Asianet Suvarna News Asianet Suvarna News

ಇಂಗ್ಲೆಂಡ್‌ ಆಲ್ರೌಂಡರ್ ‌ಮೋಯಿನ್‌ ಅಲಿಗೆ ಬ್ರಿಟನ್‌ ಸೋಂಕು!

ಇಂಗ್ಲೆಂಡ್‌ ಸ್ಟಾರ್ ಆಲ್ರೌಂಡರ್‌ ಮೊಯೀನ್ ಅಲಿ ಬ್ರಿಟನ್‌ ರೂಪಾಂತರಿ ವೈರಸ್‌ಗೆ ತುತ್ತಾಗಿದ್ದಾರೆ ಎನ್ನುವ ಆಘಾತಕಾರಿ ವಿಚಾರ ಇದೀಗ ಬೆಳಕಿಗೆ ಬಂದಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

UK variant of COVID 19 enters Sri Lanka England all rounder Moeen Ali infected new virus kvn
Author
Galle, First Published Jan 15, 2021, 3:32 PM IST

ಗಾಲೆ(ಜ.15): ಇಂಗ್ಲೆಂಡ್‌ ಕ್ರಿಕೆಟ್‌ ತಂಡದ ಆಲ್ರೌಂಡರ್‌ ಮೋಯಿನ್‌ ಅಲಿಗೆ ಕೊರೋನಾ ರೂಪಾಂತರಿ ವೈರಸ್‌ (ಬ್ರಿಟನ್‌ ವೈರಸ್‌) ಸೋಂಕು ತಗುಲಿರುವುದು ಪತ್ತೆಯಾಗಿದೆ. ಇದು ಶ್ರೀಲಂಕಾದಲ್ಲಿ ಪತ್ತೆಯಾದ ಮೊದಲ ಬ್ರಿಟನ್‌ ವೈರಸ್‌ ಪ್ರಕರಣವಾಗಿದೆ. 

ಟೆಸ್ಟ್‌ ಸರಣಿ ಆಡಲು ಶ್ರೀಲಂಕಾಗೆ ತಲುಪಿದ ಬಳಿಕ ನಡೆಸಿದ ಪರೀಕ್ಷೆಯಲ್ಲಿ ಅಲಿಗೆ ಕೊರೋನಾ ಇರುವುದು ದೃಢಪಟ್ಟಿತ್ತು. ಅವರು 10 ದಿನಗಳ ಕಾಲ ಐಸೋಲೇಷನ್‌ನಲ್ಲಿದ್ದುಕೊಂಡು ಚಿಕಿತ್ಸೆ ಪಡೆದಿದ್ದರು. ಆದರೆ ಮತ್ತೊಂದು ಪರೀಕ್ಷೆ ವೇಳೆ ಅವರಿಗೆ ರೂಪಾಂತರಿ ವೈರಸ್‌ ಸಹ ತಗುಲಿರುವುದು ಖಚಿತಪಟ್ಟಿದೆ. ಹೀಗಾಗಿ ಅವರ ಐಸೋಲೇಷನ್‌ ಅವಧಿಯನ್ನು ವಿಸ್ತರಿಸಲಾಗಿದೆ. ಈ ಪ್ರಕರಣ ಸ್ಥಳೀಯರಲ್ಲಿ ಆತಂಕ ಹೆಚ್ಚಿಸಿದೆ.

ದ್ವೀಪರಾಷ್ಟ್ರ ಶ್ರೀಲಂಕಾದಲ್ಲಿ ಕಳೆದ ಮಾರ್ಚ್‌ನಿಂದ ಇಲ್ಲಿಯವರೆಗೆ 50,200 ಕೊರೋನಾ ಪ್ರಕರಣಗಳು ಪತ್ತೆಯಾಗಿದ್ದು, 247 ಮಂದಿ ಕೊನೆಯುಸಿರೆಳೆದಿದ್ದಾರೆ. ಅದರಲ್ಲೂ ಅಕ್ಟೋಬರ್ 04ರ ಬಳಿಕ ಸುಮಾರು 47 ಸಾವಿರಕ್ಕೂ ಅಧಿಕ ಮಂದಿ ಕೊರೋನಾ ಸೋಂಕಿಗೆ ತುತ್ತಾಗಿದ್ದಾರೆ.

ಟೆಸ್ಟ್‌ ವೀಕ್ಷಿಸಲು 10 ತಿಂಗಳು ಲಂಕಾದಲ್ಲೇ ಉಳಿದ ಫ್ಯಾನ್‌..!

ಮೊದಲ ಬಾರಿಗೆ ಬ್ರಿಟನ್‌ನಲ್ಲಿ ಕಾಣಿಸಿಕೊಂಡ ರೂಪಾಂತರಿ ವೈರಸ್‌ ವೈರಸ್‌ ಇದೀಗ ನೆದರ್ಲ್ಯಾಂಡ್ಸ್, ಅಸ್ಟ್ರೇಲಿಯಾ, ಇಟಲಿ, ಸ್ವೀಡನ್‌, ಫ್ರಾನ್ಸ್‌, ಸ್ಪೇನ್‌, ಸ್ವಿಟ್ಜರ್‌ಲ್ಯಾಂಡ್‌, ಜರ್ಮನಿ, ಜಪಾನ್ ಸೇರಿದಂತೆ ಹಲವು ರಾಷ್ಟ್ರಗಳಲ್ಲಿ ಕಾಣಿಸಿಕೊಂಡಿದೆ.
 

Follow Us:
Download App:
  • android
  • ios