Asianet Suvarna News Asianet Suvarna News

ಅವಕಾಶ ಸಿಕ್ಕಿದರೇ ದಿನೇಶ್ ಕಾರ್ತಿಕ್ ಯಾವ ತಾರೆ ಜತೆ ಊಟ ಮಾಡಲು ಇಷ್ಟಪಡುತ್ತಾರಂತೆ ಗೊತ್ತಾ..?

ರಾಜ್‌ಕೋಟ್‌ನಲ್ಲಿ ಟೀಂ ಇಂಡಿಯಾ ಪಾಲಿಗೆ ಹೀರೋವಾದ ದಿನೇಶ್ ಕಾರ್ತಿಕ್
ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಚೊಚ್ಚಲ ಅರ್ಧಶತಕ ಚಚ್ಚಿದ ಡಿಕೆ
ರ‍್ಯಾಪಿಡ್ ಪೈರ್ ಪ್ರಶ್ನೆಗಳಿಗೆ ಮನಬಿಚ್ಚಿ ಉತ್ತರ ನೀಡಿದ ದಿನೇಶ್ ಕಾರ್ತಿಕ್

Veteran Cricketer Dinesh Karthik like to take lunch with Roger Federer kvn
Author
Bengaluru, First Published Jun 18, 2022, 4:18 PM IST

ಬೆಂಗಳೂರು(ಜೂ.18): ಟೀಂ ಇಂಡಿಯಾ ಅನುಭವಿ ವಿಕೆಟ್ ಕೀಪರ್ ಬ್ಯಾಟರ್ ದಿನೇಶ್ ಕಾರ್ತಿಕ್‌ (Dinesh Karthik), ದಕ್ಷಿಣ ಆಫ್ರಿಕಾ ಎದುರಿನ ನಾಲ್ಕನೇ ಟಿ20 ಪಂದ್ಯದಲ್ಲಿ ಅಕರ್ಷಕ ಅರ್ಧಶತಕ ಸಿಡಿಸುವ ಮೂಲಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. 2006ರಲ್ಲಿ ಮೊದಲ ಅಂತಾರಾಷ್ಟ್ರೀಯ ಟಿ20 ಪಂದ್ಯವನ್ನಾಡಿದ್ದ ದಿನೇಶ್ ಕಾರ್ತಿಕ್ ಬರೋಬ್ಬರಿ 16 ವರ್ಷಗಳ ಬಳಿಕ ಮೊದಲ ಅಂತಾರಾಷ್ಟ್ರೀಯ ಟಿ20 ಅರ್ಧಶತಕ ಸಿಡಿಸುವಲ್ಲಿ ಯಶಸ್ವಿಯಾಗಿದ್ದಾರೆ.

ರಾಜ್‌ಕೋಟ್‌ನಲ್ಲಿರುವ ಸೌರಾಷ್ಟ್ರ ಕ್ರಿಕೆಟ್ ಸಂಸ್ಥೆ ಮೈದಾನದಲ್ಲಿ ನಡೆದ ನಾಲ್ಕನೇ ಟಿ20 ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ (Team India), ದಿನೇಶ್ ಕಾರ್ತಿಕ್ ಆಕರ್ಷಕ ಅರ್ಧಶತಕ ಹಾಗೂ ಹಾರ್ದಿಕ್ ಪಾಂಡ್ಯ (Hardik Pandya) ಸಮಯೋಚಿತ ಬ್ಯಾಟಿಂಗ್‌ ನೆರವಿನಿಂದ 6 ವಿಕೆಟ್ ಕಳೆದುಕೊಂಡು 169 ರನ್ ಕಲೆಹಾಕಿತ್ತು. ಇನ್ನು ಗುರಿ ಬೆನ್ನತ್ತಿದ ದಕ್ಷಿಣ ಆಫ್ರಿಕಾ ತಂಡವು ಕೇವಲ 87 ರನ್‌ಗಳಿಗೆ ಸರ್ವಪತನ ಕಾಣುವ ಮೂಲಕ 82 ರನ್‌ಗಳ ಅಂತರದ ಹೀನಾಯ ಸೋಲು ಕಂಡಿದೆ. ಇನ್ನು ಈ ಗೆಲುವಿನೊಂದಿಗೆ 5 ಪಂದ್ಯಗಳ ಟಿ20 ಸರಣಿಯಲ್ಲಿ ಟೀಂ ಇಂಡಿಯಾ 2-2 ಅಂತರದ ಸಮಬಲ ಸಾಧಿಸಿದೆ. ಇದೀಗ ಜೂನ್ 19ರಂದು ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿರುವ ನಿರ್ಣಾಯಕ ಟಿ20 ಪಂದ್ಯದ ಮೇಲೆ ಎಲ್ಲರ ಚಿತ್ತ ನೆಟ್ಟಿದೆ.

37 ವರ್ಷದ ದಿನೇಶ್ ಕಾರ್ತಿಕ್‌ ನಾಲ್ಕನೇ ಟಿ20 ಪಂದ್ಯದ ಗೆಲುವಿನ ಹೀರೋ ಎನಿಸಿಕೊಂಡಿದ್ದಾರೆ. ಇದೀಗ ಕೆಲ ದಿನಗಳ ಹಿಂದಷ್ಟೇ ದಿನೇಶ್ ಕಾರ್ತಿಕ್ ಜತೆಗೆ ಬಿಸಿಸಿಐ ನಡೆಸಿದ ಇದು ಅಥವಾ ಅದು? ಪ್ರಶ್ನೆಗೆ ಥಟ್ ಅಂತ ಉತ್ತರ ನೀಡಿದ್ದಾರೆ. ದಿನೇಶ್ ಕಾರ್ತಿಕ್‌ ಮನಬಿಚ್ಚಿ ಮಾತಾಡಿದ ರ‍್ಯಾಪಿಡ್ ಪೈರ್ ಹೀಗಿತ್ತು ನೋಡಿ.

ಪ್ರಶ್ನೆ: ತಂಡದ ಜತೆ ಟೀಂ ಡಿನ್ನರ್ ಅಥವಾ ರಾತ್ರಿ ಸಿನೆಮಾ ನೋಡೋದಾ?
ಉತ್ತರ: ಟೀಂ ಡಿನ್ನರ್

ಪ್ರಶ್ನೆ:  ಟೀ ಅಥವಾ ಕಾಫಿ?
ಉತ್ತರ: ಟೀ

ಪ್ರಶ್ನೆ: ಪಾರ್ಟಿಯಲ್ಲಿ ಹಾಡಲು ಬಯಸುತ್ತೀರೋ ಅಥವಾ ಡ್ಯಾನ್ಸ್ ಮಾಡಲು ಇಷ್ಟಪಡುತ್ತೀರೊ?
ಉತ್ತರ: ಎರಡೂ ಚೆನ್ನಾಗಿ ಬರುವುದಿಲ್ಲ. ಇದಕ್ಕೆ ಉತ್ತರಿಸೋದು ಕಷ್ಟ

ಪ್ರಶ್ನೆ:  ಪರ್ವತಗಳು ಇಷ್ಟವೋ ಅಥವಾ ಬೀಚ್‌ಗಳು ಇಷ್ಟವೋ?
ಉತ್ತರ: ಪರ್ವತಗಳು, ಪರ್ವತಗಳ ಕಡೆ ಹೋದರೆ ಶಾಂತಿ, ನೆಮ್ಮದಿ ಸಿಗುತ್ತದೆ.

ಪ್ರಶ್ನೆ:  ಅಡುಗೆ ಮಾಡೋದು ಇಷ್ಟವೋ ಕ್ಲೀನ್ ಮಾಡೋದು ಇಷ್ಟವೋ?
ಉತ್ತರ: ನಾನು ಕ್ಲೀನಿಂಗ್ ಮಾಡುವುದನ್ನು ಎಂಜಾಯ್ ಮಾಡುತ್ತೇನೆ.

ಪ್ರಶ್ನೆ: ಯಾವ ತಾರೆ ಜತೆ ಊಟ ಮಾಡಲು ಬಯಸುತ್ತಾರೆ? 
ಉತ್ತರ: ರೋಜರ್ ಫೆಡರರ್. ಅವರು ಮೈದಾನದೊಳಗೆ ಹಾಗೂ ಮೈದಾನದಾಚೆಯ ಅವರ ನಡವಳಿಕೆ ನನಗೆ ಇಷ್ಟ

ಪ್ರಶ್ನೆ:  ಹಾರಾಡುವ ಸಾಮರ್ಥ್ಯವಿದ್ದರೇ? ಮನಸ್ಸು ಓದುವ ಸಾಮರ್ಥ್ಯವಿದ್ದರೇ ಏನು ಮಾಡುತ್ತಿದ್ರಿ?
ಉತ್ತರ: ನನಗೆ ಹಾರಾಡುವ ಸಾಮರ್ಥ್ಯವಿದ್ದರೇ ಅಲಾಸ್ಕಾ ಪರ್ವತದ ಮೇಲೆ ಹಾರಾಡುತ್ತಿದ್ದೆ. ಅದರ ಬಗ್ಗೆ ಸಾಕಷ್ಟು ಕೇಳಿದ್ದೇನೆ. ಇನ್ನು ಯಾರದ್ದಾದರೂ ಮೈಂಡ್ ಓದುವ ಸಾಮರ್ಥ್ಯವಿದ್ದರೇ ಧೋನಿಯ ಮೈಂಡ್ ಓದುತ್ತಿದ್ದೆ.

ಪ್ರಶ್ನೆ: ರೊನಾಲ್ಡೋನಾ ಮೆಸ್ಸಿನಾ?
ಉತ್ತರ: ಲಿಯೋನೆಲ್ ಮೆಸ್ಸಿ. ನಾನು ಆರಂಭದಿಂದಲೂ ಮೆಸ್ಸಿ ಆಟವನ್ನು ಎಂಜಾಯ್ ಮಾಡುತ್ತಿದ್ದೇನೆ.

ಪ್ರಶ್ನೆ: ಫೆಡರರ್ ಇಷ್ಟವೋ ನಡಾಲ್ ಇಷ್ಟವೋ?
ಉತ್ತರ: ರೋಜರ್ ಫೆಡರರ್.

ಪ್ರಶ್ನೆ: ಇನ್‌ಸ್ಟಾಗ್ರಾಂ ಇಷ್ಟವೋ ಟ್ವಿಟರ್ ಇಷ್ಟವೋ?
ಉತ್ತರ: ಟ್ವಿಟರ್

ಪ್ರಶ್ನೆ: ಒಂದು ದಿನ ಫೋನ್ ಇಲ್ಲದೇ ಇರಲು ಸಾಧ್ಯವೇ ಅಥವಾ ವರ್ಕೌಟ್ ಇಲ್ಲದೇ ಇರಲು ಸಾಧ್ಯವೇ? 
ಉತ್ತರ: ಫೋನ್ ಇಲ್ಲದೇ ಒಂದು ದಿನ ಕಾಲ ಕಳೆಯುವುದು ಸುಲಭ ನನಗೆ. ನಾನು ಫೋನ್‌ ಮೇಲೆ ಹೆಚ್ಚು ಅಡಿಕ್ಟ್ ಆಗಿಲ್ಲ.

ಪ್ರಶ್ನೆ:  ಲ್ಯಾಂಬೊರ್ಗಿನಿ ಇಷ್ಟವೋ ಅಥವಾ ಮಸ್ಟಾಗ್ ಇಷ್ಟವೋ?
ಉತ್ತರ: ಲ್ಯಾಂಬೊರ್ಗಿನಿ

ಪ್ರಶ್ನೆ: ನಿಮ್ಮ ಬಗ್ಗೆ ಪುಸ್ತಕ ಬಿಡುಗಡೆಯಾದ್ರೆ ಇಷ್ಟವೋ ಅಥವಾ ಸಿನೆಮಾವಾದ್ರೆ ಇಷ್ಟವೋ?
ಉತ್ತರ: ಸಿನಿಮಾ ಆದರೆ ಚೆನ್ನಾಗಿರುತ್ತದೆ.
 

Follow Us:
Download App:
  • android
  • ios