ಕ್ರಿಕೆಟ್ ಸೆನ್ಸೇಷನ್‌ ಆಗಿರುವ ಯುವ ಆಟಗಾರ ರಾಜಸ್ಥಾನ ರಾಯಲ್ಸ್ ತಂಡದ ವೈಭವ್ ಸೂರ್ಯವಂಶಿ ಏರ್‌ಪೋರ್ಟ್‌ನಲ್ಲಿ ವಿಮಾನಕ್ಕಾಗಿ ಕಾಯುತ್ತಿದ್ದಾಗ ಸೆಲ್ಫಿ ಕೇಳಿದ ಇಬ್ಬರು ಬಾಲಕರ ಬಳಿ 100 ರೂಪಾಯಿ ಕೊಡುವಂತೆ ತಮಾಷೆ ಮಾಡಿದಂತಹ ಘಟನೆಯೊಂದು ನಡೆದಿದೆ.

ಫ್ಯಾನ್ಸ್ ಬಳಿ ಒಂದು ಫೋಟೋಗೆ ನೂರು ರೂ. ಕೇಳಿದ ವೈಭವ್ ಸೂರ್ಯವಂಶಿ

ಕ್ರಿಕೆಟ್ ಸೆನ್ಸೇಷನ್‌ ಆಗಿರುವ ಯುವ ಆಟಗಾರ ರಾಜಸ್ಥಾನ ರಾಯಲ್ಸ್ ತಂಡದ ವೈಭವ್ ಸೂರ್ಯವಂಶಿ ಏರ್‌ಪೋರ್ಟ್‌ನಲ್ಲಿ ವಿಮಾನಕ್ಕಾಗಿ ಕಾಯುತ್ತಿದ್ದಾಗ ಸೆಲ್ಫಿ ಕೇಳಿದ ಇಬ್ಬರು ಬಾಲಕರ ಬಳಿ 100 ರೂಪಾಯಿ ಕೊಡುವಂತೆ ತಮಾಷೆ ಮಾಡಿದಂತಹ ಘಟನೆಯೊಂದು ನಡೆದಿದೆ. ಈ ವೀಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದ್ದು, ವೈಭವ್ ಸೂರ್ಯವಂಶಿ ಅವರ ಹಾಸ್ಯಪ್ರಜ್ಞೆಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಸ್ವತಃ ರಾಜಸ್ಥಾನ ರಾಯಲ್ಸ್ ತಂಡ ಸ್ವತಃ ಈ ವೀಡಿಯೋವನ್ನು ತನ್ನ ಸೋಶಿಯಲ್ ಮೀಡಿಯಾ ಸೈಟ್‌ನಲ್ಲಿ ಹಾಕಿಕೊಂಡಿದ್ದು, ತನಗಿಂತ ಕೆಲ ವರ್ಷವಷ್ಟೇ ಸಣ್ಣವರಿರಬಹುದಾದ ಇಬ್ಬರು ಮಕ್ಕಳ ಬಳಿ ವೈಭವ್ ಸೂರ್ಯವಂಶಿ ಹಾಸ್ಯ ಮಾಡುವುದನ್ನು ಕಾಣಬಹುದು.

Add Asianetnews Kannada as a Preferred SourcegooglePreferred

ವಿಡಿಯೋದಲ್ಲೇನಿದೆ?

ವೀಡಿಯೋದಲ್ಲಿ ಕಾಣುವಂತೆ ಏರ್‌ಪೋರ್ಟ್‌ನಲ್ಲಿ ವೈಭವ್ ಸೂರ್ಯವಂಶಿ ಸೇರಿದಂತೆ ರಾಜಸ್ಥಾನ ರಾಯಲ್ಸ್ ತಂಡದ ಸದಸ್ಯರು ಕುಳಿತಿದ್ದು, ಈ ವೇಳೆ ಅಲ್ಲಿಗೆ ಬರುವ ಇಬ್ಬರು ಬಾಲಕರು ವೈಭವ್ ಸೂರ್ಯವಂಶಿ ಬಳಿ ಸೆಲ್ಫಿ ನೀಡುವಂತೆ ಕೇಳುತ್ತಾರೆ. ಆಗ ವೈಭವ್ ನಾನು ಉಚಿತವಾಗಿ ಯಾರಿಗೂ ಸೆಲ್ಫಿ ಕೊಡಲ್ಲ, ಒಂದು ಸೆಲ್ಪಿಗೆ 100 ರೂಪಾಯಿ ತೆಗೆದುಕೊಳ್ಳುತ್ತೇನೆ. ನೀವು 100 ರೂಪಾಯಿ ಕೊಡುವುದಾದರೆ ಹೇಳಿ ಸೆಲ್ಫಿ ತೆಗೆದುಕೊಳ್ಳೋಣ ಎಂದು ಗಂಭೀರವಾಗಿ ಹೇಳಿದ್ದಾನೆ. ಈ ವೇಳೆ ಕೆಲ ಸೆಕೆಂಡ್ ಮುಖ ಮುಖ ನೋಡಿದ ಬಾಲಕರು ಬಳಿಕ 200 ರೂಪಾಯಿಯನ್ನು ಕೈಯಲ್ಲಿ ಹಿಡಿದು ನಮಗಿಬ್ಬರಿಗೂ ನಿಮ್ಮ ಜೊತೆ ಸೆಲ್ಫಿ ಬೇಕು ಎಂದು 200 ರೂಪಾಯಿಯನ್ನು ವೈಭವ್ ಸೂರ್ಯವಂಶಿ ಅವರ ಕೈಯಲ್ಲಿಡುವುದಕ್ಕೆ ನೋಡುತ್ತಾರೆ.

ಇದನ್ನೂ ಓದಿ: ಸಂಧಾನದ ನಂತರವೂ ಸರಿಹೋಗದ ಸಂಸಾರ: 4 ದಿನದ ಹಿಂದಷ್ಟೇ ಮನೆಗೆ ಬಂದ ಪತ್ನಿಯ ಕೊಂದು ಮಗುವಿನೊಂದಿಗೆ ಬಾವಿಗೆ ಜಿಗಿದ ಪತಿ

ಈ ವೇಳೆ ಅರೇ ಸೋದರ ಸುಮ್ಮನೇ ತಮಾಷೆ ಮಾಡಿದೆ ಅಷ್ಟೇ ಎಂದು ಹೇಳಿದ ವೈಭವ್ ಇಬ್ಬರ ಜೊತೆಗೂ ಸೆಲ್ಫಿ ಕ್ಲಿಕ್ಕಿಸಿಕ್ಕೊಂಡಿದ್ದಾರೆ. ಈ ವೀಡಿಯೋ ಈಗ ಭಾರಿ ವೈರಲ್ ಆಗಿದೆ. ವಿಡಿಯೋ ನೋಡಿದ ನೆಟ್ಟಿಗರು ಮಕ್ಕಳು, ತಮ್ಮದೇ ವಯಸ್ಸಿನ ಹುಡುಗನ ಬಳಿ ಸೆಲ್ಫಿ ಕೇಳುತ್ತಿದ್ದಾರೆ ಎಂದು ಕಾಮೆಂಟ್ ಮಾಡಿದ್ದಾರೆ.

ವೈಭವ್ ಸೂರ್ಯವಂಶಿ ಕ್ರಿಕೆಟ್ ಸಾಧನೆ ಬಗ್ಗೆ ಹೇಳುವುದಾದರೆ ಇತ್ತೀಚೆಗೆ ರಾಜಸ್ಥಾನ್ ರಾಯಲ್ಸ್ ಹಾಗೂ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಸೂರ್ಯವಂಶಿ ಕೇವಲ 36 ಎಸೆತಗಳಲ್ಲಿ ತಮ್ಮ ಎರಡನೇ ಐಪಿಎಲ್ ಶತಕ ಗಳಿಸಿದರು. ಇದು ಐಪಿಎಲ್ ಇತಿಹಾಸದಲ್ಲಿ 3ನೇ ಅತ್ಯಂತ ವೇಗದ ಶತಕವಾಗಿದೆ. ಸೂರ್ಯವಂಶಿ ಅವರ ಬ್ಯಾಟಿಂಗ್ ಎಸ್‌ಆರ್‌ಹೆಚ್‌ ನಾಯಕ ಪ್ಯಾಟ್ ಕಮ್ಮಿನ್ಸ್ ಅವರ ಗಮನವನ್ನೂ ಸೆಳೆದಿದೆ.

ಇದನ್ನೂ ಓದಿ: ಜ್ಯೂಸ್ ಬಾಟಲ್ ಸಾಗಿಸುತ್ತಿದ್ದ ಲಾರಿ ಪಲ್ಟಿ: ಚಾಲಕನ ನೆರವಿಗೆ ಧಾವಿಸದೇ ಬಿಟ್ಟಿಯಾಗಿ ಸಿಕ್ಕ ಜ್ಯೂಸ್‌ಗೆ ಮುಗಿಬಿದ್ದ ಜನ

ಅವರು ನನ್ನ ಹೊಸ ನೆಚ್ಚಿನ ಆಟಗಾರ ಎಂದು ನಾನು ಭಾವಿಸುತ್ತೇನೆ. ಅವರು ಚೆಂಡನ್ನು ತುಂಬಾ ಕಠಿಣವಾಗಿ ಹೊಡೆಯುತ್ತಾರೆ. ಅದನ್ನು ನೋಡಲು ತುಂಬಾ ಚೆನ್ನಾಗಿದೆ. ಇದು ಒಳ್ಳೆಯ ಮಜಾ ನೀಡುತ್ತದೆ ಎಂದು ಕಮ್ಮಿನ್ಸ್ ಹೇಳಿದ್ದಾರೆ. ಒಬ್ಬ ಬೌಲರ್ ಆಗಿ ನೀವು ಹಣದ ಬಗ್ಗೆ ಸರಿಯಾಗಿ ಯೋಚಿಸಬೇಕು. ನೀವು ಸರಿಯಾಗಿಲ್ಲದಿದ್ದರೆ, ಅದು ಬಹಳ ದೂರ ಹೋಗುತ್ತದೆ. ಸೂರ್ಯವಂಶಿ ಆಟ ಪ್ರಭಾವಶಾಲಿಯಾಗಿದೆ. ಅವರು ತಮ್ಮ ವೃತ್ತಿಜೀವನಕ್ಕೆ ಉತ್ತಮ ಆರಂಭವನ್ನು ನೀಡಿದ್ದಾರೆ ಮತ್ತು ಹೌದು, ಅವರು ಆಡುವ ರೀತಿ ನನಗೆ ಇಷ್ಟವಾಗಿದೆ. ಅವರು ಆಟವನ್ನು ಮುನ್ನಡೆಸುತ್ತಾರೆ ಎಂದು ಕಮ್ಮಿನ್ಸ್ ಹೇಳಿದ್ದಾರೆ.

ಈ ಅವಧಿಯಲ್ಲಿ ವೈಭವ್ ಸೂರ್ಯವಂಶಿ ಇದುವರೆಗೆ ಎಂಟು ಪಂದ್ಯಗಳಲ್ಲಿ 44.63 ಸರಾಸರಿಯಲ್ಲಿ 234.87 ಸ್ಟ್ರೈಕ್ ರೇಟ್‌ನೊಂದಿಗೆ 357 ರನ್ ಗಳಿಸಿದ್ದಾರೆ. ಈ ಬಾರಿಯ ಐಪಿಎಲ್‌ನಲ್ಲಿ ಅವರು 31 ಬೌಂಡರಿ ಹಾಗೂ 32 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ.

Scroll to load tweet…