ಕೇವಲ 15ನೇ ವಯಸ್ಸಿನಲ್ಲಿ ಬಿಹಾರ ತಂಡವನ್ನು ಮುನ್ನಡೆಸುವ ಮೂಲಕ ವೈಭವ್ ಸೂರ್ಯವಂಶಿ ಟಿ20 ಕ್ರಿಕೆಟ್ ಇತಿಹಾಸದಲ್ಲೇ ಅತ್ಯಂತ ಕಿರಿಯ ನಾಯಕ ಎಂಬ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಇವರು ಸೈಯದ್ ಮುಷ್ತಾಕ್ ಅಲಿ ಪಂದ್ಯಾವಳಿಯಲ್ಲಿ ಈ ಐತಿಹಾಸಿಕ ಸಾಧನೆ ಮಾಡಿದ್ದಾರೆ.
15 ನೇ ವಯಸ್ಸಿನಲ್ಲಿ ವಿಶ್ವದ ಸ್ಟಾರ್ ಬೌಲರ್ಗಳ ಮೊದಲ ಎಸೆತದಲ್ಲೇ ಸಿಕ್ಸರ್ ಬಾರಿಸಿ ಕ್ರೀಡಾ ಜಗತ್ತನ್ನೇ ಬೆಚ್ಚಿಬೀಳಿಸಿದ ವೈಭವ್ ಅಂತರರಾಷ್ಟ್ರೀಯ ಕ್ರಿಕೆಟ್ನಲ್ಲೂ ತಮ್ಮ ಸಾಮರ್ಥ್ಯ ತೋರಿಸಿದ್ದಾರೆ. ಈಗ, ಅವರು ಹೊಸ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಭಾರತದ ದೇಶೀಯ ಕ್ರಿಕೆಟ್ನಲ್ಲಿ ಒಂದು ಐತಿಹಾಸಿಕ ಘಟನೆ ದಾಖಲಾಗಿದ್ದು, ಕೇವಲ 15 ವರ್ಷದ ಯುವ ಆಟಗಾರನೊಬ್ಬ ಇಡೀ ಕ್ರೀಡಾ ಜಗತ್ತಿನ ಗಮನ ಸೆಳೆದಿದ್ದಾನೆ. ಇದಕ್ಕೆ ಕಾರಣ ವೈಭವ್ ಸೂರ್ಯವಂಶಿ ಅವರಿಗೆ ನೀಡಲಾದ ನಾಯಕತ್ವ. ಅವರು ಪ್ರಸ್ತುತ ಬಿಹಾರ ತಂಡವನ್ನು ಮುನ್ನಡೆಸುತ್ತಿದ್ದಾರೆ.
ವೈಭವ್ಗೆ ನಾಯಕತ್ವದ ಜವಾಬ್ದಾರಿ!
ಹೋಳ್ಕರ್ ಕ್ರೀಡಾಂಗಣದಲ್ಲಿ ಬಿಹಾರ ಮತ್ತು ಸೌರಾಷ್ಟ್ರ ನಡುವಿನ ಪಂದ್ಯದಲ್ಲಿ ವೈಭವ್ ಸೂರ್ಯವಂಶಿ ಅವರಿಗೆ ಬಿಹಾರ ತಂಡದ ನಾಯಕತ್ವದ ಜವಾಬ್ದಾರಿ ನೀಡಲಾಗಿದೆ. ವೈಭವ್ ಬಿಹಾರ ತಂಡ ಮುನ್ನಡೆಸುವ ಮೂಲಕ ನಾಯಕನಾಗಿ ಪಾದಾರ್ಪಣೆ ಮಾಡಿದರು ಮತ್ತು ಅವರು ಇತಿಹಾಸವನ್ನೂ ಸೃಷ್ಟಿಸಿದ್ದಾರೆ. ಟಿ20 ಕ್ರಿಕೆಟ್ ಇತಿಹಾಸದಲ್ಲೇ ಅತ್ಯಂತ ಕಿರಿಯ ನಾಯಕ ಎಂಬ ವಿಶಿಷ್ಟ ವಿಶ್ವ ದಾಖಲೆಯನ್ನು ವೈಭವ್ ಸೂರ್ಯವಂಶಿ ನಿರ್ಮಿಸಿದ್ದಾರೆ. ಕೇವಲ 15 ವರ್ಷ, 232 ದಿನಗಳ ವಯಸ್ಸಿನಲ್ಲಿ ಅವರು ಈ ಐತಿಹಾಸಿಕ ಮೈಲಿಗಲ್ಲು ತಲುಪಿದ್ದಾರೆ. ಇಂದೋರ್ನ ಹೋಳ್ಕರ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಬಿಹಾರ ಮತ್ತು ಸೌರಾಷ್ಟ್ರ ನಡುವಿನ ರೋಚಕ ಪಂದ್ಯದಲ್ಲಿ ವೈಭವ್ ಹೆಸರು ಭಾರೀ ಸದ್ದು ಮಾಡುತ್ತಿದೆ. ಈ ಪಂದ್ಯದಲ್ಲಿ ಬ್ಯಾಟಿಂಗ್ ಮಾಡಿದ ವೈಭವ್ 18 ರನ್ ಗಳಿಸಿ ತಂಡಕ್ಕೆ ಅಮೂಲ್ಯ ಕೊಡುಗೆ ನೀಡಿದರು. ದೊಡ್ಡ ಮೊತ್ತ ಗಳಿಸಲು ಸಾಧ್ಯವಾಗದಿದ್ದರೂ, ಕೇವಲ 15ನೇ ವಯಸ್ಸಿನಲ್ಲಿ ಹಿರಿಯರ ತಂಡವನ್ನು ಮುನ್ನಡೆಸುವ ಜವಾಬ್ದಾರಿ ಹೊತ್ತಿರುವುದು ಕ್ರಿಕೆಟ್ ಲೋಕದಲ್ಲಿ ದೊಡ್ಡ ಸಾಧನೆಯಾಗಿದೆ.
ಅತ್ಯಂತ ಕಿರಿಯ ನಾಯಕ ವೈಭವ್!
ಇದರ ಮಧ್ಯೆ ಅವರು ಸೈಯದ್ ಮುಷ್ತಾಕ್ ಅಲಿ ಪಂದ್ಯಾವಳಿಯಲ್ಲಿ ಅತ್ಯಂತ ಕಿರಿಯ ನಾಯಕ ಎಂಬ ಗೌರವಕ್ಕೂ ಪಾತ್ರರಾಗಿದ್ದಾರೆ. ಹಾಗಾಗಿ ಈಗ ವೈಭವ್ ಸೂರ್ಯವಂಶಿ ಅವರ ದಾಖಲೆ ಮುರಿಯುವ ಓಟ ಮುಂದುವರೆದಿದ್ದಾರೆ. ಅಲ್ಲದೇ ಸಚಿನ್ಗೂ ಈ ರೀತಿಯ ನಾಯಕತ್ವದ ಪಟ್ಟಗಳು ಸುಲಭಕ್ಕೆ ಸಿಕ್ಕಿರಲಿಲ್ಲ. ಇನ್ನೊಂದೆಡೆ ಇದು ಲಕ್ ಅಥವಾ ಪರಿಶ್ರಮವೇ? ಎನ್ನುವ ಮಾತುಗಳು ಹರಿದಾಡುತ್ತಿವೆ. ಈ ನಿಟ್ಟಿನಲ್ಲಿ ಎಲ್ಲದರ ನಡುವೆ ಕ್ರಿಕೆಟ್ ದೇವರಿಗೂ ಆ ವಯಸ್ಸಿನಲ್ಲಿ ಸಿಗದ ಸ್ಥಾನಮಾನವನ್ನು, ಈ ಬೇಬಿ ಬಾಯ್ ಪಡೆದುಕೊಂಡಿದ್ದಾನೆ.
ಅಂತಿಮವಾಗಿ!
ಒಟ್ಟಾರೆಯಾಗಿ, 15ನೇ ವಯಸ್ಸಿನಲ್ಲೇ ಹಿರಿಯರ ತಂಡವನ್ನು ಮುನ್ನಡೆಸುವ ಮೂಲಕ ವೈಭವ್ ಸೂರ್ಯವಂಶಿ ತಮ್ಮ ಅದ್ಭುತ ಪ್ರತಿಭೆ ಮತ್ತು ನಾಯಕತ್ವದ ಗುಣವನ್ನು ಸಾಬೀತುಪಡಿಸಿದ್ದಾರೆ. ಈ ವಿಶ್ವ ದಾಖಲೆಯು ಭಾರತೀಯ ಕ್ರಿಕೆಟ್ನಲ್ಲಿ ಹೊಸ ಭರವಸೆ ಮೂಡಿಸಿದ್ದು, ಮುಂದಿನ ದಿನಗಳಲ್ಲಿ ವೈಭವ್ ಇನ್ನಷ್ಟು ಎತ್ತರಕ್ಕೆ ಬೆಳೆಯಲಿದ್ದಾರೆ ಎಂಬುದಕ್ಕೆ ಇದು ಮುನ್ನುಡಿಯಾಗಿದೆ.














