ಇಂದೋರ್(ನ.14): ಬಾಂಗ್ಲಾದೇಶ ವಿರುದ್ದದ ಮೊದಲ ಟೆಸ್ಟ್ ಪಂದ್ಯದ ಮೊದಲ ದಿನ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅಭಿಮಾನಿಗಳಲ್ಲಿ ವಿಶೇಷ ಮನವಿ ಮಾಡಿದ್ದಾರೆ. ಟೀಂ ಇಂಡಿಯಾ ಬೌಲಿಂಗ್ ಮಾಡುತ್ತಿದ್ದ ವೇಳೆ ಕೊಹ್ಲಿ, ಕೊಹ್ಲಿ ಎಂದು ಚಿಯರ್ ಅಪ್ ಮಾಡುತ್ತಿದ್ದ ಅಭಿಮಾನಿಗಳಿಗೆ, ನಾನಲ್ಲ, ಮೊಹಮ್ಮದ್ ಶಮಿಗೆ ಇರಲಿ ಚಪ್ಪಾಳೆ ಎಂದು ಮನವಿ ಮಾಡಿದ್ದಾರೆ.

ಇದನ್ನೂ ಓದಿ: INDvBAN ಇಂದೋರ್ ಟೆಸ್ಟ್; ಮೊದಲ ದಿನ ಭಾರತಕ್ಕೆ ಭರ್ಜರಿ ಮೈಲುಗೈ!

ಮೊಹಮ್ಮದ್ ಶಮಿ ಸೇರಿದಂತೆ ಟೀಂ ಇಂಡಿಯಾ ಬೌಲರ್‌ಗಳು ಅದ್ಬುತ ದಾಳಿ ಮೂಲಕ ಬಾಂಗ್ಲಾದೇಶವನ್ನು ಕಟ್ಟಿಹಾಕಿದ್ದರು. ಈ ವೇಳೆ ಅಭಿಮಾನಿಗಳು ಕೊಹ್ಲಿ, ಕೊಹ್ಲಿ ಎಂದು ಕೂಗುತ್ತಿದ್ದರು. ಇದನ್ನು ಗಮನಿಸಿದ ವಿರಾಟ್ ಕೊಹ್ಲಿ, ನಾನೇನು ಮಾಡಿಲ್ಲ, ಬೌಲರ್‌ಗಳ ಶ್ರಮ. ಮೊಹಮ್ಮದ್ ಶಮಿ ಕಡೆ ಕೈತೋರಿಸಿ, ಶಮಿಗೆ ಚಪ್ಪಾಳೆ ಇರಲಿ ಎಂದಿದ್ದಾರೆ. ವಿರಾಟ್ ಕೊಹ್ಲಿ ಅಭಿಮಾನಿಗಳಲ್ಲಿ ಮಾಡಿದ ವಿಶೇಷ ಮನವಿ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

 

ಇದನ್ನೂ ಓದಿ:ಇಂದೋರ್ ಟೆಸ್ಟ್: ಮತ್ತೆ ಮುತ್ತಯ್ಯ ದಾಖಲೆ ಸರಿಗಟ್ಟಿದ ಅಶ್ವಿನ್..!

ಮೊದಲ ಪಂದ್ಯದ ಮೊದಲ ದಿನ ಬಾಂಗ್ಲಾದೇಶ ತಂಡವನ್ನು ಟೀಂ ಇಂಡಿಯಾ 150 ರನ್‌ಗಳಿಗೆ ಕಟ್ಟಿ ಹಾಕಿತು. ಮೊಹಮ್ಮದ್ ಶಮಿ 3, ಇಶಾಂತ್ ಶರ್ಮಾ, ಉಮೇಶ್ ಯಾದವ್ ಹಾಗೂ ಆರ್ ಅಶ್ವಿನ್ ತಲಾ 2 ವಿಕೆಟ್ ಕಬಳಿಸಿದರು. ಇನ್ನು ಬ್ಯಾಟಿಂಗ್ ಆರಂಭಿಸಿದ ಭಾರತ, 1 ವಿಕೆಟ್ ನಷ್ಟಕ್ಕೆ 86 ರನ್ ಸಿಡಿಸಿತು. ಮಯಾಂಕ್ ಅಗರ್ವಾಲ್ ಹಾಗೂ ಚೇತೇಶ್ವರ್ ಪೂಜಾರ ಕ್ರೀಸ್ ಕಾಯ್ಗುಕೊಂಡಿದ್ದಾರೆ.