ಡೆಲ್ಲಿ ಕ್ಯಾಪಿಟಲ್ಸ್ ಎದುರು ಅರ್ಧಶತಕ ಸಿಡಿಸಿದ ವಿರಾಟ್ ಕೊಹ್ಲಿ46 ಎಸೆಗಳನ್ನು ಎದುರಿಸಿ 55 ರನ್ ಗಳಿಸಿದ ಆರ್‌ಸಿಬಿ ಮಾಜಿ ನಾಯಕಕೊಹ್ಲಿ ಮಂದಗತಿಯ ಬ್ಯಾಟಿಂಗ್ ಬಗ್ಗೆ ಟಾಮ್ ಮೂಡಿ ಟೀಕೆ

ನವದೆಹಲಿ(ಮೇ.07): ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆರಂಭಿಕ ಬ್ಯಾಟರ್ ವಿರಾಟ್ ಕೊಹ್ಲಿ, ಡೆಲ್ಲಿ ಕ್ಯಾಪಿಟಲ್ಸ್ ಎದುರು ಸಮಯೋಚಿತ ಅರ್ಧಶತಕ ಸಿಡಿಸುವಲ್ಲಿ ಯಶಸ್ವಿಯಾದರು. ಆದರೆ ವಿರಾಟ್ ಕೊಹ್ಲಿ ಸಾಕಷ್ಟು ರಕ್ಷಣಾತ್ಮಕ ಆಟಕ್ಕೆ ಮೊರೆ ಹೋದ ರೀತಿಯು ಚರ್ಚೆಗೆ ಗ್ರಾಸವಾಗಿದೆ. 34 ವರ್ಷದ ವಿರಾಟ್ ಕೊಹ್ಲಿ, ಡೆಲ್ಲಿ ಕ್ಯಾಪಿಟಲ್ಸ್ ಎದುರು 46 ಎಸೆತಗಳನ್ನು ಎದುರಿಸಿ 55 ರನ್‌ ಗಳಿಸಿ ವಿಕೆಟ್ ಒಪ್ಪಿಸಿದರು. ಮೊದಲು ಬ್ಯಾಟ್ ಮಾಡಿದ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡವು, ಅರುಣ್ ಜೇಟ್ಲಿ ಮೈದಾನದಲ್ಲಿ ನಡೆದ ಪಂದ್ಯದಲ್ಲಿ 20 ಓವರ್‌ಗಳಲ್ಲಿ 181 ರನ್ ಕಲೆಹಾಕಿತು.

ಇನ್ನು ವಿರಾಟ್ ಕೊಹ್ಲಿ, ಆಡಿದ ಆಟದ ಬಗ್ಗೆ ಸನ್‌ರೈಸರ್ಸ್‌ ಹೈದರಾಬಾದ್ ತಂಡದ ಮಾಜಿ ಕೋಚ್ ಟಾಮ್ ಮೂಡಿ ಟೀಕಿಸಿದ್ದಾರೆ. ಆಧುನಿಕ ಕ್ರಿಕೆಟ್‌ನಲ್ಲಿ ಆರಂಭಿಕ ಬ್ಯಾಟರ್‌ ಆಡುವ ರೀತಿ ಇದಲ್ಲ. ಟಿ20 ಕ್ರಿಕೆಟ್‌ನಲ್ಲಿ ಆರಂಭಿಕರು ಈ ರೀತಿ ರಕ್ಷಣಾತ್ಮಕ ಆಟವಾಡುವುದು ಪ್ರಯೋಜನವಿಲ್ಲ. ವಿರಾಟ್ ಕೊಹ್ಲಿ 150+ ಸ್ಟ್ರೈಕ್‌ರೇಟ್‌ನಲ್ಲಿ ರನ್‌ ಗಳಿಸದ ಹೊರತು ಪಂದ್ಯದ ಮೇಲೆ ಇಂಪ್ಯಾಕ್ಟ್ ಮಾಡಲು ಸಾಧ್ಯವಿಲ್ಲ ಎಂದು ಮೂಡಿ ಅಭಿಪ್ರಾಯಪಟ್ಟಿದ್ದಾರೆ. 

ವಿರಾಟ್ ಕೊಹ್ಲಿ ಬ್ಯಾಟಿಂಗ್‌ ವಿಧಾನದ ಬಗ್ಗೆ ಆಗಾಗ ಚರ್ಚೆಗಳಾಗುತ್ತಲೇ ಇರುತ್ತದೆ. ವಿರಾಟ್ ಕೊಹ್ಲಿಯವರು ಬ್ಯಾಟಿಂಗ್ ಸ್ಟ್ರೈಕ್‌ರೇಟ್‌ 130ರ ಆಸುಪಾಸಿನಲ್ಲಿದೆ. ಆದರೆ ಸತತವಾಗಿ ರನ್‌ ಗಳಿಸುವ ಸಾಮರ್ಥ್ಯ ನಿಜಕ್ಕೂ ಅದ್ಭುತವಾದದ್ದು ಎಂದು ESPNcricinfoಗೆ ನೀಡಿದ ಸಂದರ್ಶನದಲ್ಲಿ ಟಾಮ್ ಮೂಡಿ ಅಭಿಪ್ರಾಯಪಟ್ಟಿದ್ದಾರೆ.

IPL 2023: ಮಿಲಿಯನ್ ಡಾಲರ್ ಟೂರ್ನಿಯಲ್ಲಿ ಹೊಸ ದಾಖಲೆ ಬರೆದ ಕಿಂಗ್ ಕೊಹ್ಲಿ..!

ಆದರೆ ಅವರು ಉಳಿದ ಬ್ಯಾಟರ್‌ಗಳು ವೈಫಲ್ಯ ಅನುಭವಿಸಬಹುದು ಎನ್ನುವ ಕಾರಣಕ್ಕೆ ಈ ರೀತಿ ಆಡಿರಬಹುದು. ಅವರ ಪಾತ್ರವೇನಿದ್ದರೂ ಒಂದು ತುದಿಯಲ್ಲಿ ಚುರುಕಾಗಿ ರನ್‌ ಗಳಿಸಬೇಕಿತ್ತು. ನನ್ನ ಪ್ರಕಾರ ಹೇಳಬೇಕೆಂದರೇ, ಇಂಪ್ಯಾಕ್ಟ್ ಪ್ಲೇಯರ್ ನಿಯಮ ಪರಿಚಯಿಸಿದ ಬಳಿಕವಂತೂ ಕ್ರಿಕೆಟ್‌ ರೀತಿ ಸಾಕಷ್ಟು ಬದಲಾಗಿ ಹೋಗಿದೆ. ಈ ಕಾರಣಕ್ಕಾಗಿಯೇ ನಾವು ಈಗಾಗಲೇ 200+ ರನ್ ಸ್ಕೋರ್ ನೋಡಿದ್ದೇವೆ. ಹೀಗಾಗಿ ಈಗ ರಕ್ಷಣಾತ್ಮಕ ಕ್ರಿಕೆಟ್ ಆಡುವುದರಲ್ಲಿ ಅರ್ಥವಿಲ್ಲ. ಎಲ್ಲರೂ ಏನಿಲ್ಲವೆಂದರೂ 150+ ಸ್ಟ್ರೈಕ್‌ರೇಟ್‌ನಲ್ಲಿ ರನ್‌ ಗಳಿಸಿದರಷ್ಟೇ ದೊಡ್ಡ ಮೊತ್ತ ಕಲೆಹಾಕಲು ಸಾಧ್ಯವೆಂದು ಟಾಮ್ ಮೂಡಿ ಹೇಳಿದ್ದಾರೆ.

ಐಪಿಎಲ್‌ನಲ್ಲಿ 50 ಫಿಫ್ಟಿ ಪೂರೈಸಿದ ಕೊಹ್ಲಿ

ಡೆಲ್ಲಿ ವಿರುದ್ಧ ಬಾರಿಸಿದ ಅರ್ಧಶತಕ ವಿರಾಟ್‌ ಕೊಹ್ಲಿ ಐಪಿಎಲ್‌ನಲ್ಲಿ ದಾಖಲಿಸಿದ 50ನೇ ಅರ್ಧಶತಕವೆನಿಸಿತು. ಈ ಸಾಧನೆ ಮಾಡಿದ ಕೇವಲ 2ನೇ ಬ್ಯಾಟರ್‌ ಎನ್ನುವ ಹಿರಿಮೆಗೆ ಕೊಹ್ಲಿ ಪಾತ್ರರಾದರು. ಡೇವಿಡ್‌ ವಾರ್ನರ್‌ 59 ಅರ್ಧಶತಕಗಳೊಂದಿಗೆ ಮೊದಲ ಸ್ಥಾನದಲ್ಲಿದ್ದಾರೆ. ಶಿಖರ್‌ ಧವನ್‌ 49ನೇ ಅರ್ಧಶತಕ ಬಾರಿಸಿ 3ನೇ ಸ್ಥಾನ ಪಡೆದಿದ್ದಾರೆ.

ಡೆಲ್ಲಿ ಎದುರು ಆರ್‌ಸಿಬಿಗೆ ಸೋಲು:

ಕೊಹ್ಲಿ, ಡು ಪ್ಲೆಸಿ ಹಾಗೂ ಲೊಮ್ರೊರ್‌ ಹೋರಾ​ಟ​ದಿಂದಾಗಿ ಆರ್‌​ಸಿಬಿ 20 ಓವ​ರಲ್ಲಿ ಗಳಿ​ಸಿದ್ದು 4 ವಿಕೆ​ಟ್‌ಗೆ 181 ರನ್‌. ಇನ್ನಿಂಗ್‌್ಸ ಬಳಿಕ 160 ಉತ್ತಮ ಮೊತ್ತ ಎಂದು ಕೊಹ್ಲಿ​ಯೇ ಹೇಳಿ​ದ್ದ​ರಿಂದ ತಂಡದ ಜಯದ ಆಸೆ ಹೆಚ್ಚಾ​ಗಿತ್ತು. ಆದರೆ ಯಾರೂ ನಿರೀ​ಕ್ಷಿ​ಸದ ರೀತಿ ಡೆಲ್ಲಿ 16.4 ಓವ​ರಲ್ಲೇ ಗುರಿ ತಲು​ಪಿತು.

ಮೊದಲ ಎಸೆ​ತ​ದಿಂದಲೇ ಆರ್ಭ​ಟಿ​ಸಲು ಶುರು​ವಿಟ್ಟವಾರ್ನ​ರ್‌(22) ಹಾಗೂ ಸಾಲ್ಟ್‌ ಜೋಡಿ ಪವ​ರ್‌-ಪ್ಲೇ ಮುಕ್ತಾ​ಯದ ವೇಳೆಗೆ 70 ರನ್‌ ದೋಚಿತು. 6ನೇ ಓವ​ರಲ್ಲಿ ವಾರ್ನರ್‌ ಔಟಾದ ಬಳಿಕ ಮಿಚೆಲ್‌ ಮಾಷ್‌ರ್‍ 26 ರನ್‌ ಸಿಡಿಸಿ ರನ್‌ ಗಳಿಕೆಯ ವೇಗ ಹೆಚ್ಚಿ​ಸಿ​ದರೆ, ರುಸ್ಸೌ(33) ಅಬ್ಬರ ಆರ್‌​ಸಿ​ಬಿಗೆ ಮತ್ತಷ್ಟುಆಘಾತ ನೀಡಿತು. ಬೌಲ​ರ್‌​ಗ​ಳನ್ನು ಮನ​ಬಂದಂತೆ ದಂಡಿ​ಸಿ​ದ ಸಾಲ್ಟ್‌ 45 ಎಸೆ​ತ​ಗ​ಳಲ್ಲಿ 8 ಬೌಂಡರಿ, 6 ಸಿಕ್ಸ​ರ್‌​ನೊಂದಿಗೆ 87 ರನ್‌ ಸಿಡಿಸಿ ಔಟಾ​ದರು. ಆದರೆ ಆ ವೇಳೆ​ಗಾ​ಗಲೇ ಗೆಲುವು ಆರ್‌​ಸಿಬಿ ಕೈ ಜಾರಿತ್ತು.