ದುಬೈನಲ್ಲಿ ನಡೆದ ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಪಾಕಿಸ್ತಾನದ ವಿರುದ್ಧ ವಿರಾಟ್ ಕೊಹ್ಲಿ ಅಜೇಯ ಶತಕ ಗಳಿಸಿ ಭಾರತಕ್ಕೆ ಗೆಲುವು ತಂದರು. ಶತಕದ ಬಳಿಕ ಕೊಹ್ಲಿ ತಮ್ಮ ಕೊರಳಲ್ಲಿದ್ದ ಉಂಗುರಕ್ಕೆ ಮುತ್ತಿಟ್ಟರು. 2018 ರಿಂದ ಕೊಹ್ಲಿ ಆಟದಲ್ಲಿ ಉತ್ತಮ ಸಾಧನೆ ಮಾಡಿದಾಗಲೆಲ್ಲಾ ಈ ರೀತಿ ಸಂಭ್ರಮಿಸುತ್ತಾರೆ. ಕ್ರಿಕೆಟ್ ನಿಯಮದಿಂದಾಗಿ ಉಂಗುರವನ್ನು ಕೊರಳಲ್ಲಿ ಧರಿಸುತ್ತಾರೆ.

ದುಬೈ: ಟೀಂ ಇಂಡಿಯಾ ರನ್ ಮಷೀನ್ ವಿರಾಟ್ ಕೊಹ್ಲಿ ಮತ್ತೊಮ್ಮೆ ಐಸಿಸಿ ಟೂರ್ನಿಯಲ್ಲಿ ಆಕರ್ಷಕ ಶತಕ ಸಿಡಿಸುವ ಮೂಲಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ಎದುರಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅಜೇಯ ಶತಕ ಸಿಡಿಸುವ ಮೂಲಕ ತಂಡವನ್ನು ಗೆಲುವಿನ ದಡ ಸೇರಿಸಿದರು. ಇದಾದ ಬಳಿಕ ಪೆವಿಲಿಯನ್‌ಗೆ ವಾಪಾಸ್ಸಾಗುವ ವೇಳೆಯಲ್ಲಿ ವಿರಾಟ್ ಕೊಹ್ಲಿ ತಮ್ಮ ಕೊರಳಲ್ಲಿ ಇದ್ದ ರಿಂಗ್‌ಗೆ ಕಿಸ್ ಮಾಡಿದ ಕ್ಷಣ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಹೌದು, ಸೆಲಿಬ್ರಿಟಿ ಜೋಡಿಗಳಾಗಿ ಗುರುತಿಸಿಕೊಂಡಿರುವ ವಿರುಷ್ಕಾ ಸಮಯ ಸಿಕ್ಕಾಗಲೆಲ್ಲಾ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸುತ್ತಾ ಬಂದಿದ್ದಾರೆ. ವಿರಾಟ್ ಕೊಹ್ಲಿ ಕ್ರಿಕೆಟ್ ಆಡುವಾಗಲೆಲ್ಲಾ ಅನುಷ್ಕಾ ಶರ್ಮಾ ಮೈದಾನಕ್ಕೆ ಬಂದು ಹುರಿದುಂಬಿಸುತ್ತಿದ್ದರು. ವಿರಾಟ್ ಕೊಹ್ಲಿ ಫಾರ್ಮ್ ಕಳೆದುಕೊಂಡಾಗಲೂ ಸಹ ಕಮ್‌ಬ್ಯಾಕ್ ಮಾಡಲು ಅನುಷ್ಕಾ ಶರ್ಮಾ ಹುರಿದುಂಬಿಸುತ್ತಾ ಬಂದಿದ್ದನ್ನು ನಾವೆಲ್ಲರೂ ನೋಡಿದ್ದೇವೆ. ಇನ್ನು ವಿರಾಟ್ ಕೊಹ್ಲಿ ಕೂಡಾ ತಮ್ಮ ಬ್ಯಾಟಿಂದ ಸೊಗಸಾದ ಇನ್ನಿಂಗ್ಸ್ ಮೂಡಿಬಂದಾಗಲೆಲ್ಲಾ ತನ್ನ ಮೆಚ್ಚಿನ ಮಡದಿಯನ್ನು ಸ್ಮರಿಸಿಕೊಳ್ಳುವುದನ್ನು ಎಂದಿಗೂ ಮರೆತಿಲ್ಲ. 

ಇದನ್ನೂ ಓದಿ: ಭಾರತ ಗೆದ್ದಿದ್ದಕ್ಕೆ ಖುಷಿಯಿದೆ, ಆದ್ರೆ? ಮತ್ತೊಮ್ಮೆ ಅಚ್ಚರಿ ಅಭಿಪ್ರಾಯ ಹೊರಹಾಕಿದ ಅಜಯ್ ಜಡೇಜಾ!

Scroll to load tweet…

ಇದೀಗ ಪಾಕಿಸ್ತಾನ ಎದುರು ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಅಜೇಯ ಶತಕ ಸಿಡಿಸುವ ಮೂಲಕ ತಂಡವನ್ನು ಗೆಲುವಿನ ದಡ ಸೇರಿಸಿದರು. ಇದಾಗಿ ಪೆವಿಲಿಯನ್‌ಗೆ ವಾಪಾಸ್ಸಾಗುವ ವೇಳೆ ತಮ್ಮ ಕೊರಳಲ್ಲಿ ಇದ್ದ ರಿಂಗ್‌ಗೆ ಕಿಸ್ ಮಾಡುವ ಮೂಲಕ ಸಂಭ್ರಮಿಸಿದರು. ಅಂದಹಾಗೆ ವಿರಾಟ್ ಕೊಹ್ಲಿ ಸಾಧನೆ ಮಾಡಿದಾಗ ತಮ್ಮ ಕೊರಳಲ್ಲಿರುವ ರಿಂಗ್‌ಗೆ ಕಿಸ್ ಮಾಡುವುದು ಇದೇ ಮೊದಲ ಸಲವೇನಲ್ಲ. ಈ ಲಾಕೆಟ್ ಸೆಲಿಬ್ರೇಷನ್ 2018ರಿಂದಲೇ ಶುರುವಾಗಿದೆ. 

Scroll to load tweet…

ವಿರಾಟ್ ಕೊಹ್ಲಿ 2018ರಲ್ಲಿ ದಕ್ಷಿಣ ಆಫ್ರಿಕಾ ಟೆಸ್ಟ್‌ ಪಂದ್ಯದಲ್ಲಿ ಎದುರು 153 ರನ್ ಸಿಡಿಸಿದಾಗ ಮೊದಲ ಬಾರಿಗೆ 'ಲಾಕೆಟ್ ಸೆಲಿಬ್ರೇಷನ್' ಮಾಡಿದ್ದರು. ವಿರಾಟ್ ಕೊಹ್ಲಿ ಒಳ್ಳೆಯ ಪ್ರದರ್ಶನ ತೋರಿದಾಗಲೆಲ್ಲಾ ಮೈದಾನದಲ್ಲೇ ತಾವು ಎಂಗೇಜ್‌ಮೆಂಟ್ ಮಾಡಿಕೊಂಡ ರಿಂಗ್‌ಗೆ ಕಿಸ್ ಮಾಡುವ ಮೂಲಕ ಸ್ಪೂರ್ತಿ ವ್ಯಕ್ತಪಡಿಸುತ್ತಾರೆ. 

ಇದನ್ನೂ ಓದಿ: ಚಾಂಪಿಯನ್ಸ್ ಟ್ರೋಫಿ: ಭಾರತ ಎದುರು ಹೀನಾಯವಾಗಿ ಸೋಲುತ್ತಿದ್ದಂತೆ ಅಚ್ಚರಿ ಹೇಳಿಕೆ ಕೊಟ್ಟ ಪಾಕ್ ನಾಯಕ ರಿಜ್ವಾನ್!

ಕ್ರಿಕೆಟ್ ಆಡುವಾಗ ಕೈಗೆ ರಿಂಗ್ ಹಾಕಿಕೊಳ್ಳಲು ಅವಕಾಶ ಇಲ್ಲದಿರುವುದರಿಂದಾಗಿ ವಿರಾಟ್ ಕೊಹ್ಲಿ ತಮ್ಮ ಪ್ರೀತಿಯ ಎಂಗೇಜ್‌ಮೆಂಟ್ ರಿಂಗ್‌ ಅನ್ನು ಕತ್ತಿನಲ್ಲಿರುವ ಸರಕ್ಕೆ ಲಾಕೆಟ್ ಮಾಡಿಕೊಂಡಿದ್ದಾರೆ. ಅದೇ ರಿಂಗ್ ಕೊಹ್ಲಿ ಪಾಲಿಗೆ ಅದೃಷ್ಟದ ರಿಂಗ್ ಎನಿಸಿಕೊಂಡಿದೆ.