ಹಾಸನ Elections 2024: ಮಾಜಿ ಪ್ರಧಾನಿಗಳ ತವರಲ್ಲಿ ಸಂಜೆ 5ಗಂಟೆ ವೇಳೆಗೆ 72.13% ಮತದಾನ

Karnataka Lok Sabha Election 2024 ಹೈವೋಲ್ಟೇಜ್ ಕ್ಷೇತ್ರವಾಗಿರೋ ಹಾಸನದಲ್ಲಿ ಮತದಾನ ಬಿರುಸಿನಿಂದ ನಡೆಯುತ್ತಿದೆ. ಏಕಾಂಗಿಯಾಗಿ ಬಂದು ಪ್ರಜ್ವಲ್‌ ರೇವಣ್ಣ ಮತದಾನ ಮಾಡಿದ್ದಾರೆ.

karnataka lok sabha election 2024 Hassan constituency HD Devegowda Grandson Prajwal revanna vs  shreyas patel gow

ಹಾಸನ (ಏ.26): ಹೈವೋಲ್ಟೇಜ್ ಕ್ಷೇತ್ರವಾಗಿರೋ ಹಾಸನ ಲೋಕಸಭಾ ಕ್ಷೇತ್ರದಲ್ಲಿ ಮೈತ್ರಿ ಅಭ್ಯರ್ಥಿಯಾಗಿ ಜೆಡಿಎಸ್‌ನಿಂದ ಪ್ರಜ್ವಲ್ ರೇವಣ್ಣ, ಕಾಂಗ್ರೆಸ್ ಅಭ್ಯರ್ಥಿ ಯಾಗಿ ಶ್ರೇಯಸ್ ಪಟೇಲ್ ಕಣದಲ್ಲಿದ್ದಾರೆ.  ಹಾಸನ ಲೋಕಸಭಾ ಕ್ಷೇತ್ರದಲ್ಲಿ ಸಂಜೆ 5ಗಂಟೆವರೆಗೆ 72.13% ಮತದಾನವಾಗಿದೆ. ಬೆಳಿಗ್ಗೆಯಿಂದ 3  ಗಂಟೆಯವರೆಗೆ  55.92% ಮತದಾನವಾಗಿದೆ.

ಚಲನಚಿತ್ರ ನಟ ಡಾಲಿ ಧನಂಜಯ್  ಕುಟುಂಬ ಸಮೇತರಾಗಿ ಆಗಮಿಸಿ ಹಾಸನ ಜಿಲ್ಲೆ, ಅರಸೀಕೆರೆ ತಾಲ್ಲೂಕಿನ, ಕಾಳೇನಹಳ್ಳಿಯಲ್ಲಿ ಮತದಾನದ ಹಕ್ಕು ಚಲಾಯಿಸಿದರು. ಸರತಿ ಸಾಲಿನಲ್ಲಿ ನಿಂತು ಮತದಾನ ಮಾಡಿದ ಡಾಲಿ, ಎಲ್ಲರೂ ಮತದಾನ ಮಾಡಿ ಎಂದು ಮನವಿ ಮಾಡಿದರು.

 ಮಾಜಿ ಶಾಸಕ,  ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರೀತಂ ಗೌಡ ಅವರು ಮತದಾನ ಮಾಡಿದರು. ಪತ್ನಿ ಕಾವ್ಯ ಪ್ರೀತಂ ಜೊತೆ ಆಗಮಿಸಿದ ಅವರು ಹಾಸನ ನಗರದ ಬಿ ಜಿ ಎಸ್ ಶಾಲೆಯಲ್ಲಿನ ಮತಗಟ್ಟೆ ಸಂಖ್ಯೆ 90 ರಲ್ಲಿ   ಚಲಾಯಿಸಿದರು. 

ಏಕಾಂಗಿಯಾಗಿ ಬಂದು ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಮತ ಚಲಾಯಿಸಿದ್ದಾರೆ. ಇದಕ್ಕೂ ಮುನ್ನ ಹೊಳೆನರಸೀಪುರದ ಹರದನಹಳ್ಳಿ ದೇವೇಶ್ವರ ದೇಗುಲಕ್ಕೆ ಭೇಟಿ ನೀಡಿ ಮನೆ ದೇವರಿಗೆ ಪೂಜೆ ಸಲ್ಲಿಸಿದರು. ಇದೇ ವೇಳೆ ಸೂರಜ್ ರೇವಣ್ಣ ಕೂಡ  ಮನೆದೇವರು ದೇವೇಶ್ವರಗೆ ಪೂಜೆ ಸಲ್ಲಿಸಿದರು. 

ಪೂಜೆ ಸಲ್ಲಿಕೆ ಬಳಿಕ ಮಾತನಾಡಿದ ರೇವಣ್ಣ, ನಮಗೆ ಯಾವುದೇ ತೊಂದರೆ ಇಲ್ಲ. ಚುನಾವಣೆ ಪ್ರಚಾರ ಚೆನ್ನಾಗಿ ನಡೆದಿದೆ. ನೂರಕ್ಕೆ ನೂರು ಭಾಗ ನಾನು ಗೆಲ್ಲುತ್ತೇನೆ ಎಂದು ವಿಶ್ವಾಸ ಇದೆ. ಬೆಳಗ್ಗೆಯೇ ದೇವೇಶ್ವರನ ಆಶೀರ್ವಾದ ಪಡೆದಿದ್ದೇನೆ. ದೇವೇಗೌಡರು ಮತ್ತು ರೇವಣ್ಣನವರ ಜೊತೆ ಮತ ಚಲಾಯಿಸುತ್ತೇನೆ. ಮೊದಲ ಹಂತದ ಚುನಾವಣೆಯಲ್ಲಿ ಸ್ಪರ್ಧಿಸಿರೋ 14 ಸ್ಪರ್ಧಿಗಳೂ ಗೆಲ್ಲುತ್ತೇವೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.

ಕರ್ನಾಟಕ Election 2024 Live: 11ಕ್ಕೆ ದ.ಕ.ದಲ್ಲಿ ಹೆಚ್ಚು ಶೇ.31, ಬೆಂಗಳೂರು ಸೆ.ಕಡಿಮೆ ವೋಟಿಂಗ್

ಹಾಸನ ಜಿಲ್ಲೆ ಹೊಳೆನರಸೀಪುರ ತಾಲ್ಲೂಕಿನ ಪಡುವಲಹಿಪ್ಪೆಯಲ್ಲಿ ಪ್ರಜ್ವಲ್ ಮತದಾನ ಮಾಡಿದ್ದು, ಮತಗಟ್ಟೆ ಸಂಖ್ಯೆ  251 ರಲ್ಲಿ ಹಕ್ಕು ಚಲಾವಣೆ ಮಾಡಿದರು. ಪ್ರತಿ ಬಾರಿ ಚುನಾವಣೆ ವೇಳೆ ಹೆಚ್ ಡಿ ದೇವೇಗೌಡ, ಚನ್ನಮ್ಮ ದೇವೇಗೌಡ, ಹೆಚ್ ಡಿ ರೇವಣ್ಣ, ಭವಾನಿ ರೇವಣ್ಣ, ಪುತ್ರ ಪ್ರಜ್ವಲ್ ರೇವಣ್ಣ, ಸೂರಜ್ ರೇವಣ್ಣ ಕುಟುಂಬ ಸಮೇತವಾಗಿ ಬಂದು ಮತದಾನ ಮಾಡುತ್ತಿದ್ದರು. ದೇವೇಗೌಡರ ಜೊತೆ ಕುಟುಂಬ ಸಮೇತರಾಗಿ ಪ್ರತಿ ಚುನಾವಣೆಗಳಲ್ಲಿ ಮತದಾನ ಮಾಡುತ್ತಿದ್ದ ಪ್ರಜ್ವಲ್ ಈ ಬಾರಿ ಒಬ್ಬರೇ ಬಂದು ಮತದಾನ ಮಾಡಿ ಹೋದರು. ಆ ಬಳಿಕ ಹೊಳೆನರಸೀಪುರದ ಪಡುವಲಹಿಪ್ಪೆಯಲ್ಲಿ ಮಾಜಿ ಪ್ರಧಾನಿ ದೇವೇಗೌಡ ಪತ್ನಿ ಚನ್ನಮ್ಮ ಮತದಾನ ಮಾಡಿ ಹೋದ ನಂತರ ಹೆಚ್‌ ಡಿ ರೇವಣ್ಣ ಮತ್ತು ಪತ್ನಿ ಭವಾನಿ ರೇವಣ್ಣ ಅವರು ಮತದಾನ ಮಾಡಿದರು.

ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್‌ ಪಟೇಲ್ ಹಕ್ಕು ಚಲಾವಣೆ ಮಾಡಿದರು. ಮತಗಟ್ಟೆ ಸಂಖ್ಯೆ 282 ರಲ್ಲಿ ಮತ ಚಲಾವಣೆ ಮಾಡಿದರು. ಪತ್ನಿ, ತಾಯಿ, ಮಾವನ ಜೊತೆ ಬಂದು ಹೊಳೆನರಸೀಪುರ ಸರ್ಕಾರಿ ಪ್ರೌಢಶಾಲೆಯಲ್ಲಿ ಮತದಾನ ಮಾಡಿದರು.

ಸರತಿ ಸಾಲಿನಲ್ಲಿ ನಿಂತು ಮತದಾನ ಮಾಡಿದ ಜಿಲ್ಲಾ ಚುನಾವಣಾ ಅಧಿಕಾರಿ ಹಾಗೂ ಜಿಲ್ಲಾಧಿಕಾರಿ ಸಿ.ಸತ್ಯಭಾಮ. ಹಾಸನ ನಗರದ ಹೊಳೆನರಸೀಪುರ ರಸ್ತೆಯಲ್ಲಿರುವ ಸೆಂಟ್ ಫಿಲೋಮಿನ ಶಾಲೆಯ  ಮತಗಟ್ಟೆ  ಸಂಖ್ಯೆ 208 ರಲ್ಲಿ ಮತದಾನ ಮಾಡಿದರು.  ಜೊತೆಗೆ ಎಲ್ಲರೂ ಮತದಾನ ಮಾಡುವಂತೆ ಮನವಿ ಮಾಡಿದರು.

 LIVE: ಮಂಡ್ಯ Elections 2024: ಮತದಾರರ ಪಟ್ಟಿಯಲ್ಲಿ ಒಂದೇ ಗ್ರಾಮದ 45 ಜನರ ಹೆಸರು ನಾಪತ್ತೆ!

ಇನ್ನು ದಂಪತಿ ಸಮೇತ ಆಗಮಿಸಿ  ಹಾಸನ ಶಾಸಕ ಎಚ್. ಪಿ ಸ್ವರೂಪ್ ಮತದಾನ ಮಾಡಿದರು. ಹೇಮಾವತಿ ನಗರದ ರಾಯಲ್ ಅಪೋಲೊ ಶಾಲೆಯ ಮತಗಟ್ಟೆ ಸಂಖ್ಯೆ 121 ರಲ್ಲಿ ಮತದಾನ. 

ಹೈವೋಲ್ಟೇಜ್ ಕ್ಷೇತ್ರವಾಗಿರೋ  ಹಾಸನ ಲೋಕಸಭಾ ಕ್ಷೇತ್ರದಲ್ಲಿ ಒಟ್ಟು ಮತದಾರರ ಸಂಖ್ಯೆ 1736610, ಈ ಪೈಕಿ ಪುರುಷರು 863727 ಮತ್ತು  ಮಹಿಳೆಯರು 872840, ಇತರರು 43 ಮಂದಿ ಇದ್ದಾರೆ. ಒಟ್ಟು 2221 ಮತಗಟ್ಟೆಗಳು ಇವೆ. 9136 ಮತಗಟ್ಟೆ ಸಿಬ್ಬಂದಿಗಳು ನೇಮಕ ಮಾಡಲಾಗಿದೆ.

karnataka lok sabha election 2024 Hassan constituency HD Devegowda Grandson Prajwal revanna vs  shreyas patel gow

Latest Videos
Follow Us:
Download App:
  • android
  • ios