ಡೆಲ್ಲಿ ಎದುರು ಆಕರ್ಷಕ ಅರ್ಧಶತಕ ಸಿಡಿಸಿದ ವಿರಾಟ್ ಕೊಹ್ಲಿಐಪಿಎಲ್‌ನಲ್ಲಿ ಹೊಸ ಮೈಲಿಗಲ್ಲು ನೆಟ್ಟ ಕಿಂಗ್‌ ಕೊಹ್ಲಿಐಪಿಎಲ್‌ನಲ್ಲಿ 7 ಸಾವಿರ ರನ್ ಬಾರಿಸಿದ ಮೊದಲ ಬ್ಯಾಟರ್ ಎನ್ನುವ ದಾಖಲೆ

ನವದೆಹಲಿ(ಮೇ.07): ರಾಯಲ್ ಚಾಲೆಂಜರ್ಸ್‌ ಬೆಂಗಳೂರು ಕ್ರಿಕೆಟ್ ತಂಡದ ರನ್ ಮಷೀನ್‌ ವಿರಾಟ್ ಕೊಹ್ಲಿ ಸಾಧನೆಯ ಕಿರೀಟಕ್ಕೆ ಮತ್ತೊಂದು ಗರಿ ಸೇರ್ಪಡೆಯಾಗಿದೆ. ಇಲ್ಲಿನ ಅರುಣ್‌ ಜೇಟ್ಲಿ ಮೈದಾನದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಎದುರಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ, ಐಪಿಎಲ್‌ನಲ್ಲಿ 7 ಸಾವಿರ ರನ್ ಬಾರಿಸಿದ ಮೊದಲ ಕ್ರಿಕೆಟಿಗ ಎನ್ನುವ ದಾಖಲೆ ನಿರ್ಮಿಸಿದ್ದಾರೆ

ಐಪಿಎಲ್ ವೃತ್ತಿಜೀವನದ 233ನೇ ಪಂದ್ಯವನ್ನಾಡಿದ ವಿರಾಟ್ ಕೊಹ್ಲಿ, ತಮ್ಮ ತವರಿನ ಮೈದಾನದಲ್ಲಿ ಈ ಐತಿಹಾಸಿಕ ದಾಖಲೆ ನಿರ್ಮಿಸುವಲ್ಲಿ ಯಶಸ್ವಿಯಾದರು. ಪಂಜಾಬ್ ಕಿಂಗ್ಸ್ ತಂಡದ ನಾಯಕ ಶಿಖರ್ ಧವನ್‌, ಐಪಿಎಲ್‌ನಲ್ಲಿ ಗರಿಷ್ಠ ರನ್ ಬಾರಿಸಿದ ಬ್ಯಾಟರ್‌ಗಳ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಗಬ್ಬರ್ ಸಿಂಗ್ ಖ್ಯಾತಿಯ ಶಿಖರ್ ಧವನ್, 213 ಐಪಿಎಲ್ ಪಂದ್ಯಗಳನ್ನಾಡಿ 6,536 ರನ್‌ ಬಾರಿಸಿದ್ದಾರೆ. ಇದಾದ ಬಳಿಕ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ಡೇವಿಡ್ ವಾರ್ನರ್(6189 ರನ್, 171 ಪಂದ್ಯ) ಮತ್ತು ರೋಹಿತ್ ಶರ್ಮಾ(6063 ರನ್, 237 ಪಂದ್ಯ) ಕ್ರಮವಾಗಿ ಮೂರು ಹಾಗೂ ನಾಲ್ಕನೇ ಸ್ಥಾನದಲ್ಲಿದ್ದಾರೆ.

Scroll to load tweet…

ಒಂದೇ ಐಪಿಎಲ್‌ ಆವೃತ್ತಿಯಲ್ಲಿ ಅತಿಹೆಚ್ಚು ರನ್ ಬಾರಿಸಿದ ಬ್ಯಾಟರ್ ಎನ್ನುವ ದಾಖಲೆಯೂ ವಿರಾಟ್ ಕೊಹ್ಲಿ ಹೆಸರಿನಲ್ಲಿ ಅಚ್ಚಳಿಯದೇ ಉಳಿದಿದೆ. ವಿರಾಟ್ ಕೊಹ್ಲಿ, 2016ನೇ ಸಾಲಿನ ಐಪಿಎಲ್ ಟೂರ್ನಿಯಲ್ಲಿ 16 ಪಂದ್ಯಗಳನ್ನಾಡಿ 4 ಶತಕ ಸಹಿತ 973 ರನ್ ಚಚ್ಚಿದ್ದರು. ಈ ದಾಖಲೆ ಸದ್ಯಕ್ಕಂತೂ ಬ್ರೇಕ್ ಆಗುವುದು ಅನುಮಾನ ಎನಿಸಿದೆ.

Scroll to load tweet…

ಇನ್ನು ಪ್ರಸಕ್ತ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿಯೂ ವಿರಾಟ್ ಕೊಹ್ಲಿ ಸದ್ಯ ರೆಡ್‌ ಹಾಟ್ ಫಾರ್ಮ್‌ನಲ್ಲಿದ್ದಾರೆ. ಇದುವರೆಗೂ ವಿರಾಟ್ ಕೊಹ್ಲಿ 10 ಐಪಿಎಲ್ ಪಂದ್ಯಗಳನ್ನಾಡಿ 46.56ರ ಬ್ಯಾಟಿಂಗ್ ಸರಾಸರಿಯಲ್ಲಿ 5 ಅರ್ಧಶತಕ ಸಹಿತ 419 ರನ್ ಸಿಡಿಸಿದ್ದಾರೆ. ಈ ಮೂಲಕ ಗರಿಷ್ಠ ರನ್ ಬಾರಿಸಿದ ಆಟಗಾರರ ಪಟ್ಟಿಯಲ್ಲಿ ಸದ್ಯ ವಿರಾಟ್ ಕೊಹ್ಲಿ, ನಾಲ್ಕನೇ ಸ್ಥಾನದಲ್ಲಿದ್ದಾರೆ. 

ಗುಜರಾತ್‌ vs ಲಖನೌ: ಸೋದರರ ಸವಾಲ್‌ಗೆ ಮೋದಿ ಸ್ಟೇಡಿಯಂ ರೆಡಿ!

ಐಪಿಎಲ್‌ನಲ್ಲಿ 50 ಫಿಫ್ಟಿ ಪೂರೈಸಿದ ಕೊಹ್ಲಿ

ಡೆಲ್ಲಿ ವಿರುದ್ಧ ಬಾರಿಸಿದ ಅರ್ಧಶತಕ ವಿರಾಟ್‌ ಕೊಹ್ಲಿ ಐಪಿಎಲ್‌ನಲ್ಲಿ ದಾಖಲಿಸಿದ 50ನೇ ಅರ್ಧಶತಕವೆನಿಸಿತು. ಈ ಸಾಧನೆ ಮಾಡಿದ ಕೇವಲ 2ನೇ ಬ್ಯಾಟರ್‌ ಎನ್ನುವ ಹಿರಿಮೆಗೆ ಕೊಹ್ಲಿ ಪಾತ್ರರಾದರು. ಡೇವಿಡ್‌ ವಾರ್ನರ್‌ 59 ಅರ್ಧಶತಕಗಳೊಂದಿಗೆ ಮೊದಲ ಸ್ಥಾನದಲ್ಲಿದ್ದಾರೆ. ಶಿಖರ್‌ ಧವನ್‌ 49ನೇ ಅರ್ಧಶತಕ ಬಾರಿಸಿ 3ನೇ ಸ್ಥಾನ ಪಡೆದಿದ್ದಾರೆ.

ಡೆಲ್ಲಿ ಎದುರು ಆರ್‌ಸಿಬಿಗೆ ಸೋಲು:

ಕೊಹ್ಲಿ, ಡು ಪ್ಲೆಸಿ ಹಾಗೂ ಲೊಮ್ರೊರ್‌ ಹೋರಾ​ಟ​ದಿಂದಾಗಿ ಆರ್‌​ಸಿಬಿ 20 ಓವ​ರಲ್ಲಿ ಗಳಿ​ಸಿದ್ದು 4 ವಿಕೆ​ಟ್‌ಗೆ 181 ರನ್‌. ಇನ್ನಿಂಗ್‌್ಸ ಬಳಿಕ 160 ಉತ್ತಮ ಮೊತ್ತ ಎಂದು ಕೊಹ್ಲಿ​ಯೇ ಹೇಳಿ​ದ್ದ​ರಿಂದ ತಂಡದ ಜಯದ ಆಸೆ ಹೆಚ್ಚಾ​ಗಿತ್ತು. ಆದರೆ ಯಾರೂ ನಿರೀ​ಕ್ಷಿ​ಸದ ರೀತಿ ಡೆಲ್ಲಿ 16.4 ಓವ​ರಲ್ಲೇ ಗುರಿ ತಲು​ಪಿತು.

ಮೊದಲ ಎಸೆ​ತ​ದಿಂದಲೇ ಆರ್ಭ​ಟಿ​ಸಲು ಶುರು​ವಿಟ್ಟವಾರ್ನ​ರ್‌(22) ಹಾಗೂ ಸಾಲ್ಟ್‌ ಜೋಡಿ ಪವ​ರ್‌-ಪ್ಲೇ ಮುಕ್ತಾ​ಯದ ವೇಳೆಗೆ 70 ರನ್‌ ದೋಚಿತು. 6ನೇ ಓವ​ರಲ್ಲಿ ವಾರ್ನರ್‌ ಔಟಾದ ಬಳಿಕ ಮಿಚೆಲ್‌ ಮಾಷ್‌ರ್‍ 26 ರನ್‌ ಸಿಡಿಸಿ ರನ್‌ ಗಳಿಕೆಯ ವೇಗ ಹೆಚ್ಚಿ​ಸಿ​ದರೆ, ರುಸ್ಸೌ(33) ಅಬ್ಬರ ಆರ್‌​ಸಿ​ಬಿಗೆ ಮತ್ತಷ್ಟುಆಘಾತ ನೀಡಿತು. ಬೌಲ​ರ್‌​ಗ​ಳನ್ನು ಮನ​ಬಂದಂತೆ ದಂಡಿ​ಸಿ​ದ ಸಾಲ್ಟ್‌ 45 ಎಸೆ​ತ​ಗ​ಳಲ್ಲಿ 8 ಬೌಂಡರಿ, 6 ಸಿಕ್ಸ​ರ್‌​ನೊಂದಿಗೆ 87 ರನ್‌ ಸಿಡಿಸಿ ಔಟಾ​ದರು. ಆದರೆ ಆ ವೇಳೆ​ಗಾ​ಗಲೇ ಗೆಲುವು ಆರ್‌​ಸಿಬಿ ಕೈ ಜಾರಿತ್ತು.