Asianet Suvarna News Asianet Suvarna News

ಅಂಡರ್ 19 ವಿಶ್ವಕಪ್: ಅಕ್ತರ್ ವೇಗದ ದಾಖಲೆ ಮುರಿದ ಜ್ಯೂ.ಮಲಿಂಗಾ ಮತೀಶಾ!

ಜ್ಯೂನಿಯರ್ ಲಸಿತ್ ಮಲಿಂಗಾ ಎಂದೇ ಕರೆಯಿಸಿಕೊಂಡಿರುವ ಶ್ರೀಲಂಕಾ ಅಂಡರ್ 19 ತಂಡದ ವೇಗಿ ಮತೀಶ್ ಪಥಿರಾನಾ ಇದೀಗ ವಿಶ್ವದಾಖಲೆ ಬರೆದಿದ್ದಾರೆ. ಪಾಕಿಸ್ತಾನ ಮಾಜಿ ವೇಗಿ ಶೋಯೆಬ್ ಅಕ್ತರ್ ವೇಗದ ದಾಖಲೆಯನ್ನೇ 17ರ ಪೋರ ಮುರಿದಿದ್ದಾನೆ. ಅಂಡರ್ 19 ವಿಶ್ವಕಪ್ ಟೂರ್ನಿಯಲ್ಲಿ ಮತೀಶಾ ಭಾರತ ವಿರುದ್ಧ ಈ ದಾಖಲೆ ಮಾಡಿದ್ದಾನೆ. 

Under 19 world cup Junior lasith malinga mateesha pathirana breaks shoaib akhtar record
Author
Bengaluru, First Published Jan 20, 2020, 8:50 PM IST

ಬ್ಲೊಮ್‌ಫೊಂಟೈನ್(ಜ.20): ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತ್ಯಂತ ವೇಗದ ಬೌಲ್ ಎಸೆದ ದಾಖಲೆ ಪಾಕಿಸ್ತಾನ ವೇಗಿ ಶೋಯೆಬ್ ಅಕ್ತರ್ ಹೆಸರಲ್ಲಿದೆ. ಅಕ್ತರ್ ಗಂಟೆಗೆ 161.3 ಕಿ.ಮೀ ವೇಗದಲ್ಲಿ ಬೌಲಿಂಗ್ ಮಾಡಿದ್ದಾರೆ. ಇದೀಗ  ಸೌತ್ ಆಫ್ರಿಕಾದಲ್ಲಿ ನಡೆಯುತ್ತಿರುವ ಅಂಡರ್ 19 ವಿಶ್ವಕಪ್ ಟೂರ್ನಿಯಲ್ಲಿ ಶ್ರೀಲಂಕಾ ವೇಗಿ ಮತೀಶಾ ಪಥಿರಾನಾ ಈ ದಾಖಲೆ ಮುರಿದಿದ್ದಾರೆ.

ಇದನ್ನೂ ಓದಿ: ಐಸಿಸಿ ಅಂಡರ್‌-19 ವಿಶ್ವಕಪ್‌: ಟೀಂ ಇಂಡಿಯಾ ಶುಭಾರಂಭ

ಶ್ರೀಲಂಕಾದ ಹಿರಿಯ ಕ್ರಿಕೆಟಿಗ ಲಸಿತ್ ಮಲಿಂಗಾ ಶೈಲಿಯಲ್ಲೇ ಬೌಲಿಂಗ್ ಮಾಡೋ ಮತೀಶಾ ಪಥಿರಾನಾ ಭಾರತ ವಿರುದ್ಧದ ಅಂಡರ್ 19 ವಿಶ್ವಕಪ್ ಟೂರ್ನಿ ಪಂದ್ಯದಲ್ಲಿ ಗಂಟೆಗೆ 175 ಕಿ.ಮೀ ವೇಗದಲ್ಲಿ ಬೌಲಿಂಗ್ ಮಾಡಿ ಎಲ್ಲಾ ದಾಖಲೆ ಅಳಿಸಿಹಾಕಿದ್ದಾರೆ. ಅಕ್ತರ್ ದಾಖಲೆಯನ್ನೇ ಮುರಿದ ಮತೀಶಾ ವಯಸ್ಸು ಕೇವಲ 17 ಅನ್ನೋದು ವಿಶೇಷ.

ಇದನ್ನೂ ಓದಿ: ಪೃಥ್ವಿ ಶತಕ, ನ್ಯೂಜಿಲೆಂಡ್‌ ವಿರುದ್ಧ ಭಾರತ ‘ಎ’ಗೆ ರೋಚಕ ಜಯ

ಭಾರತ ಬ್ಯಾಟಿಂಗ್ ಮಾಡುವ ವೇಳೆ ಮತೀಶಾ ಬರೋಬ್ಬರಿ 175 ಕಿ.ಮೀ ವೇಗದಲ್ಲಿ ಬೌನ್ಸರ್ ಎಸೆತ ಎಸೆದಿದ್ದಾರೆ. ಎಲ್ಲಾ ಮಾದರಿ ಕ್ರಿಕೆಟ್‌ನಲ್ಲಿ ಶೋಯೆಬ್ ಅಕ್ತರ್ ಎಸೆತವೇ ಗರಿಷ್ಠ ವೇಗವಾಗಿತ್ತು. ಆದರೆ ಮತೀಶಾ ಎಸೆತ ಅಕ್ತರ್ ದಾಖಲೆಯನ್ನು ಪುಡಿ ಪುಡಿ ಮಾಡಿದೆ. 

 

17ನೇ ವಯಸ್ಸಿಗೆ ಈ ರೀತಿ ವೇಗದಲ್ಲಿ ಬೌಲಿಂಗ್ ಮಾಡಿದರೆ ಭವಿಷ್ಯದಲ್ಲಿ ಈತನ ವೇಗಕ್ಕೆ ಬ್ಯಾಟ್ಸ್‌ಮನ್ ತಬ್ಬಿಬ್ಬಾಗುವುದು ಖಚಿತ ಎಂದು ಅಭಿಮಾನಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಹಲವು ಅಭಿಮಾನಿಗಳು ವೇಗ ಅಳತೆ ಮಾಪಕ ದೋಷ ಇರಬಹುದು. ಈ ಕುರಿತು ಐಸಿಸಿ ಸ್ಪಷ್ಟನೆ ನೀಡಬೇಕು. ಬೌಲಿಂಗ್ ಮಾಡಿದ ವೇಗ ನೋಡಿದರೆ 175 ಕಿ.ಮೀ ಇರಲಿಲ್ಲ ಎಂದೆನಿಸುತ್ತಿದೆ ಎಂದಿದ್ದಾರೆ. ಆದರೆ ಐಸಿಸಿ ಸ್ಪಷ್ಟನೆ ನೀಡಿದರೆ ತಪ್ಪು ಮಾಹಿತಿ ಹರಡುವುದು ನಿಲ್ಲಲಿದೆ ಎಂದು ಅಭಿಮಾನಿಗಳು ಆಗ್ರಹಿಸಿದ್ದಾರೆ.

Follow Us:
Download App:
  • android
  • ios