ತಂದೆಯೇ ನನ್ನ ‘ಸೂಪರ್‌ ಹೀರೋ’: ಕೊಹ್ಲಿ

ವಿರಾಟ್ ಕೊಹ್ಲಿ ಜೀವನಾಧಾರಿತ ಸೂಪರ್ ವಿ ಅನಿಮೇಷನ್ ಕತೆ ಹೊರಬರುತ್ತಿದೆ. ಕೊಹ್ಲಿ ಹುಟ್ಟು ಹಬ್ಬಕ್ಕೆ ತೆರೆಗೆ ಅಪ್ಪಳಿಸಲಿದೆ. ಈ ಕುರಿತ ಕಾರ್ಯಕ್ರಮದಲ್ಲಿ ಕೊಹ್ಲಿ ತಮ್ಮ ಸೂಪರ್ ಹೀರೋ ಯಾರು ಎಂಬುದನ್ನು ಬಹಿರಂಗ ಪಡಿಸಿದ್ದಾರೆ. 

Virat Kohli and Star India inspire young India to have Super dreams from Nov 5

ಮುಂಬೈ(ಅ.27):  ನಿಜ ಜೀವ​ನ​ದಲ್ಲಿ ‘ನನ್ನ ತಂದೆಯೇ ನನ್ನ ‘ಸೂ​ಪರ್‌ ಹೀರೋ’ ಎಂದು ಭಾರತ ಕ್ರಿಕೆಟ್‌ ತಂಡದ ನಾಯಕ ವಿರಾಟ್‌ ಕೊಹ್ಲಿ ಹೇಳಿದ್ದಾರೆ. ಮಾಧ್ಯಮಗಳು ಕೊಹ್ಲಿ ಅವರನ್ನು ನಿಮ್ಮ ‘ಸೂಪರ್‌ ಹೀರೋ​’ ಯಾರೆಂಬ ಕೇಳಿದ ಪ್ರಶ್ನೆಗೆ ಕೊಹ್ಲಿ ಉತ್ತ​ರಿ​ಸಿದರು. ‘ಹಲವು ವ್ಯಕ್ತಿ​ಗಳು ಪ್ರೇರಣೆ ತುಂಬು​ತ್ತಾರೆ. ಆದರೆ ತಂದೆ ತೆಗೆ​ದು​ಕೊಂಡ ನಿರ್ಧಾ​ರ​ಗ​ಳಿಂದ ನನ್ನ ಕ್ರಿಕೆಟ್‌ ಯಶ​ಸ್ಸಿನ ಹಾದಿ ಸರ​ಳ​ವಾ​ಯಿ​ತು ಎಂದು ಕೊಹ್ಲಿ ಹೇಳಿದ್ದಾರೆ. 

Virat Kohli and Star India inspire young India to have Super dreams from Nov 5

ಇದನ್ನೂ ಓದಿ:  ರಾತ್ರಿ ಕಾರು ಡ್ರೈವ್‌ ಅಂದ್ರೆ ವಿರಾಟ್‌ ಕೊಹ್ಲಿಗೆ ಇಷ್ಟ!

ತಂದೆಯ ವ್ಯಕ್ತಿತ್ವ ಹಾಗೂ ನನ್ನ ಪರಿ​ಶ್ರ​ಮ​ದಿಂದಲೇ ವೃತ್ತಿ​ಜೀ​ವನ ಕಟ್ಟಲು ಸಾಧ್ಯ​ವಾ​ಯಿ​ತು’ ಎಂದು ಕೊಹ್ಲಿ ತಿಳಿ​ಸಿ​ದ​ರು. ವಿರಾಟ್‌ ಜೀವನಾಧಾ​ರಿತ ‘ಸೂ​ಪರ್‌ ವಿ’ ಸೂಪರ್‌ ಹೀರೋ ಅನಿ​ಮೇ​ಷನ್‌ ಕತೆ​ಯನ್ನು ಸ್ಟಾರ್‌ ಸ್ಪೋರ್ಟ್ಸ್ ಹಾಗೂ ಡಿಸ್ನಿ ಜಂಟಿ​ಯಾಗಿ ಪರಿ​ಚ​ಯಿ​ಸು​ತ್ತಿ​ವೆ. ನ.5ರಂದು ಕೊಹ್ಲಿ ಜನ್ಮ​ದಿ​ನಕ್ಕೆ ‘ಸೂ​ಪರ್‌ ವಿ’ ತೆರೆ ಮೇಲೆ ಬರ​ಲಿ​ದೆ.

Virat Kohli and Star India inspire young India to have Super dreams from Nov 5

ಇದನ್ನೂ ಓದಿ: ಹಗ​ಲು-ರಾತ್ರಿ ಟೆಸ್ಟ್‌ಗೆ ಕೊಹ್ಲಿಗೂ ಸಹಮತವಿದೆ ಎಂದ ದಾದಾ

ವಿರಾಟ್ ಕೊಹ್ಲಿ 18 ವರ್ಷವಿದ್ದಾಗ ತಂದೆಯನ್ನು ಕಳೆದುಕೊಂಡರು. ಕೊಹ್ಲಿ ತಂದೆ ಪ್ರೇಮ್ ಕೊಹ್ಲಿ ಹೃದಯಾಘಾತದಿಂದ ನಿಧನರಾಗಿದ್ದರು. ಕರ್ನಾಟಕ ವಿರುದ್ಧ ರಣಜಿ ಪಂದ್ಯ ಆಡುತ್ತಿದ್ದ ಕೊಹ್ಲಿಗೆ ಆಘಾತಕಾರಿ ಸುದ್ದಿ ತಲುಪಿತ್ತು. ದಿನದಾಟದ ಅಂತ್ಯಕ್ಕೆ ಕೊಹ್ಲಿ 40 ರನ್ ಸಿಡಿಸಿ ಅಜೇಯರಾಗಿ ಉಳಿದಿದ್ದರು. ಬಳಿಕ ಮನೆಗೆ ತೆರಳಿ ಅಪ್ಪನ ಶವವನ್ನು ಬಿಗಿದಪ್ಪಿ ಬಿಕ್ಕಿ ಬಿಕ್ಕಿ ಅತ್ತಿದ್ದರು. ರಾತ್ರಿಯಿಡಿ ನಿದ್ದೆಗೆಟ್ಟು ಕೂತಿದ್ದರು. 

ಮರುದಿನ ಬೆಳೆಗಿನ ಕ್ರಿಯಾವಿಧಾನಗಳನ್ನು ಪೂರೈಸಿದ ಕೊಹ್ಲಿ ಪಂದ್ಯ ಆರಂಭದ ವೇಳೆ ಮೈದಾನದಲ್ಲಿ ಹಾಜರಿದ್ದರು. ಬಳಿಕ 90 ರನ್ ದೆಹಲಿ ತಂಡವನ್ನು ಫಾಲೋ ಆನ್‌ನಿಂದ ಪಾರು ಮಾಡಿದ್ದರು. ಬಳಿಕ ಕೊಹ್ಲಿ ಮನೆಗೆ ತೆರಳಿ ತಂದೆಯ ಅಂತ್ಯಕ್ರೀಯೆಯಲ್ಲಿ ಪಾಲ್ಗೊಂಡರು. ಚಿಕ್ಕ ವಯಸ್ಸಿನಲ್ಲೇ ಕೊಹ್ಲಿ ಅತೀ ದೊಡ್ಡ ಜವಾಬ್ದಾರಿಗಳನ್ನು ಪೂರೈಸಿದ್ದಾರೆ. ಕೊಹ್ಲಿಗೆ ಜೀವನದ ಪಾಠಗಳನ್ನು ಕಲಿಸಿದ ತಂದೆಯೇ ಸೂಪರ್ ಹೀರೋ ಆಗಿದ್ದಾರೆ.
 

Latest Videos
Follow Us:
Download App:
  • android
  • ios