Asianet Suvarna News Asianet Suvarna News

ಅಂ-19 ವಿಶ್ವಕಪ್‌ : ನೇಪಾಳ ಮಣಿಸಿ ಸೆಮೀಸ್‌ಗೆ ಭಾರತ ಲಗ್ಗೆ

ಇದರೊಂದಿಗೆ ಭಾರತ ಗುಂಪು-1ರಲ್ಲಿ 4 ಪಂದ್ಯದಲ್ಲಿ 8 ಅಂಕಗಳೊಂದಿಗೆ ಅಗ್ರಸ್ಥಾನ ಭದ್ರಪಡಿಸಿಕೊಂಡಿದ್ದು, ಅಗ್ರ-2 ಸ್ಥಾನ ಖಚಿತಪಡಿಸಿ ಸೆಮೀಸ್‌ಗೇರಿತು. ಪಾಕಿಸ್ತಾನ 6, ಬಾಂಗ್ಲಾದೇಶ 4 ಅಂಕ ಹೊಂದಿದ್ದು, ಇತ್ತಂಡಕ್ಕೂ ತಲಾ ಒಂದೊಂದು ಪಂದ್ಯ ಬಾಕಿಯಿದೆ.

U19 World Cup 2024 India thrash Nepal and enter Semifinal kvn
Author
First Published Feb 3, 2024, 9:51 AM IST

ಬ್ಲೂಮ್‌ಫೌಂಟೇನ್‌(ಫೆ.03): ದಾಖಲೆಯ 5 ಬಾರಿ ಚಾಂಪಿಯನ್ ಭಾರತ ಈ ಬಾರಿ ಅಂಡರ್‌-19 ವಿಶ್ವಕಪ್‌ ಟೂರ್ನಿಯಲ್ಲಿ ಸೆಮಿಫೈನಲ್‌ಗೆ ಲಗ್ಗೆ ಇಟ್ಟಿದೆ. ಸೂಪರ್‌-6 ಹಂತದ ಕೊನೆ ಪಂದ್ಯದಲ್ಲಿ ಟೀಂ ಇಂಡಿಯಾ, ನೇಪಾಳ ವಿರುದ್ಧ 132 ರನ್‌ ಭರ್ಜರಿ ಗೆಲುವು ಸಾಧಿಸಿತು.

ಇದರೊಂದಿಗೆ ಭಾರತ ಗುಂಪು-1ರಲ್ಲಿ 4 ಪಂದ್ಯದಲ್ಲಿ 8 ಅಂಕಗಳೊಂದಿಗೆ ಅಗ್ರಸ್ಥಾನ ಭದ್ರಪಡಿಸಿಕೊಂಡಿದ್ದು, ಅಗ್ರ-2 ಸ್ಥಾನ ಖಚಿತಪಡಿಸಿ ಸೆಮೀಸ್‌ಗೇರಿತು. ಪಾಕಿಸ್ತಾನ 6, ಬಾಂಗ್ಲಾದೇಶ 4 ಅಂಕ ಹೊಂದಿದ್ದು, ಇತ್ತಂಡಕ್ಕೂ ತಲಾ ಒಂದೊಂದು ಪಂದ್ಯ ಬಾಕಿಯಿದೆ.

Ranji Trophy 2024: ರೈಲ್ವೇಸ್ ವಿರುದ್ಧ ಹಳಿತಪ್ಪಿದ ಕರ್ನಾಟಕ

ಶುಕ್ರವಾರದ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ಭಾರತ, ನಾಯಕ ಉದಯ್‌ ಸಹರನ್‌ ಹಾಗೂ ಸಚಿನ್‌ ದಾಸ್‌ ಆಕರ್ಷಕ ಶತಕಗಳ ನೆರವಿನಿಂದ 50 ಓವರಲ್ಲಿ 5 ವಿಕೆಟ್‌ಗೆ 297 ರನ್‌ ಕಲೆಹಾಕಿತು. 62ಕ್ಕೆ 3 ವಿಕೆಟ್ ಕಳೆದುಕೊಂಡ ಬಳಿಕ 4ನೇ ವಿಕೆಟ್‌ಗೆ ಉದಯ್‌-ಸಚಿನ್‌ 215 ರನ್ ಜೊತೆಯಾಟವಾಡಿದರು. ಸಚಿನ್‌ 116ಕ್ಕೆ ಔಟಾದರೆ, ಉದಯ್‌ ಕೊಡುಗೆ ಭರ್ತಿ 100 ರನ್. ಗುಲ್ಶನ್‌ 3 ವಿಕೆಟ್‌ ಕಿತ್ತರು.

ದೊಡ್ಡ ಗುರಿ ಬೆನ್ನತ್ತಿದ ನೇಪಾಳ, ಭಾರತೀಯರ ನಿಖರ ದಾಳಿಗೆ ತತ್ತರಿಸಿ 50 ಓವರಲ್ಲಿ 9 ವಿಕೆಟ್‌ಗೆ 165 ರನ್‌ ಗಳಿಸಿ ಸೋಲೊಪ್ಪಿಕೊಂಡಿತು. ವಿಕೆಟ್‌ ನಷ್ಟವಿಲ್ಲದೇ 48 ರನ್‌ ಗಳಿಸಿದ್ದ ನೇಪಾಳ, ಬಳಿತ ದಿಢೀಸ್‌ ಕುಸಿತಕ್ಕೊಳಗಾಗಿ 77ಕ್ಕೆ 7 ವಿಕೆಟ್‌ ನಷ್ಟಕ್ಕೊಳಗಾಯಿತು. ಸೌಮಿ ಪಾಂಡೆ 10 ಓವರಲ್ಲಿ 29 ರನ್‌ಗೆ 4 ವಿಕೆಟ್‌ ಕಬಳಿಸಿದರು.

ಪಿಂಕ್ ಡ್ರೆಸ್‌ ತೊಟ್ಟು 'ದೊಡ್ಡದಾಗಿ ಸಂದೇಶ ಕೊಟ್ಟ' ಸಾನಿಯಾ ಮಿರ್ಜಾ..! ಪಾಕ್ ನಟಿಯ ರಿಯಾಕ್ಷನ್ ವೈರಲ್

ಸ್ಕೋರ್: 
ಭಾರತ 50 ಓವರಲ್ಲಿ 297/5(ಸಚಿನ್‌ 116, ಉದಯ್‌ 100, ಗುಲ್ಶಾನ್‌ 3-56)
ನೇಪಾಳ 50 ಓವರಲ್ಲಿ 165/9 (ದೇವ್‌ 33, ಸೌಮಿ 4-29)

ಸೆಮೀಸಲ್ಲಿ ಮಂಗಳವಾರ ದಕ್ಷಿಣ ಆಫ್ರಿಕಾ ಎದುರಾಳಿ?

ಭಾರತ ಗುಂಪು-1ರಲ್ಲಿ 8 ಅಂಕದೊಂದಿಗೆ ಅಗ್ರಸ್ಥಾನ ಭದ್ರಪಡಿಸಿಕೊಂಡಿದೆ. ಪಾಕಿಸ್ತಾನ 6 ಅಂಕ ಹೊಂದಿದ್ದು, ಕೊನೆ ಪಂದ್ಯ ಗೆದ್ದರೂ ಭಾರತವನ್ನು ನೆಟ್‌ರೇಟ್‌ನಲ್ಲಿ ಹಿಂದಿಕ್ಕುವ ಸಾಧ್ಯತೆ ಕಡಿಮೆ. ಹೀಗಾಗಿ ಭಾರತವೇ ಅಗ್ರಸ್ಥಾನಿಯಾಗಬಹುದು. ಹೀಗಾಗಿ ಗುಂಪು-2ರಲ್ಲಿ 2ನೇ ಸ್ಥಾನದಲ್ಲಿರುವ ದ.ಆಫ್ರಿಕಾ ವಿರುದ್ಧ ಮಂಗಳವಾರ ಭಾರತ ಸೆಮಿಫೈನಲ್‌ನಲ್ಲಿ ಆಡುವ ಸಾಧ್ಯತೆಯಿದೆ.

ಏಕದಿನ: ಆಸ್ಟ್ರೇಲಿಯಾಕ್ಕೆ 8 ವಿಕೆಟ್‌ ಭರ್ಜರಿ ಗೆಲುವು

ಮೆಲ್ಬರ್ನ್‌: ವೆಸ್ಟ್‌ಇಂಡೀಸ್‌ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ 8 ವಿಕೆಟ್‌ ಭರ್ಜರಿ ಜಯ ಸಾಧಿಸಿದೆ. ಮೊದಲು ಬ್ಯಾಟಿಂಗ್‌ ನಡೆಸಿದ ವಿಂಡೀಸ್‌ ಕೀಸ್‌ ಕಾರ್ಟಿ(88), ರೋಸ್ಟನ್‌ ಚೇಸ್‌(59) ಅರ್ಧಶತಕದಾಟದ ಹೊರತಾಗಿಯೂ 48.4 ಓವರ್‌ಗಳಲ್ಲಿ 231ಕ್ಕೆ ಆಲೌಟಾಯಿತು. ಸಾಧಾರಣ ಗುರಿ ಬೆನ್ನತ್ತಿದ ಆಸೀಸ್‌ 38.3 ಓವರ್‌ಗಳಲ್ಲಿ 2 ಕಳೆದುಕೊಂಡು ಗೆಲುವು ತನ್ನದಾಗಿಸಿಕೊಂಡಿತು. ಕ್ಯಾಮರೂನ್‌ ಗ್ರೀನ್‌(77), ಸ್ಟೀವ್‌ ಸ್ಮಿತ್‌(79), ಜೋಶ್‌ ಇಂಗ್ಲಿಸ್‌ (65) ಅರ್ಧಶತಕ ಗಳಿಸಿ ಗೆಲುವಿಗೆ ಕಾರಣರಾದರು.
 

Latest Videos
Follow Us:
Download App:
  • android
  • ios