Asianet Suvarna News Asianet Suvarna News

ಆರ್‌ಸಿಬಿ ಮಹಿಳಾ ಟ್ರೋಫಿ ಸಂಭ್ರಮದಲ್ಲಿ ಪುರುಷ ತಂಡದ ಕಾಲೆಳೆದ ರಾಜಸ್ಥಾನ ರಾಯಲ್ಸ್!

ರಾಯಲ್ ಚಾಲೆಂಜರ್ಸ್ ಬೆಂಗಳೂರು ಮಹಿಳಾ ತಂಡ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಶುಭಾಶಯಗಳ ಮಹಾಪೂರವೇ ಹರಿದು ಬಂದಿದೆ. ಕರ್ನಾಟಕದ ಮೂಲೆ ಮೂಲೆಯಲ್ಲಿ ಸಂಭ್ರಮ ಆಚರಿಸಲಾಗಿದೆ. ಇದೀಗ ರಾಜಸ್ಥಾನ ರಾಯಲ್ಸ್, ಆರ್‌ಸಿಬಿ ಮಹಿಳಾ ತಂಡದ ಟ್ರೋಫಿ ಸಾಧನೆಯನ್ನು ಅಭಿನಂದಿಸುವ ಜೊತೆಗೆ ಪುರುಷ ಆರ್‌ಸಿಬಿ ತಂಡದ ಕಾಲೆಳೆದಿದ್ದಾರೆ. 
 

Rajasthan Royals congrats RCB Women Champions and trolls Men squad for trophy drought ckm
Author
First Published Mar 18, 2024, 8:00 PM IST | Last Updated Mar 18, 2024, 8:00 PM IST

ನವದೆಹಲಿ(ಮಾ.18) ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಮೊದಲ ಟ್ರೋಫಿ ಸಿಹಿ ಕಂಡಿದೆ. ಮಹಿಳಾ ಐಪಿಎಲ್ ಟೂರ್ನಿಯಲ್ಲಿ ಆರ್‌ಸಿಬಿ ಟ್ರೋಫಿ ಗೆದ್ದು ಸಂಭ್ರಮ ಆಚರಿಸಿದೆ. 2008ರಲ್ಲಿ ಆರ್‌ಸಿಬಿ ಫ್ರಾಂಚೈಸಿ ಅಸ್ತಿತ್ವಕ್ಕೆ ಬಂದಿದೆ. ಕಳೆದ 16 ಆವೃತ್ತಿಗಲ್ಲಿ ಪುರುಷರ ಆರ್‌ಸಿಬಿ ತಂಡ ದಿಟ್ಟ ಹೋರಾಟ ನೀಡಿದೆ. ಆದರೆ ಪ್ರಶಸ್ತಿ ಗೆದ್ದಿಲ್ಲ. ಇದೀಗ 2023ರಿಂದ ಆರಂಭಗೊಂಡ ಮಹಿಳಾ ಆರ್‌ಸಿಬಿ ತಂಡ ಎರಡೇ ವರ್ಷದಲ್ಲಿ ಪ್ರಶಸ್ತಿ ಗೆದ್ದುಕೊಂಡಿದೆ. ಈ ಮೂಲಕ ಆರ್‌ಸಿಬಿ ಇತಿಹಾಲದಲ್ಲೇ ಮೊದಲ ಟ್ರೋಫಿ ಗೆದ್ದುಕೊಂಡಿದೆ. ಆರ್‌ಸಿಬಿ ಮಹಿಳಾ ತಂಡಕ್ಕೆ ಅಭಿನಂದನೆಗಳನ್ನು ಸಲ್ಲಿಸಲಾಗುತ್ತಿದೆ. ಇದರ ನಡುವೆ ರಾಜಸ್ಥಾನ ರಾಯಲ್ಸ್ ತಂಡ ಕೂಡ ಅಭಿನಂದನೆ ಸಲ್ಲಿಸಿದೆ. ಆದರೆ ಅಭಿನಂದನೆ ಜೊತೆಗೆ ಪುರುಷರ ತಂಡದ ಕಾಲೆಳೆದಿದೆ.

ಮಹಿಳಾ ತಂಡ ಕೇವಲ ಎರಡೇ ವರ್ಷದಲ್ಲಿ ಟ್ರೋಫಿ ಸಾಧನೆ ಮಾಡಿದರೆ, ಪುರುಷ ಆರ್‌ಸಿಬಿ ತಂಡ 16 ವರ್ಷವಾದರೂ ಟ್ರೋಫಿ ಗೆದ್ದಿಲ್ಲ ಅನ್ನೋದನ್ನು ಟ್ರೋಲ್ ಮಾಡಿದೆ. ಖ್ಯಾತ ಕಾಮಿಡಿ ಸೀರಿಯಲ್ ತಾರಕ್ ಮೆಹ್ತಾದ ನಾಯಕ ನಟ ಜಿತಾಲಾಲ್ ಕಾಮಿಡಿ ಸೀನ್ ಒಂದರ ಫೋಟೋ ಪೋಸ್ಟ್ ಮಾಡಿರುವ ರಾಜಸ್ಥಾನ ರಾಯಲ್ಸ್ ಆರ್‌ಸಿಬಿ ತಂಡಕ್ಕೆ ಅಭಿನಂದನೆ ಸಲ್ಲಿಸಿದೆ.

WPL ಕಪ್ ಗೆದ್ದು ಮುತ್ತಿನಂತ ಕನ್ನಡ ಮಾತಾಡಿದ ಸ್ಮೃತಿ ಮಂಧನಾ..! ವಿಡಿಯೋ ವೈರಲ್

ಎಲ್‌ಪಿಜಿ ಸಿಲಿಂಡರ್ ಎತ್ತಲು ಪ್ರಯಾಸ ಪಡುತ್ತಿರುವ ಜೀತಾಲಾಲ್ ಫೋಟೋ ಒಂದಡೆಯಾದರೆ, ಅದೇ ಸಿಲಿಂಡರನ್ನು ಸುಲಭವಾಗಿ ಎತ್ತಿ ಸೊಂಟದಲ್ಲಿಟ್ಟುಕೊಂಡು ಹೋದ ಪತ್ನಿಯ ಫೋಟೋವನ್ನು ಪೋಸ್ಟ್ ಮಾಡಲಾಗಿದೆ. ಈ ಮೂಲಕ ಆರ್‌ಸಿಬಿ ಪುರುಷ ತಂಡ ಪ್ರಯಾಸ ಪಡುತ್ತಿರುವ ಟ್ರೋಫಿಯನ್ನು ಮಹಿಳಾ ತಂಡ ಗೆದ್ದುಕೊಂಡಿದೆ ಎಂದು ಸೂಚ್ಯವಾಗಿ ಹೇಳಿದೆ.

 

 

ರಾಯಲ್ ಚಾಲೆಂಜರ್ಸ್ ಬೆಂಗಳೂರು ಪುರುಷರ ತಂಡ 2008ರಿಂದ ಐಪಿಎಲ್ ಟೂರ್ನಿಯಲ್ಲಿ ಬಲಿಷ್ಠ ತಂಡವಾಗಿ ಗುರುತಿಸಿಕೊಂಡಿದೆ. ರಾಹುಲ್ ದ್ರಾವಿಡ್, ಅನಿಲ್ ಕುಂಬ್ಳೆ, ಮಾರ್ಚ್ ಬೌಷರ್, ವಿರಾಟ್ ಕೊಹ್ಲಿ, ಎಬಿಡಿ ವಿಲಿಯರ್ಸ್, ಕ್ರಿಸ್ ಗೇಲ್ ಸೇರಿದಂತೆ ಹಲವು ಘಟಾನುಘಟಿ ಕ್ರಿಕೆಟಿಗರು ತಂಡದ ಪರ ಆಡಿದ್ದಾರೆ. ಕಳೆದ 16 ಆವೃತ್ತಿಗಳಲ್ಲಿ ಪುರುಷರ ಆರ್‌ಸಿಬಿ ತಂಡ 3 ಬಾರಿ ಫೈನಲ್ ಪ್ರವೇಶಿಸಿದೆ. ಆದರೆ ಕೂದಲೆಳೆ ಅಂತರದಲ್ಲಿ ಪ್ರಶಸ್ತಿ ಮಿಸ್ ಮಾಡಿಕೊಂಡಿತು. 

2009ರ ಆವೃತ್ತಿಯಲ್ಲಿ ಫೈನಲ್ ಪ್ರವೇಶಿಸಿದ ಆರ್‌ಸಿಬಿ, ಡೆಕ್ಕನ್ ಚಾರ್ಜಸ್ ವಿರುದ್ಧ ಮುಗ್ಗರಿಸಿತು. 2011ರಲ್ಲಿ ಫೈನಲ‌ಗೆ ಲಗ್ಗೆ ಇಟ್ಟ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ದ ಸೋಲು ಕಂಡಿತ್ತು. ಇನ್ನು 2016ರಲ್ಲಿ ಫೈನಲ್ ಪ್ರವೇಶಿಸಿದ ಆರ್‌ಸಿಬಿ, ಸನ್‌ರೈಸರ್ಸ್ ಹೈದರಾಬಾದ್ ವಿರುದ್ದ ಸೋಲು ಕಂಡಿತ್ತು. 

ಪ್ರತಿ ಬಾರಿ ಹೇಳಿದ್ದರು ಈ ಸಲ ಕಪ್ ನಮ್ದೆ, ಇಲ್ಲಿದೆ ಕಪ್; ಕನ್ನಡದಲ್ಲೇ ಸಂಭ್ರಮ ಹಂಚಿಕೊಂಡ ಶೇಯಾಂಕ!

ಮಹಿಳಾ ಆರ್‌ಸಿಬಿ ತಂಡ 2023ರಲ್ಲಿ ಮೊದಲ ಬಾರಿಗೆ ಕಣಕ್ಕಿಳಿಯಿತು. ಆದರೆ ಚೊಚ್ಚಲ ಆವೃತ್ತಿಯಲ್ಲಿ ಲೀಗ್ ಹಂತದಿಂದಲೇ ಹೊರಬಿದ್ದಿತ್ತು. 5 ತಂಡಗಳ ಪೈಕಿ 4ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು. ಆದರೆ ಎರಡನೇ ಆೃತ್ತಿಯಲ್ಲಿ ಆರ್‌ಸಿಬಿ ರೋಚಕ ಹೋರಾಟದ ಮೂಲಕ ಫೈನಲ್ ಪ್ರವೇಶಿಸಿತು. ಫೈನಲ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ದ 8 ವಿಕೆಟ್ ಭರ್ಜರಿ ಗೆಲುವು ದಾಖಲಿಸಿ ಟ್ರೋಫಿ ಗೆದ್ದುಕೊಂಡಿದೆ.

Latest Videos
Follow Us:
Download App:
  • android
  • ios