ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ ಪಂದ್ಯಕ್ಕೆ ಕ್ಷಣಗಣನೆವಿರಾಟ್‌ ಕೊಹ್ಲಿ ಅವ​ರ​ನ್ನೊ​ಳ​ಗೊಂಡ 7 ಭಾರ​ತೀಯ ಆಟ​ಗಾ​ರರ ಮೊದಲ ತಂಡ ಇಂಗ್ಲೆಂಡ್‌ ಪ್ರಯಾಣವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್ ಫೈನಲ್‌ ಜೂನ್‌ 07ರಿಂದ ಆರಂಭ

ನವ​ದೆ​ಹ​ಲಿ(ಮೇ.23): ಮುಂಬರುವ ಜೂನ್ 7ರಿಂದ ಲಂಡನ್‌ನ ದಿ ಓವಲ್‌ ಕ್ರೀಡಾಂಗ​ಣ​ದಲ್ಲಿ ಆರಂಭ​ವಾ​ಗ​ಲಿ​ರುವ ಆಸ್ಪ್ರೇ​ಲಿಯಾ ವಿರು​ದ್ಧದ ಟೆಸ್ಟ್‌ ವಿಶ್ವ ಚಾಂಪಿ​ಯ​ನ್‌​ಶಿಪ್‌ ಫೈನಲ್‌ ಪಂದ್ಯ​ಕ್ಕಾಗಿ ವಿರಾಟ್‌ ಕೊಹ್ಲಿ ಅವ​ರ​ನ್ನೊ​ಳ​ಗೊಂಡ 7 ಭಾರ​ತೀಯ ಆಟ​ಗಾ​ರರ ಮೊದಲ ತಂಡ ಮಂಗ​ಳ​ವಾರ ಲಂಡನ್‌ಗೆ ತೆರಳಲಿದೆ.

ವಿರಾಟ್ ಕೊಹ್ಲಿ ಜೊತೆಗೆ ರವಿಚಂದ್ರನ್ ​ಅ​ಶ್ವಿನ್‌, ಮೊಹಮ್ಮದ್ ಸಿರಾಜ್‌, ಶಾರ್ದೂಲ್‌ ಠಾಕೂರ್‌, ಅಕ್ಷರ್‌ ಪಟೇಲ್‌, ಉಮೇಶ್‌ ಯಾದ​ವ್‌, ಜಯ್‌​ದೇವ್‌ ಉನಾ​ದ್ಕತ್‌ ಹಾಗೂ ಮುಖ್ಯ ​ಕೋಚ್‌ ರಾಹುಲ್‌ ದ್ರಾವಿಡ್‌ ಕೂಡಾ ತೆರ​ಳ​ಲಿ​ದ್ದಾರೆ. ಆದರೆ ಐಪಿ​ಎಲ್‌ ಪ್ಲೇ-ಆಫ್‌ ಆಡ​ಲಿ​ರುವ ರೋಹಿತ್‌ ಶರ್ಮಾ, ಇಶಾನ್‌ ಕಿಶನ್, ಶುಭ್‌​ಮನ್‌ ಗಿಲ್‌, ಮೊಹಮ್ಮದ್ ಶಮಿ, ಅಜಿಂಕ್ಯ ರಹಾನೆ, ರವೀಂದ್ರ ಜಡೇಜಾ ಹಾಗೂ ಕೆ.ಎ​ಸ್‌.​ಭ​ರ​ತ್‌ ಸೇರಿ​ದಂತೆ ಇತ​ರರು ಐಪಿ​ಎಲ್‌ ಮುಗಿದ ಬಳಿಕ ತಂಡ​ವನ್ನು ಕೂಡಿ​ಕೊ​ಳ್ಳ​ಲಿ​ದ್ದಾರೆ. ಸದ್ಯ ಚೇತೇ​ಶ್ವರ್‌ ಪೂಜಾರ ಇಂಗ್ಲೆಂಡ್‌​ನಲ್ಲೇ ಇದ್ದು, ಕೌಂಟಿ ಕ್ರಿಕೆಟ್‌ ಆಡು​ತ್ತಿ​ದ್ದಾರೆ. ಇನ್ನೊಂದು ವಾರದ ಬಳಿಕ ಚೇತೇಶ್ವರ್ ಪೂಜಾರ ಭಾರತ ತಂಡವನ್ನು ಕೂಡಿಕೊಳ್ಳಲಿದ್ದಾರೆ.

ದಶಕದ ಬಳಿಕ ಐಸಿಸಿ ಟ್ರೋಫಿ ಬರ ನೀಗಿಸಿಕೊಳ್ಳುತ್ತಾ ಭಾರತ: ಭಾರತ ಕ್ರಿಕೆಟ್‌ ತಂಡವು 2013ರಲ್ಲಿ ಕೊನೆಯ ಬಾರಿಗೆ ಐಸಿಸಿ ಟ್ರೋಫಿಯನ್ನು ಜಯಿಸಿತ್ತು. ಇದಾಗಿ ಒಂದು ದಶಕದಲ್ಲಿ ಟೀಂ ಇಂಡಿಯಾ ಯಾವುದೇ ಐಸಿಸಿ ಟ್ರೋಫಿ ಗೆಲ್ಲಲು ಸಫಲವಾಗಿಲ್ಲ. 2013ರಲ್ಲಿ ಇಂಗ್ಲೆಂಡ್‌ನಲ್ಲಿಯೇ ನಡೆದ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಟೀಂ ಇಂಡಿಯಾ, ಆತಿಥೇಯ ಇಂಗ್ಲೆಂಡ್ ತಂಡವನ್ನು ಮಣಿಸಿ ಚಾಂಪಿಯನ್ ಪಟ್ಟ ಅಲಂಕರಿಸಿತ್ತು. ಇದಾದ ಬಳಿಕ ಏಕದಿನ ವಿಶ್ವಕ್, ಟಿ20 ವಿಶ್ವಕಪ್ ಸೇರಿದಂತೆ ಐಸಿಸಿ ಹಲವು ಟೂರ್ನಿಗಳಲ್ಲಿ ಪಾಲ್ಗೊಂಡರೂ ಸಹಾ ಟೀಂ ಇಂಡಿಯಾ ನಾಕೌಟ್ ಹಂತದಲ್ಲಿ ಮುಗ್ಗರಿಸುವ ಮೂಲಕ ನಿರಾಸೆ ಅನುಭವಿಸಿದೆ.

"ನಮಗೆ ಪ್ಲೇ-ಆಫ್‌ಗೇರು​ವ ಅರ್ಹತೆ ಇರ​ಲಿ​ಲ್ಲ": RCB ನಾಯಕ ಫಾಫ್ ಡು ಪ್ಲೆಸಿಸ್ ಅಚ್ಚರಿಯ ಹೇಳಿಕೆ

ಇನ್ನು ಚೊಚ್ಚಲ ಆವೃತ್ತಿಯ ವಿಶ್ವ ಟೆಸ್ಟ್‌ ಚಾಂಪಿಯನ್ ಫೈನಲ್‌ನಲ್ಲಿಯೂ ಭಾರತ ತಂಡವು ಫೈನಲ್‌ ಪ್ರವೇಶಿಸಿತ್ತು. ಆದರೆ ಫೈನಲ್‌ನಲ್ಲಿ ನ್ಯೂಜಿಲೆಂಡ್ ಎದುರು ಮುಗ್ಗರಿಸುವ ಮೂಲಕ ರನ್ನರ್‌ ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತ್ತು. ಇದೀಗ ಸತತ ಎರಡನೇ ಬಾರಿಗೆ ಭಾರತ ತಂಡವು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ ಪ್ರವೇಶಿಸಿದ್ದು, ಈ ಬಾರಿಯಾದರೂ ಭಾರತ ಚಾಂಪಿಯನ್ ಪಟ್ಟ ಅಲಂಕರಿಸುತ್ತಾ ಎನ್ನುವುದನ್ನು ಕಾದು ನೋಡಬೇಕಿದೆ.

ಜೋಶ್ ಹೇಜ​ಲ್‌​ವುಡ್‌ ಫಿಟ್‌

ಟೆಸ್ಟ್‌ ವಿಶ್ವ ಚಾಂಪಿ​ಯ​ನ್‌​ಶಿಪ್‌ ಹಾಗೂ ಆ್ಯಶಸ್‌ ಟೆಸ್ಟ್‌ ಸರ​ಣಿಗೆ ತಾರಾ ವೇಗಿ ಜೋಶ್‌ ಹೇಜ​ಲ್‌​ವುಡ್‌ ಲಭ್ಯ​ವಿ​ರ​ಲಿ​ದ್ದಾರೆ ಎಂದು ಕ್ರಿಕೆಟ್‌ ಆಸ್ಪ್ರೇ​ಲಿಯಾ ಸೋಮ​ವಾರ ಖಚಿ​ಪ​ಡಿ​ಸಿದೆ. ಐಪಿ​ಎ​ಲ್‌​ನಲ್ಲಿ ಆರ್‌​ಸಿಬಿ ಪರ ಆಡು​ತ್ತಿದ್ದ 32 ವರ್ಷದ ಆಸೀಸ್‌ ವೇಗಿ ಪಕ್ಕೆ​ಲುಬು ಗಾಯ​ದಿಂದಾಗಿ ಬಹು​ತೇಕ ಪಂದ್ಯ​ಗ​ಳನ್ನು ತಪ್ಪಿ​ಸಿ​ಕೊಂಡಿದ್ದು, ಕಳೆದ ವಾರ ತವ​ರಿಗೆ ಮರ​ಳಿ​ದ್ದರು. ಹೀಗಾಗಿ ಅವರು ಟೆಸ್ಟ್‌ ಫೈನ​ಲ್‌ಗೂ ಫಿಟ್‌ ಆಗುವ ಸಾಧ್ಯ​ತೆ​ಯಿಲ್ಲ ಎಂದು ಹೇಳ​ಲಾ​ಗಿತ್ತು.

ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್ ಫೈನಲ್‌ ಪಂದ್ಯಕ್ಕೆ ಭಾರತ ತಂಡ ಹೀಗಿದೆ ನೋಡಿ:

ರೋಹಿತ್ ಶರ್ಮಾ(ನಾಯಕ), ಶುಭ್‌ಮನ್ ಗಿಲ್, ಚೇತೇಶ್ವರ್ ಪೂಜಾರ, ವಿರಾಟ್ ಕೊಹ್ಲಿ, ಅಜಿಂಕ್ಯ ರಹಾನೆ, ಇಶಾನ್ ಕಿಶನ್‌, ಕೆ ಎಸ್ ಭರತ್(ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಶಾರ್ದೂಲ್ ಠಾಕೂರ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಉಮೇಶ್ ಯಾದವ್, ಜಯದೇವ್ ಉನಾದ್ಕತ್.

ಮೀಸಲು ಆಟಗಾರರು: ಋುತು​ರಾಜ್‌ ಗಾಯ​ಕ್ವಾಡ್‌, ಸೂರ್ಯಕು​ಮಾರ್‌ ಯಾದವ್, ವೇಗಿ ಮುಕೇಶ್‌ ಕುಮಾರ್‌ 

ಆಸ್ಟ್ರೇಲಿಯಾ ತಂಡ: 

ಪ್ಯಾಟ್ ಕಮಿನ್ಸ್‌(ನಾಯಕ), ಡೇವಿಡ್ ವಾರ್ನರ್‌, ಉಸ್ಮಾನ್ ಖವಾಜ, ಮ್ಯಾಟ್ ರೆನ್ಶಾ, ಮಾರ್ಕಸ್ ಹ್ಯಾರಿಸ್‌, ಮಾರ್ನಸ್ ಲಬುಶೇನ್‌, ಸ್ಟೀವ್ ಸ್ಮಿತ್‌, ಟ್ರಾವಿಸ್ ಹೆಡ್‌, ಕ್ಯಾಮರೋನ್ ಗ್ರೀನ್‌, ಮಿಚೆಲ್‌ ಮಾರ್ಷ್‌, ಅಲೆಕ್ಸ್‌ ಕೇರ್ರಿ, ಜೋಶ್ ಇಂಗ್ಲಿಸ್‌, ಮಿಚೆಲ್ ಸ್ಟಾರ್ಕ್, ಜೋಸ್ ಹೇಜಲ್‌ವುಡ್‌, ಸ್ಕಾಟ್‌ ಬೋಲೆಂಡ್‌, ನೇಥನ್ ಲಯನ್‌, ಟೋಡ್ ಮರ್ಫಿ.