Asianet Suvarna News Asianet Suvarna News

ಇಂಡಿಯಾ ಮ್ಯಾಚ್ ಇದ್ರೆ ಕೃಷಿ‌ ಕೆಲಸಕ್ಕೆ ಗುಡ್ ಬೈ: ರೈತನ ಕ್ರಿಕೆಟ್ ಪ್ರೇಮದ ಬಗ್ಗೆ ವಿಡಿಯೋ ಸಖತ್ ವೈರಲ್..!

ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಕೆ.ಹುಣಸಿಕಟ್ಟಿ ಗ್ರಾಮದ ಶೇಖರಯ್ಯ ಹೀಗೆ ಅರಳು ಉರಿದಂತೆ ಮಾತನಾಡುತ್ತಿದ್ದರೆ. ಕ್ರಿಕೆಟ್ ಬಗೆಗಜನ ಅವರ ಪ್ರೀತಿ ಅನಾವರಣಗೊಳ್ಳುತ್ತೆ. ಇಂಡಿಯಾ ಮ್ಯಾಚ್ ಇದ್ದ ದಿನ ನಮಗೆ ಸರಕಾರಿ ರಜೆನೇ ನಮ್ಮ ಕೆಲಸ ಬೇಕಾದಷ್ಟು ಇರಲಿ ಅವತ್ತು ಎಲ್ಲಾ ಕೆಲಸ ಬಿಟ್ಟು ಟಿವಿ ಮುಂದೆ ಕುಳಿತಿಕೊಳ್ಳೋದೆ ಅಂತಾರೆ.

Video about Farmer's Love for Cricket has gone Viral grg
Author
First Published Nov 17, 2023, 9:18 PM IST

ಹುಬ್ಬಳ್ಳಿ(ನ.17):  ಭಾರತ ವಿಶ್ವಕಪ್ ಕ್ರಿಕೆಟ್‌ ನಲ್ಲಿ ಗೆಲುವಿನ ನಾಗಾಲೋಟ ಮುಂದುವರೆಸಿದ್ದು, ಫೈನಲ್‌ಗೆ ಬಂದು‌ ತಲುಪಿದೆ. ಕೋಟ್ಯಂತರ ಭಾರತೀಯರು ಈ ಬಾರಿ ಭಾರತ ತಂಡ ವಿಶ್ವಕಪ್ ಗೆದ್ದೇ ಗೆಲ್ಲುತ್ತೆ ಎಂಬ ವಿಶ್ವಾಸದಲ್ಲಿದ್ದಾರೆ. 

ಭಾನುವಾರ ನಡೆಯಲಿರುವ ವಿಶ್ವಕಪ್ ಕ್ರಿಕೆಟ್ ಫೈನಲ್ ಎಲ್ಲರೂ ಕಾದು ಕುಳಿತಿದ್ದಾರೆ. ಅದರಲ್ಲೂ ಇಲ್ಲೊಬ್ಬ ರೈತ ಕ್ರಿಕೆಟ್ ಬಗೆಗಿನ ವಿಭಿನ್ನ ಪ್ರೀತಿ ಈಗ ವೃರಲ್ ಆಗಿದೆ. ಭಾರತ ತಂಡ ಅಂಗಳದಲ್ಲಿ ಕ್ರಿಕೆಟ್ ಆಡುತ್ತೆ ಅಂದ್ರೆ ಈ ರೈತನಿಗೆ ಅದು ಹಬ್ಬದ ಸಂಭ್ರಮ. ಇನ್ನೂ ಈ ಬಾರಿ ವಲ್ಡ್ ಕಪ್ ಫೈನಲ್ ಗೆ ಹೋಗಿದ್ದು ಭಾನುವಾರ ಫೈನಲ್ ಮ್ಯಾಚ್ ನೋಡಲು ಈಗಲೇ ತಯಾರಿ‌ ನಡೆಸಿದ್ದಾರೆ. ತಮ್ಮ ಕೃಷಿ ಚಟುವಟಿಕೆಗಳ ಬದಿಗೊತ್ತಿ ತಾವು ಯಾವ ರೀತಿ  ಮ್ಯಾಚ್ ನೋಡ್ತಾರೆ ಅನ್ನೋದನ್ನ ಅವರದ್ದೇ ಶೈಲಿಯಲ್ಲಿ ಬಿಚ್ಚಿಟ್ಟಿದ್ದಾರೆ.

ಟೀಂ ಇಂಡಿಯಾದ ಪ್ಯಾಕೇಜ್ ಸ್ಟಾರ್ ರಾಹುಲ್: DRS ತೆಗೆದುಕೊಳ್ಳೋದ್ರಲ್ಲೂ ಕನ್ನಡಿಗ ಪಂಟರ್..!

ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಕೆ.ಹುಣಸಿಕಟ್ಟಿ ಗ್ರಾಮದ ಶೇಖರಯ್ಯ ಹೀಗೆ ಅರಳು ಉರಿದಂತೆ ಮಾತನಾಡುತ್ತಿದ್ದರೆ. ಕ್ರಿಕೆಟ್ ಬಗೆಗಜನ ಅವರ ಪ್ರೀತಿ ಅನಾವರಣಗೊಳ್ಳುತ್ತೆ. ಇಂಡಿಯಾ ಮ್ಯಾಚ್ ಇದ್ದ ದಿನ ನಮಗೆ ಸರಕಾರಿ ರಜೆನೇ ನಮ್ಮ ಕೆಲಸ ಬೇಕಾದಷ್ಟು ಇರಲಿ ಅವತ್ತು ಎಲ್ಲಾ ಕೆಲಸ ಬಿಟ್ಟು ಟಿವಿ ಮುಂದೆ ಕುಳಿತಿಕೊಳ್ಳೋದೆ ಅಂತಾರೆ.

ಅಲ್ಲದೇ ಇಂಡಿಯಾದವರ ಆಟ ನಮಗೆ ಮನಸ್ಸಿಗೆ ಬಂದೈತ್ರಿ. ಫೈನಲ್ ಮ್ಯಾಚ್ ಇಂಡಿಯಾದವರು ಗೆಲ್ಲಬೇಕ್ರೀ ಹಾಗಂತ ನಾವು ಪರಮಾತ್ಮನ ಹತ್ತಿರ ಬೇಡಿಕೊಳ್ಳತೇವ್ರೀ ಅನ್ನೋ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

Follow Us:
Download App:
  • android
  • ios