿಂದ 6 ರಷ್ಟು ಟ್ರಾನ್ಸಾಕ್ಷನ್ ಹೆಚ್ಚಳವಾಗಿದೆ ಎಂದು ಭಾರತ್ ಪೇ ವರದಿ ಹೇಳಿದೆ. ಕೊಹ್ಲಿ ಅಬ್ಬರದ ಬ್ಯಾಟಿಂಗ್ ಭಾರತದಲ್ಲಿ ಟ್ರಾನ್ಸಾಕ್ಷನ್ ಸ್ಥಗಿತಗೊಳಿಸಿದ ಘಟನೆ ನಡೆದಿದೆ.