ಚಾಂಪಿಯನ್ ಆರ್‌ಸಿಬಿ ಮಹಿಳಾ ತಂಡಕ್ಕೆ ವಿಶ್ ಮಾಡಿ ಟ್ರೋಲ್ ಆದ ವಿಜಯ್ ಮಲ್ಯ!

ಆರ್‌ಸಿಬಿ ಮಹಿಳಾ ತಂಡ ಅದ್ಭುತ ಪ್ರದರ್ಶನದ ಮೂಲಕ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಇದೀಗ ಆರ್‌ಸಸಿಬಿ ಟ್ರೋಫಿಯೊಂದಿಗೆ ಬೆಂಗಳೂರಿಗೆ ಆಗಮಿಸಿದ್ದಾರೆ. ಬೆಂಗಳೂರಿನಲ್ಲಿ ಅದ್ದೂರಿ ಕಾರ್ಯಕ್ರಮ ಆಯೋಜಿಸಲಾಗಿದೆ. ಇತ್ತ ಆರ್‌ಸಿಬಿ ಫ್ರಾಂಚೈಸಿ ಮಾಜಿ ಮಾಲೀಕ, ಉದ್ಯಮಿ ವಿಜಯ್ ಮಲ್ಯ, ಗೆಲುವಿನ ಸಂಭ್ರಮದಲ್ಲಿ ಮಹಿಳಾ ತಂಡಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ. ಆದರೆ ವಿಶ್ ಮಾಡಿದ ಮಲ್ಯ ಇದೀಗ ಟ್ರೋಲ್ ಆಗಿದ್ದಾರೆ.
 

Vijay mallya trolled after he congratulate RCB Women champions wpl 2024 final ckm

ಬೆಂಗಳೂರು(ಮಾ.19) ಮಹಿಳಾ ಐಪಿಎಲ್ ಟೂರ್ನಿಯಲ್ಲಿ ಆರ್‌ಸಿಬಿ ಮಹಿಳಾ ತಂಡ ಟ್ರೋಫಿ ಗೆದ್ದು ಸಂಭ್ರಮಿಸಿದೆ. ಇದು ಆರ್‌ಸಸಿಬಿ ಇತಿಹಾಸದಲ್ಲೇ ಮೊದಲ ಟ್ರೋಫಿಯಾಗಿದೆ. ಕಳೆದ 16 ವರ್ಷದಿಂದ ಪುರಷರ ತಂಡ ಈ ಟ್ರೋಫಿಗಾಗಿ ಹೋರಾಟ ಮಾಡುತ್ತಿದೆ. ಪ್ರತಿ ಬಾರಿ ಈ ಸಲ ಕಪ್ ನಮ್ದೆ ಎಂದು ಅಬಿಮಾನಿಗಳು ಹುರಿದುಂಬಿಸಿದ್ದಾರೆ. ಇದೀಗ ಮಹಿಳಾ ತಂಡ ಪ್ರಶಸ್ತಿ ಗೆಲ್ಲುವ ಮೂಲಕ ಅಭಿಮಾನಿಗಳ ಖುಷಿ ಡಬಲ್ ಮಾಡಿದ್ದಾರೆ. ಮೊದಲ ಟ್ರೋಫಿ ಗೆಲುವು ಆರ್‌ಸಿಬಿ ಫ್ರಾಂಚೈಸಿ ಮಾಜಿ ಮಾಲೀಕ, ಉದ್ಯಮಿ ವಿಜಯ್ ಮಲ್ಯ ಸಂಭ್ರವನ್ನು ಇಮ್ಮಡಿಗೊಳಿಸಿದೆ. ಇದೇ ಖುಶಷಿಯಲ್ಲಿ ಮಲ್ಯ ಟ್ವೀಟ್ ಮೂಲಕ ಆರ್‌ಸಿಬಿ ಮಹಿಳಾ ತಂಡಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ. ಆದರೆ ಮಲ್ಯ ಅಭಿನಂದನೆ ಬೆನ್ನಲ್ಲೇ ಟ್ರೋಲ್ ಆಗಿದ್ದಾರೆ.

ಮಹಿಳಾ ಐಪಿಎಲ್ ಟೂರ್ನಿಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿರುವ ಆರ್‌ಸಿಬಿ ಮಹಿಳಾ ತಂಡಕ್ಕೆ ತುಂಬು ಹೃದಯದ ಅಭಿನಂದನೆಗಳು. ಆರ್‌ಸಿಬಿ ಪುರುಷರ ತಂಡ ಈ ಬಾರಿ ಟ್ರೋಫಿ ಗೆದ್ದರೆ ಈ ಸಂಭ್ರಮ ಡಬಲ್ ಆಗಲಿದೆ . ಈ ಟ್ರೋಫಿಗಾಗಿ ಸುದೀರ್ಘ ವರ್ಷಗಳಿಂಗ ಕಾಯುತ್ತಿದ್ದೇವೆ ಎಂದು ವಿಜಯ್ ಮಲ್ಯ ಟ್ವೀಟ್ ಮೂಲಕ ಅಭಿನಂದನೆ ಸಲ್ಲಿಸಿದ್ದಾರೆ.

ದಿನೇಶ್ ಕಾರ್ತಿಕ್ ಪತ್ನಿಯನ್ನೇ ಮದುವೆಯಾದ ಮರುಳಿ ವಿಜಯ್‌ಗೆ ಎಲ್ಲಿಸ್ ಪೆರ್ರಿ ಜೊತೆ ಡಿನ್ನರ್ ಡೇಟ್ ಆಸೆ!

ವಿಜಯ್ ಮಲ್ಯ ಟ್ವೀಟ್ ವೈರಲ್ ಆಗಿದೆ. ಕಾರಣ ನಿಮ್ಮ ಲೋನ್ ಕೂಡ ಸುದೀರ್ಘ ದಿನಗಳಿಂದ ಬಾಕಿ ಇದೆ. ನಾವು ಅದಕ್ಕಾಗಿ ಕಾಯುತ್ತಿದ್ದೇವೆ ಎಂದು  ಹಲವರು ಕಮೆಂಟ್ ಮಾಡಿದ್ದಾರೆ. ಆರ್‌ಸಿಬಿ ತಂಡವನ್ನು ಕಟ್ಟಿಬೆಳೆಸಿ, ಯುವ ಕ್ರಿಕೆಟಿಗರಿಗೆ ಅವಕಾಶ ನೀಡಿ ಅಂತಾರಾಷ್ಟ್ರೀಯ ಬ್ರ್ಯಾಂಡ್ ಮಾಡಿ ಇದೀಗ ತಂಡ ಟ್ರೋಫಿ ಗೆದ್ದಿದೆ. ಇದೇ ಖುಷಿಯಲ್ಲಿ ವಿಜಯ್ ಮಲ್ಯ ಬೆಂಗಳೂರಿಗೂ ಬಂದ ಮಹಿಳಾ ತಂಡವನ್ನೂ ಅಭಿನಂದಿಸುವ ಸಾಧ್ಯತೆ ಇದೆ. ತನಿಖಾ ಎಜೆನ್ಸಿ ಸಜ್ಜಾಗಿ ಎಂದು ಕೆಲವರು ಕರೆ ಕೊಟ್ಟಿದ್ದಾರೆ.

 

 

ವಿಜಯ್ ಮಲ್ಯ ಬ್ಯಾಂಕ್ ರಜಾ ದಿನ ಟ್ವೀಟ್ ಮಾಡಿದ್ದಾರೆ ಎಂದು ಮತ್ತೆ ಕೆಲವರು ಪ್ರತಿಕ್ರಿಯೆ ನೀಡಿದ್ದಾರೆ. ಇದೇ ಖುಷಿಯಲ್ಲಿ ಭಾರತಕ್ಕೆ ಬಂದುಬಿಡಿ ಎಂದು ಮತ್ತೆ ಕೆಲವರು ಹೇಳಿದ್ದಾರೆ. ಮಲ್ಯ ಪ್ರತಿಕ್ರಿಯೆಗೆ ಟ್ರೋಲ್ ಮೀಮ್ಸ್ ಹರಿದಾಡುತ್ತಿದೆ.

ಆರ್‌ಸಿಬಿ ಮಹಿಳಾ ಟ್ರೋಫಿ ಸಂಭ್ರಮದಲ್ಲಿ ಪುರುಷ ತಂಡದ ಕಾಲೆಳೆದ ರಾಜಸ್ಥಾನ ರಾಯಲ್ಸ್!

ಆರ್‌ಸಿಬಿ ಮಹಿಳಾ ತಂಡ ಎರಡೇ ವರ್ಷಕ್ಕೆ ಚಾಂಪಿಯನ್ ಪಟ್ಟ ಗೆದ್ದುಕೊಂಡಿದೆ. ಆರ್‌ಸಿಬಿ ಮಹಿಳಾ ತಂಡದ ಗೆಲುವು ಬೆಂಗಳೂರು ಕ್ರಿಕೆಟ್ ಅಭಿಮಾನಿಲ ಸಂಭ್ರಮ ಡಬಲ್ ಮಾಡಿದೆ. ಬೀದಿ ಬೀದಿಯಲ್ಲಿ ಸಂಭ್ರಮಾಚರಣೆ ಮಾಡಿದ್ದಾರೆ. ಕಳೆದ 16 ವರ್ಷದಿಂದ ಪುರುಷರ ತಂಡ ಟ್ರೋಫಿಗಾಗಿ ಪ್ರಯತ್ನಿಸುತ್ತಿದೆ. 3 ಬಾರಿ ಫೈನಲ್ ಪ್ರವೇಶಿಸಿದೆ. ಆದರೆ ಟ್ರೋಫಿ ಮಾತ್ರ ಸಿಗಲಿಲ್ಲ. ಈ ಸಲ ಕಪ್ ನಮ್ದೆ ಅನ್ನೋ ಘೋಷವಾಕ್ಯ ಪ್ರತಿ ಆವೃತ್ತಿಯಲ್ಲೂ ಮೊಳಗುತ್ತಿದೆ. ಆದರೆ ಕಪ್ ಮಾತ್ರ ಬರಲಿಲ್ಲ. ಇದೀಗ ಮಹಿಳಾ ತಂಡ ಈ ಸಲ ಕಪ್ ನಮ್ದೂ ಎಂದಿದ್ದಾರೆ. ಈ ಮೂಲಕ ಅಭಿಮಾನಿಗಳ ಟ್ರೋಫಿ ಬರ ನೀಗಿಸಿದ್ದಾರೆ. ಇದೀಗ ಪುರುಷರ ತಂಡದ ಮೇಲೆ ನಿರೀಕ್ಷೆ ಹೆಚ್ಚಾಗಿದೆ.


 

Latest Videos
Follow Us:
Download App:
  • android
  • ios