ವಿಜಯ್ ಹಜಾರೆ ಟ್ರೋಫಿ: ಸೋಲಿನ ಬೆನ್ನಲ್ಲೇ ಅಶ್ವಿನ್’ಗೆ ಆಘಾತ..?

ಟೀಂ ಇಂಡಿಯಾ ಕ್ರಿಕೆಟಿಗ ರವಿಚಂದ್ರನ್ ಅಶ್ವಿನ್ ವಿಜಯ್ ಹಜಾರೆ ಫೈನಲ್ ಪಂದ್ಯದಲ್ಲಿ ಮಾಡಿದ ಎಡವಟ್ಟು ಬಿಸಿಸಿಐ ಕೆಂಗಣ್ಣಿಗೆ ಗುರಿಯಾಗುವ ಸಾಧ್ಯತೆಯಿದೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...

Vijay Hazare Trophy 2019 Ravichandran Ashwin risks being fined for sporting BCCI logo on helmet

ಬೆಂಗಳೂರು[ಅ.26]: ತಮಿಳು​ನಾಡು ತಂಡದ ತಾರಾ ಆಟ​ಗಾರ ಆರ್‌.ಅ​ಶ್ವಿನ್‌ ಶುಕ್ರ​ವಾರ 3ನೇ ಕ್ರಮಾಂಕ​ದಲ್ಲಿ ಕ್ರೀಸ್‌ಗಿಳಿ​ದಿದ್ದು ಅಚ್ಚ​ರಿಗೆ ಕಾರ​ಣ​ವಾ​ಯಿತು. ಆದರೆ ಅಶ್ವಿನ್‌ ಭಾರತ ತಂಡದ ಹೆಲ್ಮೆಟ್‌ ಧರಿಸಿ ಬ್ಯಾಟಿಂಗ್‌ ಮಾಡಿದ್ದು, ಅವ​ರಿಗೆ ಸಮ​ಸ್ಯೆ ಉಂಟು ಮಾಡುವ ಸಾಧ್ಯತೆ ಇದೆ.

Vijay Hazare Trophy 2019 Ravichandran Ashwin risks being fined for sporting BCCI logo on helmet

ವಿಜಯ್ ಹಜಾರೆ ಟ್ರೋಫಿ; ತಮಿಳುನಾಡು ಮಣಿಸಿ ಕಪ್ ಗೆದ್ದ ಕರ್ನಾಟಕ!

ದೇಶೀಯ ಕ್ರಿಕೆಟ್‌ ನಿಯಮದ ಪ್ರಕಾರ ಬಿಸಿಸಿಐ ಲೋಗೋ ಇರುವ ಹೆಲ್ಮೆಟ್‌ ಧರಿಸುವಂತಿಲ್ಲ. ಒಂದು ವೇಳೆ ಅದೇ ಹೆಲ್ಮೆಟ್‌ ಬಳಸುತ್ತಿದ್ದರೆ, ಲೋಗೋ ಮೇಲೆ ಟೇಪ್‌ ಸುತ್ತಬೇಕು. ಕರ್ನಾಟಕದ ಮಯಾಂಕ್‌, ರಾಹುಲ್‌ ತಮ್ಮ ಹೆಲ್ಮೆಟ್‌ ಮೇಲಿನ ಬಿಸಿ​ಸಿಐ ಲೋಗೋಗೆ ಟೇಪ್‌ ಸುತ್ತಿದ್ದರು.

KPL ಫಿಕ್ಸಿಂಗ್: ಇಬ್ಬರು ಕ್ರಿಕೆಟಿಗರು ಬಂಧನ..!

ವಿಜಯ್ ಹಜಾರೆ ಟೂರ್ನಿಯ ಫೈನಲ್ ಪಂದ್ಯದಲ್ಲಿ ಕರ್ನಾಟಕ-ತಮಿಳುನಾಡು ತಂಡಗಳು ಮುಖಾಮುಖಿಯಾಗಿದ್ದವು. ಮೊದಲು ಬ್ಯಾಟ್ ಮಾಡಿದ ತಮಿಳುನಾಡು ತಂಡ 252 ರನ್ ಬಾರಿಸಿ ಆಲೌಟ್ ಆಯಿತು. ಮೂರನೇ ಕ್ರಮಾಂಕದಲ್ಲಿ ಆಡಲಿಳಿದ ಅಶ್ವಿನ್ ಕೇವಲ 8 ರನ್ ಗಳಿಸಿ ಕೌಶಿಕ್’ಗೆ ವಿಕೆಟ್ ಒಪ್ಪಿಸಿದರು. ಇನ್ನು ಗುರಿ ಬೆನ್ನತ್ತಿದ ಕರ್ನಾಟಕ 23 ಓವರ್’ಗೆ 1 ವಿಕೆಟ್ ಕಳೆದುಕೊಂಡು 146 ರನ್ ಬಾರಿಸಿತ್ತು. ಈ ವೇಳೆ ಮಂದಬೆಳಕು ಹಾಗೂ ಮಳೆ ಅಡ್ಡಿಪಡಿಸಿದ್ದರಿಂದ ವಿಜೆಡಿ ನಿಯಮದನ್ವಯ ಕರ್ನಾಟಕ ತಂಡವನ್ನು 60 ರನ್’ಗಳಿಂದ ಜಯಶಾಲಿ ಎಂದು ಘೋಷಿಸಲಾಯಿತು. ಇದರೊಂದಿಗೆ ಕರ್ನಾಟಕ 4ನೇ ಬಾರಿಗೆ ವಿಜಯ್ ಹಜಾರೆ ಟ್ರೋಫಿ ಕೈವಶ ಮಾಡಿಕೊಂಡಿತು.

 

Latest Videos
Follow Us:
Download App:
  • android
  • ios